Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಆಧ್ಯಾತ್ಮಿಕತೆಯಿಂದ ಮನಸ್ಸಿಗೆ ಪ್ರಶಾಂತತೆ :ಶಂಕರಗೌಡ
(ರಾಜ್ಯ ) ಜಿಲ್ಲೆ

ಆಧ್ಯಾತ್ಮಿಕತೆಯಿಂದ ಮನಸ್ಸಿಗೆ ಪ್ರಶಾಂತತೆ :ಶಂಕರಗೌಡ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ಬಸವನಬಾಗೇವಾಡಿ: ಇಂದಿನ ಒತ್ತಡದ ಜೀವನದಲ್ಲಿ ಜಾತ್ರಾ-ಉತ್ಸವದಂಗವಾಗಿ ಹಮ್ಮಿಕೊಳ್ಳುವ ಪ್ರವಚನ-ಪುರಾಣ ಕಾರ್ಯಕ್ರಮಗಳಲ್ಲಿ ಭಾಗಿಯಾದರೆ ಮನಸ್ಸು ಆಧ್ಯಾತ್ಮಿಕ ಅಂಶಗಳ ಕಡೆಗೆ ಹೋಗುವದರಿಂದಾಗಿ ಮನಸ್ಸಿಗೆ ಪ್ರಶಾಂತತೆ ಸಿಗುವ ಜೊತೆಗೆ ಮನಸ್ಸನ್ನು ಶುದ್ಧಗೊಳಿಸುವದಕ್ಕೆ ಪೂರಕ ಎಂದು ರಾಷ್ಟ್ರೀಯ ಬಸವಸೈನ್ಯಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ಗೌರಿ-ಶಂಕರ ದೇವಸ್ಥಾನದ ಜಾತ್ರಾಮಹೋತ್ಸವದಂಗವಾಗಿ ಹನ್ನೊಂದು ದಿನಗಳ ಕಾಲ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದ ಮಂಗಲ ಕಾರ್ಯಕ್ರಮದಂಗವಾಗಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತ್ರೆ-ಉತ್ಸವಗಳು ಪ್ರತಿ ಕುಟುಂಬದ ಸದಸ್ಯರೊಂದಿಗೆ ಸಂಬಂಧಿಕರನ್ನು ಪರಸ್ಪರ ಭೇಟಿ ಮಾಡಲು ಸಹಕಾರಿಯಾಗಿವೆ. ಈ ಉತ್ಸವಗಳು ನಾಡಿನ ಸಂಸ್ಕ್ರತಿಯನ್ನು ಬಿಂಬಿಸುತ್ತವೆ. ನಿರಂತರವಾಗಿ ಇಂತಹ ಉತ್ಸವಗಳು ನಡೆಯುವಂತಾಗಬೇಕೆಂದರು.
ಬಸವೇಶ್ವರ ಪ್ರತಿಮೆಗೆ ಪುಷ್ಪಾರ್ಚನೆಗೈದ ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಮಾತನಾಡಿ, ಗೌರಿ-ಶಂಕರ ದೇವಸ್ಥಾನದ ಜಾತ್ರಾಮಹೋತ್ಸವ ವರ್ಷದಿಂದ ವರ್ಷಕ್ಕೆ ಎಲ್ಲ ಜನರ ಸಹಕಾರದೊಂದಿಗೆ ಅದ್ದೂರಿಯಾಗಿ ನಡೆಯುತ್ತಿರುವದು ಶ್ಲಾಘನೀಯ. ಪ್ರವಚನ ಕಾರ್ಯಕ್ರಮದಲ್ಲಿ ನಿತ್ಯವೂ ಜ್ಞಾನ ದಾಸೋಹದ ಜೊತೆಗೆ ಅನ್ನದಾಸೋಹ ಹಮ್ಮಿಕೊಂಡಿರುವದು ಜಾತ್ರಾಮಹೋತ್ಸವದ ಸಮಿತಿಯ ಕಾರ್ಯ ಮೆಚ್ಚುವಂತಹದು. ಪ್ರತಿ ವರ್ಷ ನಿರಂತರವಾಗಿ ಇದೇ ರೀತಿಯಲ್ಲಿ ಜಾತ್ರೆ ಸಾಗುವಂತಾಗಲೆಂದರು.
ಸಾನಿಧ್ಯ ವಹಿಸಿದ್ದ ಘಟಪ್ರಭದ ಚನ್ನಬಸವ ದೇವರು ಮಾತನಾಡಿ, ಆಧ್ಯಾತ್ಮಿಕತೆಯಿಂದ ಮುಕ್ತಿ ಮಾರ್ಗ ಕಾಣಬೇಕು. ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಆಧ್ಯಾತ್ಮಿಕತೆಯಿಂದ ಸಾರ್ಥಕತೆ ಮಾಡಿಕೊಳ್ಳಬೇಕು. ದೂರದರ್ಶನದಿಂದ ಹೊರಬಂದು ಧರ್ಮದರ್ಶನಕ್ಕೆ ಬಂದರೆ ಸುಖ-ನೆಮ್ಮದಿಯನ್ನು ಕಾಣಬಹುದು ಎಂದರು.
ಸಾನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಜಾತ್ರಾ ಸಮಿತಿಯ ಸದಸ್ಯರ, ಈ ಭಾಗದ ಜನರ ನಿಸ್ವಾರ್ಥ ಸೇವೆ, ತ್ಯಾಗ, ಒಗ್ಗಟಿನಿಂದ ಗೌರಿ-ಶಂಕರ ದೇವರ ಜಾತ್ರಾಮಹೋತ್ಸವ ಯಶಸ್ವಿಯಾಗುತ್ತಿದೆ. ಪಡಶೆಟ್ಟಿ ಬಾಂಧವರು ದೇವಸ್ಥಾನದಲ್ಲಿ ನೂತನ ಮೂರ್ತಿಗಳನ್ನು ಕಳೆದ ವರ್ಷ ಮಾಡಿಸಿದ್ದರು. ಈ ಸಲ ಮೂರ್ತಿಗಳಿಗೆ ಬೆಳ್ಳಿ ಅಲಂಕಾರಕ್ಕಾಗಿ ಐದು ಕೆಜಿ ಬೆಳ್ಳಿ ಕಾಣಿಕೆ ನೀಡುತ್ತಿರುವದು ಈ ಬಾಂಧವರು ಗೌರಿ-ಶಂಕರ ದೇವರ ಮೇಲಿಟ್ಟಿರುವ ಭಕ್ತಿ ಮೆಚ್ಚುವಂತಹದ್ದು. ದೇವರ ಮೇಲೆ ಭಕ್ತಿ ಇದ್ದರೆ ದೇವರ ಕೃಪೆ ಸದಾ ನಮ್ಮ ಮೇಲೆ ಇರುತ್ತದೆ ಎಂದರು.
ಪ್ರವಚನಕಾರ ರಾಚಯ್ಯ ಶಾಸ್ತ್ರೀಜಿ, ಮುಖಂಡರಾದ ಸಂಗಮೇಶ ಓಲೇಕಾರ, ರವಿ ರಾಠೋಡ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜನಪದ ಗಾಯಕ ಬಸವರಾಜ ಹಾರಿವಾಳ ಮಾತನಾಡಿ ಸುಶ್ರಾವ್ಯವಾಗಿ ಜನಪದ ಗೀತೆ ಹಾಡಿದರು.
ವೇದಿಕೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ವಕೀಲ ಬಿ.ಕೆ.ಕಲ್ಲೂರ, ಪುರಸಭೆ ಸದಸ್ಯರಾದ ರವಿ ಪಟ್ಟಣಶೆಟ್ಟಿ, ಅಶೋಕ ಗುಳೇದ, ಪ್ರವೀಣ ಪೂಜಾರಿ,ಮುಖಂಡರಾದ ಶೇಖರಗೌಡ ಪಾಟೀಲ, ಎಂ.ಜಿ.ಆದಿಗೊಂಡ, ಶ್ರವಣಕುಮಾರ ಅಗರವಾಲ, ನಾಗರಾಜ ಪಟ್ಟಣಶೆಟ್ಟಿ, ಪತ್ರಕರ್ತರಾದ ಪ್ರಕಾಶ ಬೆಣ್ಣೂರ, ಬಸವರಾಜ ನಂದಿಹಾಳ, ಜಾತ್ರಾ ಕಮಿಟಿಯ ಶ್ರೀಶೈಲ ಮಠಪತಿ, ಈರಣ್ಣ ಪಡಶೆಟ್ಟಿ, ನಿಂಗಪ್ಪ ಕುಳಗೇರಿ, ಶಾಂತಪ್ಪ ಪಡಶೆಟ್ಟಿ, ಸಂಗಪ್ಪ ನಾಯ್ಕೋಡಿ ಇತರರು ಇದ್ದರು. ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಜನಪದ ಗಾಯಕ ಬಸವರಾಜ ಹಾರಿವಾಳ, ರಾಜ್ಯ ಸಹಕಾರಿ ಗ್ರಾಹಕರ ಮಹಾಮಂಡಳದ ನೂತನ ನಿರ್ದೇಶಕ ಬಾಲಚಂದ್ರ ಮುಂಜಾನೆ, ಸಹಕಾರಿ ರತ್ನ ಪ್ರಶಸ್ತಿ ಪುರಸ್ಕ್ರತ ಲೋಕನಾಥ ಅಗರವಾಲ, ಹನ್ನೊಂದು ದಿನಗಳ ಕಾಲ ಪ್ರವಚನಗೈದ ಪ್ರವಚನಕಾರ ರಾಚಯ್ಯ ಶಾಸ್ತ್ರೀಜಿ, ಸಂಗೀತ ಕಲಾವಿದರನ್ನು, ಜಾತ್ರೆಗೆ ಶ್ರಮಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಜಾತ್ರೆಯಂಗವಾಗಿ ಮಕ್ಕಳಿಗೆ, ಮಹಿಳೆಯರಿಗೆ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೈ.ಎನ್.ಮಿಣಜಗಿ ಸ್ವಾಗತಿಸಿದರು. ಪಿ.ಎಸ್.ಬಾಗೇವಾಡಿ ನಿರೂಪಿಸಿದರು. ಶ್ರೀಕಾಂತ ಪಡಶೆಟ್ಟಿ ವಂದಿಸಿದರು. ನಂತರ ಮೊಂಬತ್ತಿ ದೀಪ ಬೆಳಗಿದ್ದು ಹಾಗೂ ಗೌರಿ-ಶಂಕರ ದೇವರಿಗೆ ಮನೆಯಿಂದ ವಿವಿಧ ಮಹಿಳೆಯರು ಮಾಡಿಕೊಂಡು ತಂದಿದ್ದ ಹೂರಣ ಕಡುಬು, ಅನ್ನ-ಸಾಂಬಾರ ಪ್ರಸಾದವನ್ನು ಜನರು ಸ್ವೀಕರಿಸಿದ್ದು ವಿಶೇಷ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026
    In ದಿನಪತ್ರಿಕೆ
  • ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ
    In (ರಾಜ್ಯ ) ಜಿಲ್ಲೆ
  • ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಕಲಾಶ್ರೀ ಚವ್ಹಾಣ ಗೆ ಅಭಿನಂದಿಸಿದ ಡಾ.ಸುರೇಖಾ
    In (ರಾಜ್ಯ ) ಜಿಲ್ಲೆ
  • ಸಚಿವ ಎಂ. ಬಿ. ಪಾಟೀಲ ಅವರ ಪ್ರವಾಸ ವಿವರ
    In (ರಾಜ್ಯ ) ಜಿಲ್ಲೆ
  • ನ್ಯಾಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿಖರ ತನಿಖೆ & ದೃಢ ಸಾಕ್ಷಿ
    In (ರಾಜ್ಯ ) ಜಿಲ್ಲೆ
  • ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದಪೊಲೀಸ್ ಅಧಿಕಾರಿಗಳು
    In (ರಾಜ್ಯ ) ಜಿಲ್ಲೆ
  • ಯಡ್ರಾಮಿ ಬಸವೇಶ್ವರ ಜಾತ್ರೆಯ ಅದ್ದೂರಿ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಪ್ರಕ್ರಿಯೆಯ ಪ್ರತಿ ಹಂತ ವೀಕ್ಷಿಸಿದ ಜಿ.ಪಂ. ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.