ರಾಷ್ಟ್ರೀಯ ಆಯುರ್ವೇದ ದಿನ ಆಚರಣೆ | ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪ್ರಾಚೀನ ಕಾಲದಿಂದಲು ಆಯುರ್ವೇದ ಯೋಗ ಪದ್ದತಿಯು ಜನಸಾಮಾನ್ಯರಿಗೆ ಉತ್ತಮ ಚಿಕಿತ್ಸೆ ನೀಡುತ್ತಾ ಬಂದಿದ್ದು ಕರೋನಾದಂತಾಹ ಮಾಹಾಮಾರಿ ರೋಗದಲ್ಲಿ ಆಯುಷ್ ಪದ್ದತಿಯ ಚಿಕಿತ್ಸೆ ಪಡೆದು ಗಣನೀಯ ಪ್ರಮಾಣದಲ್ಲಿ ಸಾರ್ವಜನಿಕರು ರೋಗದಿಂದ ಗುಣಮುಖರಾಗಿದ್ದಾರೆ. ಆಯುರ್ವೇದ ಪದ್ಧತಿ ಕುರಿತು ಸೂಕ್ತ ಅರಿವು ಅತ್ಯವಶ್ಯಕವಾಗಿದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಪ್ರಾಯಿಸಿದರು.
೯ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು “ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದ ನ್ಯಾವಿನ್ಯತೆ” ಎಂಬ ಘೋಷ ವಾಕ್ಯದೊಂದಿಗೆ ಆರ್.ಕೆ.ಎಮ್.ಆಯುರ್ವೇದ ಮೆಡಿಕಲ್ ಕಾಲೇಜ ವಿಜಯಪುರ ಸಂಭಾಗಣದಲ್ಲಿ ಮಂಗಳವಾರ ಹಮ್ಮಿಕೊಂಡ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ಕೆ.ಎಮ್.ಆಯುರ್ವೇದ ಮೆಡಿಕಲ್ ಕಾಲೇಜ್‌ನ ಪ್ರಧಾನ ಕಾರ್ಯದರ್ಶಿ ಶಂಬುಲಿಂಗಯ್ಯ ಕರ್ಪೂರಮಠ ವಹಿಸಿದ್ದರು. ಡಾ. ವ್ಹಿ.ಬಿ ದೇಸಾಯಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು, ಡಾ.ಎಮ್.ಎ.ಹಿರೇಮಠ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ “ಆಯುರ್ವೇದ ದಿನಾಚರಣೆ ಮಹತ್ವ ಹಾಗೂ ಜಾಗತಿಕ ಆರೋಗ್ಯಕ್ಕಾಗಿ ಆಯುರ್ವೇದ ನ್ಯಾವಿನ್ಯತೆ” ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ. ಹರೀಶ. ದೇಶಪಾಂಡೆ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳಾದ, ಡಾ.ರಾಮನಗೌಡ ಎಸ್ ಪಾಟೀಲ, ಸಹಾಯಕ ಆಡಳಿತಾಧಿಕಾರಿಗಳಾದ. ಎಸ್.ಎಮ್.ಕುಲಕರ್ಣಿ ಆರ್.ಕೆ.ಎಮ್.ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಸದಾನಂದ ಜಿಗಜಿನ್ನಿ ಸೇರಿದಂತೆ ವಿವಿಧ ವೈದ್ಯಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

“ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ವಾರ್ಷಿಕ ಅನುದಾನದಲ್ಲಿ ಶೇ ೨೦% ರಷ್ಟು ಅನುದಾನವನ್ನು ಶಾಲಾ ಕಾಲೇಜುಗಳ ಮಕ್ಕಳಿಗೆ ಯೋಗಾಭ್ಯಾಸ ಹಾಗೂ ಆಯುಷ್ ಪದ್ದತಿಯ ಅರಿವಿಗೋಸ್ಕರ ಮಿಸಲಿಡಲು ಹಾಗೂ ಅಗತ್ಯ ಆದೇಶ ಹೊರಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.”
– ಸಂಗಮೇಶ ಬಬಲೇಶ್ವರ
ಅಧ್ಯಕ್ಷರು, ಕರ್ನಾಟಕ ಬಾಲವಿಕಾಸ ಅಕಾಡೆಮಿ

