Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ತವರುಜಿಲ್ಲೆ ಕೀರ್ತಿ ಹೆಚ್ಚಿಸಿದ ಸ್ಫೂರ್ತಿಚಿಲುಮೆ ಎಸ್ಪಿ ಲಕ್ಷ್ಮಣ ನಿಂಬರಗಿ

ನೀರನ್ನು ಸಮರ್ಪಕವಾಗಿ ನಿರ್ವಹಿಸಿ, ಕುಡಿವ ನೀರಿಗೆ ಆದ್ಯತೆ ನೀಡಿ

ಆರೋಗ್ಯ-ಶಿಕ್ಷಣ-ವಸತಿ ನಿಲಯಗಳ ಸುಧಾರಣೆ ಆದ್ಯತೆ ನೀಡಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಹಸಿರು ತೋರಣ ಗೆಳೆಯರ ಬಳಗದಿಂದ ’ಪಟಾಕಿ ಬೇಡ’ ಅಭಿಯಾನ
(ರಾಜ್ಯ ) ಜಿಲ್ಲೆ

ಹಸಿರು ತೋರಣ ಗೆಳೆಯರ ಬಳಗದಿಂದ ’ಪಟಾಕಿ ಬೇಡ’ ಅಭಿಯಾನ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಮುದ್ದೇಬಿಹಾಳ: ಸೌರಮಂಡಲದಲ್ಲಿ ಲಕ್ಷಾಂತರ ಗೃಹಗಳು, ನಕ್ಷತ್ರಗಳಿದ್ದರೂ ಮನುಷ್ಯ ವಾಸವಿರುವ ಭೂಮಿ ಇದೊಂದೇ, ಇದನ್ನು ನಾವೇ ನಮ್ಮ ಕೈಯಾರೆ ಸ್ವಯಂಕೃತ ತಪ್ಪುಗಳಿಂದ ಹಾಳು ಮಾಡುವುದು ಬೇಡ ಎಂದು ಸಂತ ಕನಕದಾಸ ಶಾಲೆಯ ಕಾರ್ಯದರ್ಶಿ ಬಿ.ಎಸ್.ಮೇಟಿ ಹೇಳಿದರು.
ಪಟ್ಟಣದ ಸಂತ ಕನಕದಾಸ ಶಾಲೆಯಲ್ಲಿ ಹಸಿರು ತೋರಣ ಗೆಳೆಯರ ಬಳಗ ಹಮ್ಮಿಕೊಂಡಿದ್ದ “ಪಟಾಕಿ ಬೇಡ, ದೀಪ ಬೆಳಗೋಣ” ಅಭಿಯಾನದಲ್ಲಿ ಅವರು ಮಾತನಾಡಿದರು.
ಹಸಿರು ತೋರಣ ಬಳಗದ ಸದಸ್ಯರು ಪರಿಸರ ಸಂರಕ್ಷಣೆ ಕುರಿತು ನಿರಂತರವಾಗಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದ ಅವರು, “ಪಟಾಕಿ ಹೊಡೆಯುವುದಿಲ್ಲ ಅದರ ಬದಲಿಗೆ ದೀಪಗಳನ್ನು ಹಚ್ಚುತ್ತೇವೆ ಎಂದು ಮಕ್ಕಳಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ವೀರೇಶ ಇಟಗಿ, ದೊಡ್ಡ ಶಬ್ದ ಮಾಡುವ ಪಟಾಕಿಗಳಿಂದ ಮನುಷ್ಯನಿಗೆ, ಪ್ರಾಣಿ, ಪಕ್ಷಿಗಳಿಗೆ ಬಹಳ ತೊಂದರೆಯಾಗುತ್ತಿದೆ. ಪಟಾಕಿಗಳಿಂದ ಹೊರಹೊಮ್ಮುವ ವಿಷಾನಿಲಗಳು ಶ್ವಾಸಕೋಶದ ರೋಗಗಳು ಮತ್ತು ಕ್ಯಾನ್ಸರನಂತಹ ಗಂಭೀರ ಖಾಯಿಲೆಗಳು ಬರುತ್ತವೆ. ಜೊತೆಗೆ ಮಕ್ಕಳು ಪಟಾಕಿ ಹೊಡೆಯುವ ಸಮಯದಲ್ಲಿ ಕೈ, ಕಣ್ಣು ಸೇರಿದಂತೆ ಜೀವ ಕಳೆದುಕೊಂಡ ಘಟನೆಗಳನ್ನು ನೋಡುತ್ತಿದ್ದೇವೆ. ಇದು ತಪ್ಪಬೇಕೆಂದರೆ ಪಟಾಕಿ ಹೊಡೆಯುವ ಬಗ್ಗೆ, ಅದರ ಅಪಾಯಗಳ ಬಗ್ಗೆ ಅರಿಯಬೇಕು ಎಂದರು.
ಹಸಿರು ತೋರಣ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಮಾತನಾಡಿ, ಪಟಾಕಿ ಸಿಡಿಸುವುದು ಎಂದರೆ ಶ್ರಮಪಟ್ಟು ದುಡಿದ ಲಕ್ಷಾಂತರ ಹಣಕ್ಕೆ ಬೆಂಕಿ ಹಚ್ಚುವುದಕ್ಕೆ ಸಮ. ಈ ಭೂಮಿಯ ಮೇಲೆ ಬದುಕುವ ಹಕ್ಕು ನಮಗಿರುವಷ್ಟೇ ಪ್ರಾಣಿ, ಪಕ್ಷಿಗಳಿಗೂ ಇದೆ. ನಮ್ಮ ಆಸೆ ಆಕಾಂಕ್ಷೆಗಳನ್ನು ನಿಯಂತ್ರಿಸುವ ಕೆಲಸ ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕುರುಬರ ಸಂಘದ ನಿರ್ದೇಶಕ ನಾಗಪ್ಪ ರೂಢಗಿ, ಹಸಿರು ತೋರಣ ಗೆಳೆಯರ ಬಳಗದ ಮಾಜಿ ಅಧ್ಯಕ್ಷರಾದ ನಾಗಭೂಷಣ ನಾವದಗಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಕಾರ್ಯದರ್ಶಿ ಬಿ.ಎಚ್.ಬಳಬಟ್ಟಿ, ಉಪಾಧ್ಯಕ್ಷ ಬಸವರಾಜ ಬಿಜ್ಜೂರ, ವೀರಶೈವ ಮಹಾಸಭಾ ಅಧ್ಯಕ್ಷ ವೆಂಕನಗೌಡ ಪಾಟೀಲ, ಸದಸ್ಯರಾದ ಸುರೇಶ ಕಲಾಲ, ಸೋಮಶೇಖರ ಚೀರಲದಿನ್ನಿ, ಪ್ರೌಢಶಾಲೆಯ ಮುಖ್ಯ ಗುರು ಬಿ.ಎಸ್.ಫಣೇದಕಟ್ಟಿ, ಶಿಕ್ಷಕರಾದ ಆರ್.ಜಿ.ಮೆಣಸಗಿ, ಎಸ್.ಎನ್.ಸಜ್ಜನ, ಆರ್.ವೈ.ಪಾಟೀಲ, ಆರ್.ಎಸ್.ವಾಲಿಕಾರ, ಲಕ್ಷ್ಮೀ ಗುಬಚಿ, ಲತಾ ಮೇಟಿ, ಬಸಮ್ಮ ಬರದೇನಾಳ, ಜಿ.ಎಂ.ಹುಲಗಣ್ಣಿ, ಮತ್ತಿತರರು ಇದ್ದರು. ಮಾಣಿಕ್ಯಮ್ಮ ತಡಸದ ಪ್ರಾರ್ಥಿಸಿದರು. ಮುಖ್ಯ ಗುರು ಎಂ.ಎನ್.ಯರಝರಿ ಸ್ವಾಗತಿಸಿದರು. ಎಂ.ಸಿ.ಕಬಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಸ್ಯ ಕಲಾವಿದ ಗೋಪಾಲ ಹೂಗಾರ ನಿರೂಪಿಸಿ, ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ತವರುಜಿಲ್ಲೆ ಕೀರ್ತಿ ಹೆಚ್ಚಿಸಿದ ಸ್ಫೂರ್ತಿಚಿಲುಮೆ ಎಸ್ಪಿ ಲಕ್ಷ್ಮಣ ನಿಂಬರಗಿ

ನೀರನ್ನು ಸಮರ್ಪಕವಾಗಿ ನಿರ್ವಹಿಸಿ, ಕುಡಿವ ನೀರಿಗೆ ಆದ್ಯತೆ ನೀಡಿ

ಆರೋಗ್ಯ-ಶಿಕ್ಷಣ-ವಸತಿ ನಿಲಯಗಳ ಸುಧಾರಣೆ ಆದ್ಯತೆ ನೀಡಿ

ಒಟ್ಟು ೧೧೫ ಪ್ರಕರಣಗಳ ವಿಚಾರಣೆ; ೮೦ ಇತ್ಯರ್ಥ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ತವರುಜಿಲ್ಲೆ ಕೀರ್ತಿ ಹೆಚ್ಚಿಸಿದ ಸ್ಫೂರ್ತಿಚಿಲುಮೆ ಎಸ್ಪಿ ಲಕ್ಷ್ಮಣ ನಿಂಬರಗಿ
    In (ರಾಜ್ಯ ) ಜಿಲ್ಲೆ
  • ನೀರನ್ನು ಸಮರ್ಪಕವಾಗಿ ನಿರ್ವಹಿಸಿ, ಕುಡಿವ ನೀರಿಗೆ ಆದ್ಯತೆ ನೀಡಿ
    In (ರಾಜ್ಯ ) ಜಿಲ್ಲೆ
  • ಆರೋಗ್ಯ-ಶಿಕ್ಷಣ-ವಸತಿ ನಿಲಯಗಳ ಸುಧಾರಣೆ ಆದ್ಯತೆ ನೀಡಿ
    In (ರಾಜ್ಯ ) ಜಿಲ್ಲೆ
  • ಒಟ್ಟು ೧೧೫ ಪ್ರಕರಣಗಳ ವಿಚಾರಣೆ; ೮೦ ಇತ್ಯರ್ಥ
    In (ರಾಜ್ಯ ) ಜಿಲ್ಲೆ
  • ರವಿ ಹಂಜ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
  • ಕ್ರೀಡಾಪಟುಗಳ ಸಾಧನೆಯಲ್ಲಿ ತರಬೇತುದಾರರ ಪಾತ್ರ ಅನನ್ಯ
    In (ರಾಜ್ಯ ) ಜಿಲ್ಲೆ
  • ಸಂಯೋಜನಾ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
    In (ರಾಜ್ಯ ) ಜಿಲ್ಲೆ
  • ಶನಿದೇವರ ಸನ್ನಿಧಿಯಲ್ಲಿ ನಾಗದೇವತೆಯ ಪ್ರತಿಷ್ಠಾಪನೆ
    In (ರಾಜ್ಯ ) ಜಿಲ್ಲೆ
  • ಅಜ್ಞಾನದ ಕತ್ತಲೆ ಕಳೆದು ಜ್ಞಾನದ ಬೆಳಕು ಮೂಡಿಸುವ ಕಾರ್ತಿಕ ದೀಪೋತ್ಸವ
    In (ರಾಜ್ಯ ) ಜಿಲ್ಲೆ
  • ರವಿ ಹಂಜ್ ಮೇಲೆ ಕಾನೂನು ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.