ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕಿತ್ತೂರು ರಾಣಿ ಚನ್ನöಮ್ಮಳ ೨೦೦ನೇ ವಿಜಯೋತ್ಸವದ ಅಂಗವಾಗಿ ರಾಜ್ಯದೆಲ್ಲೆಡೆ ಸಂಚರಿಸುತ್ತಿರುವ ವಿಜಯಜ್ಯೋತಿ ರಥಯಾತ್ರೆಯನ್ನು ಮಂಗಳವಾರ ರಾತ್ರಿ ತಾಲ್ಲೂಕು ಆಡಳಿತ ಹಾಗೂ ಸಮುದಾಯದ ಪ್ರಮುಖರು ಸ್ವಾಗತಿಸಿ, ಬಿಳ್ಕೋಟ್ಟರು.
ಪಟ್ಟಣದ ಮಲ್ಲಯ್ಯನ ದೇವಸ್ಥಾನದ ಮುಂಭಾಗದಲ್ಲಿ ರಾತ್ರಿ ೧೧ ಗಂಟೆಗೆ ಆಗಮಿಸಿದ ವಿಜಯಜ್ಯೋತಿ ರಥಯಾತ್ರೆಗೆ ತಹಶೀಲ್ದಾರ ಪ್ರಕಾಶ ಸಿಂದಗಿ ಹಾಗೂ ತಾಲ್ಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಕೆ.ಕುದರಿ ಅವರ ನೇತೃತ್ವದಲ್ಲಿ ಸ್ವಾಗತಿಸಿ, ರಾಣಿ ಚನ್ನಮ್ಮಳ ಪ್ರತಿಮೆಗೆ ಪೂಜೆ ಸಲ್ಲಿಸಿ, ಮಾಲಾರ್ಪಣೆ ಮಾಡಲಾಯಿತು.
ಗ್ರಾಮಾಡಳಿತಾಧಿಕಾರಿ ಅನೀಲ ರಾಠೋಡ, ಬಾಬುಗೌಡ ಪಾಟೀಲ(ಜಿಡ್ಡಿಮನಿ), ಶಂಕರಗೌಡ ಪಾಟೀಲ (ಯರನಾಳ), ಕೆ.ಜಿ.ಭಾವಿಮನಿ, ಪಂಚಾಕ್ಷರಿ ಮಿಂಚನಾಳ, ಗೊಲ್ಲಾಳ ಬಿರಾದಾರ(ಹಿಟ್ನಳ್ಳಿ), ವಿರೇಶ ಕುದರಿ, ಶಿವನಗೌಡ ಪಾಟೀಲ(ಯರನಾಳ), ರಾಮು ದೇಸಾಯಿ, ಅಪ್ಪುಗೌಡ ಪಾಟೀಲ, ಪವನ ಪಾಟೀಲ ಸಹಿತ ಇತರರು ಇದ್ದರು.

