ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಖಾಜಾ ಬಂಧನವಾಜ ದರ್ಗಾದ ಪೀಠಾಧಿಪತಿಗಳಾದ ಸೈಯದ್ ಅಲಿ ಅಲ್ ಹುಸೇನಿ @ ಆಲಿಬಾಬಾ ರವರನ್ನು ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರನ್ನಾಗಿ ಆಯ್ಕೆ ಹಾಗೂ ವಕ್ಫ್ ಮಂಡಳಿಗೆ ಸುನ್ನಿ ಉಲೆಮಾ ಕೊಟಾದಡಿ ಅರ್ಹ ನಿಷ್ಠಾವಂತ ಮೌಲಾನಾರನ್ನು ನೇಮಕಕ್ಕೆ ಸೂಚಿಸಲು ಇಂದು ಹಾಶಿಂಪಿರ ದರ್ಗಾ ಆವರಣದಲ್ಲಿ ಸಭೆ ನಡೆಸಿ ಸಭಾಪತಿ ಯು ಟಿ ಖಾದರ ರವರಿಗೆ ಎಮ್‌ಎಮ್‌ಡಿಸಿ ವತಿಯಿಂದ ಮನವಿ ಸಲ್ಲಿಸಲಾಯಿತು.
ಸೈಯದ್ ಅಲಿ ಅಲ್ ಹುಸೇನಿ ಖಾಜಾ ಬಂಧನವಾಜ್ ಯೂನಿವರ್ಸಿಟಿಯ ಚಾನ್ಸಲರ್ ಆಗಿ ಯಶಸ್ವೀ ಆಡಳಿತ ನಡೆಸಿದ್ದು, ಸಮಾಜದ ಸಾಂಸ್ಕೃತಿಕ, ಧಾರ್ಮಿಕ, ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಮಹತ್ವದ ಸೇವೆ ಸಲ್ಲಿಸಿದ್ದಾರೆ. ಇಸ್ಲಾಮಿಕ್ ಅಧ್ಯಯನದಲ್ಲಿ ಪಿಎಚ್.ಡಿ ಪದವಿ ಹೊಂದಿರುವ ಅವರು, ಸಮಾಜದ ವಿವಿಧ ವಿಭಾಗಗಳ ಒಳಿತಿಗಾಗಿ ಹಲವು ಕಾರ್ಯಗಳಿಗೆ ಮುಂಚೂಣಿಯಲ್ಲಿದ್ದಾರೆ.
ಆಲಿಬಾಬಾ ರವರ ಆಯ್ಕೆ ವಕ್ಫ್ ಆಸ್ತಿಗಳ ಸಮರ್ಪಕ ನಿರ್ವಹಣೆ, ವಕ್ಫ್ ಮಂಡಳಿಯ ಸುಸಂಸ್ಕೃತ ಆಡಳಿತ, ಮತ್ತು ರಾಜ್ಯದ ಧಾರ್ಮಿಕ ಸಮುದಾಯಗಳ ಏಳಿಗೆಗೆ ಮಾರ್ಗದರ್ಶಕವಾಗಿ ಕಾರ್ಯನಿರ್ವಹಿಸಲಿದೆ ಎಂದು ಮುಖಂಡರು ಯು ಟಿ ಖಾದರ ರವರ ಮುಂದೆ ಅಭಿಪ್ರಾಯ ವ್ಯಕ್ತಪಡಿಸಿದರು.
ಇನೂಂದು ಪ್ರಮುಖ ವಿಷಯ ವಕ್ಫ್ ಮಂಡಳಿಗೆ ಸುನ್ನಿ ಉಲೆಮಾ ಕೊಟಾದಡಿ ಅರ್ಹ ನಿಷ್ಠಾವಂತ ಮೌಲಾನಾರನ್ನು ನೇಮಕ ಆಗಬೆಕಾಗಿದೆ. ರಾಜ್ಯದ ಹಲವಾರು ನಿಷ್ಠಾವಂತ ಮತ್ತು ಸೇವಾಭಾವನೆಯನ್ನು ಹೊಂದಿರುವ ಯಾವುದೆ ಗಂಭಿರವಾದ ಕ್ರಿಮಿನಲ್ ಕೆಸ್ಸ್ ಗಳಿಲ್ಲದ ಸುನ್ನಿ ಮೌಲಾನಾಗಳು, ತಮ್ಮ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ್ದು, ಇವರಲ್ಲಿ ಅತ್ಯುತ್ತಮರನ್ನು ಆಯ್ಕೆ ಮಾಡಬೇಕು. ಇದು ರಾಜ್ಯದ ಮುಸ್ಲಿಮ್ ಸಮುದಾಯದ ಉನ್ನತಿಗೆ ಸಹಾಯವಾಗಲಿದ್ದು, ಜನಸಾಮಾನ್ಯರೊಂದಿಗೆ ಸಮನ್ವಯ ಸಾಧಿಸಲು ಉತ್ತಮವಾಗಿರುತ್ತದೆ
ರಾಜ್ಯದ ಧಾರ್ಮಿಕ ಪರಂಪರೆ ಮತ್ತು ಆಸ್ತಿಗಳ ನೈಜ ಉದ್ದೇಶ ಪುರ್ಣಆಗಬೆಕಾದರೆ ಸರಿಯಾದ ಆಯ್ಕೆ ಅತ್ಯಂತ ಅವಶ್ಯಕವಾಗಿದ್ದು ಸರ್ಕಾರಕ್ಕೆ ಹಾಗು ಮುಖ್ಯಮಂತ್ರಿಗಳಿಗೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಭಾಪತಿಗಳು ಸುಚಿಸಬೆಕೆಂದು ಅಲ್ಪಸಂಖ್ಯಾತರ ಮುಸ್ಲಿಂ ಅಭಿವೃದ್ಧಿ ಸಮಿತಿ ಮುಖಂಡರುಗಳು (ಎಮ್‌ಎಮ್‌ಡಿಸಿ) ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸೈಯದ್ ವಹೇಮುದ ಪಿರಾಂ, ಹಮೀದ ಮುಶ್ರೀಫ್, ಶಜ್ಜಾದೆಪಿರಾಂ ಮುಶ್ರೀಫ, ಸೈಯದ್ ಜೈನುಲ್ ಅಬಿದಿನ್, ಎಂ.ಎಚ್ ಬಾಗವಾನ, ಇಖಲಾಸ್ ಸುನೇವಾಲೆ, ಎಮ್.ಎ ಪಿರಾಂ ವಕೀಲರು, ಹಫಿಜ್ ಸಿದ್ದಿಕಿ, ಇರಫಾನ ಶೇಖ, ಮಹಾದೆವ ರಾವಜಿ, ಬಂದೆನವಾಜ ಬಿಳಗಿ, ರವೂಫ್ ಶೇಖ, ಹಿದಾಯತ್ ಮಾಶಾಳಕರ್, ಇಂಮ್ತಿಯಾಜ್ ಮುಲ್ಲಾ, ಸಲೀಂ ಶೇಖ, ಮುಸ್ತಫಾ ಆಲಮೇಲ, ಮುನ್ನಾ ಮುಲ್ಲಾ, ನಿಜಾಮ್ ಹರಿಯಾಲ್, ಹಮೀದ್ ಅವಟಿ, ಖ್ವಾಜಾ ಮಂದಾಪುರ್, ಹನ್ನಾನ ಶೇಖ, ತೌಸಿಫ್ ಇನಾಮದಾರ, ಆಶೀಫ ಮುರಸಾವಳಗಿ, ಮಹಮ್ಮದ ಸಾಬಿರ, ಮುಂತಾದವರು ಇದ್ದರು.

