Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಶ್ವಪ್ರಕಾಶ ಮಲಗೊಂಡಗೆ “ಬೆಸ್ಟ್ ಆಕ್ಟರ್” ಅವಾರ್ಡ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ನವ ಕರ್ನಾಟಕ ಚಲನಚಿತ್ರೋತ್ಸವ ಅಕಾಡೆಮಿ ಹಾಗೂ ಯುನಿವರ್ಸಲ್ ಫೀಲಂ ಕೌನ್ಸಿಲ್ ಆಯೋಜಿಸಿರುವ ನಾಲ್ಕನೇಯ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2024 ದಲ್ಲಿ ವಿಜಯಪುರದ ನಟ ನಿರ್ದೇಶಕ ವಿಶ್ವಪ್ರಕಾಶ ಟಿ ಮಲಗೊಂಡ ಅವರಿಗೆ “ಬೆಸ್ಟ್ ಆಕ್ಟರ್” ಅವಾರ್ಡ ನೀಡಲಾಯಿತು.ಡಿಸೆಂಬರ್ 15/2024 ರವಿವಾರ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಎಸ್ಸಾಟೋ ರೀ ಕ್ರಿಯೇಷನ್ ಹಬ್ ನಲ್ಲಿ ಜರುಗಿದ ಕರ್ನಾಟಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಿರ್ದೇಶಕ ಡಾ.ಎಂ ಎ ಮುಮ್ಮಿಗಟ್ಟಿ, ಹಿರಿಯ ಕಲಾವಿದ ಸುಂದರ ರಾಜ್, ಆಂಧ್ರಪ್ರದೇಶ ಫೀಲಂ ಚೆಂಬರ್ ಅಧ್ಯಕ್ಷ ಅಂಬಾಟಿ ಮಧು ಮೋಹನ ಕೃಷ್ಣ, ನಿರ್ಮಾಪಕ ಕಲ್ಮೇಶ ಹಾವೇರಿಪೇಟ, ಅವರು ವಿಶ್ವಪ್ರಕಾಶ ಮಲಗೊಂಡ ಅವರಿಗೆ ಅತ್ಯುತ್ತಮ ನಟನೆಂದು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿದರು.ಚಲನಚಿತ್ರೋತ್ಸವದ ಸ್ಪರ್ಧೆಯಲ್ಲಿ ವಿಶ್ವಪ್ರಕಾಶ ನಟಿಸಿ ನಿರ್ದೇಶಿಸಿರುವ “ತುಷಾರ್” ಚಿತ್ರವೂ ಸಹ ಭಾಗವಹಿಸಿತ್ತು. ಸುಮಾರು 150 ಕ್ಕೂ ಹೆಚ್ಚು ಚಲನಚಿತ್ರಗಳು ಚಲನಚಿತ್ರೋತ್ಸವದಲ್ಲಿ ಭಾಗವಹಿಸಿದ್ದವು. ವೇದಿಕೆ ಮೇಲೆ ಕೆಜಿಎಫ್ ಸಿನಿಮಾ ಸಾಹಿತ್ಯ ರಚನೆಕಾರ ಹಾಗೂ…
ಉದಯರಶ್ಮಿ ದಿನಪತ್ರಿಕೆ ಚಡಚಣ: ಹೊಸ್ತಿಲ ಹುಣ್ಣಿಮೆಯ ನಿಮಿತ್ತ ರೇವತಗಾಂವ ಗ್ರಾಮದ ಶ್ರೀ ಖಂಡೋಬಾ ದೇವರು ಹಾಗೂ ಅವರ ಧರ್ಮಪತ್ನಿಯರಾದ ಮಾಲಸಾಬಾಯಿ ಮತ್ತು ಭಾನುಬಾಯಿ ದೇವರುಗಳ ಜಾತ್ರೆಯು ಎರಡು ದಿನಗಳ ಕಾಲ ಅದ್ಧೂರಿಯಾಗಿ ನೆರವೇರಿತು.ಡಿ.೧೪ ರ ಶನಿವಾರದಂದು ಬೆಳಗಿನ ಜಾವ ೫ ಗಂಟೆಗೆ ರುದ್ರಾಭಿಷೇಕ ಪೂಜೆ ಹಾಗೂ ಭಕ್ತರಿಂದ ದೀಡ ನಮಸ್ಕಾರ ನಡೆಯಿತು. ಮಧ್ಯಾಹ್ನ ೩ ಗಂಟೆಗೆ ಶ್ರೀ ಖಂಡೋಬಾ ದೇವರ ಪಲ್ಲಕ್ಕಿ ಮಹೋತ್ಸವವು ವಿವಿಧ ವಾಧ್ಯವೈಭಗಳೊಂದಿಗೆ ಹಾಗೂ ಸುಮಂಗಲೆಯರ ಆರತಿ ಮತ್ತು ಪೂಜಾರಿಗಳ ಜ್ಯೋತಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಖಂಡೋಬಾ ದೇವರ ಪಾದಗಟ್ಟಿ ತಲುಪಿತು. ಅಲ್ಲಿ ಪೂಜಾ ಕಾರ್ಯಕ್ರಮ ಮತ್ತು ನೈವೇದ್ಯ ಜರುಗಿದವು. ನಂತರ ಮೆರವಣಿಗೆಯು ಕಂದಲಗಾAವದ ೧೫ ಜನ ಪ್ರಸಿದ್ಧ ಕುದುರೆಗಾರರು ‘ಶ್ರೀ ಖಂಡೋಬಾ ದೇವರ ಅವತಾರದೊಂದಿಗೆ ಸವಾರಿ ಮಾಡಿದರು. ಸಂಜೆ ೮ ಗಂಟೆಯಿಂದ ರವಿವಾರ ನಸುಕಿನ ಜಾವ ೪ ಗಂಟೆಯವರೆಗೆ ಸಾಂಗಲಿ ಜಿಲ್ಲೆಯ ಆಸಂಗಿ ಗ್ರಾಮದ ಬಾಳು ವಾಫೆ ಮತ್ತು ಮಾಳಸಾ ಮುರಳಿ ಹಾಗೂ ಮಂಗಸೂಳಿ ಇವರ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಮಾನವನ ಜೀವನದಲ್ಲಿ ಅಮೃತದಂತಹ ರಸವನ್ನು ಸವಿಯುವ ನಗು ಇರಬೇಕು. ಅಂತಹ ನಗುವಿನ ಮೊಗದಲ್ಲಿ ಕಷ್ಟಗಳು ಮರೆಯಾಗಿ ಸಮಾಜಮುಖಿ ಕಾರ್ಯದಲ್ಲಿ ಎದ್ದು ಕಾಣುವಂತೆ ಕಾರ್ಯಗಳು ನಡೆಯುತ್ತವೆ. ಮನುಷ್ಯನ ಸಾಮಾಜಿಕ ಜೀವನ ಉತ್ತಮಗೊಳ್ಳಲು ಕೃತಿಗಳು, ಕವನಗಳು, ಚುಟುಕುಗಳು, ಹಾಸ್ಯಮಯವಾಗಿದ್ದರೆ ಅಂತಹ ಪುಸ್ತಕಗಳು ಚೆನ್ನಾಗಿರುತ್ತದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.ಪಟ್ಟಣದ ಬನಶಂಕರಿ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಶಿಕ್ಷಕಿ ಮಹಿಳಾ ಸಾಹಿತಿ ರುದ್ರಮ್ಮ ಗಿಡ್ಡಪ್ಪಗೋಳ ರವರ ನಗುವೇ ಸ್ವರ್ಗ ಎಂಬ ಚೊಚ್ಚಲ ಕೃತಿಯ ಲೋಕಾರ್ಪಣೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತಿದ್ದರು.ನಗು ಎನ್ನುವದು ಮನುಷ್ಯನ ಆರೋಗ್ಯಕ್ಕೆ ಉತ್ತಮವಾದ ಯೋಗ ಇಂಥಹ ನಗುವಿನ ಸಂಧರ್ಬಗಳನ್ನು ಸೃಷ್ಟಿಸುತ್ತಿದ್ದ ಹಳೆ ತಲೆಮಾರಿನ ಒಕ್ಕೂಟ ವ್ಯವಸ್ಥೆ ಇಂದು ಮರೆಯಾಗಿದೆ ಯುವಕರು ಆಧುನಿಕ ಶೈಲಿಯ ಜಗತ್ತಿನಲ್ಲಿ ಬದುಕುವ ಒತ್ತಡದ ಸಮಯದಲ್ಲಿಯೂ ಹಾಸ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಆಯುಷ್ಯ ವೃದ್ದಿಯಾಗುವದು ಆದ್ದರಿಂದ ನಗುವೇ ಸ್ವರ್ಗ ಎಂಬ ಈ ಕೃತಿಯನ್ನು ಪ್ರತಿಯೊಬ್ಬರೂ ಓದಿ ಬರಹಗಾರರಿಗೆ ಪ್ರೋತ್ಸಾಹಿಸಬೇಕು ಎಂದರು.ಮಕ್ಕಳ ಸಾಹಿತಿ ಫ.ಗು ಸಿದ್ದಾಪೂರ ಅವರು ರುದ್ರಮ್ಮ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ|| ಹೆಡಗೆವಾರ ಅವರ ಕಟ್ಟಾ ಅನುಯಾಯಿ ಅಲ್ಲದೇ ೧೯೪೦ ರಲ್ಲಿ ಸಂಘದ ಶಾಖೆಯನ್ನು ಕೊಲ್ಹಾರದಲ್ಲಿ ಪ್ರಾರಂಭಿಸಿದ ಪ್ರಖರ ಹಿಂದುತ್ವವಾದಿ ಸನಾತನ ಧರ್ಮಕ್ಕಾಗಿ ನಿಸ್ವಾರ್ಥ ಸೇವೆಯಿಂದ ತಮ್ಮದೆಲ್ಲವನ್ನೂ ಧಾರೆಯೆರದು ಜೀವಿಸಿದ ಅಪರೂಪದ ವ್ಯಕ್ತಿ ಡಾ.ಮಲ್ಲೇಶಪ್ಪ ಬಡಿಗೇರ ನಮಗೆಲ್ಲ ಮಾದರಿಯಾಗಿದ್ದರು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.ಇತ್ತೀಚೆಗೆ ಅವರು ನಿಧನರಾದ ಪ್ರಯುಕ್ತ ಪಟ್ಟಣದ ಸಂಘದ ಕಾರ್ಯಕರ್ತರು ದ್ಯಾಮವ್ವದೇವಿಯ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಶೃದ್ದಾಂಜಲಿ ಸಭೆಯನ್ನು ಉದ್ದೇಸಿಸಿ ಮಾತನಾಡಿದ ಅವರು ಆರ್.ಎಸ್.ಎಸ್ ನ ತತ್ವ ಸಿದ್ದಾಂತಗಳನ್ನು ಸಮಾಜಮುಖಿ ಕಾರ್ಯಗಳನ್ನು ಉದಾತ್ತ ಚಿಂತನೆಯ ಪರಿಕಲ್ಪಣೆಗಳನ್ನು ಅದರ ಧ್ಯೆಯೋದ್ದೇಶಗಳನ್ನು ತಮ್ಮ ಜೀವಿತಾವಧಿಯ ಕೊನೆಯ ದಿನಗಳವರೆಗೂ ಪರಿಚಯವಿಲ್ಲದ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ಸಂಘಟಣೆಯತ್ತ ಒಲವು ತೋರಿಸುವ ಆಸಕ್ತಿಯನ್ನು ಬೆಳೆಸಿ ಹಲವಾರು ಸಂಘದ ಕಾರ್ಯಕರ್ತರನ್ನು ಪಟ್ಟಣ ಸೇರಿದಂತೆ ನಾಡಿಗೆ ಪರಿಚಯಿಸಿದ ಉತ್ತಮ ವಾಕ್‌ಚಾತುರ್ಯದ ಡಾ|| ಮಲ್ಲೇಶಪ್ಪ ಬಡಿಗೇರ ಅವರು ಲಿಂಗೈಕ್ಯರಾಗಿರಬಹುದು ಆದರೆ ಅವರು ಬಿತ್ತಿದ ಬೀಜ ಅಜರಾಮರವಾಗಿರುತ್ತದೆ ಅಲ್ಲಿಯತನಕ ಅವರ…
ತಿಕೋಟಾ ತಾಲೂಕಾದ್ಯಂತ ವೈಯಕ್ತಿಕ ಶೌಚಾಲಯಗಳ ಕಾರ್ಯಾದೇಶ ವಿತರಣಾ ಅಭಿಯಾನ ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಇಂದು ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರು ಹಾಗೂ ಸ್ವಚ್ಛ ಭಾರತ ಮಿಷನ್ ಯೋಜನೆಯ ಜಿಲ್ಲಾ ನೂಡಲ್ ಅಧಿಕಾರಿಗಳಾದ ಬಿ.ಎಸ್.ರಾಠೋಡ ಸಾಹೇಬರು ತಾಲೂಕಿನ ಟಕ್ಕಳಕಿ ಮತ್ತು ಲೋಹಗಾಂವ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ವೈಯಕ್ತಿಕ ಶೌಚಾಲಯಗಳ ಕಾರ್ಯಾದೇಶ ವಿತರಣಾ ಅಭಿಯಾನಕ್ಕೆ ಚಾಲನೆ ನೀಡಿದರು.ನಂತರ ಗ್ರಾಮದ ಮನೆ-ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಯೋಜನೆಯ ಕುರಿತು ಮಾಹಿತಿ ಒದಗಿಸುವದರ ಜೊತೆಗೆ ಫಲಾನುಭವಿಗಳಿಗೆ ಕಾರ್ಯಾದೇಶಗಳನ್ನು ವಿತರಣೆ ಮಾಡಿದರು.ನಂತರ ಮಾತನಾಡಿದ ಅವರು: ನಮ್ಮ ಗ್ರಾಮದ ಹಿರಿಮೆಯ ಸಲುವಾಗಿ ನಾವೆಲ್ಲರೂ ಗ್ರಾಮಗಳ ಸ್ಚಚ್ಚತೆ ಹಾಗೂ ಆರೋಗ್ಯಕರ ಜೀವನ ನಡೆಸಲು ಪ್ರತಿದಿನ ಶೌಚಾಲಯ ಬಳಕೆ ಮಾಡುವುದು ಬಹಳ ಮುಖ್ಯವಾಗಿದೆ ಎಂದರು. ಪ್ರತಿ ಮನೆ ಮನೆಯಲ್ಲಿಯೂ ಶೌಚಾಲಯ ಕಟ್ಟಿಸಿಕೊಂಡು ಪ್ರತಿಯೊಬ್ಬರು ಶೌಚಾಲಯವನ್ನು ಬಳಸಬೇಕು, ಸ್ವಚ್ಛತೆಯಿಂದ ನಿರ್ವಹಣೆ ಮಾಡಬೇಕು. ಈ ಮೂಲಕ ಬಯಲು ಬರ್ಹಿದೆಸೆ ಮುಕ್ತ ಗ್ರಾಮವನ್ನಾಗಿ ಮಾಡಬೇಕೆಂದು ತಿಳಿಸಿದರು. ಬಯಲಿನಲ್ಲಿ ಶೌಚಕ್ಕೆ ಹೋಗುವುದರಿಂದ ಹಲವಾರು ರೋಗಗಳು ಹರಡಿ ಅನಾರೋಗ್ಯಕ್ಕೆ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಇಂದಿನ ಒತ್ತಡದ ಜೀವನದಲ್ಲಿ ಜಾತ್ರಾ-ಉತ್ಸವದಂಗವಾಗಿ ಹಮ್ಮಿಕೊಳ್ಳುವ ಪ್ರವಚನ-ಪುರಾಣ ಕಾರ್ಯಕ್ರಮಗಳಲ್ಲಿ ಭಾಗಿಯಾದರೆ ಮನಸ್ಸು ಆಧ್ಯಾತ್ಮಿಕ ಅಂಶಗಳ ಕಡೆಗೆ ಹೋಗುವದರಿಂದಾಗಿ ಮನಸ್ಸಿಗೆ ಪ್ರಶಾಂತತೆ ಸಿಗುವ ಜೊತೆಗೆ ಮನಸ್ಸನ್ನು ಶುದ್ಧಗೊಳಿಸುವದಕ್ಕೆ ಪೂರಕ ಎಂದು ರಾಷ್ಟ್ರೀಯ ಬಸವಸೈನ್ಯಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.ಪಟ್ಟಣದ ಗೌರಿ-ಶಂಕರ ದೇವಸ್ಥಾನದ ಜಾತ್ರಾಮಹೋತ್ಸವದಂಗವಾಗಿ ಹನ್ನೊಂದು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದ ಮಂಗಲ ಕಾರ್ಯಕ್ರಮದಂಗವಾಗಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತ್ರೆ-ಉತ್ಸವಗಳು ಪ್ರತಿ ಕುಟುಂಬದ ಸದಸ್ಯರೊಂದಿಗೆ ಸಂಬಂಧಿಕರನ್ನು ಪರಸ್ಪರ ಭೇಟಿ ಮಾಡಲು ಸಹಕಾರಿಯಾಗಿವೆ. ಈ ಉತ್ಸವಗಳು ನಾಡಿನ ಸಂಸ್ಕ್ರತಿಯನ್ನು ಬಿಂಬಿಸುತ್ತವೆ. ನಿರಂತರವಾಗಿ ಇಂತಹ ಉತ್ಸವಗಳು ನಡೆಯುವಂತಾಗಬೇಕೆಂದರು.ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆಗೈದ ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿ, ಗೌರಿ-ಶಂಕರ ದೇವಸ್ಥಾನದ ಜಾತ್ರಾಮಹೋತ್ಸವ ವರ್ಷದಿಂದ ವರ್ಷಕ್ಕೆ ಎಲ್ಲ ಜನರ ಸಹಕಾರದೊಂದಿಗೆ ಅದ್ದೂರಿಯಾಗಿ ನಡೆಯುತ್ತಿರುವದು ಶ್ಲಾಘನೀಯ. ಪ್ರವಚನ ಕಾರ್ಯಕ್ರಮದಲ್ಲಿ ನಿತ್ಯವೂ ಜ್ಞಾನ ದಾಸೋಹದ ಜೊತೆಗೆ ಅನ್ನದಾಸೋಹ ಹಮ್ಮಿಕೊಂಡಿರುವದು ಜಾತ್ರಾಮಹೋತ್ಸವದ ಸಮಿತಿಯ ಕಾರ್ಯ ಮೆಚ್ಚುವಂತಹದು. ಪ್ರತಿ ವರ್ಷ ನಿರಂತರವಾಗಿ ಇದೇ ರೀತಿಯಲ್ಲಿ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ಗೌರಿ-ಶಂಕರ ದೇವಸ್ಥಾನದ ಜಾತ್ರಾಮಹೋತ್ಸವದಂಗವಾಗಿ ಸೋಮವಾರ ದ್ಯಾಮವ್ವನ ಸೋಗಿನ ಮೆರವಣಿಗೆಯು ಸಂಭ್ರಮದಿಂದ ಜರುಗಿತು.ಜಾತ್ರೆಯಂಗವಾಗಿ ಗೌರಿ-ಶಂಕರ ದೇವಸ್ಥಾನದಲ್ಲಿ ಕಳೆದ ಹತ್ತು ದಿನಗಳಿಂದ ಪ್ರತಿಷ್ಠಾಪಿಲಾಗಿರುವ ಗೌರಿ-ಶಿವ-ಗಂಗೆ-ನಂದಿ ಮೂರ್ತಿಗಳಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಗರ್ಭಗುಡಿಯಲ್ಲಿರುವ ನೂತನ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಮಹಿಳೆಯರು ತಮ್ಮ ಕುಟುಂಬ ಸದಸ್ಯರೊಂದಿಗೆ ದೇವಸ್ಥಾನಕ್ಕೆ ತೆರಳಿ ದೇವರಿಗೆ ನೈವೇದ್ಯ ಅರ್ಪಿಸಿದರು. ಮಹಿಳೆಯರು ಗೌರಿಗೆ ಉಡಿ ತುಂಬಿ ಧನ್ಯತಾ ಭಾವ ಅನುಭವಿಸಿದರು.ಮಧ್ಯಾನ್ಹ ಒಂದೂವರೆ ಗಂಟೆ ಸುಮಾರಿಗೆ ಪಟ್ಟಣದ ಮಾರುತಿ ದೇವಸ್ಥಾನದ ಮುಂಭಾಗದಿಂದ ಆರಂಭವಾದ ದ್ಯಾಮವ್ವನ ಸೋಗಿನ ಮೆರವಣಿಗೆಯು ಸಂಜೆ ಗೌರಿ-ಶಂಕರ ದೇವಸ್ಥಾನಕ್ಕೆ ತಲುಪಿತು. ಮೆರವಣಿಗೆಯುದ್ದಕ್ಕೂ ಡೊಳ್ಳಿನ ಮೇಳ, ಹಲಗೆ ನಾದಕ್ಕೆ ಜನರು ಹೆಜ್ಜೆ ಹಾಕಿ ಸಂಭ್ರಮಿಸಿದರು. ದ್ಯಾಮವ್ವನ ಸೋಗು ಸಾಗುವ ಮಾರ್ಗದ ಎರಡು ಬದಿಗಳಲ್ಲಿ ಮಹಿಳೆಯರು ಸೇರಿದಂತೆ ಅಪಾರ ಸಂಖ್ಯೆಯ ಜನರು ನಿಂತು ಮೆರವಣಿಗೆಯನ್ನು ವೀಕ್ಷಿಸಿದರು.ಈ ಸಲ ಬಸಯ್ಯ ಪೂಜಾರಿ(ಮಠಪತಿ) ದ್ಯಾಮವ್ವನ ಸೋಗು ಹಾಕಿದ್ದರು. ಇವರಿಗೆ ಹಣಮಂತ ಕಾಮನಕೇರಿ ಸಾಥ್ ನೀಡಿದರು. ದ್ಯಾಮವ್ವನ ಸೇವಕಿಯರಾಗಿ ಬಾಲಕರಾದ ನಿತೀಶ…
ಉದಯರಶ್ಮಿ ದಿನಪತ್ರಿಕೆ ಇಂಡಿ: ದೈನಂದಿನ ಜೀವನದಲ್ಲಿ ಪೌಷ್ಟಿಕ ಆಹಾರ ಸೇವನೆ ಬಹಳ ಮುಖ್ಯ. ನಿಯಮಿತವಾಗಿ ವ್ಯಾಯಾಮ ಮಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ರಕ್ತಹೀನತೆಯನ್ನು ಹೋಗಲಾಡಿಸಲು ಸಾಧ್ಯ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಸೋಮವಾರದಂದು ‘ರಕ್ತಹೀನತೆ ತಡೆಗಟ್ಟುವ ಜಾಗೃತಿ ಕಾರ್ಯಕ್ರಮ’ವನ್ನು ಉದ್ಧೇಶಿಸಿ ಮಾತನಾಡಿದರು.ತರಕಾರಿ, ಸೊಪ್ಪು, ರಾಗಿ, ಮೊಳಕೆ ಕಟ್ಟಿದ ಕಾಳುಗಳು, ಬೆಲ್ಲ, ನೆಲ್ಲಿಕಾಯಿ, ಕಿತ್ತಳೆ ಹಣ್ಣುಗಳಂತಹ ಆಹಾರ ಸೇವನೆಯಿಂದ ದೇಹಕ್ಕೆ ಹೇರಳವಾಗಿ ಕಬ್ಬಿಣಾಂಶ ದೊರೆಯುತ್ತದೆ. ಆಗ ರಕ್ತಹೀನತೆ ಮುಕ್ತವಾಗಿ ಆರೋಗ್ಯಯುತವಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಹಿರಿಯ ಶಿಕ್ಷಕಿ ಎನ್ ಬಿ ಚೌಧರಿ ಮಾತನಾಡಿ, ರಕ್ತಹೀನತೆಗೆ ಮುಖ್ಯ ಕಾರಣ ದೇಹದಲ್ಲಿ ಕಬ್ಬಿಣಾಂಶ ಕೊರತೆ. ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ ಕಡಿಮೆ ಆದಾಗನಿಶ್ಯಕ್ತಿ, ಸುಸ್ತು, ಜೀರ್ಣಶಕ್ತಿ ಮತ್ತು ಉಸಿರಾಟದಲ್ಲಿ ಸಮಸ್ಯೆ ಕಾಣುವುದು. ಹಾಗಾಗಿ ಮಕ್ಕಳ ಬೆಳವಣಿಗೆಗೆ ಪೌಷ್ಟಿಕ ಆಹಾರ ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದರು.ಶಿಕ್ಷಕರಾದ ಎಸ್ ಪಿ ಪೂಜಾರಿ, ಅಲ್ಫಿಯಾ ಅಂಗಡಿ ಹಾಗೂ ಶಾಲಾ ಮಕ್ಕಳು ಉಪಸ್ಥಿತರಿದ್ದರು. ಇದೇ…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಜಾಲವಾದ ಹಾಗೂ ಕೋರವಾರ ಗ್ರಾಮಗಳ ನಡುವಿನ ರಸ್ತೆ ತಗ್ಗು ತುಂಬುವ ತುಂಡು ಗುತ್ತಿಗೆ ಕಾಮಗಾರಿ ಬೇಕಾಬಿಟ್ಟಿಯಾಗಿ ಕೈಗೊಂಡಿದ್ದು ಉತ್ತಮವಾಗಿ ನಿರ್ವಹಿಸಲು ಕೋರವಾರ ಗ್ರಾಮಸ್ಥರು ಆಗ್ರಹಿಸಿದ್ದಾರೆ.ತಾಲ್ಲೂಕಿನ ಜಾಲವಾದ ಮತ್ತು ಕೋರವಾರ ಗ್ರಾಮಗಳ ನಡುವಿನ ೦೭ ಕಿ,ಮೀ ರಸ್ತೆ ತಗ್ಗು ದಿನ್ನೆಗಳಿಂದ ತುಂಬಿದ್ದು ಬಹುತೇಕ ಹಾಳಾಗಿದೆ. ಈಗ ತಗ್ಗುದಿನ್ನೆಗಳನ್ನು ತುಂಬಿ ರಸ್ತೆ ಸರಿಪಡಿಸುವ ಕಾಮಗಾರಿ ಆರಂಭಗೊAಡಿದೆ. ಆದರೆ ಕಾಮಗಾರಿ ಬೇಕಾಬಿಟ್ಟಿಯಾಗಿ ನಡೆಸಲಾಗುತ್ತಿದೆ. ಈಗಾಗಲೇ ಬಹುತೇಕ ರಸ್ತೆ ಪೂರ್ಣಗೊಳಿಸುವ ಹಂತದಲ್ಲಿದ್ದು ಕೇವಲ ದೊಡ್ಡ ಗುಂಡಿಗಳನ್ನು ಮಾತ್ರ ನೆಪ ಮಾತ್ರಕ್ಕೆ ಮುಚ್ಚಲಾಗಿದೆ. ರಸ್ತೆಯುದ್ದಕ್ಕೂ ಇರುವ ಹಲವು ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ. ಇನ್ನೂ ಈಗ ಮಾಡಿರುವ ತುಂಡು ಗುತ್ತಿಗೆ ಕಾಮಗಾರಿ ಕಳಪೆ ಮಟ್ಟದ್ದಾಗಿದೆ. ಹೀಗಾದರೆ ರಸ್ತೆ ಸರಿಪಡಿಸುವ ಅಗತ್ಯವಾದರೂ ಏನಿತ್ತು? ಎಂದು ಗ್ರಾಮದ ಸಂಗಯ್ಯ ಮೇಲಿನಮಠ, ಗುಂಡಪ್ಪಗೌಡ ಬೋರಾವತ್ ಪ್ರಶ್ನಿಸಿ ತಮ್ಮ ಆಕ್ರೋಶ ಹಾಗೂ ಅಸಮಾಧಾನ ವ್ಯಕ್ತಪಡಿಸಿದರು.ದೇವರಹಿಪ್ಪರಗಿ ಪಟ್ಟಣದಿಂದ ದೇವೂರ, ಮಣೂರ, ಜಾಲವಾದ ಗ್ರಾಮಗಳವರೆಗೆ ರಸ್ತೆ ಅಷ್ಟೇನೂ ಹಾಳಾಗಿಲ್ಲ. ಅಲ್ಲಿ ಕೆಲವು ಕೆಲವು ಗುಂಡಿಗಳನ್ನು…
ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ಪ್ರತಿಭಟನೆ ಕೈಗೊಂಡ ಹಿನ್ನೆಲೆಯಲ್ಲಿ ಆರೋಪಿಯ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ ಪ್ರಕರಣ ದೇವರಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯ ಬೋರಗಿ ಗ್ರಾಮದಲ್ಲಿ ಜರುಗಿದೆ.ಸಿಂದಗಿ ತಾಲ್ಲೂಕಿನ ಬೋರಗಿ ಗ್ರಾಮದಲ್ಲಿ ಭಾನುವಾರ ಈ ಘಟನೆ ಜರುಗಿದೆ. ಗ್ರಾಮದ ಈರಣ್ಣ ರಟಗಲ್ ಎಂಬ ಕಾಂಗ್ರೆಸ್ ಮುಖಂಡ ತನ್ನ ಫೇಸ್‌ಬುಕ್ ಜಾಲತಾಣದಲ್ಲಿ ಪಂಚಮಸಾಲಿ ಸಮಾಜದ ೨ಎ ಮೀಸಲಾತಿ ಅಂಗವಾಗಿ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಲಾಠಿ ಚಾರ್ಜ್ ಮಾಡಿಸಿದ ಮುಖ್ಯಮಂತ್ರಿ ಎಂಬ ಹೇಳಿಕೆಯೊಂದಿಗೆ ಅವಹೇಳನಕಾರಿ ಹಾಗೂ ಪ್ರಚೋದನಾತ್ಮಕ ಭಾಷೆಯನ್ನು ಬಳಸಿ ಪೋಸ್ಟ್ ಮಾಡಿದ್ದು, ಇದನ್ನು ಖಂಡಿಸಿ ಬೋರಗಿ ಗ್ರಾಮದ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ಈರಣ್ಣ ರಟಗಲ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹಾಗೂ ಆರೋಪಿಯನ್ನು ಗಡಿಪಾರು ಮಾಡಲು ಒತ್ತಾಯಿಸಿ ಗ್ರಾಮದಲ್ಲಿ ಪ್ರತಿಭಟನೆ ಕೈಗೊಂಡರು.ಪ್ರತಿಭಟನೆ ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನ ಜಾವದವರೆಗೆ ಮುಂದುವರೆದ…
