ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಬಸವೇಶ್ವರ ವೃತ್ತದ ಬಳಿ ೧೫-೨೦ ಅಡಿಯ ಒಳಚರಂಡಿಯಲ್ಲಿ ಬಿದ್ದ ಆಕಳನ್ನು ಗಮನಿಸಿದ ಸಾರ್ವಜನಿಕರು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಕರೆ ಮಾಡಿ ತಿಳಿಸಿದಾಗ ಸಿಬ್ಬಂದಿಗಳು ಆಗಮಿಸಿ ಆಕಳನ್ನು ಮೇಲೆತ್ತಿ ಸಂರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಅಗ್ನಿಶಾಮಕ ಸಿಬ್ಬಂದಿಗಳಾದ ಎಸ್.ಎಸ್.ಮಠ, ಮಹಾಂತೇಶ ವಡ್ಡರ, ಶ್ರೀಧರ್, ಸಿದ್ದಲಿಂಗ ಕೋಣಶಿರಸಿಗೆ, ವಿಜಯಕುಮಾರ್ ಬಿರಾದಾರ, ಸಮೀರ್ ಕೆಸರಟ್ಟಿ ಸೇರಿದಂತೆ ಅನೇಕರಿದ್ದರು.