ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕ ಡಾ|| ಹೆಡಗೆವಾರ ಅವರ ಕಟ್ಟಾ ಅನುಯಾಯಿ ಅಲ್ಲದೇ ೧೯೪೦ ರಲ್ಲಿ ಸಂಘದ ಶಾಖೆಯನ್ನು ಕೊಲ್ಹಾರದಲ್ಲಿ ಪ್ರಾರಂಭಿಸಿದ ಪ್ರಖರ ಹಿಂದುತ್ವವಾದಿ ಸನಾತನ ಧರ್ಮಕ್ಕಾಗಿ ನಿಸ್ವಾರ್ಥ ಸೇವೆಯಿಂದ ತಮ್ಮದೆಲ್ಲವನ್ನೂ ಧಾರೆಯೆರದು ಜೀವಿಸಿದ ಅಪರೂಪದ ವ್ಯಕ್ತಿ ಡಾ.ಮಲ್ಲೇಶಪ್ಪ ಬಡಿಗೇರ ನಮಗೆಲ್ಲ ಮಾದರಿಯಾಗಿದ್ದರು ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹೇಳಿದರು.
ಇತ್ತೀಚೆಗೆ ಅವರು ನಿಧನರಾದ ಪ್ರಯುಕ್ತ ಪಟ್ಟಣದ ಸಂಘದ ಕಾರ್ಯಕರ್ತರು ದ್ಯಾಮವ್ವದೇವಿಯ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಶೃದ್ದಾಂಜಲಿ ಸಭೆಯನ್ನು ಉದ್ದೇಸಿಸಿ ಮಾತನಾಡಿದ ಅವರು ಆರ್.ಎಸ್.ಎಸ್ ನ ತತ್ವ ಸಿದ್ದಾಂತಗಳನ್ನು ಸಮಾಜಮುಖಿ ಕಾರ್ಯಗಳನ್ನು ಉದಾತ್ತ ಚಿಂತನೆಯ ಪರಿಕಲ್ಪಣೆಗಳನ್ನು ಅದರ ಧ್ಯೆಯೋದ್ದೇಶಗಳನ್ನು ತಮ್ಮ ಜೀವಿತಾವಧಿಯ ಕೊನೆಯ ದಿನಗಳವರೆಗೂ ಪರಿಚಯವಿಲ್ಲದ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ಸಂಘಟಣೆಯತ್ತ ಒಲವು ತೋರಿಸುವ ಆಸಕ್ತಿಯನ್ನು ಬೆಳೆಸಿ ಹಲವಾರು ಸಂಘದ ಕಾರ್ಯಕರ್ತರನ್ನು ಪಟ್ಟಣ ಸೇರಿದಂತೆ ನಾಡಿಗೆ ಪರಿಚಯಿಸಿದ ಉತ್ತಮ ವಾಕ್‌ಚಾತುರ್ಯದ ಡಾ|| ಮಲ್ಲೇಶಪ್ಪ ಬಡಿಗೇರ ಅವರು ಲಿಂಗೈಕ್ಯರಾಗಿರಬಹುದು ಆದರೆ ಅವರು ಬಿತ್ತಿದ ಬೀಜ ಅಜರಾಮರವಾಗಿರುತ್ತದೆ ಅಲ್ಲಿಯತನಕ ಅವರ ನೆನಪೂ ಕೂಡ ಅಜರಾಮರ ಎಂದು ಹೇಳಿದರು.
ಪಟ್ಟಣದಲ್ಲಿ ಆಯುರ್ವೇದ ವೈದ್ಯರಾಗಿ, ಗ್ರಾಮ ಪಂಚಾಯತ್ ಸದಸ್ಯರಾಗಿ ೧೯೭೨ ರಲ್ಲಿ ಜನಸಂಘದಿಂದ ಸ್ಪರ್ಧಿಸಿದ್ದರು. ೧೯೭೫ ರ ತುರ್ತುಪರಿಸ್ಥಿತಿಯ ಕಾಲದಲ್ಲಿ ನಾನು ಸೇರಿದಂತೆ ಡಾ.ಮಲ್ಲೇಶಪ್ಪ ಬಡಗೇರ, ಎಸ್.ಬಿ ಪತಂಗಿ, ಗಜಾನನ ಕರಣೆ ಮತ್ತು ದುಂಡಪ್ಪ ಮಾಸ್ತರ ಕೊಠಾರಿಯವರ ಜೊತೆಗೂಡಿ ಒಂದು ತಿಂಗಳು ಕಾಲ ಜೈಲುವಾಸವನ್ನೂ ಅನುಭವಿಸಿದ್ದನ್ನು ಬೆಳ್ಳುಬ್ಬಿ ಸ್ಮರಿಸಿಕೊಂಡರು. ಮಲ್ಲೇಶಪ್ಪ ಬಡಗೇರ ಅವರ ಅಗಲಿಕೆಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ ಕೊಲ್ಹಾರದಿಂದ ಒಬ್ಬ ಸಾಮಾನ್ಯ ವ್ಯಕ್ತಿ ಶಾಸಕನಾಗಿ ನಾಡಿನ ಸಚಿವನಾಗಿ ಜನಪರ ಸೇವೆಗೈಯ್ಯಲು ಅನುವು ಮಾಡಿ ಸಮಾಜದಲ್ಲಿ ಗಣ್ಯ ವೈಕ್ತಿಯಾಗಲು ಇವರ ಮಾರ್ಗದರ್ಶನದಿಂದ ಸಾಧ್ಯವಾಗಿದೆ ಎಂದು ಅವರು ಸ್ಮರಿಸಿಕೊಂಡರು.
ಈ ಸಂದರ್ಭದಲ್ಲಿ ದುಂಡಪ್ಪ ಚೌಡಪ್ಪಗೊಳ, ಚಂದ್ರಶೇಖರಯ್ಯ ಗಣಕುಮಾರ, ಟಿ.ಟಿ. ಹಗೇದಾಳ, ಅಪ್ಪಾಸಿ ಕೊಠಾರಿ, ಪುಂಡಲೀಕ ಕಂಬಾರ, ರಾಮಣ್ಣ ಬಾಟಿ, ಶ್ರೀಶೈಲ ಕಂಬಿ, ಗುರುಪಾದ ಗಣಿ, ಸಂಗಪ್ಪ ಚಿತ್ತಾಪುರ, ಈ.ಬ.ಗಣಕುಮಾರ ಮತ್ತು ಸಂಘದ ಸ್ವಯಂ ಸೇವಕರು ಸಹಿತ ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.
ಒಂದು ನಿಮಿಷದ ಮೌನಾಚರಣೆಯನ್ನು ಮಾಡಲಾಯಿತು.

