Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಖಾಜಾ ಬಂಧನವಾಜ ದರ್ಗಾದ ಪೀಠಾಧಿಪತಿಗಳಾದ ಸೈಯದ್ ಅಲಿ ಅಲ್ ಹುಸೇನಿ @ ಆಲಿಬಾಬಾ ರವರನ್ನು ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಹಾಗೂ ವಕ್ಫ್ ಮಂಡಳಿಗೆ ಸುನ್ನಿ ಉಲೆಮಾ ಕೊಟಾದಡಿ ಅರ್ಹ ನಿಷ್ಠಾವಂತ ಮೌಲಾನಾರನ್ನು ನೇಮಕಕ್ಕೆ ಸೂಚಿಸಲು ಇಂದು ಹಾಶಿಂಪಿರ ದರ್ಗಾ ಆವರಣದಲ್ಲಿ ಸಭೆ ನಡೆಸಿ ಸಭಾಪತಿ ಯು ಟಿ ಖಾದರ ರವರಿಗೆ ಎಮ್‌ಎಮ್‌ಡಿಸಿ ವತಿಯಿಂದ ಮನವಿ ಸಲ್ಲಿಸಲಾಯಿತು.ಸೈಯದ್ ಅಲಿ ಅಲ್ ಹುಸೇನಿ ಖಾಜಾ ಬಂಧನವಾಜ್ ಯೂನಿವರ್ಸಿಟಿಯ ಚಾನ್ಸಲರ್ ಆಗಿ ಯಶಸ್ವೀ ಆಡಳಿತ ನಡೆಸಿದ್ದು, ಸಮಾಜದ ಸಾಂಸ್ಕೃತಿಕ, ಧಾರ್ಮಿಕ, ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಇಸ್ಲಾಮಿಕ್ ಅಧ್ಯಯನದಲ್ಲಿ ಪಿಎಚ್.ಡಿ ಪದವಿ ಹೊಂದಿರುವ ಅವರು, ಸಮಾಜದ ವಿವಿಧ ವಿಭಾಗಗಳ ಒಳಿತಿಗಾಗಿ ಹಲವು ಕಾರ್ಯಗಳಿಗೆ ಮುಂಚೂಣಿಯಲ್ಲಿದ್ದಾರೆ.ಆಲಿಬಾಬಾ ರವರ ಆಯ್ಕೆ ವಕ್ಫ್ ಆಸ್ತಿಗಳ ಸಮರ್ಪಕ ನಿರ್ವಹಣೆ, ವಕ್ಫ್ ಮಂಡಳಿಯ ಸುಸಂಸ್ಕೃತ ಆಡಳಿತ, ಮತ್ತು ರಾಜ್ಯದ ಧಾರ್ಮಿಕ ಸಮುದಾಯಗಳ ಏಳಿಗೆಗೆ ಮಾರ್ಗದರ್ಶಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಮುಖಂಡರು ಯು ಟಿ ಖಾದರ…

Read More

ಉದಯರಶ್ಮಿ ದಿನಪತ್ರಿಕೆ ತಾಳಿಕೋಟೆ: ಮಾನವನಿಗೆ ಜನಪದದಿಂದ ಉತ್ತಮ ಸಂಸ್ಕಾರ ದೊರೆಯುತ್ತದೆ. ಜನಪದರು ರೂಢಿಸಿಕೊಂಡಿರುವ ಹಬ್ಬದಾಚರಣೆಗಳು ಮಾನವನ ಜೀವನದ ಎಲ್ಲ ಮಜಲುಗಳಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಸುತ್ತದೆ. ನಂಬಿಕೆ, ಸಂಪ್ರದಾಯ, ಆಚರಣೆಗಳು ಮಾನವನಲ್ಲಿ ಶ್ರೇಷ್ಠವಾದ ಮೌಲ್ಯಗಳನ್ನು ತುಂಬುತ್ತವೆ ಎಂದು ಸಾಂಸ್ಕೃತಿಕ ಚಿಂತಕ ಮೋಹನ ಕಟ್ಟಿಮನಿ ಅಭಿಪ್ರಾಯಪಟ್ಟರು.ಮಿಣಜಗಿ ಗ್ರಾಮದೇವತೆ ಜಾತ್ರೆ ಪ್ರಯುಕ್ತ ಜಾತ್ರಾ ಸಮಿತಿ ಸಹಯೋಗದಲ್ಲಿ ಪಡಗಾನೂರಿನ ಮಾತೋಶ್ರೀ ಸುಗಲಾಬಾಯಿಗೌಡತಿ ಪಾಟೀಲ ಜಾನಪದ ಪ್ರತಿಷ್ಠಾನ ಏರ್ಪಡಿಸಿದ “ಜಿಲ್ಲಾ ಮಟ್ಟದ ಜಾನಪದ ಉತ್ಸವ” ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಜಾನಪದ ವಿಚಾರಗಳನ್ನು ಬದಿಗೊತ್ತಿ ಬದುಕುತ್ತಿರುವುದರಿಂದ ಸಮಾಜದಲ್ಲಿ ಆಘಾತಕಾರಿ ಘಟನೆಗಳು ನಡೆಯುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.ಉದ್ಘಾಟನೆ ನೆರವೇರಿಸಿ ಮಾತನಾಡಿದ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸಂಚಾಲಕ ಸಾಹಿತಿ ದೊಡ್ಡಣ್ಣ ಭಜಂತ್ರಿ, ಅಂದಿನ ಒಕ್ಕಲು ಮಕ್ಕಳಿಂದ ಪ್ರಾರಂಭವಾದ ಹಾಡುಗಳು ಜಾನಪದ ಸಾಹಿತ್ಯದ ಮೂಲ ರಚನೆಗಳಾಗಿವೆ. ಜನಪದರು ಜೀವನವನ್ನು ಹಾಡುತ್ತ, ಆಡುತ್ತ ಪ್ರೀತಿಯಿಂದ ಅನುಭವಿಸಿದರು. ಆಗಿನ ಈಗ ಇಲ್ಲದಿರುವುದು ಆತಂಕಕಾರಿ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ವಿಜಯಪುರ…

Read More

ಕೂಡಗಿಯಲ್ಲಿ ೪೮ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ಶಿವಾನಂದ ಪಾಟೀಲ ಮಾಹಿತಿ ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಎನ್‌ಟಿಪಿಸಿಯಿಂದ ತೆರಿಗೆ ಹಣ ಬರಲ್ಲ ಎಂದು ಆರಂಭದಲ್ಲಿ ಕೆಲವರು ವಾದಿಸಿದ್ದರು. ಹಾಗಂತ ನಾವೂ ಸುಮ್ಮನೇ ಕುಳಿತಿದ್ದರೆ ನಮ್ಮ ಪಾಲಿನ ಹಣ ಧಾರವಾಡ ಜಿಲ್ಲೆಗೆ ಹೋಗುತ್ತಿತ್ತು. ಕೊನೆಗೂ ವಾರ್ಷಿಕ ಕೋಟ್ಯಾಂತರ ರೂ., ತೆರಿಗೆ ಈ ಭಾಗದ ೫ ಗ್ರಾಮಗಳಿಗೆ ಸಿಗುವಂತೆ ಮಾಡಲಾಯಿತು. ಅದರಲ್ಲಿ ಸಿಂಹಪಾಲು ಕೂಡಗಿ ಗ್ರಾಮಕ್ಕೆ ಲಭ್ಯವಾಗಿದೆ. ಹೀಗಾಗಿ ಇದು ಬೆಂಗಳೂರು ಬಳಿಯ ದೇವನಹಳ್ಳಿಯ ನಂತರ ರಾಜ್ಯದಲ್ಲೇ ಹೆಚ್ಚಿನ ತೆರಿಗೆ ಪಡೆಯುವ ಎರಡನೇ ಗ್ರಾಮವಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.ತಾಲೂಕಿನ ಕೂಡಗಿ ಗ್ರಾಮದಲ್ಲಿ ಎನ್‌ಟಿಪಿಸಿ ಮತ್ತಿತರ ತೆರಿಗೆಯ ೨.೦೧.೭೧.೦೦೦ ಅನುದಾನದಿಂದ ವಿವಿಧ ೪೮ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಸ್ಥಳೀಯರಿಗೆ ಉದ್ಯೋಗಾವಕಾಶ ಸೇರಿದಂತೆ ಈ ಭಾಗದ ಎನ್‌ಟಿಪಿಸಿ ಮೇಲೆ ಬಹಳಷ್ಟು ನಿರೀಕ್ಷೆ ಇತ್ತು. ಆದರೆ ಅಲ್ಲಿ ಇಂದು ಬರೀ ಬಿಹಾರ, ಎಂಪಿ, ಯುಪಿ ರಾಜ್ಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸದಲ್ಲಿದ್ದಾರೆ. ಕಾರಣ ಈ ಭಾಗದ…

Read More

ಯೋಗಸಾಧಕ ಪಂಚಾಕ್ಷರಿ ಮಿಂಚನಾಳ ನೇತೃತ್ವದಲ್ಲಿ ಧ್ಯಾನ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಬೌದ್ಧಿಕ, ಶಾರೀರಿಕ ಮತ್ತು ಮಾನಸಿಕ ಸಾಧನೆಗೆ ಧ್ಯಾನವು ಅಗತ್ಯವಾಗಿದೆ ಎಂದು ಯೋಗಸಾಧಕ ಪಂಚಾಕ್ಷರಿ ಮಿಂಚನಾಳ ಹೇಳಿದರು.ಪಟ್ಟಣದ ಸಿದ್ಧೇಶ್ವರ ಸ್ವಾಮೀಜಿ ಕಾಲೇಜು ಆವರಣದಲ್ಲಿ ಶನಿವಾರ ಜರುಗಿದ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಧ್ಯಾನ ಯೋಗದ ಅಂಗಗಳಲ್ಲಿ ಒಂದು. ಧ್ಯಾನವೇ ಮೋಕ್ಷಕ್ಕೆ ಮೂಲಸಾಧನ ಎಂದು ಹಿಂದೆ ನಮ್ಮ ಪರಂಪರೆಯ ಹೇಳಿಕೆಯಾಗಿತ್ತು. ಆದರೆ ಈಗ ನಮ್ಮ ಕಣ್ಣಿಗೆ ಕಾಣದ ಮೋಕ್ಷ ಬೇಡ ನಮ್ಮ ದೈನಂದಿನ ಜೀವನಕ್ಕೆ ಶಾಂತಿಯ ಅಗತ್ಯವಾಗಿದೆ. ಅದಕ್ಕಾಗಿ ಧ್ಯಾನ ಅವಶ್ಯವಾಗಿದೆ. ಜೂನ್ ೨೧ ಯೋಗದಿನವಾದರೆ ಡಿಸೆಂಬರ್ ೨೧ ಧ್ಯಾನ ದಿನವಾಗಿದ್ದು ಭೂಮಿಯ ಪರಿಭ್ರಮಣೆಯ ಆಧಾರದ ಮೇಲೆ ಅತ್ಯಂತ ಸಮಂಜಸವಾಗಿದೆ ಎಂದರು.ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ಪ್ರಾಸ್ತಾವಿಕವಾಗಿ ಮಾತನಾಡಿ, ಧ್ಯಾನ ಹಾಗೂ ಯೋಗ ಒಂದಕ್ಕೊಂದು ಪೂರಕವಾಗಿ ನಮ್ಮ ಮನಸ್ಸು ಹಾಗೂ ಶರೀರದ ಮೇಲೆ ಬೀರುವ ಪ್ರಭಾವದ ಬಗ್ಗೆ ತಿಳಿಸಿದರು.ಇದೇ ಸಂದರ್ಭದಲ್ಲಿ ಮಕ್ಕಳಿಂದ ಪ್ರಾರ್ಥನೆ ನಂತರ ಯೋಗಸಾಧಕರಿಂದ…

Read More

ಪ್ರೇರಣಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಮಕ್ಕಳ ಬಳಗದ ೪೮ನೇ ಚಿಣ್ಣರ ನುಡಿಸಿರಿ ಸಮಾರಂಭ | ಪುಸ್ತಕ ಮಿತ್ರ ಪ್ರಶಸ್ತಿ ಪ್ರದಾನ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಮಕ್ಕಳ ಬಳಗ ಸುವರ್ಣ ಸಂಭ್ರಮದ ಹೊಸ್ತಿಲಲ್ಲಿದೆ. ಇದರ ಸಂಸ್ಥಾಪಕರಾದ ಮಕ್ಕಳ ಸಾಹಿತಿ ಹ.ಮ.ಪೂಜಾರ ತಮ್ಮ ಬದುಕಿನ ೫೦ವರ್ಷದ ಅವಧಿ ಮಕ್ಕಳ ಏಳ್ಗೆಗಾಗಿ ವಿವಿಧ ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲು ಸವೆಸಿದ್ದಾರೆ. ಇವರು ಇಷ್ಟು ವರ್ಷಗಳು ಯಾವುದೇ ಪ್ರಾಯೋಜಿತ ಸಹಕಾರದಿಂದ ಸಾಹಿತ್ಯ ಕಾರ್ಯಕ್ರಮಗಳನ್ನು ಮಾಡಿಲ್ಲ. ತಮ್ಮ ಪಿಂಚಣಿ ಹಣದಿಂದ ಮಕ್ಕಳಿಗೆ ಸಾಹಿತ್ಯ ರಸದೌತಣ ಉಣಬಡಿಸುತ್ತಿದ್ದಾರೆ ಎಂದು ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಪ್ರಶಂಸಿದರು.ಪಟ್ಟಣದ ಹೊರವಲಯದ ರಾಂಪೂರ ರಸ್ತೆಯಲ್ಲಿನ ಪ್ರೇರಣಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಮಕ್ಕಳ ಬಳಗ ಹಮ್ಮಿಕೊಂಡಿದ್ದ ೪೮ನೇ ಚಿಣ್ಣರ ನುಡಿಸಿರಿ ಸಮಾರಂಭದ ಹಳೆಬೇರು ಹೊಸ ಚಿಗುರು ಗೋಷ್ಠಿ-೨ರಲ್ಲಿ ವಿದ್ಯಾರ್ಥಿನಿ ನಂದಿನಿ ಚವ್ಹಾಣ ಇವರಿಗೆ ಪುಸ್ತಕ ಮಿತ್ರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.ಪ್ರತಿ ವರ್ಷ ಕೊಡಮಾಡುವ ಪುಸ್ತಕ ಮಿತ್ರ ಪ್ರಶಸ್ತಿ ಮಕ್ಕಳಿಗೆ ಪ್ರೇರಣೆಯಾಗಿ ಓದುವ ಅಭಿರುಚಿ ಹೆಚ್ಚಿಸಿಕೊಳ್ಳುವ ಸದುದ್ದೇಶವಾಗಿದೆ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಬಸವೇಶ್ವರ ವೃತ್ತದ ಬಳಿ ೧೫-೨೦ ಅಡಿಯ ಒಳಚರಂಡಿಯಲ್ಲಿ ಬಿದ್ದ ಆಕಳನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಕರೆ ಮಾಡಿ ತಿಳಿಸಿದಾಗ ಸಿಬ್ಬಂದಿಗಳು ಆಗಮಿಸಿ ಆಕಳನ್ನು ಮೇಲೆತ್ತಿ ಸಂರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ವೇಳೆ ಅಗ್ನಿಶಾಮಕ ಸಿಬ್ಬಂದಿಗಳಾದ ಎಸ್.ಎಸ್.ಮಠ, ಮಹಾಂತೇಶ ವಡ್ಡರ, ಶ್ರೀಧರ್, ಸಿದ್ದಲಿಂಗ ಕೋಣಶಿರಸಿಗೆ, ವಿಜಯಕುಮಾರ್ ಬಿರಾದಾರ, ಸಮೀರ್ ಕೆಸರಟ್ಟಿ ಸೇರಿದಂತೆ ಅನೇಕರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ಕಬ್ಬಿನ ಲಾರಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡ ಹತ್ತಿ ಉರಿದಿದೆ. ಸಿಂದಗಿಯಿಂದ ಸಕ್ಕರೆ ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಹೊರಟಿತ್ತು ಎಂಬುದು ತಿಳಿದುಬಂದಿದೆ.ಈ ಘಟನೆ ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read More

ಸಾವಿಲ್ಲದ ಶರಣರು ಇಂದು (ಡಿ.೨೪) ದೇಶದ ಅಗ್ರಗಣ್ಯ ಗಾಯಕ ಮಹಮ್ಮದ್ ರಫಿ ಅವರ ಜನ್ಮದಿನ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಡಾ ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಚಲನಚಿತ್ರ ಸಂಗಿತ ಕ್ರಿಕೆಟ್ ಮುಂತಾದ ರಂಗಗಳಲ್ಲಿ ಭಾರತೀಯ ಸಂಸ್ಕೃತಿಗೆ ಮುಸ್ಲಿಂರ ಕೊಡುಗೆ ಅಪಾರವಾದದ್ದು. ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯಲು ಶತಮಾನದ ಗಾಯಕ ಮಹಮ್ಮದ್ ರಫಿ ಅವರೂ ಕಾರಣ. ಇದೆ ಡಿಸೆಂಬರ್ 24 ಕ್ಕೆ ನೂರು ವರುಷ ತುಂಬುವ ಶತಮಾನದ ಶ್ರೇಷ್ಠ ಗಾಯಕ ಮಹಮ್ಮದ್ ರಫಿ. ಹೊಸ ತಲೆ ಮಾರಿನ ಜನರಿಗೆ ಅವರನ್ನು ಮತ್ತೆ ಪರಿಚಯಿಸುವ ಒಂದು ಪ್ರಯತ್ನ ಈ ಲೇಖನ. ಈ ಸಿನಿಮಾ ಸಂಗೀತದ ಪ್ರಮುಖ ಮಕುಟ ಪ್ರಾಯರಲ್ಲಿ ಮಹಮ್ಮದ್ ರಫಿ ಅಗ್ರಗಣ್ಯರು.ಮಹಮ್ಮದ್ ರಫಿ ಅವರು 1924ರ ಡಿಸೆಂಬರ್ 24ರಂದು ಜನಿಸಿದರು. ಅಮೃತಸರದ ಬಳಿಯ ಹಳ್ಳಿಯೊಂದರಲ್ಲಿ ನೆಲೆಸಿದ್ದ ಕುಟುಂಬಕ್ಕೆ ಸೇರಿದ್ದ ಪುಟ್ಟ ಬಾಲಕ ಮಹಮ್ಮದ್ ರಫಿ ತನ್ನ ಗ್ರಾಮದಲ್ಲಿ ಸುಳಿದಾಡುತ್ತಿದ್ದ ಫಕೀರನೊಬ್ಬ ಹಾಡುವುದನ್ನು ನೋಡಿ ಆತನಂತೆಯೇ ಹಾಡಿ ನಲಿಯುತ್ತಿದ್ದ. ಮುಂದೆ…

Read More

ಲೇಖನ- ಜಯಶ್ರೀ ಕುಲಕರ್ಣಿ ✍️ ಉದಯರಶ್ಮಿ ದಿನಪತ್ರಿಕೆ ಮಾತು ಎನ್ನುವುದು ದೇವರು ನಮಗೆ ನೀಡಿದ ಅತ್ಯುತ್ತಮ ವರ. ನಮ್ಮ ಮನಸಿನ ಭಾವನೆಗಳನ್ನು, ಪ್ರೀತಿ, ಕೋಪ, ಸ್ನೇಹ, ಕೃತಜ್ಞತೆ ಇತ್ಯಾದಿ ಭಾವನೆಗಳನ್ನು ನಾವು ಈ ಮಾತಿನ ಮೂಲಕ ಯಶಸ್ವಿಯಾಗಿ ವ್ಯಕ್ತ ಪಡಿಸುತ್ತೇವೆ. ಆದರೆ ನಾವು ನಮ್ಮ ಭಾವನೆಗಳನ್ನು ಸರಿಯಾದ ವ್ಯಕ್ತಿಗಳ ಮುಂದೆ ಸರಿಯಾದ ಸಮಯದಲ್ಲಿ ವ್ಯಕ್ತ ಪಡಿಸಬೇಕಾದದ್ದೂ ಸಹ ಅಷ್ಟೇ ಅವಶ್ಯಕ.ನಾವು ಯಾವುದೇ ಕೆಲಸವನ್ನು ಮಾಡಿದಾಗ ಮತ್ತೊಬ್ಬರು ಅದನ್ನು ನೋಡಿ ಮೆಚ್ಚುಗೆ ಸೂಚಿಸಲಿ ಅಂತ ಬಯಸ್ತೀವಿ. ಅದೇ ಥರ ಇತರರು ಮಾಡಿದ ಒಳ್ಳೆಯ ಕೆಲಸಗಳನ್ನು ನಾವು ಮೆಚ್ಚುಗೆ ಮೂಲಕ ಪ್ರತಿಕ್ರಿಯಿಸಬೇಕು. ಅಂಥ ಹೊತ್ತಿನಲ್ಲಿ ಮಾತಾಡಲು, ಮೆಚ್ಚುಗೆಯ ಪ್ರತಿಕ್ರಿಯೆ ನೀಡಲು ಜಿಪುಣತನ ಮಾಡಬಾರದು.ಇನ್ನೊಂದು ವಿಷಯ ಏನಂದ್ರ ಸಮಯ ಅನ್ನೂದು ಜಾರಿ ಹೋಗ್ತಾನೇ ಇರ್ತದ. ಅದು ಯಾರಿಗಾಗಿಯೂ ಕಾಯೂದಿಲ್ಲ. ನಾವು ಮಾಡಬೇಕಾದ ಕೆಲಸವನ್ನು, ಹೇಳಬೇಕಾದ ಮಾತುಗಳನ್ನು ಮುಂದ ಹಾಕಿದ್ರ, ಮತ್ತೆ ಅದೇ ಸಮಯ ನಮಗ ಸಿಗದೇ ಹೋಗಬಹುದು. ಅದಕ್ಕ ಮಾತಾಡೂ ಸಮಯದಾಗ ಮಾತಾಡಿ ಬಿಡಬೇಕು. ಇಂದ,…

Read More

– ✍️ ವಿಜಯಾ ನಾಯ್ಕ ಉದಯರಶ್ಮಿ ದಿನಪತ್ರಿಕೆ ನೀನಿರದ ಮನೆಯಲ್ಲಿ ದೀಪದ ಬೆಳಕಿಲ್ಲಮುಡಿದ ಮಲ್ಲಿಗೆ ಹೂ ಬಾಡುತಿದೆ ನಲ್ಲಬೆಳಗಿಗೂ ಬೈಗಿಗೂ ಅಂತರವೆ ನನಗಿಲ್ಲಹೆಜ್ಜೆ ಸದ್ದಿನ ಗುಂಗಿನಲಿ ಮೈಮರೆತೆನಲ್ಲ ಮನೆ ಮನಗಳಲಿ ಏಕಾಂತ ಬಿಗು ಮೌನಬೀಸೋ ತಂಗಾಳಿಗೆ ಸ್ವಲ್ಪವೇ ತುಂಟತನಮುಂಗುರುಳ ಸವರಿ ನೇವರಿಸಿ ಕದಪುಕ್ಷಣ ಕ್ಷಣಕ್ಕೂ ತಂದಿದೆ ನಿನ್ನ ಸಿಹಿ ನೆನಪು ಮನದ ಹೊಸ್ತಿಲಲಿ ಹಾಕಿರುವೆ ರಂಗೋಲಿಸಿಂಗರಿಸಿ ಕಾದಿರುವೆ ಒಲವ ಹೂಗಳ ಚೆಲ್ಲಿಒಲವೇ ಹೀಗೇಕೆ ನನ್ನಲ್ಲಿ ನಿನ್ನೀ ಬಿಗುಮಾನಮುನಿಸು ತರವೇ, ಬಂದು ಬಿಡು ಇನ್ನೇಕೆ ಮೌನ

Read More