ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವೈವಿಧ್ಯತೆಯಿಂದ ಕೂಡಿದ ನಮ್ಮ ರಾಷ್ಟ್ರಕ್ಕೆ ಯೋಗ್ಯ, ಸಮರ್ಥ ಸಂವಿಧಾನ ನೀಡಿದ ಮಹಾಮಾನವತಾವಾದಿ,ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಓದಿನಲ್ಲಿ ತೊಡಗಿಸಿಕೊಂಡಿದ್ದರು. ಈ ಮೂಲಕ ಅವರು ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ ಎಂದು ಅಜೀಂ ಪ್ರೇಮ್ಜಿ ಫೌಂಡೇಶನ್ ಕಾರ್ಯಕರ್ತ ನಿಂಗರಾಜ ಆಚಾರ್ಯ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ೬೮ ನೇ ಮಹಾಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಷ್ಟಗಳ ಕುಲುಮೆಯಲ್ಲಿ ಬೆಂದು ಬೆಳೆದುಬಂದ ಮಹಾನ್ ನಾಯಕರು. ಆಸಕ್ತಿ ಹಾಗೂ ಒಳ್ಳೆಯ ಗುರಿಯೊಂದಿಗೆ ಇವರ ಹಾಗೇ ಅವಮಾನವನ್ನು ಸಹಿಸಿಕೊಂಡು ಮುನ್ನಡೆದರೆ ಸಾಧನೆಯೆಂಬುವದು ಸುಲಭವಾಗುತ್ತದೆ. ಇಂದು ಅಂಬೇಡ್ಕರ್ ಅವರ ವಿಚಾರಗಳು ನಮಗೆಲ್ಲಾ ಆದರ್ಶವಾಗಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯಶಾಸ , ಐಕ್ಯೂಎಸಿ ಸಂಯೋಜಕ ದಿಲೀಪಕುಮಾರ ಇತರರು ಇದ್ದರು. ಡಾ.ಬಿ.ಎಂ.ಸಾಲವಾಡಗಿ ಸ್ವಾಗತಿಸಿ,ನಿರೂಪಿಸಿದರು.

