ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಕಾಣೆಯಾದ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಅಮರಗೋಳ ಗ್ರಾಮದ ಸವಿತಾ ಅಮರಗೋಳ ಕಾಣೆಯಾದ ವಿದ್ಯಾರ್ಥಿನಿ. ಗ್ರಾಮದ ತಮ್ಮ ಮನೆಯಿಂದ ಮುದ್ದೇಬಿಹಾಳದ ಕಾಲೇಜಿಗೆ ಹೋಗಿ ಬರುವದಾಗಿ ಹೇಳಿ ಹೋದವಳು ಮನೆಯಿಂದ ಮರಳಿ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿರುತ್ತಾಳೆ ಎಂದು ಸವಿತಾಳ ತಂದೆ ಬಸಪ್ಪ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
