ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಕರಾಟೆ ಡೋ ಕೆನ್ರ‍್ಯುಕನ್ ಶೂಟೋಕಾನ್ ಸ್ಟೈಲ್ ಇಂಡಿಯಾ ಹಾಗೂ ಉತ್ತರ ಕನ್ನಡ ಕರಾಟೆ ಶಿಕ್ಷಕರ ಮತ್ತು ಕ್ರೀಡಾ ಸಂಘ ವತಿಯಿಂದ ಕೊಡಮಾಡುವ ಉತ್ತಮ ಕರಾಟೆ ಶಿಕ್ಷಕ ಪ್ರಶಸ್ತಿಗೆ ಇಲ್ಲಿನ ಕರಾಟೆ ಶಿಕ್ಷಕ ಶಿವಕುಮಾರ ಶಾರದಳ್ಳಿ ಭಾಜನರಾಗಿದ್ದಾರೆ.
ಹಲವು ವರ್ಷಗಳಿಂದ ಇಲ್ಲಿನ ಮಕ್ಕಳಿಗೆ ಉಚಿತ ಕರಾಟೆ ಶಿಕ್ಷಣ ಸೇವೆ ನೀಡುವುದರ ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ ಸೇರಿ ಇತರೆ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸಾಧನೆಯನ್ನ ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಡಿ.೮ ರಂದು ಕಾರವಾರದಲ್ಲಿ ಆಯೋಜಿಸಲಾದ ಪ್ರಥಮ ಕರಾಟೆ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಶಾರದಳ್ಳಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

