Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಸ್ವಾತಂತ್ರ್ಯದ ಕಹಳೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ತೋರಿದಂತಹ ಕೆಚ್ಚೆದೆಯ ದೈತ್ಯಾಕಾರದ ಧೈರ್ಯ, ಸಾಹಸ ಮಹಿಳಾ ಲೋಕಕ್ಕೆ ಆದರ್ಶತನದ ಸ್ಪೂತಿ೯ಯಾಗಿದೆ ಎಂದು ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಹೇಳಿದರು.ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೀರವನಿತೆ ರಾಣಿ ಚೆನ್ನಮ್ಮನ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬ್ರಿಟಿಷ್ ಆಳ್ವಿಕೆಯ ಕಾಯ್ದೆಗಳನ್ನು ಪ್ರಬಲವಾಗಿ ವಿರೋಧಿಸಿದ ಚೆನ್ನಮ್ಮ ಸ್ವಾತಂತ್ರ್ಯದ ಕಿಚ್ಚು ಸೃಷ್ಟಿಸಿದ ಅಪ್ರತಿಮ ಧೀರ, ದಿಟ್ಟ ಮಹಿಳೆಯಾಗಿ ಗೌರವದಿಂದ ಮಿನುಗಿದ್ದಾರೆ.ಅವರು ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿಯಾಗಿ ಗೈದ ಶೌರ್ಯ, ಹೋರಾಟ ಎಂದೂ ಮರೆಯಲಾಗದು ಅವುಗಳು ಈಗ ಐತಿಹಾಸಿಕ ಪುಟಗಳಲ್ಲಿ ಸೇರಿವೆ. ಸ್ವಾಭಿಮಾನಿ ಚೆನ್ನಮ್ಮನಾಡು-ನುಡಿ ಉಳಿವಿಗಾಗಿ ಹಗಲಿರುಳು ತಪಿಸಿ ದೇಶ ಪ್ರೇಮ ಮೆರೆದಿದ್ದಾರೆ. ಜೀವದ ಹಂಗನ್ನು ತೊರೆದು ಪರಾಕ್ರಮದ ಭಾವದಿಂದ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿ ಜನಮನದಲ್ಲಿಂದು ಚೆನ್ನಮ್ಮ ಅಜರಾಮರವಾಗಿ ಉಳಿದಿದ್ದಾರೆ ಎಂದು ಜಾಲೋಜಿ ಸ್ಮರಿಸಿದರು.ಗೌರವ ಶಿಕ್ಷಕಿ ಸಹನಾ ಹತ್ತಳ್ಳಿ, ಶಿಕ್ಷಕ ಗುಲಾಬಚಂದ ಜಾಧವ ಮಾತನಾಡಿದರು.ಶಿಕ್ಷಕ ಲೋಹಿತ ಮಿಜಿ೯,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ಕ್ರಿ.ಶ ಒಂದನೇ ಶತಮಾನದಲ್ಲಿ ಚೀನಾದ ರೇಷ್ಮೆ ಬಟ್ಟೆಗಳಿಗೆ ಇಂದಿನ ಇರಾನ್ -ಇರಾಕ್ ನಲ್ಲಿ ಬಹುಬೇಡಿಕೆ. ಇದರಿಂದ ಚೀನಾ ಹಾಗೂ ಇರಾಕ್ -ಇರಾನ್ ಗಳ ನಡುವೆ ವ್ಯಾಪಾರ ಸಂಬಂಧ ವೃದ್ಧಿಯಾಯಿತು. ಈ ವಾಣಿಜ್ಯ ಚಟುವಟಿಕೆ ನಡೆಯುವ ರಸ್ತೆಮಾರ್ಗವನ್ನು “ಸಿಲ್ಕ್ ರೂಟ್” ಎಂದು ಕರೆಯುತ್ತಾರೆ ಎಂದು ವಸುಧೇಂದ್ರ ಹೇಳಿದರು.ಬುಧವಾರ ಸಂಜೆ ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ “ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ” ಆಯೋಜನೆಯ ಮಾತುಕತೆ ಕಾರ್ಯಕ್ರಮದಲ್ಲಿ ಮಾತಾಡಿದ ಅವರು “ಸಂಸ್ಕೃತದ ವ್ಯರ್ತ್ಮ ಶಬ್ದದ ತದ್ಭವವಾದ ಬಟ್ಟೆಗೆ ಕನ್ನಡ ಭಾಷೆಯಲ್ಲಿ ವಸ್ತ್ರದ ಜೊತೆಗೆ ದಾರಿ ಎಂಬ ಇನ್ನೊಂದು ಅರ್ಥವೂ ಇದೆ” ಎಂದು ತಮ್ಮ ಹೊಸ ಕಾದಂಬರಿ “ರೇಷ್ಮೆ ಬಟ್ಟೆ” ಪುಸ್ತಕ ಕುರಿತು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ನಾರಾಯಣ ಬಾಬಾನಗರ ವಹಿಸಿದ್ದರು, ನಿರೂಪಣೆ ರಾಹುಲ್ ಮರಳಿ, ಸ್ವಾಗತ-ಪರಿಚಯ ಶ್ರೀರಂಗ ಕುಲಕರ್ಣಿ ಮಾಡಿದರು.ಶ್ರೀರಂಗ ಪುರಾಣಿಕ, ವಿವೇಕ ಕುಲಕರ್ಣಿ, ರವೀಂದ್ರ ಹಲ್ಯಾಳ, ಸುಧೀರ ಟಂಕಸಾಲಿ, ಬಿ ಎಸ್ ಕುಲಕರ್ಣಿ, ಸಂತೋಷ ಕಳಿಗುಡ್ಡ, ವರುಣ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ದಿನನಿತ್ಯದ ಆಹಾರದಲ್ಲಿ ಆಯೋಡಿನ್ ಯುಕ್ತ ಉಪ್ಪನ್ನೆ ಬಳಸಿ ಆಯೋಡಿನ್ ಕೊರತೆಯ ನ್ಯೂನತೆಗಳನ್ನು ತಡೆಗಟ್ಟಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅಪ್ಪಾಸಾಹೇಬ ಇನಾಮದಾರ ಹೇಳಿದರುಪಟ್ಟಣದ ರಾಂಪುರ ಪಿಎ ರಸ್ತೆಯಲ್ಲಿರುವ ಪ್ರೇರಣಾ ಪಬ್ಲಿಕ್ ಶಾಲೆಯಲ್ಲಿ ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಹಾಗೂ ಪ್ರೇರಣಾ ಪಬ್ಲಿಕ್ ಶಾಲೆ ಸಹಯೋಗದೊಂದಿಗೆ ಹಮ್ಮಿಕೊಂಡ ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯೋಡಿನ್ ಯುಕ್ತ ಉಪ್ಪು ಮಕ್ಕಳ ಹಾಗೂ ಕುಟುಂಬದ ಆರೋಗ್ಯ ಸಂರಕ್ಷಕ. ಆಯೋಡಿನ್ ಯುಕ್ತ ಉಪ್ಪು ಬಳಸದಿದ್ದರೆ ಮಕ್ಕಳಲ್ಲಿ ಬುದ್ದಿಮಾಂದ್ಯತೆ ಕಂಡುಬರುತ್ತದೆ. ಕಲಿಕೆಯಲ್ಲಿ ಹಿಂದುಳಿಯುವಿಕೆ, ದೈಹಿಕ ಮತ್ತು ಮಾನಸಿಕ ವಿಕಲತೆ, ಕುಂಠಿತ ಬೆಳವಣಿಗೆ, ಮಕ್ಕಳಲ್ಲಿ ಕಿವುಡು ಮತ್ತು ಮೂಕತನ ಕಂಡುಬರುವುದು, ಮೆಳ್ಳಗಣ್ಣು ಹಾಗೂ ನಡಿಗೆಯಲ್ಲಿ ಲೋಪದೋಷಗಳು ಕಂಡುಬರುತ್ತದೆ. ವಿದ್ಯಾರ್ಥಿಗಳು ತಮ್ಮ ಕುಟುಂಬ ಹಾಗೂ ನೆರೆಹೊರೆಯವರಿಗೆ ಇದರ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡದರು.ಈ ವೇಳೆ ಜಿಲ್ಲಾ ಎಪಿಡೋಮೋಲೊಜಿಸ್ಟ ಡಾ.ಸುರೇಶ ಪಶ್ಚಾಪೂರ ಮಾತನಾಡಿ,…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮಂಡ್ಯದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯೇತರರನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎನ್ನುವ ವಿಚಾರ ಖಂಡಿಸಿ, ಮಾಧ್ಯಮರಂಗ ಫೌಂಡಶನ್ ವತಿಯಿಂದ ಗುರುವಾರ ತಾಲೂಕು ಆಡಳಿತ ಕಚೇರಿ ಮುಂದೆ ಹೋರಾಟ ನಡೆಸಲಾಯಿತು.ಮನವಿ ಸಲ್ಲಿಸಿ ಮಾಧ್ಯಮರಂಗ ಫೌಂಡೇಶನ್ ಅಧ್ಯಕ್ಷ, ಯುವ ಬರಹಗಾರ ನಾಗೇಶ ತಳವಾರ ಮಾತನಾಡಿ, ಕನ್ನಡ ನಾಡಿನ ಸಾಹಿತ್ಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಸಮ್ಮೇಳನಕ್ಕೆ ಗೌರವ ಘನತೆಯಿದೆ. ಈಗ ಚರ್ಚೆಗೆ ಗ್ರಾಸವಾಗಿರುವ ಸಾಹಿತ್ಯೇತರರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡುವ ವಿಚಾರ ಸರಿಯಾದ ಕ್ರಮವಲ್ಲ. ಇದನ್ನು ನಾವು ವಿರೋಧಿಸುತ್ತೇವೆ ಎಂದರು.ಈ ವೇಳೆ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಧ ಅಧ್ಯಕ್ಷ ಪಂಡಿತ ಯಂಪೂರೆ ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಸ್ಥಾನಕ್ಕೆ ಅದರದೆಯಾದ ಗೌರವವಿದೆ. ನಾಡಿಗೆ ಲೇಖಕರು ಕೊಡುಗೆ ದೊಡ್ಡದಿದ್ದು, ಅದೇ ಕ್ಷೇತ್ರದ ಸಾಧಕರನ್ನು ಹೊರತುಪಡಿಸಿ ಇತರರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಬಾರದು ಎಂದರು. ಪತ್ರಕರ್ತ ನಿಂಗರಾಜ ಅತನೂರ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಮಗ್ರ ಗ್ರಾಮ ಪಂಚಾಯತ್ ಅಬಿವೃದ್ದಿಗೆ ಎಲ್ಲರೂ ಸಹಕಾರ ಕೊಡಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಹೇಳಿದರು.ತಾಲೂಕಿನ ಗೋಲಗೇರಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾದ ನಿಮಿತ್ಯ ಅವರಿಗೆ ಪಕ್ಷದ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು, ಸ್ವಚ್ಚತೆಗೆ ಎಲ್ಲರೂ ಆದ್ಯತೆ ಕೋಡಬೇಕು. ಗ್ರಾಮದ ಸಂಪೂರ್ಣ ಶ್ರೇಯೊಭಿವೃದ್ಧಿಗೆ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರಮಿಸಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಸಿದ್ದು ಬುಳ್ಳಾ, ಪ್ರಭುಗೌಡ ಪಾಟೀಲ, ಶ್ರೀಶೈಲ ಚಳ್ಳಗಿ, ಗೌಡಣ್ಣ ಆಲಮೇಲ, ಸಂಗನಗೌಡ ಪಾಟೀಲ, ಮಹಾಂತೇಶ ಸಾತಿಹಾಳ, ಸೈಪನಸಾಬ ಕೋರವಾರ, ಶಶಿಕಾಂತ ನಾಯ್ಕಲ್, ಶಿವಣ್ಣ ನಾಗಣಸೂರ, ಗೋಲ್ಲಾಳಪ್ಪಗೌಡ ನಾಗಣಸೂರ, ಸುನೀಲಗೌಡ ಪಾಟೀಲ, ಅಮ್ಮೋಗಿ ಜೈನಾಪುರ ಸೇರಿದಂತೆ ಗ್ರಾಮಸ್ಥರು ಇದ್ದರು.
ಅಕ್ಕಮಹಾದೇವಿ ಮಹಿಳಾ ವಿವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೊ.ಓಂಕಾರ ಕಾಕಡೆ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಬಗೆಯ ಕೌಶಲ್ಯಗಳನ್ನು ಸಂಪೂರ್ಣವಾಗಿ ರೂಢಿಸಿಕೊಂಡಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದಲ್ಲಿ ಪದವಿ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗಾಗಿ ಗುರುವಾರ ಆಯೋಜಿಸಿದ್ದ ಟೆಲಿವಿಷನ್ ಸ್ಟುಡಿಯೋ ಭೇಟಿ ಮತ್ತು ಟೆಲಿವಿಷನ್ ಕಾರ್ಯಕ್ರಮ ನಿರೂಪಣೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ತಕ್ಷಣ ಕೆಲಸ ಸಿಗುವ ಕ್ಷೇತ್ರ ಈಗ ಮಾಧ್ಯಮ ಕ್ಷೇತ್ರವಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಅವಕಾಶಗಳು ನಿಮ್ಮ ಮುಂದೆ ಇವೆ. ಈ ಮಾಧ್ಯಮ ಕೌಶಲ್ಯಗಳನ್ನು ಕರಗತ ಮಾಡಿಕೊಂಡರೆ ಮಾತ್ರ ಸುಲಭವಾಗಿ ನೀವು ವೃತ್ತಿ ಬದುಕನ್ನು ರೂಪಿಸಿಕೊಳ್ಳಬಹುದು. ನಿಮ್ಮ ಸಾಮರ್ಥ್ಯ ಮತ್ತು ಕೌಶಲ್ಯದಿಂದ ಮಾತ್ರ ಉತ್ತಮ ಟಿವಿ ಆಂಕರ್…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲೂಕಿನ ಅಮರಗೋಳ ಗ್ರಾಮದ ಸವಿತಾ ಅಮರಗೋಳ ಕಾಣೆಯಾದ ವಿದ್ಯಾರ್ಥಿನಿ. ಗ್ರಾಮದ ತಮ್ಮ ಮನೆಯಿಂದ ಮುದ್ದೇಬಿಹಾಳದ ಕಾಲೇಜಿಗೆ ಹೋಗಿ ಬರುವದಾಗಿ ಹೇಳಿ ಹೋದವಳು ಮನೆಯಿಂದ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ ಎಂದು ಸವಿತಾಳ ತಂದೆ ಬಸಪ್ಪ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿಎಲ್.ಡಿ.ಇ ಆಸ್ಪತ್ರೆಯ ಕಂಪೌಂಡದಿಂದ ಮಲ್ಲಿಕಾರ್ಜುನ ಆಶ್ರಮದ (ಜ್ಞಾನಯೋಗಾಶ್ರಮ) ಹಿಂದಿನ ರಸ್ತೆಯ ಮೂಲಕ ಸಿದ್ಧಾರೂಢ ಮಠದವರೆಗೆ ಮಾದರಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು ೨೦೨೩-೨೪ನೇ ಸಾಲಿನ ಸಿ.ಆರ್.ಎಫ್ ಯೋಜನೆಯಡಿ ರೂ.೬ ಕೋಟಿ ಅನುದಾನ ಮಂಜೂರಿಸಲಾಗಿದ್ದು, ಟೆಂಡರ್ ಕೂಡ ಆಹ್ವಾನಿಸಲಾಗಿದೆ. ಆದಷ್ಟು ಶೀಘ್ರವಾಗಿ ರಸ್ತೆ ಅಭಿವೃದ್ಧಿಗೊಳ್ಳಲಿದೆ ಎಂದು ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಿದ್ಧಾರೂಢ ಮಠದ ರಸ್ತೆ ಹಾಳಾಗಿದ್ದರಿಂದ ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೀವ್ರ ಅಡೆತಡೆ ಉಂಟಾಗಿರುವುದು ಗಮನಕ್ಕೆ ಬಂದ ತಕ್ಷಣ ಖುದ್ದಾಗಿ ರಸ್ತೆಯನ್ನು ಪರಿಶೀಲಿಸಿ, ಆದಷ್ಟು ಶೀಘ್ರವಾಗಿ ರಸ್ತೆ ಅಭಿವೃದ್ಧಿಗೊಳಿಸುವ ಭರವಸೆ ನೀಡಿದ್ದೆ. ಅದರಂತೆ, ಇದೀಗ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಹಾಗೂ ನಗರದ ಅಂಧವನ್ನು ಹೆಚ್ಚಿಸಲು ಅನುದಾನ ಮಂಜೂರಿಸಲಾಗಿದೆ.ಈಗಾಗಲೇ ನಗರದ ಡಾ.ಬಿ.ಆರ್.ಅಂಬೇಡ್ಕರ್ ಮಾರ್ಗ, ಸುಭಾಸಚಂದ್ರ ಬೋಸ್ ಮಾರ್ಗ, ಅಟಲ್ ಬಿಹಾರಿ ವಾಜಪೇಯಿ ಮಾರ್ಗ, ಮಹಾರಾಣಾ ಪ್ರತಾಪ ಮಾರ್ಗ, ಜಿಲ್ಲಾ ಪಂಚಾಯಿತಿ ಕಚೇರಿ ಮಾರ್ಗ ಸೇರಿದಂತೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಸಾರ್ವಜನಿಕರು ಕಟ್ಟಿರುವ ತೆರಿಗೆ ಹಣ, ಎಲ್ಲಿಗೆ ಹೋಗುತ್ತಿದೆ? ನಗರದಲ್ಲಿ ಕೆಲ ದಿನಗಳ ಹಿಂದಷ್ಟೇ ಹದಗೆಟ್ಟ ಚರಂಡಿ ವ್ಯವಸ್ಥೆಯಿಂದ ವಾರ್ಡ್ ನಂಬರ್ ೨೪ರಲ್ಲಿ ಒಂದು ಮಗು ಜೀವವನ್ನೇ ಕಳೆದುಕೊಂಡು ಹಾಗೂ ಆಶ್ರಮ ರಸ್ತೆಯ ಹತ್ತಿರ ತಡೆಗೋಡೆ ಇಲ್ಲದ ಕಾರಣ ಕಳೆದ ವರ್ಷ ಮೂರು ಮಕ್ಕಳು ಜೀವ ಕಳೆದುಕೊಂಡರೂ ಕೂಡ ಮಹಾನಗರ ಪಾಲಿಕೆ ಗಾಢ ನಿದ್ರೆಯಿಂದ ಹೊರ ಬಂದಿಲ್ಲ ಎಂದು ಸ್ವಾಮಿ ವಿವೇಕಾನಂದ ಸೇನೆ ರಾಜ್ಯಾಧ್ಯಕ್ಷ ರಾಘವ ಅಣ್ಣಿಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಹಾನಗರ ಪಾಲಿಕೆಯು ಅವಶ್ಯವಿರುವ ಸ್ಥಳಗಳಲ್ಲಿ ಸೂಕ್ತ ಡ್ರೈನೇಜ್ ವ್ಯವಸ್ಥೆ, ತಡೆಗೋಡೆಗಳು, ಅತಿಕ್ರಮಣಗೊಂಡ ರಾಜ ಕಾಲುವೆಗಳನ್ನು ಸ್ವಚ್ಛತೆ, ರಸ್ತೆಗಳು, ಬೀದಿ ದೀಪಗಳು ಜನತೆಗೆ ಅತೀ ಅವಶ್ಯವಿರುವ ಕೆಲಸ ಕಾರ್ಯಗಳನ್ನು ಮಾಡದೇ ಮೂಲಭೂತ ಸೌಕರ್ಯಗಳನ್ನು ಒದಗಿಸುವದು ಬಿಟ್ಟು, ಬಬಲೇಶ್ವರ ನಾಕಾದಲ್ಲಿ ಇಬ್ರಾಹಿಂ ಆದಿಲ್ ಶಾಹಿ ವೃತ್ತದ ಹೆಸರಿನಲ್ಲಿ ಹಾಗೂ ಹಾಸಿಂಪಿರ್ ದರ್ಗಾ ಹತ್ತಿರ (ಆರ್ಚ್ಗಳನ್ನು) ಕಮಾನುಗಳನ್ನು ನಿರ್ಮಿಸಲು ರೂ.೪೦ ಲಕ್ಷ (ನಲವತ್ತು ಲಕ್ಷ)ಗಳ ಟೆಂಡರ್ ಕರೆದು, ಸಾರ್ವಜನಿಕರು ಕಟ್ಟಿರುವ ತೆರಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ (ಸೂಕ್ಷ್ಮ ನೀರಾವರಿ) ಯೋಜನೆಯಡಿ ಸೂಕ್ಷ್ಮ ನೀರಾವರಿ ಘಟಕಗಳ ನಿರ್ವಹಣೆ ಮತ್ತು ಗುಣ ನಿಯಂತ್ರಣ ಕುರಿತು ಅ.೨೧ರಿಂದ ೨೩ರವರೆಗೆ ಜಿಲ್ಲೆಯ ವಿಸ್ತರಣಾಧಿಕಾರಿಗಳಿಗೆ ತರಬೇತಿ ಜರುಗಿತು.ತರಬೇತಿ ಕಾರ್ಯಕ್ರಮವನ್ನು ಜಂಟಿ ಕೃಷಿ ನಿರ್ದೇಶಕಿ ಶ್ರೀಮತಿ ರೂಪಾ ಎಲ್. ಅವರು ಉದ್ಘಾಟಿಸಿ ಮಾತನಾಡಿ, ತರಬೇತಿಯಲ್ಲಿ ಭಾಗವಹಿಸಿದ ವಿಸ್ತರಣಾಧಿಕಾರಿಗಳು ಸೂಕ್ಷ್ಮ ನೀರಾವರಿ ಘಟಕಗಳು ಹಾಗೂ ಟಾರ್ಪಲಿನ್‌ಗಳ ಗುಣಮಟ್ಟ ಪರಿಶೀಲನೆ, ಪರೀಕ್ಷಾ ಮಾದರಿ ತೆಗೆಯುವ ವಿಧಾನ ಕುರಿತು ಮಾಹಿತಿ ಪಡೆಯುವ ಮೂಲಕ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಮೈಸೂರಿನ ಸಿಪೆಟ್ ಸಂಸ್ಥೆಯ ಅಧಿಕಾರಿಗಳಾದ ಡಾ.ಶ್ರೀಕಾಂತ, ರಘು ಹಾಗೂ ಬಾಲರಾಜ ರಂಗರಾವ್, ಜೈನ್ ಇರಿಗೇಷನ್ ಸಿಸ್ಟಮ್ಸ್ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕ ಎಂ.ಕೆ.ಬಿರಾದಾರ, ಪ್ರಭಾಕರ ಯಾಳವಾರ ಅವರು ಸೂಕ್ಷ್ಮ ನೀರಾವರಿ ಅಳವಡಿಕೆಯ ಮಹತ್ವ, ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ಉಪ ಕೃಷಿ ನಿರ್ದೇಶಕ ಪ್ರಕಾಶ ಚವ್ಹಾಣ, ಚಂದ್ರಕಾಂತ ಪವಾರ, ಸಹಾಯಕ ಕೃಷಿ ನಿರ್ದೇಶಕರಾದ…
