ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಡಾ.ಬಾಬು ಜೀವನರಾಮ ಅವರಂತಹ ಮೇರು ವ್ಯಕ್ತಿತ್ವದ ವ್ಯಕ್ತಿಯ ಅವಶ್ಯಕತೆ ಇಂದಿನ ದಿನಗಳಲ್ಲಿ ತುಂಬಾ ಅಗತ್ಯವಾಗಿದೆ ಇದೆ ಎಂದು ತಹಶೀಲ್ದಾರ ನಿಂಗಪ್ಪ ಬಿರಾದಾರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಭಾನುವಾರ ಕಂದಾಯ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಹಸಿರು ಕ್ರಾಂತಿಯ ಹರಿಕಾರ, ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ್ತ ಪ್ರೌಢಶಾಲಾ ಶಿಕ್ಷಕ ಕೆ.ಎಸ್.ಹಿರೇಕುರುಬರ ಮಾತನಾಡಿ, ಬಾಬೂಜೀ ಈ ದೇಶಕ್ಕೆ ನೀಡಿದ ಕೊಡುಗೆಯ ಕುರಿತು ವಿವರಿಸಿದರು.
ಶಿರಸ್ತೇದಾರ ಸುರೇಶ ಮ್ಯಾಗೇರಿ, ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಎನ್.ಬಸವರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಸರ್ವೇಶ ಆಲಮೇಲಕರ, ಹಣಮಂತ ಲಾತೂರ, ಅನೀಲ ಮೋಕಾಶಿ ಇಸ್ಮಾಯಿಲ್ ಮಂದೇವಾಲ್, ಶ್ರೀನಿವಾಸ ಬಂಡಿವಡ್ಡರ, ನಫೀಸಾ ದಪೇದಾರ, ಪೂಜಾ ನಿಕ್ಕಂ, ಸಿದ್ದು ಮೇಲಿನಮನಿ, ಸದಾಶಿವ ಗುಡಿಮನಿ, ಪ್ರಕಾಶ ಗುಡಿಮನಿ, ಜಿ.ಪಿ.ಬಿರಾದಾರ, ರಾಘು ಗುಡಿಮನಿ, ರಾಹುಲ ದೊಡಮನಿ, ನಾಗೇಶ ವಗ್ಗರ, ಕಿರಣ ವಗ್ಗರ, ಪರಶುರಾಮ ಸನಾದಿ, ರಾಕೇಶ್ ದೊಡಮನಿ ಭೀಮಾಶಂಕರ ದೊಡಮನಿ, ಪರಶುರಾಮ ವಗ್ಗರ, ಸಂತೋಷ ಮೇಲಿನಮನಿ, ಸಂದೀಪ ವಗ್ಗರ ಇದ್ದರು.

