ಉದಯ ರಶ್ಮಿ ದಿನಪತ್ರಿಕೆ
ಅಥಣಿ: “ಬಾಬು ಜಗಜೀವನ ರಾಮ್ ಅವರು ಕೇವಲ ಒಬ್ಬ ನಾಯಕರಲ್ಲ, ಅವರು ದೇಶದ ಹಸಿರು ಕ್ರಾಂತಿಯ ಹರಿಕಾರರು. ಅವರ ತತ್ತ್ವಗಳನ್ನು ಅಳವಡಿಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ,” ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸ್ಥಳೀಯ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜಯಂತಿ ಕಾರ್ಯಕ್ರಮವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದ ಅವರು ಗಾಂಧೀಜಿ, ಅಂಬೇಡ್ಕರ್ ಹಾಗೂ ಜಗಜೀವನ ರಾಮ್ ಅವರು ಅಸ್ಪೃಶ್ಯತೆ ನಿವಾರಣೆಗಾಗಿ ಜೀವನವನ್ನೇ ಮುಡಿಪಾಗಿಟ್ಟ ಮಹನೀಯರು. ಕೇಂದ್ರದ ವಿವಿಧ ಇಲಾಖೆಗಳಲ್ಲಿ ಅವರು ತೋರಿದ ದಕ್ಷತೆ ಇಂದಿನ ಆಡಳಿತಗಾರರಿಗೆ ಮಾದರಿ. ಕೃಷಿ ಕ್ಷೇತ್ರದಲ್ಲಿ ಅವರು ತಂದ ಕ್ರಾಂತಿಕಾರಿ ಬದಲಾವಣೆಗಳಿಂದಾಗಿ ದೇಶ ಆಹಾರ ಭದ್ರತೆ ಪಡೆಯಲು ಸಾಧ್ಯವಾಯಿತು” ಎಂದರು
ಈ ವೇಳೆ ಉಪನ್ಯಾಸವನ್ನು ಟಿ ಎಸ್ ವಂಟಗೂಡಿ ನೀಡಿದರು ಅಥಣಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ್ ಸಿಂಗೆ, ಪುರಸಭೆ ಅಧ್ಯಕ್ಷೆ ಶಿವಲೀಲಾ ಬೂಟಾಳಿ ಹಾಗೂ ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಸಿದ್ರಾಯ ಭೋಸಗಿ, ಡಾ. ಅನಿಲ ಸೌದಾಗರ್, ದಿಲೀಪ್ ಕಾಂಬಳೆ, ವಿಲೀನರಾಜ ಯಳಮಲ್ಲೆ, ಕಲ್ಲೇಶ ಮಡ್ಡಿ, ಸದಾಶಿವ ಕ್ಷೀರಸಾಗರ, ಶಿವಾನಂದ ಸೌದಾಗರ , ಸುಂದರ ಸೌದಾಗರ, ಮಾಂತೇಶ ಬಾಡಗಿ, ಮಂಜು ಹೋಳಿಕಟ್ಟಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳಾದ ಪರಶುರಾಮ ಪತ್ತಾರ, ಶಿವಾನಂದ ಕಲ್ಲಾಪುರ, ಎಂ.ಆರ್. ಮುಂಜಿ, ವೀರಣ್ಣ ವಾಲಿ, ಅಶೋಕ ಗುಡಿಮನಿ, ಮಂಜುನಾಥ ಸೌಂದಲಗೇಕರ, ಇನ್ನಿತರರು ಉಪಸ್ಥಿತರಿದ್ದರು.

