ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 68 ನೇ ಮಹಾಪರಿನಿರ್ವಾಣ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು.
ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಬಿ. ಹೊಸಮನಿ, ರಾಜ್ಯಶಾಸ್ತ್ರ ವಿಭಾಗದ ಡಾ. ಹೆಚ್. ಎಂ. ನಾಟಿಕಾರ,ಕನ್ನಡ ವಿಭಾಗದ ಶ್ರೀಶೈಲ ಬಳವಾಟ, ಡಾ. ಬಸಿರಾಬಾನು ನಿಡಗುಂದಿ,ನಿರ್ವಹಣಾ ಶಾಸ್ತ್ರ ವಿಭಾಗದ ಡಾ. ಅಮಿತ್ ಮಿರ್ಜಿ, ಇತಿಹಾಸ ವಿಭಾಗದ ವಿಜಯಲಷ್ಮೀ, ವಾಣಿಜ್ಯ ವಿಭಾಗದ ಡಾ. ಪ್ರಶಾಂತ ನಾಯಕ,ಪ್ರೊ. ಮಮತಾ ಎನ್, ದೈ. ಶಿ. ನಿರ್ದೇಶಕ ರೇಣುಕಾ ಅಂಬಲಿ, ಇಂಗ್ಲೀಷ್ ವಿಭಾಗದ ಪ್ರಿಯಾಂಕಾ ಜಿಂದೆ, ಅರ್ಥಶಾಸ್ತ್ರ ವಿಭಾಗದ ಪ್ರೊ. ಇಸ್ಮಾಯಿಲ್ ಶಫಿಯುಲ್ಲಾ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

