ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸಮಗ್ರ ಗ್ರಾಮ ಪಂಚಾಯತ್ ಅಬಿವೃದ್ದಿಗೆ ಎಲ್ಲರೂ ಸಹಕಾರ ಕೊಡಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಹೇಳಿದರು.
ತಾಲೂಕಿನ ಗೋಲಗೇರಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾದ ನಿಮಿತ್ಯ ಅವರಿಗೆ ಪಕ್ಷದ ವತಿಯಿಂದ ಸನ್ಮಾನಿಸಿ ಮಾತನಾಡಿದ ಅವರು, ಸ್ವಚ್ಚತೆಗೆ ಎಲ್ಲರೂ ಆದ್ಯತೆ ಕೋಡಬೇಕು. ಗ್ರಾಮದ ಸಂಪೂರ್ಣ ಶ್ರೇಯೊಭಿವೃದ್ಧಿಗೆ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರಮಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿದ್ದು ಬುಳ್ಳಾ, ಪ್ರಭುಗೌಡ ಪಾಟೀಲ, ಶ್ರೀಶೈಲ ಚಳ್ಳಗಿ, ಗೌಡಣ್ಣ ಆಲಮೇಲ, ಸಂಗನಗೌಡ ಪಾಟೀಲ, ಮಹಾಂತೇಶ ಸಾತಿಹಾಳ, ಸೈಪನಸಾಬ ಕೋರವಾರ, ಶಶಿಕಾಂತ ನಾಯ್ಕಲ್, ಶಿವಣ್ಣ ನಾಗಣಸೂರ, ಗೋಲ್ಲಾಳಪ್ಪಗೌಡ ನಾಗಣಸೂರ, ಸುನೀಲಗೌಡ ಪಾಟೀಲ, ಅಮ್ಮೋಗಿ ಜೈನಾಪುರ ಸೇರಿದಂತೆ ಗ್ರಾಮಸ್ಥರು ಇದ್ದರು.

