ಉದಯರಶ್ಮಿ ದಿನಪತ್ರಿಕೆ
ತಿಕೋಟಾ: 22 ವರ್ಷಗಳ ಕಾಲ ಭಾರತಾಂಬೆಯ ಸೇವೆಗೈದು ತಾಲ್ಲೂಕಿನ ಹೊನವಾಡ ಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧ ಸುರೇಶ ಬಸಪ್ಪ ಬ್ಯಾಡಗಿ ಅವರಿಗೆ ಗೆಳೆಯರ ಬಳಗದಿಂದ ಶನಿವಾರ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವೀರಯೋಧ ಸುರೇಶ ಬ್ಯಾಡಗಿ ಜೀವನದ ಅಮೂಲ್ಯವಾದ ಸಮಯವನ್ನು ದೇಶಕ್ಕಾಗಿ ಮುಡುಪಾಗಿಟ್ಟು ದೇಶ ಸೇವೆ ಮಾಡಿದ್ದು ಸ್ಮರಣೀಯವಾದುದು. ಜೀವನದಲ್ಲಿ ಶಿಸ್ತು, ಪ್ರಾಮಾಣಿಕತೆ ಮತ್ತು ದೇಶಭಕ್ತಿಯಿಂದ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ನಮ್ಮ ದೇಶದ ಸೇವೆ ಮಾಡುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ನಾನು ಸೇನೆಯಲ್ಲಿ ಕಳೆದ ದಿನಗಳಲ್ಲಿ ನನಗೆ ಶಿಸ್ತು, ಧೈರ್ಯ ಮತ್ತು ದೇಶಪ್ರೇಮವನ್ನು ಕಲಿಸಿವೆ ಎಂದರು.
ದೇಶದ ವಿವಿಧ ರಾಜ್ಯಗಳಾದ ರಾಜಸ್ಥಾನ, ಮೇಘಾಲಯ, ಆಸ್ಸಾಂ, ಪಂಜಾಬ, ಪಠಾಣಕೋಟ, ಜಾರ್ಖಂಡ್, ಜಮ್ಮು ಕಾಶ್ಮೀರಗಳಲ್ಲಿ ಸೇವೆ ಸಲ್ಲಿಸಿದ್ದು, ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲೂ ಕರ್ತವ್ಯ ನಿರ್ವಹಿಸಿದ್ದೇನೆ ಎಂದು ತಮ್ಮ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ಹಣಮಂತ ಮೊಹಿತೆ, ಧರೆಪ್ಪ ಪಾಂಡೇಗಾವಿ, ಮಹಾಂತೇಶ ಮಂಗೊಂಡ, ನರಸಿಂಗ ಭೋಸಲೆ, ದೀಪಕ ಅಥಣಿ, ಶಿವಪ್ಪ ಗಸ್ತಿ, ಚಂದ್ರಕಾಂತ ಗುಗ್ಗರಿ, ಶಮೀರ ಹ್ಯಾಳಕರ, ಸಂತೋಷ ಹಡಪದ ಇದ್ದರು.

