ಉದಯರಶ್ಮಿ ದಿನಪತ್ರಿಕೆ
ಚಡಚಣ: ಹೊಸ್ತಿಲ ಹುಣ್ಣಿಮೆಯ ನಿಮಿತ್ತ ರೇವತಗಾಂವ ಗ್ರಾಮದ ಶ್ರೀ ಖಂಡೋಬಾ ದೇವರು ಹಾಗೂ ಅವರ ಧರ್ಮಪತ್ನಿಯರಾದ ಮಾಲಸಾಬಾಯಿ ಮತ್ತು ಭಾನುಬಾಯಿ ದೇವರುಗಳ ಜಾತ್ರೆಯು ಎರಡು ದಿನಗಳ ಕಾಲ ಅದ್ಧೂರಿಯಾಗಿ ನೆರವೇರಿತು.
ಡಿ.೧೪ ರ ಶನಿವಾರದಂದು ಬೆಳಗಿನ ಜಾವ ೫ ಗಂಟೆಗೆ ರುದ್ರಾಭಿಷೇಕ ಪೂಜೆ ಹಾಗೂ ಭಕ್ತರಿಂದ ದೀಡ ನಮಸ್ಕಾರ ನಡೆಯಿತು. ಮಧ್ಯಾಹ್ನ ೩ ಗಂಟೆಗೆ ಶ್ರೀ ಖಂಡೋಬಾ ದೇವರ ಪಲ್ಲಕ್ಕಿ ಮಹೋತ್ಸವವು ವಿವಿಧ ವಾಧ್ಯವೈಭಗಳೊಂದಿಗೆ ಹಾಗೂ ಸುಮಂಗಲೆಯರ ಆರತಿ ಮತ್ತು ಪೂಜಾರಿಗಳ ಜ್ಯೋತಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಖಂಡೋಬಾ ದೇವರ ಪಾದಗಟ್ಟಿ ತಲುಪಿತು. ಅಲ್ಲಿ ಪೂಜಾ ಕಾರ್ಯಕ್ರಮ ಮತ್ತು ನೈವೇದ್ಯ ಜರುಗಿದವು. ನಂತರ ಮೆರವಣಿಗೆಯು ಕಂದಲಗಾAವದ ೧೫ ಜನ ಪ್ರಸಿದ್ಧ ಕುದುರೆಗಾರರು ‘ಶ್ರೀ ಖಂಡೋಬಾ ದೇವರ ಅವತಾರದೊಂದಿಗೆ ಸವಾರಿ ಮಾಡಿದರು. ಸಂಜೆ ೮ ಗಂಟೆಯಿಂದ ರವಿವಾರ ನಸುಕಿನ ಜಾವ ೪ ಗಂಟೆಯವರೆಗೆ ಸಾಂಗಲಿ ಜಿಲ್ಲೆಯ ಆಸಂಗಿ ಗ್ರಾಮದ ಬಾಳು ವಾಫೆ ಮತ್ತು ಮಾಳಸಾ ಮುರಳಿ ಹಾಗೂ ಮಂಗಸೂಳಿ ಇವರ ನೇತೃತ್ವದಲ್ಲಿ ಖಂಡೋಬಾ ದೇವರ ಚರಿತ್ರಾಮೃತ ಜರುಗಿತು.
ರವಿವಾರದ ನಸುಕಿನ ಜಾವ ೪ ಗಂಟೆಯಿಂದ ೬ ಗಂಟೆಯವರೆಗೆ ‘ಲಂಗೂರ ಹರಿಯುವ’ ಕಾರ್ಯಕ್ರಮ ನೆರವೇರಿತು. ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.


