Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನಲ್ಲಿ ಜಾನುವಾರುಗಳಿಗೆ ಚರ್ಮ ಗಂಟುರೋಗ ವಿರುದ್ಧ ಉಚಿತ ಲಸಿಕಾ ಅಭಿಯಾನ ನ. ೨೫ ರಿಂದ ಡಿ.೫ ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯ ಪಶು ವೈದ್ಯಾಧಿಕಾರಿ ಡಾ. ರಾಜಕುಮಾರ ಅಡಕಿ ಹೇಳಿದರು.ಅವರು ಪಟ್ಟಣದ ಪಶು ವೈದ್ಯ ಸೇವಾ ಇಲಾಖೆಯಲ್ಲಿ ೨೧ ನೇ ಜಾನುವಾರು ಗಣತಿ ಪ್ರಾರಂಭದಲ್ಲಿ ಮಾತನಾಡಿದರು.ತಾಲೂಕಿನಲ್ಲಿ ಚಳಿ ಹೆಚ್ಚಾಗಿದ್ದು ಚಳಿಗಾಲ ಆರಂಭವಾಗುತ್ತಿರುವದರಿಂದ ನೊಣ ಸೊಳ್ಳೆಗಳು ಜಾಸ್ತಿಯಾಗಿ ರೋಗ ಉಲ್ಬಣವಾಗುವ ಸಾದ್ಯತೆ ಇದೆ. ರಾಜ್ಯದ ಕೆಲವು ಭಾಗಗಳಲ್ಲಿ ಚರ್ಮ ಗಂಟು ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಮುನ್ನಚ್ಛರಿಕೆ ಕ್ರಮ ಕೈ ಕೊಂಡಿದೆ.ಚರ್ಮ ಗಂಟು ರೋಗವು ವೈರಸ್ ನಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು ರೋಗ ತಗುಲಿದ ಜಾನುವಾರುಗಳಲ್ಲಿ ಆರಂಭದಲ್ಲಿ ಜ್ವರ ಕಾಣಿಸಿಕೊಳ್ಳಲಿದ್ದು ಈ ರೋಗವು ನೋಣ ಸೊಳ್ಳೆ ಹಾಗೂ ಉಣ್ಣೆಗಳಿಂದ ಹರಡುವ ಸಾದ್ಯತೆಯಿದ್ದು ರೋಗದಿಂದ ಸಾವನ್ನು ಒಪ್ಪುವ ಸಾದ್ಯತೆ ಇದೆ. ಶೇ. ೨ ರಿಂದ ಶೇ ೫ ಜಾನುವಾರುಗಳು ಈ ರೋಗದಿಂದ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲೂಕಿನ ಲೇಖಕ ಪ್ರಸ್ತುತ ಬಾಗಲಕೋಟೆಯಲ್ಲಿ ಭೂಮಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅನಿಲ್ ಗುನ್ನಾಪೂರ ಅವರ ಮೂರನೇ ಪುಸ್ತಕ “ಸರ್ವೆ ನಂಬರ್-೯೭” ಕಥಾಸಂಕಲನವನ್ನು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿ, ಇಂಡಿ ಸಿಬ್ಬಂದಿ ಬಳಗದಿಂದ ಶ್ರೀ ಪ್ರಕಾಶ ಕಾಂಬಳೆ ಅವರ ನೇತೃತ್ವದಲ್ಲಿ ಸಾಂಕೇತಿಕವಾಗಿ ಬಿಡುಗಡೆಗೊಳಿಸಲಾಯಿತು.ಸರಕಾರಿ ನೌಕರರ ಸಂಘದ ನಿರ್ದೇಶಕ ಹಾಗೂ ಭೂಮಾಪಕರಾದ ಯಮನೇಶ ಬಿರಾದಾರ ಮಾತನಾಡಿ, ನಮ್ಮ ಭೂಮಾಪನ ಇಲಾಖೆಯ ಇತಿಹಾಸವು ಕನ್ನಡ ಸಾಹಿತ್ಯದಲ್ಲಿ ಹೆಚ್ಚೆಚ್ಚು ಬರಲೆಂದು ಆಶಿಸುತ್ತ, ಅನಿಲ ಅವರು ಬರೆದ ಕತೆಗಳು ಹಲವು ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿವೆ ಮತ್ತು ಪ್ರತಿಷ್ಠಿತ ಬಹುಮಾನಗಳನ್ನು ಪಡೆದಿರುವ ಅನಿಲ ಗುನ್ನಾಪೂರ ಅವರಂತಹ ಲೇಖಕರನ್ನು ಮತ್ತು ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು.ಇಲಾಖೆಯ ಎಸ್ ಕೆ ರಾಠೆ, ವಿಶ್ವನಾಥ ಬಂಕಲಗಿ, ವಿಶ್ವನಾಥ ಹಿರೇಮಠ, ವಿರೇಶ ಜೋಕುಮಾರ, ಎಸ್ ಎಸ್ ಲವಟೆ, ಲಕ್ಷ್ಮಿ ಶರ್ಮಾ, ವಿಜಯಲಕ್ಷ್ಮಿ ಕಲ್ಯಾಣಕರ ಮತ್ತಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಡಿಸೆಂಬರ್ ೧೦ ರಂದು ಲಿಂಗಾಯತ ಪಂಚಮಸಾಲಿ ಸಮಾಜದ ೨ಎ ಮೀಸಲಾತಿಗಾಗಿ ನಡೆಯುತ್ತಿರುವ ಸುವರ್ಣಸೌಧ ಮುತ್ತಿಗೆ ರ‍್ಯಾಲಿಯನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜದ ಸಚಿವರು ಶಾಸಕರ ಮುಖಾಂತರ ಒತ್ತಡ ಹೇರಿ, ಪ್ರತಿಭಟನೆ ತಡೆಯಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಇಂಡಿ ತಾಲೂಕ ಅಧ್ಯಕ್ಷ ವಿ.ಹೆಚ್. ಬಿರಾದಾರ ತಿಳಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ್ ಅವರು ಹೋರಾಟದ ನೇತೃತ್ವ ವಹಿಸಿದ್ದವರು, ಈಗ ಅಧಿಕಾರ ಸಿಕ್ಕ ಮೇಲೆ ನಮ್ಮ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಸರಿಯಲ್ಲ, ಸಮಾಜಕ್ಕೆ ಪೂಜ್ಯರೆ ಹೈಕಮಾಂಡ್ ಆಗಿದ್ದು ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ವಿಜಯಾನಂದ ಕಾಶಪ್ಪನವರ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಇನ್ನಿತರ ಶಾಸಕರು ಸಚಿವರು ಕೂಡಲೇ ಶ್ರೀಗಳಿಗೆ ಕ್ಷಮೆ ಯಾಚಿಸಿ ಹೋರಾಟಕ್ಕೆ ಬೆಂಬಲ ಸೂಚಿಸಬೇಕು. ನಮ್ಮ ಹೋರಾಟದಿಂದಲೇ ನೀವು ಶಾಸಕರು, ಮಂತ್ರಿ ಆಗಿದ್ದೀರಿ ಎಂಬುದನ್ನು ಮರೆಯಬಾರದು, ರಾಜಕೀಯ ಪ್ರತಿಷ್ಠೆ ಬದಿಗಿಟ್ಟು ಬಡ ಪಂಚಮಸಾಲಿ ಸಮಾಜದ ಋಣ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಜೋರಾಪುರಪೇಠ ಮರಗಮ್ಮ ದೇವಸ್ಥಾನ ಜಿರ್ಣೋದ್ದಾರಕ್ಕೆ ಶಾಸಕ ನಿಧಿಯಲ್ಲಿ ರೂ.10 ಲಕ್ಷ ಅನುದಾನ ನೀಡಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.ವಿಜಯಪುರ ನಗರದ ವಾರ್ಡ್ ನಂ.32 ರಲ್ಲಿ ಬರುವ ಜೋರಾಪುರಪೇಠದಲ್ಲಿ ಶುಕ್ರವಾರ ಜೋಗಿ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಮರಗಮ್ಮ ದೇವಸ್ಥಾನ ಜಿರ್ಣೋದ್ದಾರ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ನಗರದ ಅಭಿವೃದ್ಧಿಯ ಜೊತೆಗೆ ಬಹುತೇಕ ದೇವಸ್ಥಾನಗಳ ಜೀರ್ಣೋದ್ದಾರ, ಎಲ್ಲ ಸಮಾಜದ ಸಮುದಾಯ ಭವನಗಳ ನಿರ್ಮಾಣಕ್ಕೆ ರೂ.10 ರಿಂದ 20 ಲಕ್ಷ ಅನುದಾನ ನೀಡಲಾಗಿದೆ. ಉಳಿದಿರುವ ದೇವಸ್ಥಾನಗಳಿಗೂ ಹಂತ ಹಂತವಾಗಿ ಅನುದಾನ ನೀಡಲಾಗುವುದು ಎಂದರು.ಬಬಲೇಶ್ವರ ನಾಕಾದಿಂದ ನೀರಿನ ಟ್ಯಾಂಕ್ ವರೆಗೆ ಬಜಂತ್ರಿ ಓಣಿ ಸ್ಲಂ ಘೋಷಣೆಯಾಗಿದ್ದು, ಬಡವರಿಗೆ ಸೂರು ಕಲ್ಪಿಸಲಾಗುವುದು ಎಂದು ತಿಳಿಸಿದರು.ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ, ನಮ್ಮ ವಾರ್ಡ್ ದಲ್ಲಿ ಎಲ್ಲ ದೇವಸ್ಥಾನಗಳ ಜಿರ್ಣೋದ್ದಾರದ ಜೊತೆಗೆ ಸ್ಮಶಾನಗಳ ಅಭಿವೃದ್ಧಿ ಕೂಡ ಬಸನಗೌಡ ಪಾಟೀಲ ಯತ್ನಾಳ ರವರ ಅವಧಿಯಲ್ಲೇ ಆಗಿರುವುದು. ನಮ್ಮ ವಾರ್ಡ್ ಮೇಲೆ ವಿಶೇಷ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ:ತಾಲೂಕಿನ ಸುಕ್ಷೇತ್ರ ಇವಣಗಿ ಗ್ರಾಮದಲ್ಲಿ ಡಿ.೨ ರಂದು ನಡೆಯಲಿರುವ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಸಂಜೆ ಗ್ರಾಮದ ಗುರು-ಹಿರಿಯರ, ತಾಲೂಕು ಕಸಾಪ ಪದಾಧಿಕಾರಿಗಳ, ಸಾಹಿತ್ಯಾಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಚಂದ್ರಶೇಖರ ಸುಭಾನಪ್ಪರ, ರಾಮಪ್ಪ ಪೂಜಾರಿ, ನಾಗು ಸುಭಾನಪ್ಪರ, ಸುರೇಶ ಚಿಗರಿ, ಮಂಜು ಇಟಗಿ, ಬಸವರಾಜ ಮೇಟಿ, ಎಸ್.ಎಲ್.ಓಂಕಾರ, ಪಿ,ಕೆ.ಕೋಲಕಾರ, ಎಸ್.ಬಿ.ಪಾಗದ, ಎಂ.ಎನ್.ಅಂಗಡಗೇರಿ,ಸಿದ್ದಪ್ಪ ಅವಜಿ, ಶರಣು ದಳವಾಯಿ, ಬಿ.ವ್ಹಿ.ಚಕ್ರಮನಿ, ವ್ಹಿ.ಸಿ, ಹಂಚಾಟೆ ಇತರರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕಾನೂನಿನ ಅರಿವು ಹೊಂದಬೇಕು. ಕಾನೂನು ಉಲ್ಲಂಘನೆ ಮಾಡುವುದು ಅಪರಾಧವಾಗುತ್ತದೆ ಎಂಬ ತಿಳುವಳಿಕೆ ಇರಬೇಕು ಎಂದು ಪಿ.ಎಸ್.ಐ ಐ.ಎಂ.ದುಂಡಸಿ ಹೇಳಿದರು.ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಉನ್ನತ ಗುರಿಯನ್ನಿಟ್ಟುಕೊಂಡು ನಿರಂತರ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು. ಗುರು ಹಿರಿಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಅಪ್ರಾಪ್ತ ಬಾಲಕ, ಬಾಲಕಿಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಪೋಕ್ಸೊ ಕಾಯ್ದೆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ದೌರ್ಜನ್ಯ ಪ್ರಕರಣದಲ್ಲಿ ಭಾಗಿಯಾದರೆ ಹಾಗೂ ಅಂತಹವರಿಗೆ ಸಹಾಯ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸಮಾಜದಲ್ಲಿ ಬಾಲ್ಯ ವಿವಾಹಗಳು ನಡೆಯದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಪ್ರಶ್ನೆಗಳಿಗೆ ಉತ್ತರಿಸಿದರು.ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಸ್.ಡಿ.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ಕಾನೂನಿನ ಬಗ್ಗೆ ತಿಳಿದುಕೊಂಡರೆ ನೆಮ್ಮದಿಯ ಜೀವನ ನಡೆಸಲು…

Read More

ಜಿಆರ್ಜಿ೧೫೨ ಹಾಗೂ ಜಿಆರ್ಜಿ೮೧೧ ತಳಿ ತೊಗರಿ ಬೀಜ ಬಿತ್ತನೆ ಮಾಡಿರುವ ಹೊಲಗಳಿಗೆ ಭೇಟಿ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಬಿಸನಾಳ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಿಗೆ ಗುರುವಾರ ಸಂಜೆ ವಿಜ್ಞಾನಿಗಳ ತಂಡ ಹಾಗೂ ಕೃಷಿ ಅಧಿಕಾರಿಗಳ ತಂಡ ಜಿಆರ್ಜಿ೧೫೨ ಹಾಗೂ ಜಿಆರ್ಜಿ೮೧೧ ತಳಿ ತೊಗರಿ ಬೀಜ ಬಿತ್ತನೆ ಮಾಡಿರುವ ಹೊಲಗಳಿಗೆ ಭೇಟಿ ನೀಡಿ ತೊಗರಿ ಬೆಳೆಯನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಹಾಜರಿದ್ದ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಅವರು, ಕೃಷಿ ಇಲಾಖೆಯಿಂದ ವಿತರಿಸಿದ ಜಿಆರ್ಜಿ೧೫೨ ಮತ್ತು ಜಿಆರ್ಜಿ೮೧೧ ತೊಗರಿ ಬೀಜ ಕಳಪೆಯಾಗಿವೆ. ಬೀಜ ಕಳಪೆಯಾಗಿರುವದರಿಂದಾಗಿ ತೊಗರಿ ಕಾಯಿ ಹಿಡಿದಿಲ್ಲ. ಹವಾಮಾನದ ವೈಪರೀತ್ಯಯಾಗಲಿ ಇನ್ನಿತರ ಯಾವುದೇ ಸಮಸ್ಯೆ ತೊಗರಿ ಬೆಳೆ ಪರಿಣಾಮ ಬೀರಿಲ್ಲ. ಬೀಜ ಕಳಪೆಯಿಂದಾಗಿಯೇ ಈ ತೊಗರಿ ಬೆಳೆಗೆ ಕಾಯಿ ಆಗಿಲ್ಲ. ಇದರಿಂದಾಗಿ ರೈತರು ಮೋಸ ಹೋಗಿದ್ದಾರೆ. ಈ ಬೀಜ ವಿತರಿಸಿದ ಕಂಪನಿಯವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಪ್ಪು ಪಟ್ಟಿಗೆ ಸೇರಿಸಬೇಕು. ವಿಮೆ ಕಟ್ಟದೇ…

Read More

ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ೧೯ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಸಮಾರೋಪ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಂದಿನ ದಿನಮಾನದಲ್ಲಿ ನಮ್ಮ ಸಾಂಸ್ಕೃತಿಕ ಕಲೆಗಳು ಮರೆಯಾಗುತ್ತಿದ್ದು, ಇಂತಹ ಯುವಜನೋತ್ಸವ ಕಾರ್ಯಕ್ರಮಗಳು ನಮ್ಮ ಕಲೆಗಳನ್ನು ಉಳಿಸಿ ಬೆಳೆಸುವಂತೆ ಮಾಡುತ್ತಿರುವುದು ಸಂತಸದ ವಿಷಯ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಸಂಘದ ಅಧ್ಯಕ್ಷ ಡಾ.ಜಾವೀದ ಜಮಾದಾರ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿರುವ ೧೯ನೇ ಅಂತರ್ ಮಹಾವಿದ್ಯಾಲಯಗಳ ಯುವಜನೋತ್ಸವ ‘ಶಕ್ತಿ ಸಂಭ್ರಮ’ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಪ್ರಸ್ತುತ ಕಾಲದಲ್ಲಿ ನಾವೆಲ್ಲರೂ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುವ ಮೂಲಕ ನಮ್ಮ ಸಂಸ್ಕೃತಿ, ಕಲೆ, ಭಾಷೆ ಎಲ್ಲವನ್ನು ಮರೆಯುತ್ತಿದ್ದೇವೆ. ಅದರಲ್ಲೂ ಇಂದಿನ ಯುವಜನತೆಗೆ ನಮ್ಮ ಸಾಂಸ್ಕೃತಿಕ ಕಲೆಗಳ ಬಗ್ಗೆ ತಿಳುವಳಿಕೆಯೆ ಇರದ ಮಟ್ಟಿಗೆ ನಾವೆಲ್ಲರೂ ತಲುಪಿದ್ದೇವೆ. ಇಂತಹ ಸಂದರ್ಭದಲ್ಲಿ ನಮ್ಮ ಸಂಸ್ಕೃತಿ, ಕಲೆಯನ್ನು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ವತಿಯಿಂದ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ದೃಢಸಂಕಲ್ಪ, ಸತತಪ್ರಯತ್ನ, ಪರಿಶ್ರಮಗಳೇ ಯಶಸ್ಸಿಗೆ ದಾರಿ ಎಂದು ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಬಿ.ಜಿ.ಪತ್ತಾರ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಜರುಗಿದ ೨೦೨೪-೨೫ನೇ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಸೇಯೋ, ರೆಡ್‌ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳಿಗೆ ದೀಪ ಬೆಳಗಿಸಿ ಚಾಲನೆ ನೀಡಿ ಮಾತನಾಡಿದರು.ವಿದ್ಯಾರ್ಥಿಗಳು ಕೇವಲ ಪದವಿ ಪಡೆದರೆ ಸಾಲದು, ಅದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವ್ಯಕ್ತಿತ್ವವನ್ನು ವಿಕಸನ ಮಾಡಿಕೊಳ್ಳಬೇಕು. ಬಾಳಿಗೊಂದು ನಿಶ್ಚಲವಾದ ಗುರಿಯನ್ನು ಇಟ್ಟುಕೊಳ್ಳಬೇಕು ಅದನ್ನು ತಲುಪಲು ಧೃಡವಾದ ಸಂಕಲ್ಪ ಮಾಡಬೇಕು. ಸತತ ಪರಿಶ್ರಮವೇ ಜಯದ ದಾರಿ ಎಂದು ಕಿವಿಮಾತು ಹೇಳುತ್ತಾ, ಅನೇಕ ಸಾಧಕರ ಉದಾಹರಣೆಗಳನ್ನು ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಅಶೋಕ ಹೆಗಡೆ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಸತ್ಪçಜೆಗಳಾಗಿ ಹೊರಹೊಮ್ಮಬೇಕು ಎಂದು ಹಾರೈಸಿದರು.ಅರ್ಥಶಾಸ್ತç ಪ್ರಾಧ್ಯಾಪಕ ಪಿ.ಎಂ.ಪರುಗೊಂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಪ್ರಿಯಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಎಂ.ಎಂ. ಲಕ್ಷೀಶ ಸ್ವಾಗತಿಸಿದರು.…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಡಿವಾಳೇಶ್ವರ ಸ್ವಾಮೀಜಿಯವರ ೯೫ನೇ ವರ್ಷದ ಜನ್ಮವರ್ಧಂತಿ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡ ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಶಿರಹಟ್ಟಿ ಮಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದ ಗದ್ದಿಗೆಮಠದಲ್ಲಿ ಗುರುವಾರ ಜಾಲವಾದ ಗ್ರಾಮದ ಮುರುಗೇಂದ್ರ ಶಿವಯೋಗಿಗಳ ಜಾತ್ರಾ ಮಹೋತ್ಸವದ ವಿಶೇಷ ಕಾರ್ಯಕ್ರಮಗಳ ಮಾಹಿತಿಪತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಕಾರ್ಯಕ್ರಮ ಕೊಡೆಕಲ್ ದುರದುಂಡೇಶ್ವರಶ್ರೀ ಹಾಗೂ ಕಿರಿಯ ಮಹಾಂತ ಸ್ವಾಮೀಜಿ ನೇತೃತ್ವದಲ್ಲಿ ಎಲ್ಲ ರೀತಿಯಿಂದಲೂ ಸಾಂಗವಾಗಿ ಸಾಗಲಿ ಎಂದರು.ಮಠದ ಮಹಾಂತಸ್ವಾಮಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ, ಜಾಲವಾದ ಗ್ರಾಮದ ಮುರುಗೇಂದ್ರ ಶಿವಯೋಗಿಗಳ ಆಶ್ರಮದಲ್ಲಿ ಡಿಸೆಂಬರ್ ೩ ರಿಂದ ಕಾರ್ಯಕ್ರಮಗಳು ಆರಂಭಗೊAಡು ಜನೇವರಿ ೧೮ ವರೆಗೆ ಜರುಗಲಿವೆ. ಡಿಸೆಂಬರ್ ೧ ರಿಂದ ೩೦ ರವರೆಗೆ ಪ್ರತಿ ಗ್ರಾಮದಲ್ಲಿ ೫ ದಿನಗಳಂತೆ ಜನಜಾಗೃತಿ ಸಂಚಾರಿ ಪ್ರವಚನ. ಜನೇವರಿ ೧ ರಂದು ಜಾಲವಾದ ಆಶ್ರಮದಲ್ಲಿ ಕಲಬುರ್ಗಿ ಶರಣ ಬಸವೇಶ್ವರ ಪುರಾಣ ಹಾಗೂ ದಾಸೋಹ, ಜನೇವರಿ ೧೪ ರಂದು ಬಸವ ಬ್ರೇನ್ ಆಸ್ಪತ್ರೆಯಿಂದ ನರ ಮತ್ತು ಪಾರ್ಶ್ವವಾಯು ರೋಗಿಗಳ ತಪಾಸಣೆ, ಜನೇವರಿ…

Read More