ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ೮ನೇ ವಾರ್ಡಿನ ತಡಪಟ್ಟಿ ನಿವೇಶನದಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಂಡ ಲಕ್ಷ್ಮೀದೇವಿಯ ಜಾತ್ರೆಯನ್ನು ಭಕ್ತಿ, ಭಾವದಿಂದ ಆಚರಿಸಲಾಯಿತು.
ಪಟ್ಟಣದಲ್ಲಿ ಬುಧವಾರ ಸಾಂಪ್ರದಾಯಿಕ ಲಕ್ಷ್ಮೀ ದೇವಿಯ ಜಾತ್ರೆಯ ಅಂಗವಾಗಿ ಬೆಳಿಗ್ಗೆಯಿಂದಲೇ ಶಾಸ್ತ್ರೋಕ್ತ ಪೂಜೆ ಆರಂಭಗೊಂಡಿತು. ನಂತರ ದೇವಿಯ ಮೆರವಣಿಗೆ ದೇವಸ್ಥಾನದಿಂದ ಆರಂಭಗೊಂಡು ಮೇನ್ ಬಜಾರ್, ತೇರು, ಗದ್ದಿಗೆಮಠ ರಸ್ತೆ ಮೂಲಕ ಮೂಲ ದೇವಸ್ಥಾನ ತಲುಪಿತು. ನಂತರ ಮಹಾಪ್ರಸಾದ ಜರುಗಿತು.
ಜಾತ್ರೆಯಲ್ಲಿ ಗುರುಪಾದ ಬುದ್ನಿ, ಗುರುರಾಜ್ ದೇಸಾಯಿ, ರಾಜಶೇಖರ ಅತನೂರ, ರಮೇಶ ಈಳಗೇರ, ಶ್ರೀನಿವಾಸ ಪಾಟೀಲ(ವರ್ಕಾನಳ್ಳಿ), ಸದಾನಂದ ಮಣೂರ ನೇತೃತ್ವ ವಹಿಸಿದ್ದರು.
ಶ್ರೀಶೈಲ ದೇಸಾಯಿ, ಅಭಿಜಿತ ತಡಪಟ್ಟಿ, ಸೀಮಾ ಬುದ್ನಿ, ಲತಾ ತಟಪಟ್ಟಿ ಸ್ಮೀತಾ ಈಳಗೇರ, ಪ್ರೀತಿ ಅತನೂರ, ಪ್ರೀತಿ ಪಾಟೀಲ, ಮಂಜುಳಾ ಮಣೂರ, ರೇಖಾ ಅತನೂರ, ಕಸ್ತೂರಿ ದೇಸಾಯಿ, ಸೇರಿದಂತೆ ಮಕ್ಕಳು ಇದ್ದರು.

