ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಆರೋಪ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಳೆದ ವರ್ಷ ಅನಾವೃಷ್ಟಿ ನಿವಾರಿಸುವಲ್ಲಿ ವಿಫಲವಾದ ಕಾಂಗ್ರೆಸ್ ಸರಕಾರ ಈ ವರ್ಷ ವೀಪರಿತ ಮಳೆಯಿಂದಾಗಿ ಅತಿವೃಷ್ಟಿಯಿಂದಾದ ಬೆಳೆ ಹಾನಿಯಿಂದ ಕಂಗಾಲಾದ ರೈತರ ಕಣ್ಣೋರೆಸಿ ಕಾನೂನು ಸುವ್ಯವಸ್ಥೆ ನಿಭಾಯಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದ ಎಂದು ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜರುಗಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳ್ಳತನದಿಂದ ಸರಕಾರಿ ನಿವೇಶನಗಳನ್ನು ಕಬಳಿಸುವುದು, ಅಪರಾಧ ಸಾಬೀತಾದ ನಂತರ ಮರಳಿ ಕೊಡುವುದು ಇರದಲ್ಲೇ ಕಾಲ ಹರಣ ಮಾಡಿದ್ದಾಯಿತು. ಬಿಜೆಪಿಯವರು ಸರಕಾರದ ವೈಫಲ್ಯಗಳನ್ನು ಜನರ ಗಮನಕ್ಕೆ ತರಲು ರಾಜ್ಯಾದ್ಯಂತ ಪ್ರವಾಸದಲ್ಲಿದ್ದರೆ ಅಧಿಕಾರಾರೂಢ ಕಾಂಗ್ರೆಸ್ ಸರಕಾರ ಚುನಾವಣೆಯ ರಂಗಿನಲ್ಲಿ ಮೈಮರೆತು ಅಭಿವೃದ್ಧಿ ಕಾರ್ಯಗಳನ್ನು ಕಡೆಗಣಿಸಿದೆ. ಅವರಿಗೆ ಅಭಿವೃದ್ಧಿಗಿಂತ ಚುನಾವಣೆಯೇ ಮುಖ್ಯವಾಗಿದೆ.
ಚನ್ನ ಪಟ್ಟಣದಲ್ಲಿ ಅವರಿಗೆ ಪಕ್ಷದಿಂದ ಕಣಕ್ಕಿಳಿಸಲು ಒಬ್ಬೇ ಒಬ್ಬ ಅಬ್ಯರ್ಥಿಯೂ ಸಿಗದ ಕಾರಣ ಯೋಗೇಶ್ವರರನ್ನು ಪಕ್ಷಕ್ಕೆ ಮೋಸದಿಂದ ಬರಮಾಡಿಕೊಳ್ಳುವ ದೈನೇಸಿ ಸ್ಥಿತಿ ಒದಗಿದ್ದು ವಿಪರ್ಯಾಸ. ಯೋಗೇಶ್ವರ ಇಲ್ಲದಿದ್ದರೇ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಸ್ಥಿತಿ ಏನಾಗುತ್ತಿತ್ತೋ ಎನ್ನುವುದು ಜನತೆಯೇ ಅವಲೋಕನ ಮಾಡಬೇಕು. ೫ಗ್ಯಾರಂಟಿಯನ್ನೇ ತೊರಿಸಿ ಸರಕಾರ ನಡೆಸುತ್ತಿರುವ ಕೆಟ್ಟ ಅನಿಷ್ಠ ಸರಕಾರವಿದು.
ಮೊದಲು ಕದಿಯೋದೆಲ್ಲ ಕದ್ದು ನಿವೇಶಗಳನ್ನು ವಾಪಸ್ಸು ಕೊಟ್ಟು ನಾವು ತಪ್ಪು ಮಾಡಿಲ್ಲ, ನಾವು ಯಾರಿಗೂ ಬಗ್ಗಲ್ಲ, ಕುಗ್ಗೋದಿಲ್ಲ ಎನ್ನುವ ಭಂಡತನದ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತಮ್ಮ ಮರ್ಯಾದೆ ಉಳಿಕೊಳ್ಳಬೇಕು. ಸಂವಿಧಾನಕ್ಕೆ ಎಲ್ಲರೂ ಬಗ್ಗಲೆಬೇಕು. ಅಧಿಕಾರದಲ್ಲಿರುವ ಸಿದ್ದರಾಮಯ್ಯ ಸಂವಿಧಾನಕ್ಕೆ ಕೋಡುವ ಗೌರವ ಇದೇನಾ? ಎಂದು ಪ್ರಶ್ನೀಸಿದ ಅವರು ೧೮೭ ಕೋಟಿ ಪರಿಶಿಷ್ಠರ ಹಣ ಲೂಟಿ ಮಾಡಿ ಕದ್ದಿದ್ದು ೧೮೭ ಕೋಟಿಯಲ್ಲ, ಬರೀ ೮೭ಕೋಟಿ ಎಂದು ಸಮಜಾಯಿಸಿಕೊಡುವ ಕಳ್ಳತನವನು ಒಪ್ಪಿಕೊಂಡ ಸರಕಾರ ಯಾವ ಮುಖವನ್ನಿಟ್ಟುಕೊಂಡು ಜನರಿಗೆ ಮುಖ ತೋರಿಸುತ್ತದೆ ಎನ್ನುವುದು ತಿಳಿಯದಾಗಿದೆ.
ನಿಮಗೆ ರಾಜ್ಯವಾಳುವ ಯೋಗ್ಯತೆ ಇಲ್ಲ. ಆದ್ದರಿಂದ ಸಿದ್ದರಾಮಯ್ಯನವರು ತಕ್ಷಣ ರಾಜೀನಾಮೆ ಕೋಡಬೇಕು. ಮೂಡಾ ಹಗರಣದಲ್ಲಿ ಹಾಗೂ ಖರ್ಗೆ ಕುಟುಂಬ ಪಡೆದ ಅಕ್ರಮ ಆಸ್ತಿಯನ್ನು ಸರಕಾರಕ್ಕೆ ಮರಳಿಸಬೇಕಾದರೆ ಅದು ಬಿಜೆಪಿಯ ಹೋರಾಟದ ಫಲದಿಂದ ಸಾಧ್ಯವಾಗಿದೆ. ಯಾರೂ ಎಷ್ಟೇ ಕದ್ದರೂ ವಾಪಸ್ಸ ಕೊಟ್ಟರೆ ಅವನು ಅಪರಾಧಿಯಲ್ಲ ಎನ್ನುವ ನೀವು ಕಳ್ಳನನ್ನು ಹೇಗೆ ಜೈಲಿಗೆ ಕಳಿಸುತ್ತೀರಿ.
ಪತ್ರಕರ್ತರು ವಕ್ಪ್ ಬೋರ್ಡ್ ಕುರಿತು ಕೇಳಿದ ಪ್ರಶ್ನೆಗೆ ವಕ್ಪ್ ಬೋರ್ಡ್ ಇದು ಖಬರಸ್ತಾನ, ಮಸೀದಿಗಳನ್ನು ರಕ್ಷಿಸಲು ಹುಟ್ಟಿಕೊಂಡಿರುವಂತಹದ್ದು. ಅದನ್ನು ಬಿಟ್ಟು ರೈತರ ಜಮೀನು, ಮಠ ಮಾನ್ಯಗಳ ಜಮೀನು, ಗೋಮಾಳಗಳ ಜಮೀನನ್ನು ವಕ್ಪ್ ಬೋರ್ಡ್ ಹೆಸರಿಲೇ ಅಕ್ರಮವಾಗಿ ಪರಭಾರೆ ಮಾಡಿ ರೈತರನ್ನು ಒಕ್ಕಲೇಬ್ಬಿಸುವ ಕಾರ್ಯಮಾಡುತ್ತಿದೆ, ಹಾಗಾದರೇ ರೈತರ ಜಮೀನು ಖಬರಸ್ತಾನವಾ? ಅವರದೇ ಜಮೀನಾಗಿದ್ದರೆ ಇಷ್ಟು ದಿವಸ ಸುಮ್ಮನೆ ಇದ್ದದ್ದು ಏಕೆ ರ‍್ಯತರ ಜಮೀನಾಗಿದ್ದರೆ ರೈತರಿಗೆ ನೋಟಿಸು ಕೊಟ್ಟದ್ದೇಕೆ. ಒಟ್ಟಾರೆ ಇದು ಹಿಂದೂಗಳನ್ನು ಒಕ್ಕಲೇಬ್ಬಿಸುವ ಕಾಂಗ್ರೆಸ್ ಸರಕಾರದ ವ್ಯವಸ್ಥಿತ ಹುನ್ನಾರವಾಗಿದೆ ಎಂದರು.
ಎಸ್‌ಸಿಎಸ್‌ಟಿಪಿಎಸ್ ೨೫ಕೋಟಿ ದುರುಪಯೋಗ ಪಡಿಸಿಕೊಂಡದ್ದನ್ನು ಕೇಳಿದರೆ ಗೊಡ್ಡುವಾದ ಮಂಡಿಸುವ ನೀವು ಗ್ಯಾರಂಟಿಗಳಿಗೆ ಕೊಟ್ಟಿದ್ದೇವೆ ಎಂದು ವಾದಿಸುತ್ತೀರಿ. ಹಾಗಾದರೆ ೫೪ಸಾವಿರ ಕೋಟಿ ಬಜೆಟ್‌ನ ಹಣದಲ್ಲಿ ದಲಿತರ ಪಾಲು ಇಲ್ಲವೆ.? ದಲಿತರ ಹಣ ದಲಿತರಿಗೆ ಕೊಟ್ಟರೆ ಅದು ಗ್ಯಾರಂಟಿ ಹೇಗಾಗುತ್ತದೆ ಎಂದು ಅವರು ಪ್ರಶ್ನಿಸಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ರವಿ ನಾಯ್ಕೋಡಿ, ಪೀರು ಕೆರೂರ, ಬಸವರಾಜ ಬೆಣ್ಣೂರಕರ, ಪರಶುರಾಮ ಕುರಕುಂದ, ಮಹೇಂದ್ರ ಪೂಜಾರಿ, ಸಂತೋಷ ಹಾದಿಮನಿ, ಬಸವರಾಜ ಐರೋಡಗಿ, ಸಂತೋಷ ಮಣಿಗಿರಿ, ಶ್ರೀಕಾಂತ ಬಿಜಾಪೂರ, ಶ್ರೀಶೈಲ ಚೆಳ್ಳಗಿ, ಮಹಾಂತೇಶ ಸೇರಿದಂತೆ ಅನೇಕರಿದ್ದರು.
“೧೯೭೪ರ ಒಬೆರಾಯನ ಕಾಲದ ಗೆಜೆಟ್‌ನ್ನು ಇಂದು ಕಾಂಗ್ರೆಸ್ ಸರಕಾರ ಜಾರಿಗೊಳಿಸುತ್ತಿದೆ ಅದನ್ನು ಕೈಬಿಡಬೇಕು. ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ವಕ್ಪ್ ಬೋರ್ಡ ಆಸ್ತಿ ಎಷ್ಟಿತ್ತು ಎಂಬುದನ್ನು ಸರಕಾರ ಸಮೀಕ್ಷೆ ಮಾಡಬೇಕು. ವಕ್ಪ್ ಬೋರ್ಡ್ ಇಲ್ಲಿಯವರೆಗೆ ಎಷ್ಟು ಆಸ್ತಿ ಕಬಳಿಸಿದೆ ಎಂಬುದನ್ನು ಸಮೀಕ್ಷೆ ಮಾಡಲಿ.”
– ರಮೇಶ ಭೂಸನೂರ
ಮಾಜಿ ಶಾಸಕರು

