ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರವನ್ನು ಸೌಂದರ್ಯೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿರುವೆ. ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.
ಪಟ್ಟಣದ ಬೀದಿ ದ್ವೀಪಗಳನ್ನು ಶಾಸಕ ಅಶೋಕ ಮನಗೂಳಿ ಚಾಲನೆ ಮಾತನಾಡಿದ ಅವರು, ಅಲಂಕಾರಿಕ ವಿದ್ಯುತ್ ದ್ವೀಪ ಕಂಬಗಳ ಕಾಮಾಗಾರಿ ಕಳೆದ ೨೪ದಿನಗಳ ಹಿಂದೆಯೇ ಬಸವೇಶ್ವರ ವೃತ್ತದಲ್ಲಿ ೫ಕೋಟಿ ರೂ.ವೆಚ್ಚದ ಭೂಮಿ ಪೂಜೆ ನೆರವೇರಿಸಲಾಗಿತ್ತು. ಇಂದು ಬೆಳಕಿನ ಹಬ್ಬ ದೀಪಾವಳಿಯಂದು ಅದಕ್ಕೆ ಚಾಲನೆ ನೀಡಲಾಗಿದೆ. ವೇಗದಿಂದ ಸಾಗುತ್ತಿರುವ ಕಾಮಗಾರಿಗೆ ಸಿಂದಗಿ ಸಾರ್ವಜನಿಕರು ಅಭಿನಂದನೆ ಸಲ್ಲಿಸುವುದಲ್ಲದೇ ಹರ್ಷ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ರಾಜಶೇಖರ, ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಸದಸ್ಯರಾದ ಸಂದೀಪ ಚೌರ, ಹಾಸೀಂ ಆಳಂದ, ಪುರಸಭೆ ಸಿಬ್ಬಂದಿ ನಬಿರಸೂಲ್ ಉಸ್ತಾದ್, ಅಜರ್ ನಾಟಿಕಾರ್, ಕುಮಾರ ದೇಸಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

