ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ಜಾನಪದ ಪರಿಷತ್ ರಾಜ್ಯ ಘಟಕ ಕೊಡಮಾಡುವ ರಾಜ್ಯ ಮಟ್ಟದ “ಜಾನಪದ ಪ್ರಪಂಚ ” ಪ್ರಶಸ್ತಿಗೆ ರಾಜ್ಯದ ಜನಪದ ಕಲಾವಿದರಿಂದ ಅರ್ಜಿ ಅಹ್ವಾನಿಸಲಾಗಿದೆ.
ಇದೆ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಜಿಲ್ಲೆಗೆ ಒಬ್ಬರನ್ನು ಆಯ್ಕೆಮಾಡಲಾಗುವುದು. 5000 ರೂ ನಗದು,ಪ್ರಶಸ್ತಿ ಪತ್ರ, ನೆನಪಿನ ಸ್ಮರಣಿಕೆಯೊಂದಿಗೆ ಗೌರವಿಸಲಾಗುವುದು.
ಜನಪದ ಮೂಲ ಕಲಾವಿದರು 55 ವರ್ಷ ತುಂಬಿರಬೇಕು. ತಮ್ಮ ಸೇವಾವದಿಯ ಫೋಟೊ, ಪ್ರಮಾಣಪತ್ರ, ಪತ್ರಿಕಾ ವರದಿ , ಶಿಫಾರಸ್ಸು ಪತ್ರ ಮತ್ತು ಆಧಾರ್ ಕಾರ್ಡ ಇತ್ಯಾದಿಗಳೊಂದಿಗೆ ದಿನಾಂಕ 20.10.2024 ರ ಒಳಗಾಗಿ ಜಿಲ್ಲಾಧ್ಯಕ್ಷರಿಗೆ ಈ ಕೆಳಗಿನ ವಿಳಾಸಕ್ಕೆ ತಲುಪಿಸಬೇಕು.
ಅರ್ಜಿ ಕಳಿಸುವ ವಿಳಾಸ: ಜಿಲ್ಲಾಧ್ಯಕ್ಷರು, ಕನ್ನಡ ಜಾನಪದ ಪರಿಷತ್ ವಿಜಯಪುರ.
ರೇನಬೋ ಫೋಟೊ ಸ್ಟುಡಿಯೋ. ವಿಠ್ಠಲ ಮಂದಿರ ರಸ್ತೆ. ಕೆನರಾ ಬ್ಯಾಂಕ್ ಎದುರು. ಮಿಲನ ಬಾರ್ ಹಿಂದೆ, ವಿಜಯಪುರ ಇಲ್ಲಿಗೆ ಕಳಿಸಲು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಎಸ್ ಪಾಟೀಲ (ಪಡಗಾನೂರ) ತಿಳಿಸಿದ್ದಾರೆ.
