ಉದಯರಶ್ಮಿ ದಿನಪತ್ರಿಕೆ
ವಿಜಯಪುರ: “ಕ್ರಿ.ಶ ಒಂದನೇ ಶತಮಾನದಲ್ಲಿ ಚೀನಾದ ರೇಷ್ಮೆ ಬಟ್ಟೆಗಳಿಗೆ ಇಂದಿನ ಇರಾನ್ -ಇರಾಕ್ ನಲ್ಲಿ ಬಹುಬೇಡಿಕೆ. ಇದರಿಂದ ಚೀನಾ ಹಾಗೂ ಇರಾಕ್ -ಇರಾನ್ ಗಳ ನಡುವೆ ವ್ಯಾಪಾರ ಸಂಬಂಧ ವೃದ್ಧಿಯಾಯಿತು. ಈ ವಾಣಿಜ್ಯ ಚಟುವಟಿಕೆ ನಡೆಯುವ ರಸ್ತೆಮಾರ್ಗವನ್ನು “ಸಿಲ್ಕ್ ರೂಟ್” ಎಂದು ಕರೆಯುತ್ತಾರೆ ಎಂದು ವಸುಧೇಂದ್ರ ಹೇಳಿದರು.
ಬುಧವಾರ ಸಂಜೆ ನಗರದ ಶ್ರೀಕೃಷ್ಣ ವಾದಿರಾಜ ಮಠದಲ್ಲಿ “ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ” ಆಯೋಜನೆಯ ಮಾತುಕತೆ ಕಾರ್ಯಕ್ರಮದಲ್ಲಿ ಮಾತಾಡಿದ ಅವರು “ಸಂಸ್ಕೃತದ ವ್ಯರ್ತ್ಮ ಶಬ್ದದ ತದ್ಭವವಾದ ಬಟ್ಟೆಗೆ ಕನ್ನಡ ಭಾಷೆಯಲ್ಲಿ ವಸ್ತ್ರದ ಜೊತೆಗೆ ದಾರಿ ಎಂಬ ಇನ್ನೊಂದು ಅರ್ಥವೂ ಇದೆ” ಎಂದು ತಮ್ಮ ಹೊಸ ಕಾದಂಬರಿ “ರೇಷ್ಮೆ ಬಟ್ಟೆ” ಪುಸ್ತಕ ಕುರಿತು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ನಾರಾಯಣ ಬಾಬಾನಗರ ವಹಿಸಿದ್ದರು, ನಿರೂಪಣೆ ರಾಹುಲ್ ಮರಳಿ, ಸ್ವಾಗತ-ಪರಿಚಯ ಶ್ರೀರಂಗ ಕುಲಕರ್ಣಿ ಮಾಡಿದರು.
ಶ್ರೀರಂಗ ಪುರಾಣಿಕ, ವಿವೇಕ ಕುಲಕರ್ಣಿ, ರವೀಂದ್ರ ಹಲ್ಯಾಳ, ಸುಧೀರ ಟಂಕಸಾಲಿ, ಬಿ ಎಸ್ ಕುಲಕರ್ಣಿ, ಸಂತೋಷ ಕಳಿಗುಡ್ಡ, ವರುಣ ಸೋಲಾಪುರ, ರಘೋತ್ತಮ ಅರ್ಜುಣಗಿ, ರಂಜಿತ್ ಸಿಂಗ್ ರಜಪೂತ, ಶರಣು ಹೀರಾಪುರ, ವಾಸು ಹೆರಕಲ್ ಸೇರಿದಂತೆ ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

