Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೫-೨೦೨೬ ನೇ ಸಾಲಿನಲ್ಲಿ ಹೆಸ್ಕಾಂ ಜಾಗೃತದಳದ ಪೊಲೀಸ್ ಠಾಣೆಯಲ್ಲಿ ದಾಖಲಾದ ೨೦೮ ಪ್ರಕರಣಗಳನ್ನು ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಲೊಕ್ ಅದಾಲತ್ ಮೂಲಕ ಇತ್ಯರ್ಥಪಡಿಸಿ, ೫೬,೨೯,೧೭೧ ರೂ. ದಂಡ ವಿಧಿಸಿದೆ. ೧ನೇ ಪ್ರಕರಣದ ಆರೋಪಿಗಳಿಗೆ ೧೭,೯೭,೩೧೯ ರೂ. ದಂಡ, ೨ನೇ ಪ್ರಕರಣದ ಆರೋಪಿಗಳಿಗೆ ೮,೦೯,೩೫೩ ರೂ. ಗಳನ್ನು ನ್ಯಾಯಾಲಯ ದಂಡ ವಿಧಿಸಿದೆ. ಹೆಸ್ಕಾಂ ಜಾಗೃತದಳದ ಅಧಿಕಾರಿಗಳಾದ ಚಂದ್ರಪ್ಪ ಚಿಕ್ಕೋಡಿ, ಎಇಇ ಕೋಟ್ರಪ್ಪ ಹರನಾಳ, ಪಿಎಸ್ ಐ ಸುರೇಖಾ ಗಲಗಲಿ, ಎಇ ಸಂತೋಷ ರಾಠೋಡ ಹಾಗೂ ಹೆಸ್ಕಾಂ ಜಾಗೃತದಳ ಠಾಣೆ ಸಿಬ್ಬಂದಿ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷರೇ ಮತ ಹಾಕಿಸಿರುವ ಸಾಧ್ಯತೆ | ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಗಂಭೀರ ಆರೋಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅತ್ಯಂತ ವ್ಯವಸ್ಥಿತವಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಡಿ.ಕೆ ಶಿವಕುಮಾರ್ ಅವರಿಗೆ ಸಹಾಯ ಮಾಡುವ ಕೆಲಸವನ್ನು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾಡಿದ್ದಾನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹರಿಹಾಯ್ದಿದ್ದಾರೆ.ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವೈಯಕ್ತಿಕ ವಿಚಾರ ಹಾಗೂ ನನ್ನ ಕುಟುಂಬದ ಬಗ್ಗೆ ಕೆಟ್ಟ ರೀತಿಯಲ್ಲಿ ಮಾತನಾಡಿದರೆ, ನಿಮ್ಮ ಕುಟುಂಬದ ಇತಿಹಾಸ ನನ್ನ ಬಳಿ ಇದೆ. ಅಗತ್ಯ ಬಂದರೆ ಅದನ್ನೂ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಬೇಕಾಗುತ್ತದೆ. ನಿಮ್ಮ ಚೇಲಾಗಳಿಂದ ನನ್ನ ವಿರುದ್ಧ ಏನಾದರೂ ಪೋಸ್ಟ್ ಮಾಡಿಸಿದರೆ, ಅದಕ್ಕಿಂತ ತೀಕ್ಷ್ಣವಾಗಿ ನಾನು ಉತ್ತರ ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.ನಾನು ಮೊನ್ನೆ ಬಿಜೆಪಿಗೆ ಮತ ಹಾಕಿದ್ದೇನೆ. ನಾನು ಯಾವ ಪಕ್ಷದ ಶಾಸಕನಾಗಿದ್ದೇನೋ ಆ ಪಕ್ಷಕ್ಕೆ ಮತ ಹಾಕಿದ್ದೇನೆ. ಇದರಿಂದ ಕೆಲವರ ಎದೆ ಒಡೆದಂತಾಗಿದೆ ಎಂದು ಹೇಳಿದರು.ಕೆಲವರು ಕಾಂಗ್ರೆಸ್‌ನಿಂದ ಹಣ ಹಾಗೂ ಅಭಿವೃದ್ಧಿಗೆ ಅನುದಾನ…
ತಮ್ಮ ಬಾಳು ಬಂಗಾರವಾಗಲು ಕಾರಣರಾದ ನೆಚ್ಚಿನ ನಾಯಕನ ಹೆಸರನ್ನು ಶಾಶ್ವತವಾಗಿ ಸ್ಮರಿಸುವ ಕಾರ್ಯ ಮಾಡಿದ ಅವಿಭಕ್ತ ಹಿರೇಮಠ ಕುಟುಂಬ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬರದ ನಾಡಿನಲ್ಲಿ ಬಾಳು ಬಂಗಾರವಾಗಲು ಕಾರಣರಾದ ನೆಚ್ಚಿನ ನಾಯಕನ ಹೆಸರನ್ನು ತಮ್ಮ ಮನೆಗೆ ಇಡುವ ಮೂಲಕ ಅವಿಭಕ್ತ ಕುಟುಂಬವೊಂದು ಹೃದಯಸ್ಪರ್ಷಿ ಕಾರ್ಯ ಮಾಡಿದೆ.ಅಷ್ಟೇ ಅಲ್ಲ, ರವಿವಾರ ಅದ್ಧೂರಿಯಾಗಿ ವಾಸ್ತು ಶಾಂತಿ ಮತ್ತು ಗೃಹ ಪ್ರವೇಶ ಪೂಜೆ ಮಾಡಿ ಅತಿಥಿ ಗಣ್ಯರನ್ನು ಆಮಂತ್ರಿಸಿ ಸತ್ಕಾರ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಗ್ರಾಮದ 30 ಸದಸ್ಯರನ್ನು ಹೊಂದಿರುವ ಅವಿಭಕ್ತ ಹಿರೇಮಠ ಕುಟುಂಬದ ಸಹೋದರರಾದ ಸಿದ್ದಯ್ಯ, ಸಾತಯ್ಯ, ಬಸಯ್ಯ ಹಾಗೂ ಮಲ್ಲಯ್ಯ ವಿಜಯಪುರ ನಗರದ ಅಥಣಿ ರಸ್ತೆಯಲ್ಲಿರುವ ರಾಜಕುಮಾರ ಲೇಔಟ್ ನ ಸುವರ್ಣ ನಗರದಲ್ಲಿ ಸುಮಾರು ಬೃಹತ್ ಮನೆ ನಿರ್ಮಿಸಿದ್ದಾರೆ. ಅಲ್ಲದೇ, ಈ ಮನೆಗೆ ತಮ್ಮ ಬಾಳು ಹಸನಾಗಲು ಕಾರಣರಾದ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಹೆಸರನ್ನು ನಾಮಕರಣ…
ಹಿರಿಯ ಸಹಕಾರಿ ಧುರೀಣ, ಪರಿಸರ ತಜ್ಞ ಡಾ.ಎಂ.ಆರ್.ದೇಸಾಯಿ ಯಡಹಳ್ಳಿ ವಿಷಾದ ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ನಾನು, ನನ್ನದು ಎಂಬುದಕಷ್ಟೇ ಸೀಮಿತವಾಗಿ ದೇಶ, ಸಮಾಜ ಕುರಿತ ಚಿಂತನೆಗಳು ಇತ್ತೀಚಿನ ದಶಕಗಳಲ್ಲಿ ಕಡಿಮೆಯಾಗಿರುವುದು ಕಳವಳ ತಂದಿದೆ” ಎಂದು ಹಿರಿಯ ಸಹಕಾರಿ ಧುರೀಣ, ಪರಿಸರ ತಜ್ಞ ಡಾ.ಎಂ.ಆರ್.ದೇಸಾಯಿ ಯಡಹಳ್ಳಿ ಹೇಳಿದರು.ಬಾಗಲಕೋಟ ಜಿಲ್ಲೆ ಬೀಳಗಿ ಹತ್ತಿರದ ಯಡಹಳ್ಳಿ ಗ್ರಾಮದಲ್ಲಿ ನಡೆದ ಅನಗತ್ಯ, ಆಡಂಬರದ ಆಚರಣೆಗಳ ಕುರಿತು ನಡೆದ ಚಿಂತನ ಸಭಾ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ನೆಹರು ಪ್ರಧಾನಿಯಾಗಿದ್ದಾಗ 1962ರ ಇಂಡೋ-ಚೈನಾ ವಾರ್ ನಲ್ಲಿ ಅನಗತ್ಯವಾಗಿ ದೀಪಗಳನ್ನು ರಾತ್ರಿ ಹಚ್ಚಬಾರದು ಎಂಬ ಕರೆಗೆ, ಶಾಸ್ತ್ರೀಯವರು ಪ್ರಧಾನಿಯಾಗಿದ್ದಾಗ ಆಹಾರ ಕೊರತೆ ನೀಗಿಸಲು ಸೋಮವಾರ ಉಪವಾಸ ಮಾಡಬೇಕು ಎಂಬ ಕರೆಗೆ ದೇಶದ ಜನತೆಯಿಂದ ದೊರೆತ ಸ್ಪಂದನೆ ಅಪೂರ್ವವಾಗಿತ್ತು. ದೇಶದ ಬಹುಸಂಖ್ಯೆ ಇದನ್ನು ಪಾಲನೆ ಮಾಡಿದ್ದರು. ಆದರೆ, ಅಮೇರಿಕಾ-ಇರಾಕ ಯುದ್ದದ ಸಂದರ್ಭದಲ್ಲಿ ಇತ್ತೀಚೆಗೆ ಪ್ರಧಾನಿ ಮೋದಿ ದೇಶದಲ್ಲಿ ಯುದ್ಧದ ಕಾರಣದಿಂದ ಆಮದು ಮಾಡಿಕೊಳ್ಳುವ ತೈಲ ಸಕಾಲಕ್ಕೆ ದೊರೆಯದೆ ಸಂಕಷ್ಟ ಉಂಟಾಗಬಹುದು. ಇಂಧನ…
ರೈತರ ಜಮೀನಿನಲ್ಲೇ ರಸ್ತೆ ಕಾಮಗಾರಿ? | ಕೂಡಲೇ ಎಚ್ಚೆತ್ತುಕೊಳ್ಳದಿದ್ದಲ್ಲಿ ಹೋರಾಟದ ಎಚ್ಚರಿಕೆ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ–ತಾರನಾಳ ರಸ್ತೆ ಕಾಮಗಾರಿ ವೇಳೆ ಬಿದರಕುಂದಿ ಹಾಗೂ ಕುಂಟೋಜಿ ಗ್ರಾಮಗಳ ಗಡಿಯನ್ನು ಸಮರ್ಪಕವಾಗಿ ಗುರುತಿಸದೇ ಕಾಮಗಾರಿ ಆರಂಭಿಸಿರುವ ಪರಿಣಾಮ ಹಲವು ರೈತರ ಜಮೀನಿಗೆ ಅತಿಕ್ರಮಣವಾಗಿದೆ ಎಂದು ಬಾಧಿತ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಗಡಿ ಗುರುತಿಸಿ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ರೈತರಾದ ಶಿವಣ್ಣ ಚಿರಲದಿನ್ನಿ, ಶ್ರೀಕಾಂತ ಕಡೂರ, ಲಕ್ಷ್ಮಣ ಕಡೂರ, ಶಾಂತಗೌಡ ಬಿರಾದಾರ ಹಾಗೂ ಸಂಗಪ್ಪ ಸರೂರ ಮಾತನಾಡಿ, ಈಗಾಗಲೇ ಮಳೆ ಕೊರತೆ ಹಾಗೂ ಬೆಳೆ ಹಾನಿಯಿಂದ ಸಂಕಷ್ಟದಲ್ಲಿರುವ ರೈತರಿಗೆ ಇದೀಗ ರಸ್ತೆ ಕಾಮಗಾರಿಯಿಂದ ಮತ್ತಷ್ಟು ತೊಂದರೆ ಉಂಟಾಗಲಿದೆ ಎಂದು ಆರೋಪಿಸಿದರು. ಕಾಮಗಾರಿ ಆರಂಭಿಸುವ ಮೊದಲು ಕಂದಾಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಗಳ ಗಡಿ ಹಾಗೂ ಜಮೀನುಗಳ ಗಡಿಯನ್ನು ನಿಖರವಾಗಿ ಗುರುತಿಸಬೇಕಾಗಿತ್ತು. ಆದರೆ ಯಾವುದೇ ಪೂರ್ವ…
ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊ. ಪಾಟೀಲ್ ವಿರುದ್ಧ ಅವಿಶ್ವಾಸ ನಿರ್ಣಯ ಯಶಸ್ವಿ ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಕಳೆದ ಹದಿನೈದು ದಿನಗಳಿಂದ ಜಿಲ್ಲೆಯಾದ್ಯಂತ ತೀವ್ರ ರಾಜಕೀಯ ಸಂಚಲನ ಮೂಡಿಸಿದ್ದ ಕೆಂಭಾವಿ ಪಟ್ಟಣ ಪುರಸಭೆಯ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ನಿರ್ಣಯ ಪ್ರಕ್ರಿಯೆ ಅಧಿಕೃತವಾಗಿ ಮುಕ್ತಾಯಗೊಂಡಿದೆ.ಆಡಳಿತಾರೂಢ ಕಾಂಗ್ರೆಸ್‌ನ ಬಂಡಾಯದ ಅಲೆಯಲ್ಲಿ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ್ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ. ಯಾದಗಿರಿ ಉಪ ವಿಭಾಗಾಧಿಕಾರಿ ಶ್ರೀಧರ ಗೋಟೂರ್ ರವರ ನೇತೃತ್ವದಲ್ಲಿ ಪುರಸಭೆ ಸಭಾಂಗಣದಲ್ಲಿ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ಮಂಡಿಸಲಾಗಿದ್ದ ಅವಿಶ್ವಾಸ ನಿರ್ಣಯವು ಭಾರಿ ಬಹುಮತದೊಂದಿಗೆ ಅಂಗೀಕಾರಗೊಂಡಿತು.ಸಭೆಗೆ ಬಿಜೆಪಿ ಬೆಂಬಲಿತ ಇಬ್ಬರು ಸದಸ್ಯರನ್ನೊಳಗೊಂಡಂತೆ ಒಟ್ಟು 20 ಸದಸ್ಯರು ಹಾಜರಿದ್ದರು. ಅವಿಶ್ವಾಸ ಗೊತ್ತುವಳಿ ಸೂಚನೆಯಂತೆ 18 ಮತಗಳು ಹಾಲಿ ಅಧ್ಯಕ್ಷರ ವಿರುದ್ಧ ಬಿದ್ದರೆ, ಒಂದು ತಟಸ್ಥ ಮತ್ತು ಒಂದು ಮತ ಅಧ್ಯಕ್ಷರ ಪರವಾಗಿ ಚಲಾವಣೆಯಾಯಿತು. ಪುರಸಭೆ ಕಾಯ್ದೆ 1964, ಕಲಂ 42(9) ರಂತೆ ಮೂರನೇ ಎರಡು ಭಾಗದಷ್ಟು ಬಹುಮತದೊಂದಿಗೆ ಅವಿಶ್ವಾಸ ಗೊತ್ತುವಳಿ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚುತ್ತಿರುವ ಅಶ್ಲೀಲ ಸಾಹಿತ್ಯ ಸಮಾಜ ಮತ್ತು ಸಂಸ್ಕೃತಿಗೆ ಮಾರಕವಾಗಿದೆ. ಹೀಗಾಗಿ ಸಮಾಜದಲ್ಲಿ ಸಾಮರಸ್ಯ ಸಾರುವ ಉತ್ತಮ ಸಾಹಿತ್ಯ ಮೂಡಿಬರಬೇಕಿದೆ ಎಂದು ಮಳಖೇಡದ ಅ. ಸೈ. ಶಾ. ಮುಸ್ತಫಾ ಖಾದ್ರಿ ಸಾಹೇಬ್ ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀಗುರು ಕಾಂತೇಶ್ವರ ಜನಕಲ್ಯಾಣ ಸೇವಾ ಪ್ರತಿಷ್ಠಾನ ಹಾಗೂ ತೈಸಿನ್ - ತಸ್ಲೀಮ್ ಗ್ರಂಥಮಾಲೆ ಪ್ರಕಾಶನ ಇವರ ಸಂಯುಕ್ತಾಶ್ರಯದಲ್ಲಿ ರವಿವಾರ ಹಮ್ಮಿಕೊಂಡಿದ್ದ ಲೇಖಕ ಇಲಿಯಾಸ್ ಪಟೇಲ್ ಬಳಗಾನೂರ ಅವರ ‘ಅತಿಥಿ ಹೃದಯ’ ಕೃತಿ ಲೋಕಾರ್ಪಣೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ದಿನದಿಂದ ದಿನಕ್ಕೆ ಮಾನವೀಯ ಮೌಲ್ಯಗಳು ನಶಿಸಿ, ಯುವಕರಲ್ಲಿ ಸಂಸ್ಕಾರ ಕಣ್ಮರೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಯುವ ಸಾಹಿತಿಗಳು ಕನ್ನಡ ನಾಡು ನುಡಿಯ ಶ್ರೀಮಂತಿಕೆಯನ್ನು ಎತ್ತಿ ಹಿಡಿಯುವ ಮೂಲಕ ಶಿಷ್ಟಾ ಸಾಹಿತ್ಯ ರಚನೆಗೆ ಮುಂದಾಗಲಿ ಎಂದು ಆಶಿಸಿದರು. ಕೃತಿಯನ್ನು ಲೋಕಾರ್ಪಣೆ ಮಾಡಿದ ಸಿಂದಗಿ ಅಂಜುಮನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್. ಎಂ. ಪಾಟೀಲ್ ಗಣಿಹಾರ್ ಮಾತನಾಡಿ,…
ಹಿಂದೂ ಬಾಂಧವರು ನನ್ನವರೇ, ಅವರ ಮತದಾನ ಹಕ್ಕು ಉಳಿಸಲು ನಾನು ಶ್ರಮಿಸುವೆ | ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಿಂದೂ ಬಾಂಧವರು ನನ್ನ ಸಹೋದರರು, ಅವರು ಸಾವಿರಾರು ಸಂಖ್ಯೆಯಲ್ಲಿ ಮತಗಳನ್ನು ನೀಡಿದ್ದಾರೆ, ಅವರ ಮತದಾನ ಹಕ್ಕು ರಕ್ಷಣೆ ನನ್ನ ಹೊಣೆಯೂ ಕೂಡಾ ಹೌದು, ಹಿಂದೂ ಬಾಂಧವರು ಸಹ ನನ್ನನ್ನು ಪ್ರೀತಿಸುತ್ತಾರೆ, ವಿನಕಾರಣ ಹುಳಿ ಹಿಂಡುವ ಕೆಲಸ ಮಾಡಬೇಡಿ, ವಿಜಯಪುರ ನಗರ ನಿಮಗಷ್ಟೇ ಸೇರಿದ್ದಲ್ಲ ಎಂದು ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ಹೇಳಿದ್ದಾರೆ.ಸೋಮವಾರ ಸುದ್ದಿಗೋಷ್ಠಿಯಲ್ಲಿಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಭಾಗಿಯಾಗಲು ನಾನು ಯಾರು ಎಂದು ಕೇಳಿರುವ ನಗರ ಶಾಸಕ ಯತ್ನಾಳರಿಗೆ ತಿರುಗೇಟು ನೀಡಿರುವ ಮುಶ್ರೀಫ್ ಅವರು, ನಾನು ಎರಡು ಬಾರಿ ನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದೇನೆ, ಕಳೆದ ಬಾರಿ೮೬ ಸಾವಿರ ಮತಗಳನ್ನು ಪಡೆದಿರುವೆ, ೨೫ ಸಾವಿರಕ್ಕೂ ಹೆಚ್ಚು ಹಿಂದೂ ಬಾಂಧವರು ನನಗೆ ಮತದಾನ ನೀಡಿದ್ದಾರೆ, ನಾನು ಬಿ.ಎಲ್.ಎ-೧ ಇರುವೆ, ಈ ಎಲ್ಲ ಕಾರಣಕ್ಕೆ ನಾನು ನ್ಯಾಯಕ್ಕೆ ಹೋರಾಡುತ್ತಿರುವೆ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಜಪೂತ ಸಮಾಜದ ಸರ್ವತೋಮುಖ ಪ್ರಗತಿಗಾಗಿ ರಜಪೂತ ಸಮಾಜ ಅಭಿವೃದ್ಧಿ ನಿಗಮ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಜಪೂತ ಸಮಾಜ ಬಾಂಧವರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.ನೇತೃತ್ವ ವಹಿಸಿದ್ದ ರಜಪೂತ ಸಮಾಜದ ಜಿಲ್ಲಾಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಮಾತನಾಡಿ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವ ರಜಪೂತ ಸಮಾಜದ ಏಳಿಗೆಗಾಗಿ ರಜಪೂತ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ ಸರ್ಕಾರ ಮುಂದಾಗಬೇಕಿದೆ,ರಾಜ್ಯದಲ್ಲಿ ಲಕ್ಷಾಂತರ ಜನಸಂಖ್ಯೆ ಹೊಂದಿರುವ ರಜಪೂತ ಸಮಾಜವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಉದ್ಯೋಗದ ರಂಗದಲ್ಲಿ ತೀವ್ರವಾಗಿ ಹಿಂದುಳಿದಿದೆ, ಯುವ ಪೀಳಿಗೆಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸಿಗದೇ ಸಮಾಜವು ಇಂದಿಗು ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಯುವಕರಿಗೆ ತರಬೇತಿ, ಸ್ವ ಉದ್ಯೋಗಕ್ಕೆ ಸಾಲ ಮೊದಲಾದ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಅಭಿವೃದ್ಧಿ ನಿಗಮ ಆರಂಭವಾಗಬೇಕಾಗಿರುವುದು ಅಗತ್ಯವಾಗಿದೆ,ಈಗಾಗಲೇ ರಜಪೂತ ಸಮಾಜದ ಕೌಂಟಂಬಿಕ ಸಮೀಕ್ಷೆ ಹಾಗೂಡಿಜಿಟಲ್’ ನೋಂದಣಿ ಪ್ರಕ್ರಿಯೆಯು ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಸಮಗ್ರ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೊಲ್ಹಾರ ತಾಲೂಕಿನ ಬಾಗಾನಗರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಬಸವಲಿಂಗ ಕುಂಬಾರ ಅವರು ಎಸ್‌ಐಆರ್ (Special Intensive Revision) ಕಾರ್ಯವನ್ನು ಕೇವಲ ೧೩ ದಿನಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿ ಗಮನ ಸೆಳೆದಿದ್ದಾರೆ.ತಾಲೂಕಿನ ಮತಗಟ್ಟೆ ಸಂಖ್ಯೆ ೧೯೦ರಲ್ಲಿ ಒಟ್ಟು ೪೮೯ ಮತದಾರರ ಮಾಹಿತಿಯನ್ನು ಸಮಗ್ರವಾಗಿ ಪರಿಷ್ಕರಿಸುವ ಜವಾಬ್ದಾರಿಯನ್ನು ಹೊತ್ತಿದ್ದ ಅವರು, ಕಡಿಮೆ ಅವಧಿಯಲ್ಲಿ ನಿಖರವಾಗಿ ಕಾರ್ಯ ಪೂರ್ಣಗೊಳಿಸಿರುವುದು ವಿಶೇಷವಾಗಿದೆ.ಈ ಸಾಧನೆಯನ್ನು ಗುರುತಿಸಿ ತಹಶೀಲ್ದಾರ ಎಸ್.ಎಸ್. ಮ್ಯಾಗೇರಿ ಅವರು ತಮ್ಮ ಕಚೇರಿಗೆ ಕರೆಯಿಸಿಕೊಂಡು ಬಸವಲಿಂಗ ಕುಂಬಾರರನ್ನು ಸನ್ಮಾನಿಸಿ ಅಭಿನಂದಿಸಿದರು. ಅವರ ಕಾರ್ಯಕ್ಕೆ ಜಿಲ್ಲಾ ಆಡಳಿತವೂ ಮೆಚ್ಚುಗೆ ವ್ಯಕ್ತಪಡಿಸಿದೆ.ಈ ಸಂದರ್ಭದಲ್ಲಿ ಉಪತಹಶೀಲ್ದಾರ ಕೆ.ಎಂ. ನಧಾಪ್, ಪಿ.ಎಸ್. ಹುಡೇದ, ಭಾಗ್ಯಶ್ರೀ ಪಾಟೀಲ, ಶ್ರೀಶೈಲ ವಾಲಿಕಾರ, ಮಂಜುನಾಥ ಕಲ್ಲೂರ, ಬಿ.ಎಸ್. ಮಮದಾಪೂರ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
