ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸತ್ಕಾರ್ಯವೇ ಸೌಭಾಗ್ಯ ಎನ್ನುವಂತೆ ಬಡಜನರ ಹಾಗೂ ನಿರ್ಗತಿಕರ ಸೇವೆ ಮಾಡುವುದು ನಿಜವಾದ ಸೇವೆ ಎನಿಸಿಕೊಳ್ಳುತ್ತದೆ ಎಂದು ವಿಜಯಪುರ ಬಾಲಾಜಿ ಆಸ್ಪತ್ರೆಯ ಸಂಸ್ಥಾಪಕ ಡಾ.ಶ್ರೀಪಾದ ಕುಲಕರ್ಣಿ ಹೇಳಿದರು.
ಮುಳಸಾವಳಗಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನನ ಐದೇಶಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ ಉಚಿತ ನೇತ್ರ ಮತ್ತು ಮೂಳೆ, ಕೀಲು ತಪಾಸಣೆ ಶಿಬಿರದ ನೇತೃತ್ವ ವಹಿಸಿ ಮಾತನಾಡಿದರು.
ಶಿಬಿರದ ಮೂಲಕ ಸುಮಾರು ೧೧೦ ಜನರ ತಪಾಸಣೆ ಹಾಗೂ ೧೧೫ ಜನರ ನೇತ್ರ ತಪಾಸಣೆಯನ್ನು ಮಾಡಲಾಯಿತು. ನೇತ್ರ ಶಸ್ತ್ರಚಿಕಿತ್ಸೆಗೆ ಅರ್ಹರಾದ ೧೫ ಜನರನ್ನು ಅನುಗ್ರಹ ಆಸ್ಪತ್ರೆಯಿಂದ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಲಾಯಿತು. ನಂತರ ಅನುಗ್ರಹ ಹಾಗೂ ಬಾಲಾಜಿ ಆಸ್ಪತ್ರೆಯ ಸಿಬ್ಬಂದಿಗಳನ್ನು ಜಾತ್ರಾ ಸಮಿತಿಯಿಂದ ಸನ್ಮಾನಿಸಲಾಯಿತು.
ಅನುಗ್ರಹ ಆಸ್ಪತ್ರೆಯ ಸಂಗನಗೌಡ ಪಾಟೀಲ, ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಬಿರಾದಾರ, ಹಣಮಂತ ಹಿರೂರ, ಜಿ.ಪಿ.ಬಿರಾದಾರ ಮಾತನಾಡಿದರು.
ಸಾಹೇಬಗೌಡ ಬಂಥನಾಳ, ವಿರುಪಾಕ್ಷಿ ರೋಡಗಿ, ಶ್ರೀಶೈಲ ಹದರಿ, ಶ್ರೀಶೈಲ ಮಠಪತಿ, ದಾನಯ್ಯ ಮಠಪತಿ, ಮಲ್ಲನಗೌಡ ಬಿರಾದಾರ, ಕಂಠೆಪ್ಪಗೌಡ ಬಿರಾದಾರ, ಸಂಗು ಬಂಥನಾಳ, ಕಿರಣ ಗಬ್ಬೂರ, ನಿತಿನ ಉಕುಮನಾಳ, ಸಿದ್ದಲಿಂಗ ಸಾತಿಹಾಳ, ನಾಗರಾಜ ಹದರಿ ಸೇರಿದಂತೆ ಗ್ರಾಮಸ್ಥರು ಇದ್ದರು.

