ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಹಿಕ್ಕನಗುತ್ತಿ ಗ್ರಾಮದ ಲಿಂಗಾಯತ ಮಠದಲ್ಲಿ ಅ.೧೭ರಂದು ನಡೆಯುವ ಹುಣ್ಣಿಮೆ ೮ನೆಯ ಮಾಸಿಕ ಶರಣಾನುಭವ ಹಾಗೂ ಘನ ಶರಣ ಹರಳಯ್ಯ-ಮಧುರಸ ಶೀಲವಂತ ಶರಣರ ಹುತಾತ್ಮರಾದ ದಿನ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಶಿಕ್ಷಕ, ಸಾಹಿತಿ ಕನ್ನಡ ಜನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪಡಗಾನೂರ ಅವರಿಗೆ ಬಸವ ಶ್ರೀರಕ್ಷೆ ನೀಡಿ ಗೌರವಿಸಿ ಸನ್ಮಾನಿಸಲಾಗುವುದು ಎಂದು ಶ್ರೀಮಠದ ಪ್ರಭುಲಿಂಗ ಶರಣರು ತಿಳಸಿದ್ದಾರೆ.

