ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: 2024 ರಿಂದ 2029 ಅವಧಿಗೆ ನಡೆಯುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಚುನಾವಣೆ ಪ್ರಯುಕ್ತ ಯಡ್ರಾಮಿ ತಾಲೂಕು ಶಾಖೆ ಕಾರ್ಯಕಾರಿ ಸಮಿತಿ ನಿರ್ದೇಶಕ ಸ್ಥಾನಕ್ಕೆ ಕಣಮೇಶ್ವರ ಪ್ರೌಡ ಶಾಲೆಯ ಶಿಕ್ಷಕ ನಿಂಗಣ್ಣ ದೊಡಮನಿ ಬುಧವಾರ ಪಟ್ಟಣದ ನೌಕರರ ಸಂಘದ ತಾಲೂಕು ಕಛೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಶಿಕ್ಷಕರಾದ ಬಲವಂತ್ರಾಯ ಹಿರೇಗೌಡರ, ಪ್ರಭುಗೌಡ ದೇಸಾಯಿ, ಪ್ರಭು ಯಾಳಗಿ, ಉದಂಡಪ್ಪ ರತ್ನಾಕರ, ಸುಭಾಸ ಸಿಂಗ್ ರಜಪೂತ್, ಮಹೇಶ ಹಾವರೆಡ್ಡಿ, ಪ್ರವೀಣ ಬಿರಾದಾರ ಇದ್ದರು.

