Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಕ್ಪ್ ಬೋರ್ಡ ಹೆಸರು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ಉದಯರಶ್ಮಿ ದಿನಪತ್ರಿಕೆ ಇಂಡಿ: ಪಹಣಿಯಲ್ಲಿ ವಕ್ಪ್ ಬೋರ್ಡ ಹೆಸರು ಸೇರಿಸಿದ್ದನ್ನು ಕೂಡಲೆ ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯದ್ಯಂತ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ರೈತ ಸಂಘಟನೆ, ಹಸಿರು ಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಹೇಳಿದರು.ಮಂಗಳವಾರ ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.ಅಕ್ಟೋಬರ್ ೮ ಮತ್ತು ೧೦ರಂದು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ತಿದ್ದುಪಡಿ ಮಾಡಲು ನಿರ್ದೇಶನ ನೀಡಿದವರು ಯಾರು ಮುಖ್ಯಮಂತ್ರಿಗಳೋ, ಜಿಲ್ಲಾಧಿಕಾರಿಗಳೋ, ಇಲ್ಲದಿದ್ದರೆ ಮತ್ಯಾರು, ಯಾವ ಪುರುಷಾರ್ಥಕ್ಕಾಗಿ ರೈತರಿಗೆ ತೊಂದರೆ ನೀಡಲು ಮುಂದಾಗಿದ್ದೀರಿ ಎಂದು ಪ್ರಶ್ನಿಸಿದರು.ನಿಮಗೆ ಆ ಸಮುದಾಯದ ಮೇಲೆ ಕಾಳಜಿ ಇದ್ದರೆ, ಸರಕಾರದಿಂದ ಅವರಿಗೆ ನೀವು ಸಹಾಯ ಮಾಡಿ ನಮಗೆ ಯಾವುದೇ ಅಭ್ಯಂತರವಿಲ್ಲ, ಆದರೆ ರೈತರ ಜಮೀನನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿರುವ ನೀವು ಈ ಕೂಡಲೇ ಅದನ್ನು ಕೈ ಬಿಟ್ಟು, ಪಹಣಿಯಲ್ಲಿ ಸೇರಿದ ವಕಪ್ ಬೋರ್ಡ್ ಹೆಸರನ್ನು ತೆಗೆದುಹಾಕಿ, ರೈತರ ಜಮೀನು ರೈತರಿಗೆ ಇರುವಂತೆ ಮಾಡಬೇಕು, ಒಂದು ವೇಳೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ ಸಾಗರಮಾಲ ಯೋಜನೆಯಡಿ ಪ್ರವಾಸೋದ್ಯಮ ಪೂರಕವಾಗಿ ಮತ್ತು ಸ್ಥಳೀಯ ಜನರಿಗೆ ಅನುಕೂಲವಾಗುವ ಆಲಮಟ್ಟಿ, ಹೆರಕಲ್ ಗ್ರಾಮಗಳಲ್ಲಿರುವ ಉದ್ದೇಶಿತ ಯೋಜನೆಯನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜಯರಾಮ್ ರಾಯ್ ಪುರ ಅವರು ತಿಳಿಸಿದರು.ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿ ಮತ್ತು ಹೆರಕಲ್ ಗ್ರಾಮಗಳಲ್ಲಿರುವ ಉದ್ದೇಶಿತ ಯೋಜನಾ ಸ್ಥಳಗಳ ಕಾರ್ಯಸಾಧ್ಯತೆ, ಯೋಜನೆಯ ಭೂಸ್ವಾಧೀನ ಮತ್ತು ಜಲಸಾರಿಗೆ ಉಪಯುಕ್ತತೆ ಬಗ್ಗೆ ಪರಿಶೀಲನೆ ಹಾಗೂ ಆಲಮಟ್ಟಿ ಆಣೆಕಟ್ಟಿನ ಕೆಳಭಾಗದಲ್ಲಿರುವ 25 ಎಕರೆ ಜಮೀನಿನಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೀನು ಸಾಕಾಣಿಕೆ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ನೀಡಿದರು.ಜಿಲ್ಲೆಯಲ್ಲಿರುವ ಜಲಮಾರ್ಗದ ಮುಖಾಂತರ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿದಲ್ಲಿ ಸ್ಥಳೀಯ ಜನರಿಗೆ ವಿವಿಧ ಆರ್ಥಿಕವಾಗಿ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.ನದಿ ತೀರದಲ್ಲಿ ಜಲಮಾರ್ಗದ ಮುಖಾಂತರ ಪ್ರವಾಸೋದ್ಯಮವನ್ನು ಅಭಿವೃದ್ದಿಪಡಿಸಿದ್ದಲ್ಲಿ ಹೆಚ್ಚಿನ ಸಂಖ್ಯೆ ಪ್ರವಾಸಿಗರ ಗಮನ ಹೆಚ್ಚು ಸೆಳೆಯಬಹುದು. ಜೊತೆಗೆ ಈ ಯೋಜನೆಯಿಂದ ಸ್ಥಳೀಯ ಜನರು ವಿವಿಧ ಆರ್ಥಿಕ ಪ್ರಯೋಜನಗಳು…
ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಆಲಮಟ್ಟಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬೆಳಗಾವಿ ವಿಭಾಗ ಮಟ್ಟ ಹಾಗೂ ಕರ್ನಾಟಕ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗಳು ನ.೧೧ ರಿಂದ ನಾಲ್ಕು ದಿನಗಳ ಕಾಲ ಜರುಗಲಿವೆ.ಆಲಮಟ್ಟಿಡ್ಯಾಂಸೈಟ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಮೈದಾನದಲ್ಲಿ ಈ ಪಂದ್ಯಾವಳಿಗಳು ಜರುಗಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹಾಗೂ ಕ್ರೀಡಾಕೂಟದ ಸಂಘಟನೆಯ ಉಸ್ತುವಾರಿ ವಹಿಸಿಕೊಂಡಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಈ ಬಗ್ಗೆ ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.ಶಾಲೆಯ ಮೈದಾನದಲ್ಲಿ ನಾಲ್ಕು ಖೋಖೋ ಸ್ಪರ್ಧೆಗಳು ಏಕಕಾಲದಲ್ಲಿಯೇ ಜರುಗುವಂತೆ ನಾಲ್ಕು ಖೋಖೋ ಮೈದಾನ ನಿರ್ಮಿಸಲಾಗುತ್ತಿದೆ. ಕ್ರೀಡಾಭಿಮಾನಿಗಳಿಗೆ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ನಾಲ್ಕು ಕಡೆ ಎಲ್ ಇಡಿ ಪರದೆಗಳ ಮೂಲಕ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಅವಿಭಜಿತ ಬಸವನಬಾಗೇವಾಡಿ ತಾಲ್ಲೂಕಿನ ಇತಿಹಾಸದಲ್ಲಿಯೇ ರಾಜ್ಯ ಮಟ್ಟದ ಪಂದ್ಯಾವಳಿಗಳನ್ನು ಸಂಘಟಿಸುತ್ತಿರುವುದು ಇದೇ ಪ್ರಥಮ, ರಾಜ್ಯದ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸೌರಮಂಡಲದಲ್ಲಿ ಲಕ್ಷಾಂತರ ಗೃಹಗಳು, ನಕ್ಷತ್ರಗಳಿದ್ದರೂ ಮನುಷ್ಯ ವಾಸವಿರುವ ಭೂಮಿ ಇದೊಂದೇ, ಇದನ್ನು ನಾವೇ ನಮ್ಮ ಕೈಯಾರೆ ಸ್ವಯಂಕೃತ ತಪ್ಪುಗಳಿಂದ ಹಾಳು ಮಾಡುವುದು ಬೇಡ ಎಂದು ಸಂತ ಕನಕದಾಸ ಶಾಲೆಯ ಕಾರ್ಯದರ್ಶಿ ಬಿ.ಎಸ್.ಮೇಟಿ ಹೇಳಿದರು.ಪಟ್ಟಣದ ಸಂತ ಕನಕದಾಸ ಶಾಲೆಯಲ್ಲಿ ಹಸಿರು ತೋರಣ ಗೆಳೆಯರ ಬಳಗ ಹಮ್ಮಿಕೊಂಡಿದ್ದ “ಪಟಾಕಿ ಬೇಡ, ದೀಪ ಬೆಳಗೋಣ” ಅಭಿಯಾನದಲ್ಲಿ ಅವರು ಮಾತನಾಡಿದರು.ಹಸಿರು ತೋರಣ ಬಳಗದ ಸದಸ್ಯರು ಪರಿಸರ ಸಂರಕ್ಷಣೆ ಕುರಿತು ನಿರಂತರವಾಗಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದ ಅವರು, “ಪಟಾಕಿ ಹೊಡೆಯುವುದಿಲ್ಲ ಅದರ ಬದಲಿಗೆ ದೀಪಗಳನ್ನು ಹಚ್ಚುತ್ತೇವೆ ಎಂದು ಮಕ್ಕಳಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ವೀರೇಶ ಇಟಗಿ, ದೊಡ್ಡ ಶಬ್ದ ಮಾಡುವ ಪಟಾಕಿಗಳಿಂದ ಮನುಷ್ಯನಿಗೆ, ಪ್ರಾಣಿ, ಪಕ್ಷಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಪಟಾಕಿಗಳಿಂದ ಹೊರಹೊಮ್ಮುವ ವಿಷಾನಿಲಗಳು ಶ್ವಾಸಕೋಶದ ರೋಗಗಳು ಮತ್ತು ಕ್ಯಾನ್ಸರನಂತಹ ಗಂಭೀರ ಖಾಯಿಲೆಗಳು ಬರುತ್ತವೆ. ಜೊತೆಗೆ ಮಕ್ಕಳು ಪಟಾಕಿ ಹೊಡೆಯುವ ಸಮಯದಲ್ಲಿ ಕೈ, ಕಣ್ಣು ಸೇರಿದಂತೆ ಜೀವ ಕಳೆದುಕೊಂಡ ಘಟನೆಗಳನ್ನು…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಬೇಂದ್ರೆಯವರು ಪತ್ರಕರ್ತರಾಗಿ, ಸಾಹಿತಿಗಳಾಗಿ, ಪ್ರಾಧ್ಯಾಪಕರಾಗಿ, ಕವಿಗಳಾಗಿ ಅಷ್ಟೇ ಅಲ್ಲದೇ ಇನ್ನೀತರ ಕ್ಷೇತ್ರಗಳಲ್ಲಿ ಈ ನಾಡಿಗೆ ನೀಡಿದ ಸೇವೆ ಅಪಾರ. ಅವರ ಪ್ರತಿಯೊಂದು ಸಾಹಿತ್ಯದ ನುಡಿಗಳು ಇಡೀ ಕನ್ನಡ ಸಾಹಿತ್ಯವನ್ನೇ ಶ್ರೀಮಂತಗೊಳಿಸಿದೆ ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.ಪಟ್ಟಣದ ಹಳೆಯ ತರಕಾರಿ ಮಾರುಕಟ್ಟೆಯಲ್ಲಿರುವ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಕಸಾಪ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೇಂದ್ರೆಯವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಬೇಂದ್ರೆಯವರು ಇಡೀ ತಮ್ಮ ಜೀವನದ ತುಂಬಾ ನಿಸ್ವಾರ್ಥ ಸೇವೆ ಗೈದಿದ್ದಾರೆ. ಸಾಹಿತ್ಯ ರಚನೆ ಅವರ ಮೊದಲ ಒಲವಾಗಿತ್ತು. ಕವಿತೆಗಳನ್ನಷ್ಟೇ ಅಲ್ಲದೇ ನಾಟಕಗಳು, ಸಂಶೋಧನಾತ್ಮಕ ಲೇಖನಗಳನ್ನೂ ಬರೆದಿದ್ದಾರೆ. ಕವನಗಳ ಮೂಲಕ ಸಾಕಷ್ಟು ಜನತೆಯ ಮನದಲ್ಲಿ ಮನೆ ಮಾಡಿರುವ ಅವರು ನರಬಲಿ ಎಂಬ ಕವನ ಬರೆದು ಬ್ರಿಟೀಷರ ಕೋಪಕ್ಕೂ ಕಾರಣರಾಗಿದ್ದರು ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಮಾತನಾಡಿ, ಬೇಂದ್ರೆಯವರು ಅತ್ಯಂತ ನಿಷ್ಟೂರ ಮನುಷ್ಯ. ಅವರ ಕವಿತೆಗಳಲ್ಲಿ ಆಧ್ಯಾತ್ಮಿಕ ಶಕ್ತಿ ಇರುತ್ತಿತ್ತು. ಅವರನ್ನು ನೆನೆಸಿಕೊಂಡರೆ ಇಡೀ ಕನ್ನಡ…
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಆರೋಪ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಳೆದ ವರ್ಷ ಅನಾವೃಷ್ಟಿ ನಿವಾರಿಸುವಲ್ಲಿ ವಿಫಲವಾದ ಕಾಂಗ್ರೆಸ್ ಸರಕಾರ ಈ ವರ್ಷ ವೀಪರಿತ ಮಳೆಯಿಂದಾಗಿ ಅತಿವೃಷ್ಟಿಯಿಂದಾದ ಬೆಳೆ ಹಾನಿಯಿಂದ ಕಂಗಾಲಾದ ರೈತರ ಕಣ್ಣೋರೆಸಿ ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ ಎಂದು ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಆರೋಪಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳ್ಳತನದಿಂದ ಸರಕಾರಿ ನಿವೇಶನಗಳನ್ನು ಕಬಳಿಸುವುದು, ಅಪರಾಧ ಸಾಬೀತಾದ ನಂತರ ಮರಳಿ ಕೊಡುವುದು ಇರದಲ್ಲೇ ಕಾಲ ಹರಣ ಮಾಡಿದ್ದಾಯಿತು. ಬಿಜೆಪಿಯವರು ಸರಕಾರದ ವೈಫಲ್ಯಗಳನ್ನು ಜನರ ಗಮನಕ್ಕೆ ತರಲು ರಾಜ್ಯಾದ್ಯಂತ ಪ್ರವಾಸದಲ್ಲಿದ್ದರೆ ಅಧಿಕಾರಾರೂಢ ಕಾಂಗ್ರೆಸ್ ಸರಕಾರ ಚುನಾವಣೆಯ ರಂಗಿನಲ್ಲಿ ಮೈಮರೆತು ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿದೆ. ಅವರಿಗೆ ಅಭಿವೃದ್ಧಿಗಿಂತ ಚುನಾವಣೆಯೇ ಮುಖ್ಯವಾಗಿದೆ.ಚನ್ನ ಪಟ್ಟಣದಲ್ಲಿ ಅವರಿಗೆ ಪಕ್ಷದಿಂದ ಕಣಕ್ಕಿಳಿಸಲು ಒಬ್ಬೇ ಒಬ್ಬ ಅಬ್ಯರ್ಥಿಯೂ ಸಿಗದ ಕಾರಣ ಯೋಗೇಶ್ವರರನ್ನು ಪಕ್ಷಕ್ಕೆ ಮೋಸದಿಂದ ಬರಮಾಡಿಕೊಳ್ಳುವ ದೈನೇಸಿ ಸ್ಥಿತಿ ಒದಗಿದ್ದು ವಿಪರ್ಯಾಸ. ಯೋಗೇಶ್ವರ ಇಲ್ಲದಿದ್ದರೇ ಚನ್ನಪಟ್ಟಣದಲ್ಲಿ…
ವಿನಾಕಾರಣ ವಿಳಂಬ ನೀತಿ ಆರೋಪ | ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ | ಸಿಎಂ ಸಿದ್ದರಾಮಯ್ಯ ದಲಿತ ವಿರೋಧಿ | ಕಾರಜೋಳ ಆರೋಪ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ರಾಜ್ಯದಲ್ಲಿ ಅನ್ಯಾಯಕ್ಕೊಳಗಾದ ಪರಿಶಿಷ್ಟ ಜಾತಿ ಸಮುದಾಯದವರಿಗೆ ಕೂಡಲೇ ಒಳ ಮೀಸಲಾಯಿತಿಯನ್ನು ಜಾರಿಗೊಳಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಒಳ ಮೀಸಲಾತಿ ಜಾರಿ ವಿಷಯದಲ್ಲಿ ಮೂಗಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ. ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಸಂಸದರು ಆರೋಪಿಸಿದರು.ಯಡಿಯೂರಪ್ಪನವರ ಸರಕಾರದ ಅವಧಿಯಲ್ಲಿ ೧೩ಕೋಟಿ ಅನುದಾನ ಬಿಡುಗಡೆಗೊಳಿಸಿ ಸದಾಶಿವ ಆಯೋಗವನ್ನು ನೇಮಿಸಲಾಗಿತ್ತು. ೪ವರ್ಷಗಳ ಕಾಲ ಸಮೀಕ್ಷೆ ಮಾಡಿ ೨೦೧೨ರಲ್ಲಿ ವರದಿ ಒಪ್ಪಿಸಿತು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ನಂಬಿ ೨೦೧೩ರಲ್ಲಿ ದಲಿತರು ಕಾಂಗ್ರೆಸ್‌ಗೆ ಮತ ಚಲಾಯಿಸಿದ್ದರು, ಪ್ರಸ್ತುತ ಒಳ ಮೀಸಲಾತಿಯ ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದ ಮರುದಿನವೇ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಆಶ್ವಾಸನೆ ಕೊಟ್ಟಿದ್ದ ಸಿದ್ದರಾಮಯ್ಯನವರು ದಲಿತರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಕೀಲರು ಕಾನೂನು ಪಾಲನೆಯ ಆಧಾರ ಸ್ಥಂಭಗಳಿದ್ದಂತೆ. ಸಮಾಜದಲ್ಲಿ ಕಾನೂನಿನ ಅರಿವು ಮೂಡಿಸುವಲ್ಲಿ ಇವರ ಪಾತ್ರ ಬಹು ಮುಖ್ಯವಾಗಿದೆ ಎಂದು ಮದ್ರಾಸ್ ಫರ್ಟಿಲೈಝರ್ಸ್ ನ ಪ್ರಾಂತೀಯ ವ್ಯವಸ್ಥಾಪಕ ಡಿ.ಎಸ್.ದೇಶಪಾಂಡೆ ಹೇಳಿದರು.ನಗರದಲ್ಲಿ ಅ.29 ಮಂಗಳವಾರದಂದು ಮದ್ರಾಸ್ ಫರ್ಟಿಲೈಝರ್ಸ್ ಲಿಮಿಟೆಡ್, ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯ ವಿಜಯಪುರ ಹಾಗೂ ಜಿಲ್ಲಾ ಲೋಕಾಯುಕ್ತ ಕಚೇರಿ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ “ಜಾಗೃತ ಅರಿವು ಸಪ್ತಾಹ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಧ್ಯಕ್ಷತೆ ವಹಿಸಿದ ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಸುಷ್ಮಾ ದೇಸಾಯಿ ಮಾತನಾಡಿ, ಕೇವಲ ಕಾನೂನು ಮಾಡುವುದಲ್ಲ, ಅದನ್ನು ಆಚರಣೆಯಲ್ಲಿ ತರಬೇಕು ಎಂದರು.ವಿಜಯಪುರದ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಲೋಕಾಯುಕ್ತ ಸುರೇಶ್ ರೆಡ್ಡಿ ಅವರು, ಭ್ರಷ್ಟಾಚಾರ ಮುಕ್ತ ಭಾರತವನ್ನು ಹೇಗೆ ಕಟ್ಟಬೇಕು ಎಂದು ವಿವರಿಸಿದರು.ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಮದ್ರಾಸ್ ಫರ್ಟಿಲೈಝರ್ಸ್ ನವರು ಪಾಲ್ಗೊಂಡಿದ್ದರು. ಬಹುಮಾನ ವಿತರಣೆ “ಜಾಗೃತ ಅರಿವು ಸಪ್ತಾಹ”ದ…
ಆಸ್ಪತ್ರೆ ಕಟ್ಟಡಕ್ಕಾಗಿ 4 ಎಕರೆ ಜಮೀನು ಮಂಜೂರು :ಸಚಿವ ಪಾಟೀಲ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ತಾಲೂಕು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ 4 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.ಬಬಲೇಶ್ವರ ಪಟ್ಟಣದ ಹಳೆಯ ತಹಶೀಲ್ದಾರ ಹತ್ತಿರ ಇರುವ ಸರಕಾರಿ ಗಾಯರಾಣ ಸರ್ವೇ ನಂ: 419 ರಲ್ಲಿ ಇರುವ ಒಟ್ಟು 7 ಎಕರೆ 33 ಗುಂಟೆ ಪೈಕಿ 4 ಎಕರೆ ಜಮೀನನ್ನು ತಾಲೂಕು ಆಸ್ಪತ್ರೆ ಕಟ್ಟಣ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿದೆ. ಈ ಆಸ್ಪತ್ರೆ 100 ಹಾಸಿಗೆಗಳನ್ನು ಒಳಗೊಂಡಿರಲಿದೆ.ಬಬಲೇಶ್ವರ ಪಟ್ಟಣ ಮತ್ತು ತಾಲೂಕಿನ ಬಹುದಿನಗಳ ಬೇಡಿಕೆಯಾದ ತಾಲೂಕು ಆಸ್ಪತ್ರೆ ಕಟ್ಟಡಕ್ಕೆ ಈಗ ಜಮೀನು ಮಂಜೂರು ಆಗಿರುವುದರಿಂದ ಮುಂಬರುವ ದಿನಗಳಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಆಯುರ್ವೇದ ದಿನ ಆಚರಣೆ | ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಾಚೀನ ಕಾಲದಿಂದಲು ಆಯುರ್ವೇದ ಯೋಗ ಪದ್ದತಿಯು ಜನಸಾಮಾನ್ಯರಿಗೆ ಉತ್ತಮ ಚಿಕಿತ್ಸೆ ನೀಡುತ್ತಾ ಬಂದಿದ್ದು ಕರೋನಾದಂತಾಹ ಮಾಹಾಮಾರಿ ರೋಗದಲ್ಲಿ ಆಯುಷ್ ಪದ್ದತಿಯ ಚಿಕಿತ್ಸೆ ಪಡೆದು ಗಣನೀಯ ಪ್ರಮಾಣದಲ್ಲಿ ಸಾರ್ವಜನಿಕರು ರೋಗದಿಂದ ಗುಣಮುಖರಾಗಿದ್ದಾರೆ. ಆಯುರ್ವೇದ ಪದ್ಧತಿ ಕುರಿತು ಸೂಕ್ತ ಅರಿವು ಅತ್ಯವಶ್ಯಕವಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಪ್ರಾಯಿಸಿದರು.೯ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು “ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದ ನ್ಯಾವಿನ್ಯತೆ” ಎಂಬ ಘೋಷ ವಾಕ್ಯದೊಂದಿಗೆ ಆರ್.ಕೆ.ಎಮ್.ಆಯುರ್ವೇದ ಮೆಡಿಕಲ್ ಕಾಲೇಜ ವಿಜಯಪುರ ಸಂಭಾಗಣದಲ್ಲಿ ಮಂಗಳವಾರ ಹಮ್ಮಿಕೊಂಡ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಕೆ.ಎಮ್.ಆಯುರ್ವೇದ ಮೆಡಿಕಲ್ ಕಾಲೇಜ್‌ನ ಪ್ರಧಾನ ಕಾರ್ಯದರ್ಶಿ ಶಂಬುಲಿಂಗಯ್ಯ ಕರ್ಪೂರಮಠ ವಹಿಸಿದ್ದರು. ಡಾ. ವ್ಹಿ.ಬಿ ದೇಸಾಯಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಡಾ.ಎಮ್.ಎ.ಹಿರೇಮಠ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದಲ್ಲಿ “ಆಯುರ್ವೇದ ದಿನಾಚರಣೆ ಮಹತ್ವ ಹಾಗೂ ಜಾಗತಿಕ ಆರೋಗ್ಯಕ್ಕಾಗಿ…
