ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ:
ತಾಲೂಕಿನ ಸುಕ್ಷೇತ್ರ ಇವಣಗಿ ಗ್ರಾಮದಲ್ಲಿ ಡಿ.೨ ರಂದು ನಡೆಯಲಿರುವ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಶುಕ್ರವಾರ ಸಂಜೆ ಗ್ರಾಮದ ಗುರು-ಹಿರಿಯರ, ತಾಲೂಕು ಕಸಾಪ ಪದಾಧಿಕಾರಿಗಳ, ಸಾಹಿತ್ಯಾಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ಚಂದ್ರಶೇಖರ ಸುಭಾನಪ್ಪರ, ರಾಮಪ್ಪ ಪೂಜಾರಿ, ನಾಗು ಸುಭಾನಪ್ಪರ, ಸುರೇಶ ಚಿಗರಿ, ಮಂಜು ಇಟಗಿ, ಬಸವರಾಜ ಮೇಟಿ, ಎಸ್.ಎಲ್.ಓಂಕಾರ, ಪಿ,ಕೆ.ಕೋಲಕಾರ, ಎಸ್.ಬಿ.ಪಾಗದ, ಎಂ.ಎನ್.ಅಂಗಡಗೇರಿ,ಸಿದ್ದಪ್ಪ ಅವಜಿ, ಶರಣು ದಳವಾಯಿ, ಬಿ.ವ್ಹಿ.ಚಕ್ರಮನಿ, ವ್ಹಿ.ಸಿ, ಹಂಚಾಟೆ ಇತರರು ಇದ್ದರು.

