Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿಯಲ್ಲಿ ಉದ್ಘಾಟನೆ | ೧೦೦೮ ಮಹಾತ್ಮ ಪೂಜ್ಯರ ಪಾದಪೂಜೆ | ಲಕ್ಷಾಂತರ ಜನರು ಭಾಗಿ | ಬ್ರಿಗೇಡ್ ಅಧ್ಯಕ್ಷ ಸೋಮೇಶ್ವರ ಸ್ವಾಮೀಜಿ ಘೋಷಣೆ ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಹಿಂದು ಧರ್ಮದ ರಕ್ಷಣೆ, ಹಿಂದು ಸಮಾಜಕ್ಕೆ ತೊಂದರೆಯಾದರೆ ಅಲ್ಲಿ ಧ್ವನಿ ಎತ್ತುವದು, ಸಮಾಜದ ಹಿಂದುಳಿದ ದಲಿತ ಎಲ್ಲ ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಉದ್ಧೇಶಗಳನ್ನು ಮುಂದಿಟ್ಟುಕೊಂಡು ಉತ್ತರ ಕರ್ನಾಟಕದ ಎಲ್ಲ ಮಠಾಧೀಶರು ಸಮಾಲೋಚನೆ ಮಾಡಿದ ಕ್ರಾಂತಿವೀರ ಬ್ರಿಗೇಡ್ ಅಸ್ತಿತ್ವ ಬಂದಿದೆ. ಈ ಬ್ರಿಗೇಡ್ ಅನ್ನು ೨೦೨೫ ನೇ ಫೆಬ್ರುವರಿ ೪ ರಂದು ಕ್ರಾಂತಿಪುರುಷ ವಿಶ್ವಗುರು ಬಸವೇಶ್ವರರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಉದ್ಘಾಟಿಸಲಾಗುವದು ಎಂದು ಕ್ರಾಂತಿವೀರ ಬ್ರಿಗೇಡ್ದ ಅಧ್ಯಕ್ಷ ಮಕಾನಪುರ ಗುರುಪೀಠದ ಸೋಮೇಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದ ಮಸಬಿನಾಳ ರಸ್ತೆಯಲ್ಲಿರುವ ಯಲ್ಲಾಲಿಂಗ ಮಠದ ಕಲ್ಯಾಣ ಮಂಟಪದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೨ ನೇ ಶತಮಾನದಲ್ಲಿ ಬಸವೇಶ್ವರರು ಸಮಾನತೆಯನ್ನು ತರಲು ಕ್ರಾಂತಿ ಮಾಡಿದರು. ಈ ಭಾಗದ ಮಠಾಧೀಶರರು ಹಿಂದು ಸಮಾಜ-ಧರ್ಮದ ರಕ್ಷಣೆಗಾಗಿ ಕ್ರಾಂತಿಪುರುಷನ ನೆಲದಿಂದಲೇ ಕ್ರಾಂತಿವೀರ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕರಾಟೆ ಡೋ ಕೆನ್ರ‍್ಯುಕನ್ ಶೂಟೋಕಾನ್ ಸ್ಟೈಲ್ ಇಂಡಿಯಾ ಹಾಗೂ ಉತ್ತರ ಕನ್ನಡ ಕರಾಟೆ ಶಿಕ್ಷಕರ ಮತ್ತು ಕ್ರೀಡಾ ಸಂಘ ವತಿಯಿಂದ ಕೊಡಮಾಡುವ ಉತ್ತಮ ಕರಾಟೆ ಶಿಕ್ಷಕ ಪ್ರಶಸ್ತಿಗೆ ಇಲ್ಲಿನ ಕರಾಟೆ ಶಿಕ್ಷಕ ಶಿವಕುಮಾರ ಶಾರದಳ್ಳಿ ಭಾಜನರಾಗಿದ್ದಾರೆ.ಹಲವು ವರ್ಷಗಳಿಂದ ಇಲ್ಲಿನ ಮಕ್ಕಳಿಗೆ ಉಚಿತ ಕರಾಟೆ ಶಿಕ್ಷಣ ಸೇವೆ ನೀಡುವುದರ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಸೇರಿ ಇತರೆ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸಾಧನೆಯನ್ನ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಡಿ.೮ ರಂದು ಕಾರವಾರದಲ್ಲಿ ಆಯೋಜಿಸಲಾದ ಪ್ರಥಮ ಕರಾಟೆ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಶಾರದಳ್ಳಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಸಿಂದಗಿ ತಾಲೂಕು ಘಟಕದ ವತಿಯಿಂದ ನಟ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ ಸನ್ಮಾನಿಸಿದರು.ಶನಿವಾರ ಪಟ್ಟಣದ ರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಎಲ್ಲಾ ನಿರ್ದೇಶಕರಿಗೆ ಮತ್ತು ಸಿಂದಗಿ ತಾಲುಕು ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಎಲ್ಲಾ ನಿರ್ದೇಶಕರಿಗೆ ಸಿಂದಗಿ ತಾಲೂಕು ಶಿಕ್ಷಕರು ಹಾಗೂ ಎಲ್ಲಾ ಇಲಾಖೆಯ ನೌಕರರ ವತಿಯಿಂದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನಿಸಿದರು.ಈ ವೇಳೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಸಿ ಶಡಶ್ಯಾಳ, ಸಯ್ಯದ ಜುಬೇರ್ ಎಸ್ ಕೆರೂರ, ಜಗದೀಶ ಸದಾಶಿವ ಬೋಳಸೂರ, ನಿಜು ಎಮ್ ಮೇಲಿನಕೇರಿ, ಶಂಕರಗೌಡ ಆರ್ ಪಾಟೀಲ್, ನೀಲಾ ಇಂಗಳೆ, ಜಯಶ್ರೀ ಬೆಣ್ಣಿ, ಬಿ ಟಿ ಗೌಡರ, ರವೀಂದ್ರ ಪ್ರಲ್ಹಾದ ಉಗಾರ, ಆಲಮೇಲ ನೌಕರರ ಸಂಘದ ಅಧ್ಯಕ್ಷ ರವಿ ಬಿರಾದಾರ, ಸಿಂದಗಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಗವಂತನಿತ್ತ ಸಂಪತ್ತು ಬಾಳಿನ ನಿಜವಾದ ಸಂಪತ್ತು. ಮನುಷ್ಯ ಜೀವನ ಸುಂದರ ಮತ್ತು ಶುದ್ಧಗೊಳಿಸುವುದೇ ಧರ್ಮದ ಗುರಿ. ಬದುಕಿನ ಹಿರಿಮೆ ಮತ್ತು ರಹಸ್ಯ ಬೋಧಿಸುವುದೇ ನಿಜವಾದ ಧರ್ಮವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.ಅವರು ಶನಿವಾರ ತಾಲೂಕಿನ ಕನ್ನೂರು ಗುರು ಮಠದ ಲಿಂ.ಮಲ್ಲಿಕಾರ್ಜುನ ಶಿವಾಚಾರ್ಯರ ೧೯ನೇ ವರ್ಷದ ಪುಣ್ಯ ಸ್ಮರಣೋತ್ಸವ ಹಾಗೂ ಗುರು ಪರಂಪರೆಯ ಜಾತ್ರಾ ಮಹೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಸಮಸ್ತ ಜನರ ಭೋಗ ಮೋಕ್ಷಗಳಿಗೆ ಧರ್ಮವೇ ಮೂಲ. ಶ್ರಮದ ಕಾಯಕದಿಂದಲೇ ಮನುಷ್ಯನಿಗೆ ಚೈತನ್ಯ ಪ್ರಾಪ್ತಿಯಾಗುತ್ತದೆ. ಮಾನವ ಪರಿಪೂರ್ಣದೆಡೆಗೆ ಪಯಣಿಸುವುದೇ ನಿಜವಾದ ಸಾಧನೆ. ಅಹಿಂಸಾದಿ ಧ್ಯಾನ ಪರ್ಯಂತರ ದಶ ಧರ್ಮ ಸೂತ್ರಗಳ ಪರಿಪಾಲನೆಯಿಂದ ಮಾನವ ಜೀವನ ಸಾರ್ಥಕಗೊಳ್ಳುವುದೆಂದು ಸಾರಿದ ಶ್ರೀ ಜಗದ್ಗುರು ರೇಣುಕಾಚಾರ್ಯರ ವಿಚಾರ ಧಾರೆಗಳು ಸರ್ವಕಾಲಕ್ಕೂ ಸರ್ವರಿಗೂ ಅನ್ವಯಿಸುತ್ತವೆ. ಹುಟ್ಟು ಎಷ್ಟು ಸಹಜವೋ ಹುಟ್ಟಿದ ಮನುಷ್ಯನಿಗೆ ಮೃತ್ಯು ಬಿಟ್ಟಿದ್ದಲ್ಲ. ಹುಟ್ಟು ಸಾವುಗಳ ಮಧ್ಯದ ಬದುಕನ್ನು ಮನುಷ್ಯ ಸಾರ್ಥಕಪಡಿಸಿಕೊಳ್ಳಬೇಕು. ಲಿಂ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು…
ಭಾರತದ ಕಿರಿಯ ವಯಸ್ಸಿನ ಪೈಲೆಟ್ ಆಗಿ ಆಯ್ಕೆಯಾದ ಸಾಧಕಿ ಕು.ಸಮೈರಾ ಹುಲ್ಲೂರ ನಿವಾಸಕ್ಕೆ ಭೇಟಿ ನೀಡಿ ಸನ್ಮಾನಿಸಿದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಉದಯರಶ್ಮಿ ದಿನಪತ್ರಿಕೆ ಬಬಲೇಶ್ವರ: ಭಾರತದ ಕಿರಿಯ ವಯಸ್ಸಿನ ಪೈಲೆಟ್ ಆಗಿ ಆಯ್ಕೆಯಾಗಿರುವ ವಿಜಯಪುರದ ಸಾಧಕಿ ಕುಮಾರಿ ಸಮೈರಾ ಹುಲ್ಲೂರವರ ನಿವಾಸಕ್ಕೆ ಭೇಟಿ ನೀಡಿದ ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಸರಕಾರದ ಪರವಾಗಿ ಸಾಧಕಿ ಸಮೈರಾ ಹುಲ್ಲೂರ ಅವರನ್ನು ಸನ್ಮಾನಿಸಿ, “ವಿಜಯಪುರ ಸಾಧಕರ ತವರೂರು ಬಸವ ನಾಡಿನ ಈ ನೆಲದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಕೊರತೆ ಇಲ್ಲ, ಈಗ ಅಂಥ ಸಾಧಕರ ಪಟ್ಟಿಗೆ ಸೇರುವುದರ ಮೂಲಕ ಅತೀ ಕಿರಿಯ ವಯಸ್ಸಿನ ಪೈಲೆಟ್ ಆಗಿ ಆಯ್ಕೆಯಾಗಿರುವ ಕುಮಾರಿ ಸಮೈರಾ ಹುಲ್ಲೂರ್ ಸಾಧನೆ ವಿದ್ಯಾರ್ಥಿನಿಯರಿಗೆ ಮಾದರಿಯಾದದ್ದು, ಸಾಧಿಸಬೇಕೆಂಬ ದೃಢಸಂಕಲ್ಪ ಇರುವವರು ಯಾವ ಎತ್ತರಕ್ಕೆ ಬೇಕಾದರೂ ಹಾರಬಲ್ಲರು, ಏರಬಲ್ಲರು ಎನ್ನುವುದನ್ನು ಸಮೈರಾ ತೋರಿಸಿಕೊಟ್ಟಿದ್ದಾಳೆ. ಅವಳನ್ನು ನಾಡಿನ ಜನತೆ ಪರವಾಗಿ ಅಭಿನಂದಿಸಿ, ಸನ್ಮಾನಿಸಲು ಕರ್ನಾಟಕ ಬಾಲ ವಿಕಾಸ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಯ ವಿವಿಧ ಸ್ಥಾನಗಳಿಗಾಗಿ ಡಿ. 8 ರವಿವಾರದಂದು ಜರುಗಲಿರುವ ಚುನಾವಣೆ ಕಣ ರಂಗೇರಿದೆ.ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಆಡಳಿತ ಮಂಡಳಿಯ ಸಾಲಗಾರ ಸಾಮಾನ್ಯ, ಸಾಲಗಾರ ಹಿಂದುಳಿದ ಅ ವರ್ಗ/ಸಾಲಗಾರ ಮಹಿಳಾ ಹಾಗೂ ಸಾಲಗಾರರಲ್ಲದ (ಬಿನ್ ಸಾಲಗಾರ) ಸೇರಿದಂತೆ ಒಟ್ಟು 12 ಸ್ಥಾನಗಳಲ್ಲಿ ಸಾಲಗಾರ ಹಿಂದುಳಿದ ವರ್ಗ ಬ ದಿಂದ ನಿಂಗಪ್ಪ ದುಂಡಪ್ಪ ಕುಳಗೇರಿ, ಸಾಲಗಾರ ಪರಿಶಿಷ್ಟ ಜಾತಿಯಿಂದ ಸುರೇಶ ಹಣಮಂತ ನಾಯಕ, ಸಾಲಗಾರ ಮಹಿಳಾ ಮೀಸಲು ಸ್ಥಾನದಿಂದ ಜಯಶ್ರೀ ಜಗನಾಥ ಪಾಟೀಲ, ಮಾದೇವಿ ಪರಮಾನಂದ ಮೈಲೇಶ್ವರ ಸೇರಿದಂತೆ ಒಟ್ಟು ನಾಲ್ಕು ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡ ಮೀಸಲು ಸ್ಥಾನಕ್ಕೆ ಯಾರು ನಾಮಪತ್ರ ಸಲ್ಲಿಸಿಲ್ಲ ಎನ್ನಲಾಗಿದೆ.ಇನ್ನೂ ಉಳಿದ ಸಾಮಾನ್ಯ 5 ಸದಸ್ಯರ ಸ್ಥಾನಕ್ಕೆ ಮಲ್ಲೇಶಿ ಬಸಪ್ಪ ಕಡಕೋಳ, ಮುತ್ತಪ್ಪ ಸಿದ್ರಾಮಪ್ಪ ಉಕ್ಕಲಿ, ಮುರಗೇಶ ಮಲ್ಲಪ್ಪ ಸಜ್ಜನ, ವೀರಣ್ಣ ಚಂದ್ರಾಮಪ್ಪ ಪಟ್ಟಣಶೆಟ್ಟಿ, ಸಂಗನಗೌಡ ಕಲ್ಲನಗೌಡ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವೈವಿಧ್ಯತೆಯಿಂದ ಕೂಡಿದ ನಮ್ಮ ರಾಷ್ಟ್ರಕ್ಕೆ ಯೋಗ್ಯ, ಸಮರ್ಥ ಸಂವಿಧಾನ ನೀಡಿದ ಮಹಾಮಾನವತಾವಾದಿ,ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಓದಿನಲ್ಲಿ ತೊಡಗಿಸಿಕೊಂಡಿದ್ದರು. ಈ ಮೂಲಕ ಅವರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ಅಜೀಂ ಪ್ರೇಮ್ಜಿ ಫೌಂಡೇಶನ್ ಕಾರ್ಯಕರ್ತ ನಿಂಗರಾಜ ಆಚಾರ್ಯ ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೮ ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಷ್ಟಗಳ ಕುಲುಮೆಯಲ್ಲಿ ಬೆಂದು ಬೆಳೆದುಬಂದ ಮಹಾನ್ ನಾಯಕರು. ಆಸಕ್ತಿ ಹಾಗೂ ಒಳ್ಳೆಯ ಗುರಿಯೊಂದಿಗೆ ಇವರ ಹಾಗೇ ಅವಮಾನವನ್ನು ಸಹಿಸಿಕೊಂಡು ಮುನ್ನಡೆದರೆ ಸಾಧನೆಯೆಂಬುವದು ಸುಲಭವಾಗುತ್ತದೆ. ಇಂದು ಅಂಬೇಡ್ಕರ್ ಅವರ ವಿಚಾರಗಳು ನಮಗೆಲ್ಲಾ ಆದರ್ಶವಾಗಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯಶಾಸ , ಐಕ್ಯೂಎಸಿ ಸಂಯೋಜಕ ದಿಲೀಪಕುಮಾರ ಇತರರು ಇದ್ದರು. ಡಾ.ಬಿ.ಎಂ.ಸಾಲವಾಡಗಿ ಸ್ವಾಗತಿಸಿ,ನಿರೂಪಿಸಿದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಬಿ. ಹೊಸಮನಿ, ರಾಜ್ಯಶಾಸ್ತ್ರ ವಿಭಾಗದ ಡಾ. ಹೆಚ್. ಎಂ. ನಾಟಿಕಾರ,ಕನ್ನಡ ವಿಭಾಗದ ಶ್ರೀಶೈಲ ಬಳವಾಟ, ಡಾ. ಬಸಿರಾಬಾನು ನಿಡಗುಂದಿ,ನಿರ್ವಹಣಾ ಶಾಸ್ತ್ರ ವಿಭಾಗದ ಡಾ. ಅಮಿತ್ ಮಿರ್ಜಿ, ಇತಿಹಾಸ ವಿಭಾಗದ ವಿಜಯಲಷ್ಮೀ, ವಾಣಿಜ್ಯ ವಿಭಾಗದ ಡಾ. ಪ್ರಶಾಂತ ನಾಯಕ,ಪ್ರೊ. ಮಮತಾ ಎನ್, ದೈ. ಶಿ. ನಿರ್ದೇಶಕ ರೇಣುಕಾ ಅಂಬಲಿ, ಇಂಗ್ಲೀಷ್ ವಿಭಾಗದ ಪ್ರಿಯಾಂಕಾ ಜಿಂದೆ, ಅರ್ಥಶಾಸ್ತ್ರ ವಿಭಾಗದ ಪ್ರೊ. ಇಸ್ಮಾಯಿಲ್ ಶಫಿಯುಲ್ಲಾ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಶೋಷಣೆಗೊಳಗಾದ ಡಾ.ಬಿ.ಆರ್.ಅಂಬೇಡ್ಕರ್ ಅವರು ಜಗತ್ತಿನ ನಾನಾ ಸಂವಿಧಾನಗಳ ಅಧ್ಯಯನ, ವಿವಿಧ ಗ್ರಂಥಗಳ ಅಧ್ಯಯನ ಮಾಡುವ ಮೂಲಕ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ಭಾರತ ದೇಶಕ್ಕೆ ಎಲ್ಲರಿಗೂ ಅನ್ವಯವಾಗುವ ವಿಶಿಷ್ಠ ಸಂವಿಧಾನವನ್ನು ನೀಡುವ ಮೂಲಕ ಸದಾ ಸ್ಮರಣೀಯರಾಗಿದ್ದಾರೆ ಎಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ ವೃತ್ತದಲ್ಲಿ ತಾಲೂಕಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೮ ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ದೇಶದಲ್ಲಿ ಭಾಷೆ,ಜಾತಿ,ಪಂಥ,ಮತ, ಲಿಂಗ ವೈವಿಧ್ಯತೆಯನ್ನು ಕಾಣುತ್ತೇವೆ. ಎಲ್ಲರಿಗೂ ಅನ್ವಯವಾಗುವ, ಯಾರಿಗೂ ನೋವು-ಬಾಧೆಯಾಗದಂತಹ ರೀತಿಯ ಸಂವಿಧಾನವನ್ನು ದೇಶಕ್ಕೆ ನೀಡಿದ್ದಾರೆ. ಡಾ.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಹಾಗೂ ಅವರ ಸಂದೇಶಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ. ಡಾ.ಅಂಬೇಡ್ಕರ ಅವರು ತಮ್ಮ ಜೀವಿತಾವಧಿಯ ಕೊನೆ ದಿನಗಳಲ್ಲಿ ಬೌದ್ಧ ಮತವನ್ನು ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ಪುಣ್ಯ ತಿಥಿಯನ್ನು ಮಹಾಪರಿನಿರ್ವಾಣ ದಿನಾಚರಣೆಯೆಂದು ಎಲ್ಲೆಡೆ ಆಚರಿಸಲಾಗುತ್ತಿದೆ ಎಂದರು.ದೇಶದ ಸಂವಿಧಾನದಲ್ಲಿ ಎಲ್ಲರೂ ಸಮಾನರು ಎಂಬ ಸಂದೇಶವಿದೆ.…
ಅಪ್ರತಿಮ ಮಹಿಳೆ ಲೇಖನ- ಸುಧಾ ಪಾಟೀಲವಿಶ್ವಸ್ಥರುಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ ಉದಯರಶ್ಮಿ ದಿನಪತ್ರಿಕೆ ಅಬ್ಬಕ್ಕ ರಾಣಿ ಅಥವಾ ತುಳುನಾಡಿನ ರಾಣಿ ಚೌಟ ರಾಜವಂಶಕ್ಕೆ ಸೇರಿದವಳು. ಚೌಟ ರಾಜವಂಶದ ಜನರು ದೇವಾಲಯದ ನಗರ ಮೂಡುಬಿದರೆ ಮತ್ತು ಬಂದರು ನಗರವಾಗಿದ್ದ ಅದರ ರಾಜಧಾನಿ ಉಳ್ಳಾಲದಿಂದ ಆಳ್ವಿಕೆ ನಡೆಸಿದರು. ಉಳ್ಳಾಲಕೋಟೆಯು ಅರಬ್ಬಿ ಸಮುದ್ರದ ತೀರದಲ್ಲಿ ಮಂಗಳೂರು ನಗರದಿಂದ ಕೆಲವೇ ಮೈಲುಗಳಷ್ಟು ದೂರದಲ್ಲಿತ್ತು. 16ನೇ ಶತಮಾನದ ಉತ್ತರಾರ್ಧದಲ್ಲಿ ಅಬ್ಬಕ್ಕ ಪೋರ್ಚುಗೀಸರೊಂದಿಗೆ ಹೋರಾಡಿದಳು. ಅಲ್ಲಿ ಚೌಟ ರಾಜವಂಶವು ಮಾತ್ರ ಪ್ರಧಾನ ರಾಜವಂಶವಾಗಿತ್ತು. ಆದ್ದರಿಂದ ಅಬ್ಬಕ್ಕನ ತಾಯಿಯ ಚಿಕ್ಕಪ್ಪ ತಿರುಮಲರಾಯರು ಅವಳನ್ನು ಉಳ್ಳಾಲದ ರಾಣಿಯನ್ನಾಗಿ ಮಾಡಿದರು. ತಿರುಮಲ ರಾಯರು ಅಬ್ಬಕ್ಕನಿಗೆ ಯುದ್ಧದ ವಿವಿಧ ತಂತ್ರಗಳನ್ನು ಕಲಿಸಿದರು.ಅವಳ ಶೌರ್ಯದಿಂದಾಗಿ ಅವಳು “ಅಭಯ ರಾಣಿ” ಎಂದು ಪ್ರಸಿದ್ಧವಾದಳು. ವಸಾಹತುಶಾಹಿ ಶಕ್ತಿಗಳ ವಿರುದ್ಧ ಹೋರಾಡಿದ ಕೆಲವೇ ಭಾರತೀಯರಲ್ಲಿ ಅವಳು ಒಬ್ಬಳು. ಆಕೆಯನ್ನು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಪರಿಗಣಿಸಲಾಗಿದೆ. ರಾಣಿ ಅಬ್ಬಕ್ಕ ಉಳ್ಳಾಲ ಎಂಬ ಸಣ್ಣ ಸಾಮ್ರಾಜ್ಯದ ರಾಣಿ…
