Author: editor.udayarashmi@gmail.com

ಇಂಡಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ದೇವೆಂದ್ರ ಸಲಹೆ ಇಂಡಿ: ಪಟ್ಟಣದ ಪುರಸಭೆಯ ಸಾಮಾನ್ಯ ಸಭೆಯು ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ ಇವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.ಪುರಸಭೆ ಸದಸ್ಯ ದೇವೆಂದ್ರ ಕುಂಬಾರ ಮಾತನಾಡಿ, ಆಶ್ರಯ ಯೋಜನೆ ಅಡಿ ನಿವೇಶನ ಹಂಚಲು ೧೫ ವರ್ಷಗಳಿಂದ ಇಲ್ಲಿಯ ವರೆಗೆ ಪುರಸಭೆಯಿಂದ ಜಮೀನು ಖರೀದಿಸಿಲ್ಲ. ಬಡ ಕುಟುಂಬಗಳಿಗೆ ಜಮೀನು ಹಂಚಲು ಜಮೀನು ಖರೀದಿಸಲು ಕೇಳಿಕೊಂಡರು.ಅದಲ್ಲದೆ ಇಂಡಿಯ ಹಳ್ಳವು ಪೂರ್ಣ ಪ್ರಮಾಣದಲ್ಲಿ ಅತಿಕ್ರಮಣ ಮಾಡಿದ್ದು ಹಂಜಗಿ ರಸ್ತೆಯಿಂದ ಸ್ಮಶಾನದ ವರೆಗೆ ಪೂರ್ಣ ಸ್ಥಳವನ್ನು ಸರ್ವೇ ಮಾಡಿ ಅತಿಕ್ರಮಣ ತೆರವುಗೊಳಿಸಲು ಸದಸ್ಯ ದೇವೆಂದ್ರ ಕುಂಬಾರ ಸಭೆಯ ಗಮನಕ್ಕೆ ತಂದರಲ್ಲದೆ, ಬೇಗ ಸರ್ವೇ ಮಾಡಲಿಕ್ಕೆ ಒತ್ತಾಯಿಸಿದರು.ಸದಸ್ಯ ಅಯೂಬ ಬಾಗವಾನ ಮಾತನಾಡಿ, ವಾರ್ಡ ೧೭ ರಲ್ಲಿ ನಗರೋತ್ಥಾನ ಹಂತ ೪ ರ ಕಾಮಗಾರಿಯಲ್ಲಿ ಗಟಾರು ತೆರೆದು ಹಾಗೆಯೇ ಬಿಟ್ಟಿದ್ದು, ಯುಜಿಡಿ ಹಾಗೂ ನೀರು ಪೂರೈಕೆ ಕನೆಕ್ಷನ್ ಒಡೆದಿದ್ದು ಕಾಮಗಾರಿ ಪೂರ್ಣಗೊಳಿಸುವ ಕುರಿತು, ಸದಸ್ಯ ಇಸ್ಮಾಯಿಲ್ ಅರಬ ನಗರೋತ್ಥಾನ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ…

Read More

ಮುದ್ದೇಬಿಹಾಳ: ತಾಲೂಕಿನ ಕೊಳೂರ ಗ್ರಾಮದ ಶಿರೋಳ ಕ್ರಾಸ್ ಬಳಿ ಧಾಬಾದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಮಧ್ಯ ಮಾರಾಟ ಮಾಡುತ್ತಿದ್ದವನ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ರಾಜಾಭಕ್ಷ ಸದಾಫ ಮೇಲೆ ಪ್ರಕರಣ ದಾಖಲಾಗಿದ್ದು ಬಿಸ್ಮಿಲ್ಲಾ ಧಾಭಾದ ಎದುರು ಗ್ಲಾಸು ನೀರು ಹಾಗೂ ತಿನಿಸು ಕೊಟ್ಟು ಮಧ್ಯ ಸೇವನೆಗೆ ಅವಕಾಶ ಕೊಟ್ಟ ಆರೋಪದಡಿ ಸಂಜಯ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.

Read More

ವಿಜಯಪುರ: ಕರ್ನಾಟಕ ಸರಕಾರದಿಂದ ಕೊಡುವ 2024 ನೇ ಸಾಲಿನ ಉತ್ತಮ ಉಪನ್ಯಾಸಕ ಪ್ರಶಸ್ತಿಗೆ ವಿಜಯಪುರದ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಎಸ್.ಬಿ. ಸಾವಳಸಂಗ ಆಯ್ಕೆಯಾಗಿದ್ದಾರೆ.ಸೆ.05 ಶಿಕ್ಷಕರ ದಿನಾಚರಣೆಯಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ವಿಜಯಪುರ ಶಾಲಾ ಶಿಕ್ಷಣ ಇಲಾಖೆ (ಪ.ಪೂ) ಉಪನಿರ್ದೇಶಕರಾದ ಡಾ.ಸಿ. ಕೆ. ಹೊಸಮನಿ, ಶಾಲಾ ಶಿಕ್ಷಣ ಇಲಾಖೆ (ಪ.ಪೂ.) ಶಾಖಾಧಿಕಾರಿಗಳಾದ ಪ್ರಕಾಶ ಗೊಂಗಡಿ, ಕರ್ನಾಟಕ ರಾಜ್ಯ ಉಪನ್ಯಾಸಕರ ಸಂಘ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಾದ ಎಂ.ಡಿ. ಹೆಬ್ಬಿ, ಕರ್ನಾಟಕ ರಾಜ್ಯ ಪದವಿ ಪೂರ್ವ ನೌಕರರ ಸಂಘ, ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಾದ ಎಸ್.ಎಸ್.ಗೌರಿ, ಪ್ರಾಚಾರ್ಯರ ಮಹಾಮಂಡಳದ ಕಾರ್ಯದರ್ಶಿಗಳಾದ ಕೆ.ಎ.ಉಪ್ಪಾರ, ವಿಜಯಪುರ ಜಿಲ್ಲಾ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರ ವರ್ಗ ಹಾಗೂ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಸಿ.ಬಿ. ನಾಟಿಕಾರ, ಮತ್ತು ಉಪನ್ಯಾಸಕರಾದ ಎಲ್.ಐ.ಹುಣಸಿಕಟ್ಟಿ, ಪಿ.ಎ. ಮೇತ್ರಿ, ಎಂ.ಬಿ. ರಜಪೂತ, ಬಿ.ಎಸ್. ಗೌರಿ,…

Read More

ಖಾನಾಪುರದ ಸರ್ಕಾರಿ ಶಾಲೆ ದುಸ್ಥಿತಿ | ಶಿಥಿಲ ಕಟ್ಟಡದಲ್ಲಿ ಸಮಸ್ಯೆಗಳ ಸರಮಾಲೆ – ಮಲ್ಲಿಕಾಜುನ ಎನ್. ಕೆಂಭಾವಿಬ್ರಹ್ಮದೇವನಮಡು: ಸೋರುವ ಶಾಲೆ ಕೋಣೆಗಳು.. ಎಲ್ಲೆಡೆ ಮಳೆ ನೀರು ಸಂಗ್ರಹ.. ಕಿತ್ತು ಬೀಳುತ್ತಿರುವ ಮೆಲ್ಛಾವಣೆ ಪದರು.. ಆತಂಕದಲ್ಲಿಯೇ ವಿದ್ಶಾರ್ಜನೆ ಮಾಡುವ ಮಕ್ಕಳು. ಇಷ್ಟಾದರೂ ಕ್ಯಾರೆ ಎನ್ನದ ಅಧಿಕಾರಿಗಳು.!ಇದು ಸಿಂದಗಿ ತಾಲೂಕಿನ ಖಾನಾಪುರ ಗ್ರಾಮದ ಹೊಸ ಬಡಾವಣೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುಃಸ್ಥಿತಿ.ಇಲ್ಲಿ ೧ನೇ ತರಗತಿಯಿಂದ ೫ನೇ ತರಗತಿವರೆಗೆ ೪೦ ವಿದ್ಯಾರ್ಥಿನಿಯರು ಸೇರಿ ೮೦ಕ್ಕೂ ಹೆಚ್ಚು ಮಕ್ಕಳು ವಿದ್ಶಾರ್ಜನೆ ಮಾಡುತ್ತಿದ್ದಾರೆ. ಆದರೆ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಮಕ್ಕಳು ಆತಂಕದಲ್ಲಿಯೇ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.ಇರುವುದೇ ಎರಡು ಕೋಣೆಇಷ್ಟು ಮಕ್ಕಳಿಗೆ ಇರುವುದು ಕೇವಲ ಎರಡು ಕೋಣೆಗಳು. ಇದರಲ್ಲೇ ಶಿಕ್ಷಕರು ಕುಳಿತುಕೊಳ್ಳುವ ಅನಿವಾರ್ಯವಿದೆ. ಈ ಕೋಣೆಗಳ ಛಾವಣಿ ಉದುರುತ್ತಿದೆ. ಯಾವುದೇ ಸ್ಥಿತಿಯಲ್ಲೂ ಛಾವಣಿ ಬೀಳಬಹುದು ಎಂಬ ಆತಂಕ ಶಿಕ್ಷಕರನ್ನು ಕಾಡುತ್ತಿದೆ. ಏನಾದರೂ ಅನಾಹುತ ಸಂಭವಿಸಿದರೆ ಎಂಬ ಭಯದಲ್ಲೇ ನಿತ್ಯ ಪಾಠ ನಡೆಯುತ್ತಿದೆ. ಮಳೆ ಬಂದರೆ ಶಾಲೆ…

Read More

ಇಂಡಿ: ಜೊತೆಗೂಡಿ ಶಾಲೆ ಕಲಿತು ಇತೀಚೆಗಷ್ಟೇ ಮರಣ ಹೊಂದಿದ್ದ ತಾಲೂಕಿನ ಸಂಗೋಗಿ ಗ್ರಾಮದ ಬಸವರಾಜ ಕುಂಬಾರ ಅವರ ನೆನಪಿಗಾಗಿ ೨೦೦೮ ರ ಎಸ್.ಎಸ್.ಎಲ್.ಸಿ ಗೆಳೆಯರ ಬಳಗದಿಂದ ೨೫ ಸಾವಿರ ರೂಪಾಯಿ ಸಂಗ್ರಹಿಸಿ ವಾರ್ಷಿಕವಾಗಿ ಸ್ಮರಣ ಬಹುಮಾನ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಮಂಗಳವಾರ ಶಿರಶ್ಯಾಡ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಗೆಳೆಯರ ಬಳಗದಿಂದ ಠೇವಣಿ ಮಾಡಿಸಲಾಯಿತು.ಗೆಳೆಯನ ಅಗಲಿಕೆಯ ನೋವು ಅಮರವಾಗುವಂತೆ ಅವರ ಗೆಳೆಯರ ಬಳಗ ವಿನೂತನವಾದ ಆಲೋಚನೆಯೊಂದಿಗೆ ಸ್ಮರಣ ಬಹುಮಾನ ನೀಡುವುದರೊಂದಿಗೆ ಮೃತ ಗೆಳೆಯನ ನೆನಪು ಮಾಡಿಕೊಳ್ಳುವ ಕಾರ್ಯ ಮಾಡಿದರು.ಗೆಳೆಯರ ಬಳಗದ ನಾಯಕ ಬಾಳು ಮುಳಜಿ ಹಾಗೂ ಮುಖ್ಯಗುರುಗಳ ಹೆಸರಿನಲ್ಲಿ ಜಂಟಿ ಖಾತೆಯನ್ನು” ಶ್ರೀ ಗುರು ಗಂಗಾಧರೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಶಿರಶ್ಯಾಡ ಬ್ಯಾಂಕಿನಲ್ಲಿ ತೆಗೆದು ೨೫೦೦೦ ಗೆ ಪ್ರತಿ ವರ್ಷ ಬರುವ ಬಡ್ಡಿ ಹಣವನ್ನು ಪ್ರಥಮ ಹಾಗೂ ದ್ವಿತೀಯ ಸ್ಥಾನದಲ್ಲಿ ಪಾಸಾದ ಪ್ರತಿಭಾನ್ವಿತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಸ್ಮರಣ ಬಹುಮಾನ ನೀಡುವುದಾಗಿ ಮುಳಜಿ ಘೋಷಿಸಿದರು.ಈ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕ ಆರ್.ಕೆ. ದುದಗಿ, ಪ್ರಾಥಮಿಕ ಶಾಲಾ…

Read More

ಹಾಲಿ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಯಡಿಯೂರಪ್ಪ ಆಗ್ರಹ ಶಿವಮೊಗ್ಗ: ರಾಜ್ಯಪಾಲರ ಪ್ರಾಸಿಕ್ಯೂಷನ್ ಗೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ಪ್ರಕಟಿಸುವ ಮುನ್ನವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರವಯುತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಬುಧವಾರ ಒತ್ತಾಯಿಸಿದ್ದಾರೆ.ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪಿನ ನಂತರ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗಲಿದೆ ಎಂದು ಮಾಜಿ ಸಿಎಂ ಹೇಳಿದ್ದಾರೆ.”ಕೋರ್ಟ್ ತೀರ್ಪಿನ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೂರಕ್ಕೆ ನೂರರಷ್ಟು ರಾಜೀನಾಮೆ ನೀಡುವ ಪರಿಸ್ಥಿತಿ ಬರಲಿದೆ. ಕೋರ್ಟ್ ತೀರ್ಪು ಬರುವ ಮುನ್ನ ಗೌರವಯುತವಾಗಿ ರಾಜೀನಾಮೆ ನೀಡುವಂತೆ ನಾನು ಸಲಹೆ ನೀಡುತ್ತೇನೆ. ಅವರು ಮಾಡಿರುವ ಹಗರಣಗಳೆಲ್ಲವೂ ಸಾಬೀತಾಗಿರುವುದರಿಂದ ಅವರು ತಪ್ಪಿಸಿಕೊಳ್ಳಲು ಅವಕಾಶವಿಲ್ಲ ಎಂದರು.ಈ ಸಂಬಂಧ ಇನ್ನು ಹೋರಾಟದ ಅಗತ್ಯವಿಲ್ಲ. ಒಂದು ರೀತಿಯಲ್ಲಿ ಪ್ರಕರಣ ಅಂತಿಮ ಹಂತಕ್ಕೆ ಬಂದಿದ್ದು, ಸಹಜವಾಗಿಯೇ ಅವರು (ಸಿಎಂ) ರಾಜೀನಾಮೆ ನೀಡುವ ಪರಿಸ್ಥಿತಿ ಬರಲಿದೆ…

Read More

ವಿಜಯಪುರ: ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಜಿಲ್ಲೆಯಿಂದ ಇಲ್ಲಿ ಅಸ್ತಿತ್ವದಲ್ಲಿಲ್ಲದ ಆವಂತಿ ಕ್ಲಾಸಸ್ ಎಂಬ ಕೊಚ್ಚಿಂಗ್ ಸೆಂಟರ್ ಆಯ್ಕೆಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ದಲಿತ ವಿದ್ಯಾರ್ಥಿ ಪರಿಷತ್ ಇಲಾಖೆಯ ಜಿಲ್ಲಾ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿತು.ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಆಯ್ಕೆಯಾದ ಪರೀಕ್ಷಾರ್ಥಿಗಳಿಗೆ ನಿಯಮದ ಪ್ರಕಾರ ತರಬೇತಿ ನೀಡದೇ ಸರ್ಕಾರದ ಅನುದಾನ ದುರ್ಬಳಕೆ ಮಾಡಿಕೊಂಡು ಮೋಸ ನಡೆಯುತ್ತಿರುವದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಸದರಿ ಸಂಸ್ಥೆ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ಈ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಪ್ರತಿಭಟನೆಕಾರರು ಆಗ್ರಹಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಮಾತನಾಡಿದರು.ಪ್ರತಿಭಟನೆಕಾರರ ಆಕ್ರೋಶಕ್ಕೆ ಮಣಿದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, ಅಪರ ನಿರ್ದೇಶಕರು ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ಬೆಂಗಳೂರು ಇವರಿಗೆ ದಲಿತ ವಿದ್ಯಾರ್ಥಿ ಪರಿಷತ್ ಮಾಡಿರುವ ಆರೋಪ ಆಧಾರಿಸಿ ಸದರಿ ಸಂಸ್ಥೆ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರದ ಮೂಲಕ ಕೋರಿದರು.

Read More

“ಬಂಜಾರ ಭಾಷೆ, ಶಿಕ್ಷಣ ಮತ್ತು ಸಮಾಜ” ರಾಜ್ಯ ಮಟ್ಟದ ವಿಚಾರ ಸಂಕಿರಣ ವಿಜಯಪುರ: ಬಂಜಾರ ಸಂಸ್ಕೃತಿಯು ಅತ್ಯಂತ ಶ್ರೀಮಂತ ಸಂಸ್ಕೃತಿಯಾಗಿದ್ದು, ಇದನ್ನು ಕಾಪಾಡಿಕೊಂಡು ಹೋಗುವುದು ಅತಿ ಅವಶ್ಯಕ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಹಾಗೂ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿಯ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ “ಬಂಜಾರ ಭಾಷೆ, ಶಿಕ್ಷಣ ಮತ್ತು ಸಮಾಜ” ಎಂಬ ವಿಷಯದ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪಾರಂಪರಿಕ ಕಲೆಯಾದ ಕಸೂತಿಯನ್ನು ಆಧುನೀಕರಣಕ್ಕೆ ಒಳಪಡಿಸಿ ಅಂತಾರಾಷ್ಟ್ರೀಯ ಮಟ್ಟದ ಉದ್ಯಮವನ್ನಾಗಿ ಬೆಳೆಸುವುದು ಅವಶ್ಯಕವಾಗಿದೆ. ಹಾಗೆಯೇ ಬಂಜಾರ ಭಾಷೆ ಮತ್ತು ಸಾಹಿತ್ಯ ಅತ್ಯಂತ ಶ್ರೀಮಂತವಾಗಿರುವುದರಿಂದ ಅದನ್ನು ದಾಖಲಿಸುವುದು ಅವಶ್ಯಕವಾಗಿದೆ. ಈ ಸಮಾಜದ ಸುಸ್ಥಿರ ಅಭಿವೃದ್ಧಿಗೆ ಮಾರ್ಗೊಪಾಯಗಳನ್ನು ಕಂಡು ಹಿಡಿಯುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಬಂಜಾರ ಸಮುದಾಯವು ಕಾಯಕ ಜೀವಿಗಳಾಗಿದ್ದಾರೆ ಎಂದರು.ಈ ಕಾರ್ಯಕ್ರಮದಲ್ಲಿ ಪ್ರೊ. ನಾರಾಯಣ…

Read More

ಸ್ವಾಮಿ ವಿವೇಕಾನಂದ ಸೇನೆ & ಶ್ರೀ ಗಜಾನನ ಮಹಾಮಂಡಳ ಸಭೆ ವಿಜಯಪುರ: ಪಿಒಪಿ ಗಣೇಶ ಮೂರ್ತಿಗಳ ಬದಲಾಗಿ, ಮಣ್ಣಿನ ಮೂರ್ತಿಗಳನ್ನು ಹಾಗೂ ಫೈಬರ್ ಗಣೇಶ ಮೂರ್ತಿಗಳನ್ನು ಸ್ಥಾಪಿಸಿದರೆ, ಆರ್ಥಿಕ ಸಹಾಯ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ನಿರ್ದೇಶಕ ರಾಮನಗೌಡ ಪಾಟೀಲ ಯತ್ನಾಳ ತಿಳಿಸಿದರು.ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣಲ್ಲಿರುವ ಶ್ರೀ ಶಿವಾನುಭವ ಮಂಟಪದಲ್ಲಿ ಮಂಗಳವಾರ ಸಂಜೆ ನಡೆದ ಸ್ವಾಮಿ ವಿವೇಕಾನಂದ ಸೇನೆ ಶ್ರೀ ಗಜಾನನ ಮಹಾಮಂಡಳ-೨೦೨೪ ಸಭೆಯಲ್ಲಿ ಅವರು ಮಾತನಾಡಿದರು.ಪರಿಸರ ರಕ್ಷಣೆಯ ಸಂಕಲ್ಪದೊಂದಿಗೆ ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮೂರ್ತಿಗಳ ಬದಲಾಗಿ, ಫೈಬರ್ ಹಾಗೂ ಮಣ್ಣಿನ ಮೂರ್ತಿಗಳ ಸ್ಥಾಪನೆಗೆ ನಗರದಲ್ಲಿರುವ ೫೦೦ಕ್ಕೂ ಹೆಚ್ಚು ಗಜಾನನ ಮಂಡಳಿಗಳು ಮುಂದಾದರೆ, ನಗರ ಶಾಸಕರು ಹಾಗೂ ತಂದೆಯವರಾದ ಬಸನಗೌಡ ಪಾಟೀಲ ಯತ್ನಾಳ ಅವರು, ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದು, ಹೀಗಾಗಿ ಪರಿಸರ ಸಂರಕ್ಷಣೆಗೆ ಎಲ್ಲ ಮಂಡಳಿಗಳು ಕೈಜೋಡಿಸಬೇಕು ಎಂದು ಹೇಳಿದರು.ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ್ ಅಣ್ಣಿಗೇರಿ ಮಾತನಾಡಿ, ನಗರ…

Read More

ಮುದ್ದೇಬಿಹಾಳ: ಬಿಸಿಲಿನಲ್ಲಿ ದುಡಿಯುವ ರೈತ ಮತ್ತು ದಿನನಿತ್ಯ ನಾವು ಕಣ್ತುಂಬ ನಿದ್ದೆ ಮಾಡ್ತೇವೆ ಅಂದರೆ ಅದಕ್ಕೆ ಕಾರಣ ಗಡಿ ಕಾಯುವ ಯೋಧ ಇವರು ನಿಜವಾದ ಭಾರತ ರತ್ನರು. ಪ್ರತಿನಿತ್ಯ ಊಟ ಮಾಡುವಾಗ ಇವರಿಬ್ಬರನ್ನು ನೆನೆದು ಊಟ ಮಾಡಬೇಕು ಎಂದು ಮಸೂತಿಯ ಡಾ.ಶಿವಲಿಂಗಯ್ಯ ಪುರಾಣಿಕಮಠ ಹೇಳಿದರು.ಪಟ್ಟಣದ ಶಿರೋಳ ರಸ್ತೆಯಲ್ಲಿರುವ ಶ್ರೀ ಫಕೀರೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಧರ್ಮಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಸೈನಿಕರು ಮತ್ತು ರೈತರು ನಾಡಿನ ಒಳಿತಿಗಾಗಿ ನಾಡಿನ ಜನರ ಸುಖಕ್ಕಾಗಿ ದುಡಿಯುತ್ತಾರೆ ಅವರನ್ನು ಗೌರವಿಸುವ ಕಾರ್ಯ ನಮ್ಮಿಂದಾಗಬೇಕು ಎಂದರು.ಇಟಗಿಯ ಭೂ ಕೈಲಾಸ ಮೇಲ್ಗುದ್ದುಗೆ ಮಠದ ಶಾಂತವೀರ ಶಿವಾಚಾರ್ಯರು ೧೨ ಜಂಗಮ ವಟುಗಳಿಗೆ ಅಯ್ಯಾಚಾರ ದೀಕ್ಷೆ ನೀಡಿದರು. ಕಣಕಾಲದ ಗುರು ಮೂರ್ತಿ ದೇವರು, ಪ್ರವಚನಕಾರ ಸಂಗಯ್ಯ ಶಾಸ್ತ್ರಿಗಳು, ಬಸವರಾಜ ನಂದಿಕೇಶ್ವರಮಠ, ಡಾ.ಸಿ.ಕೆ.ಶಿವಯೋಗಿಮಠ, ಶಾಂತು ಶಿವಯೋಗಿಮಠ, ಸಿದ್ದಯ್ಯ ಪುರಾಣಿಕಮಠ, ಕುಮಾರಸ್ವಾಮಿ ಶಿವಯೋಗಿಮಠ, ಗೌರಿ ಶಿವಯೋಗಿಮಠ, ಅಭಿಶೇಕ ಶಿವಯೋಗಿಮಠ, ಶಿವನಗೌಡ ಪಾಟೀಲ, ರಾಯನಗೌಡ ಬಿರಾದಾರ, ಸೋಮು ಕುರಿ, ದ್ಯಾವಪ್ಪ ಹುಣಶ್ಯಾಳ, ಅಭಿ…

Read More