ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಸಾರಂಗಮಠದಲ್ಲಿ ಅ.೧೭ರಂದು ಸಾಯಂಕಾಲ ೬:೩೦ಗಂಟೆಗೆ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ೩೩೫ನೆಯ ಸದ್ವೀಚಾರ ಗೋಷ್ಠಿ ಜರುಗಲಿದೆ.
ಸಾನಿಧ್ಯವನ್ನು ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿಕೊಳ್ಳುವರು. ಬ್ಯಾಕೋಡ ಗ್ರಾಮದ ನಿವೃತ್ತ ಜಿಲ್ಲಾ ಸಾಂಖಿಕಾಧಿಕಾರಿ ಹಾಗೂ ಶರಣ ಸಾಹಿತ್ಯ ಪರಿಷತ್ ಮಾಜಿ ತಾಲೂಕಾಧ್ಯಕ್ಷ ಚನ್ನಪ್ಪ ಕತ್ತಿ ಅತಿಥಿ ಲಲಿತ ಸಹಸ್ರನಾಮ ಜಪದ ಮಹತ್ವ ಕುರಿತು ಉಪನ್ಯಾಸ ನೀಡಲಿದ್ದಾರೆ.
ಈ ವೇಳೆ ನೂತನವಾಗಿ ಅಖಿಲ ಭಾರತ ವೀರಶೈವ ಮಹಸಭಾ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು. ಮಲ್ಲಿಕಾರ್ಜುನ ಗಂಗಾಧರ ವಾರದ, ಕಮಲಾ ಮಲ್ಲಿಕಾರ್ಜುನ ಉಪ್ಪಿನ, ವಿಜಯಲಕ್ಷ್ಮಿ ಶಶಿಧರ ಮಠ ಹಾಗೂ ಬ್ಯಾಕೋಡ ಕತ್ತಿ ಪರಿವಾರದವರಿಂದ ದಾಸೋಹ ಸೇವೆ ನಡೆಯಲಿದೆ ಎಂದು ಚನ್ನವೀರ ಸ್ವಾಮೀಜಿ ಪ್ರತಿಷ್ಠಾನದ ಸಂಚಾಲಕರು ಪ್ರಕಟಣೆಯ ಮೂಲಕ ತಿಳಸಿದ್ದಾರೆ.
