Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 12,2026

ಕೈಯಲ್ಲಿ ಕುಣಿವ ಆ ಹೊನ್ನ ಬಳೆಯ ಘಲ್ ಘಲ್ ತಾಳಕೆ

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೀರಿನ ಬಾಟಲ್ ವಿತರಣೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸುವರ್ಣಸೌಧ ಮುತ್ತಿಗೆಗೆ ತಡೆ: ಸಿಎಂ ನಡೆಗೆ ಪಂಚಮಸಾಲಿಗರ ಖಂಡನೆ
(ರಾಜ್ಯ ) ಜಿಲ್ಲೆ

ಸುವರ್ಣಸೌಧ ಮುತ್ತಿಗೆಗೆ ತಡೆ: ಸಿಎಂ ನಡೆಗೆ ಪಂಚಮಸಾಲಿಗರ ಖಂಡನೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಇಂಡಿ: ಡಿಸೆಂಬರ್ ೧೦ ರಂದು ಲಿಂಗಾಯತ ಪಂಚಮಸಾಲಿ ಸಮಾಜದ ೨ಎ ಮೀಸಲಾತಿಗಾಗಿ ನಡೆಯುತ್ತಿರುವ ಸುವರ್ಣಸೌಧ ಮುತ್ತಿಗೆ ರ‍್ಯಾಲಿಯನ್ನು ತಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜದ ಸಚಿವರು ಶಾಸಕರ ಮುಖಾಂತರ ಒತ್ತಡ ಹೇರಿ, ಪ್ರತಿಭಟನೆ ತಡೆಯಲು ಯತ್ನಿಸುತ್ತಿರುವುದು ಸರಿಯಲ್ಲ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ಇಂಡಿ ತಾಲೂಕ ಅಧ್ಯಕ್ಷ ವಿ.ಹೆಚ್. ಬಿರಾದಾರ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ವಿಜಯಾನಂದ ಕಾಶಪ್ಪನವರ್ ಅವರು ಹೋರಾಟದ ನೇತೃತ್ವ ವಹಿಸಿದ್ದವರು, ಈಗ ಅಧಿಕಾರ ಸಿಕ್ಕ ಮೇಲೆ ನಮ್ಮ ಹೋರಾಟ ಹತ್ತಿಕ್ಕಲು ಪ್ರಯತ್ನಿಸುತ್ತಿರುವುದು ಸರಿಯಲ್ಲ, ಸಮಾಜಕ್ಕೆ ಪೂಜ್ಯರೆ ಹೈಕಮಾಂಡ್ ಆಗಿದ್ದು ಶ್ರೀಗಳ ಬಗ್ಗೆ ಹಗುರವಾಗಿ ಮಾತನಾಡುತ್ತಿರುವ ವಿಜಯಾನಂದ ಕಾಶಪ್ಪನವರ್, ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ಇನ್ನಿತರ ಶಾಸಕರು ಸಚಿವರು ಕೂಡಲೇ ಶ್ರೀಗಳಿಗೆ ಕ್ಷಮೆ ಯಾಚಿಸಿ ಹೋರಾಟಕ್ಕೆ ಬೆಂಬಲ ಸೂಚಿಸಬೇಕು. ನಮ್ಮ ಹೋರಾಟದಿಂದಲೇ ನೀವು ಶಾಸಕರು, ಮಂತ್ರಿ ಆಗಿದ್ದೀರಿ ಎಂಬುದನ್ನು ಮರೆಯಬಾರದು, ರಾಜಕೀಯ ಪ್ರತಿಷ್ಠೆ ಬದಿಗಿಟ್ಟು ಬಡ ಪಂಚಮಸಾಲಿ ಸಮಾಜದ ಋಣ ತೀರಿಸಲು ಎಲ್ಲರೂ ಒಂದಾಗಬೇಕು ಎಂದು ಸಲಹೆ ನೀಡಿದರು.
ಬಸನಗೌಡ ಪಾಟೀಲ್ ಯತ್ನಾಳ್ ಅವರು ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗಲೂ ಸಹ ವಿರೋಧ ಪಕ್ಷಕ್ಕಿಂತಲೂ ಹೆಚ್ಚಿಗೆ ಸದನದಲ್ಲಿ ಧ್ವನಿ ಎತ್ತಿ, ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದಾರೆ. ಆದರೆ ನಮ್ಮ ಹೋರಾಟದ ಮೂಲಕ ಅಧಿಕಾರ ಪಡೆದುಕೊಂಡ ಕಾಶಪ್ಪನವರ ಹಾಗೂ ಹೆಬ್ಬಾಳ್ಕರ್ ಅವರು ಈಗ ಸರಕಾರದ ಪರವಾಗಿ ನಮ್ಮ ಸಮುದಾಯವನ್ನು ಕಡೆಗಣಿಸುತ್ತಿರುವುದು ಬೇಸರತರಿಸಿದೆ ಎಂದ ಅವರು ಸಮಾಜದ ಬಡ ಮಕ್ಕಳ ಶೈಕ್ಷಣಿಕ ಏಳ್ಗೆ ಸೇರಿದಂತೆ ಬಡವರನ್ನು ಮೇಲೆಬ್ಬಿಸುವ ಸದುದ್ದೇಶದಿಂದ ಶ್ರೀಗಳು ಹೋರಾಟ ನಡೆಸುತ್ತಿದ್ದು ಅವರ ಬೆನ್ನಿಗೆ ಇಡೀ ಪಂಚಮಸಾಲಿ ಜನಾಂಗ ನಿಂತಿದೆ. ರಾಜಕಾರಣಿಗಳು ಶ್ರೀಗಳ ಮನಸ್ಸು ನೋವಿಸಿದರೆ ಸಮಾಜ ಮುಂಬರುವ ದಿನಗಳಲ್ಲಿ ನಿಮಗೆ ತಕ್ಕ ಶಾಸ್ತಿ ಮಾಡಲಿದೆ ಎಂದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ಬಿ. ಬಿರಾದಾರ ಮಾತನಾಡಿ, ವಕೀಲರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸುವರ್ಣಸೌಧ ಮುತ್ತಿಗೆಗೆ, ಇಂಡಿ ತಾಲೂಕಿನ ವಕೀಲರು ಸೇರಿದಂತೆ ಜಿಲ್ಲೆಯ ವಕೀಲರು ಭಾಗವಹಿಸಲಿದ್ದು ಇಂಡಿ ತಾಲೂಕಿನಿಂದ ಸುಮಾರು ೨೦೦ ಕ್ಕೂ ಅಧಿಕ ಟ್ರ‍್ಯಾಕ್ಟರ್ ಗಳನ್ನು ತೆಗೆದುಕೊಂಡು ಹೋಗಿ ಹೋರಾಟಕ್ಕೆ ಧುಮುಕುವುದಾಗಿ ತಿಳಿಸಿದರು.
ಸುವರ್ಣ ಸೌಧ ಮುತ್ತಿಗೆ ಸಂದರ್ಭದಲ್ಲಿ ಏನಾದರೂ ಅಡೆ-ತಡೆಗಳಾದರೆ ಅದಕ್ಕೆ ಮುಖ್ಯಮಂತ್ರಿಗಳು ಹಾಗೂ ಸರ್ಕಾರವೇ ನೇರ ಹೊಣೆ ಆಗಲಿದ್ದು ಸರ್ಕಾರ ಡಿಸೆಂಬರ್ ೯ರ ಒಳಗಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಿ ನಮ್ಮ ಹೋರಾಟವನ್ನು ಕೈಬಿಡುವಂತೆ ಮನವಿ ಮಾಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಶಿವಾನಂದ ಚಾಳಿಕಾರ, ನ್ಯಾಯವಾದಿಗಳಾದ ಎಸ್.ಆರ್.ಬಿರಾದಾರ, ಡಿ.ಜಿ. ಜ್ಯೋತಗೊಂಡ, ವೀರೇಂದ್ರ ಪಾಟೀಲ, ಜಿ.ಎಸ್. ಪಾಟೀಲ, ಸಮಾಜದ ಮುಖಂಡರಾದ ಸೋಮು ದೇವರ, ಅನಿಲಗೌಡ ಬಿರಾದಾರ, ಬಾಳು ಮುಳಜಿ, ಶ್ರೀಶೈಲಗೌಡ ಬಿರಾದಾರ ಸೇರಿದಂತೆ ಇನ್ನಿತರರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 12,2026

ಕೈಯಲ್ಲಿ ಕುಣಿವ ಆ ಹೊನ್ನ ಬಳೆಯ ಘಲ್ ಘಲ್ ತಾಳಕೆ

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೀರಿನ ಬಾಟಲ್ ವಿತರಣೆ

ಜು.೧೪ ರಂದು ನೈಕಾನ್ ಮಿರರ್‌ಲೆಸ್ ತಂತ್ರಜ್ಞಾನ ಕಾರ್ಯಾಗಾರ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 12,2026
    In ದಿನಪತ್ರಿಕೆ
  • ಕೈಯಲ್ಲಿ ಕುಣಿವ ಆ ಹೊನ್ನ ಬಳೆಯ ಘಲ್ ಘಲ್ ತಾಳಕೆ
    In ವಿಶೇಷ ಲೇಖನ
  • ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೀರಿನ ಬಾಟಲ್ ವಿತರಣೆ
    In (ರಾಜ್ಯ ) ಜಿಲ್ಲೆ
  • ಜು.೧೪ ರಂದು ನೈಕಾನ್ ಮಿರರ್‌ಲೆಸ್ ತಂತ್ರಜ್ಞಾನ ಕಾರ್ಯಾಗಾರ
    In (ರಾಜ್ಯ ) ಜಿಲ್ಲೆ
  • ಕಾರ್ಯಕರ್ತರು ಸಕ್ರೀಯವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು
    In (ರಾಜ್ಯ ) ಜಿಲ್ಲೆ
  • ಘಟನೆ ಮತ್ತು ಪ್ರತಿಕ್ರಿಯೆಯ ನಡುವಿನ ಆ ಕ್ಷಣ..
    In ವಿಶೇಷ ಲೇಖನ
  • ಡಿವೈಡರ್‌ಗೆ ಕಾರು ಡಿಕ್ಕಿ; ತಾಯಿ-ಇಬ್ಬರು ಪುತ್ರರ ದುರ್ಮರಣ!
    In (ರಾಜ್ಯ ) ಜಿಲ್ಲೆ
  • ಕಾಂಗ್ರೆಸ್ ನಿಂದ ಎಸ್‌ಐಆರ್ ಪ್ರಕ್ರಿಯೆ ನಿಷ್ಕ್ರೀಯಗೊಳಿಸುವ ಷಡ್ಯಂತ್ರ
    In (ರಾಜ್ಯ ) ಜಿಲ್ಲೆ
  • ಸಮ್ಮೇಳನಾಧ್ಯಕ್ಷಕರಾಗಿ ಹ.ಮಾ.ಪೂಜಾರ ಆಯ್ಕೆಗೆ ಮೌಲಾಲಿ ಹರ್ಷ
    In (ರಾಜ್ಯ ) ಜಿಲ್ಲೆ
  • ಮುದ್ದೇಬಿಹಾಳದ ವಿದ್ಯಾಸ್ಪೂರ್ತಿ ಶಾಲೆಯ ಅನುಮತಿ ರದ್ದು!
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.