ಯೋಗಸಾಧಕ ಪಂಚಾಕ್ಷರಿ ಮಿಂಚನಾಳ ನೇತೃತ್ವದಲ್ಲಿ ಧ್ಯಾನ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಬೌದ್ಧಿಕ, ಶಾರೀರಿಕ ಮತ್ತು ಮಾನಸಿಕ ಸಾಧನೆಗೆ ಧ್ಯಾನವು ಅಗತ್ಯವಾಗಿದೆ ಎಂದು ಯೋಗಸಾಧಕ ಪಂಚಾಕ್ಷರಿ ಮಿಂಚನಾಳ ಹೇಳಿದರು.
ಪಟ್ಟಣದ ಸಿದ್ಧೇಶ್ವರ ಸ್ವಾಮೀಜಿ ಕಾಲೇಜು ಆವರಣದಲ್ಲಿ ಶನಿವಾರ ಜರುಗಿದ ವಿಶ್ವ ಧ್ಯಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಧ್ಯಾನ ಯೋಗದ ಅಂಗಗಳಲ್ಲಿ ಒಂದು. ಧ್ಯಾನವೇ ಮೋಕ್ಷಕ್ಕೆ ಮೂಲಸಾಧನ ಎಂದು ಹಿಂದೆ ನಮ್ಮ ಪರಂಪರೆಯ ಹೇಳಿಕೆಯಾಗಿತ್ತು. ಆದರೆ ಈಗ ನಮ್ಮ ಕಣ್ಣಿಗೆ ಕಾಣದ ಮೋಕ್ಷ ಬೇಡ ನಮ್ಮ ದೈನಂದಿನ ಜೀವನಕ್ಕೆ ಶಾಂತಿಯ ಅಗತ್ಯವಾಗಿದೆ. ಅದಕ್ಕಾಗಿ ಧ್ಯಾನ ಅವಶ್ಯವಾಗಿದೆ. ಜೂನ್ ೨೧ ಯೋಗದಿನವಾದರೆ ಡಿಸೆಂಬರ್ ೨೧ ಧ್ಯಾನ ದಿನವಾಗಿದ್ದು ಭೂಮಿಯ ಪರಿಭ್ರಮಣೆಯ ಆಧಾರದ ಮೇಲೆ ಅತ್ಯಂತ ಸಮಂಜಸವಾಗಿದೆ ಎಂದರು.
ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ಪ್ರಾಸ್ತಾವಿಕವಾಗಿ ಮಾತನಾಡಿ, ಧ್ಯಾನ ಹಾಗೂ ಯೋಗ ಒಂದಕ್ಕೊಂದು ಪೂರಕವಾಗಿ ನಮ್ಮ ಮನಸ್ಸು ಹಾಗೂ ಶರೀರದ ಮೇಲೆ ಬೀರುವ ಪ್ರಭಾವದ ಬಗ್ಗೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಪ್ರಾರ್ಥನೆ ನಂತರ ಯೋಗಸಾಧಕರಿಂದ ಧ್ಯಾನ ಕಾರ್ಯಕ್ರಮ ಜರುಗಿತು.
ಸಿದ್ದೇಶ್ವರ ಸ್ವಾಮೀಜಿ ಶಿಕ್ಷಣ ಸಂಸ್ಥೆಯ ವ್ಹಿ.ಕೆ.ಪಾಟೀಲ, ನಿವೃತ್ತ ಶಿಕ್ಷಕ ಲಕ್ಷö್ಮಣ ಮಡ್ಡೇಪ್ಪಗೋಳ, ಉದ್ಯಮಿ ಕೆ.ಎಸ್.ಕೋರಿ, ನಾಗಯ್ಯ ಹಿರೇಮಠ, ಪಿ.ಸಿ.ತಳಕೇರಿ, ಸಂಗನಬಸು ನಂದ್ಯಾಳ, ರಾಜು ಕಾಖಂಡಕಿ, ಆನಂದ ಎ.ಕೆ. ಸಿದ್ದು ಮೇಲಿನಮನಿ ಸೇರಿದಂತೆ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗು ಕಾಲೇಜು ಸಿಬ್ಬಂದಿ ಇದ್ದರು.