Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದರ್ಬಾರ್ ಸಮೂಹ ಶಿಕ್ಷಣ ಸಂಸ್ಥೆಯ ಬನ್ಸಿಲಾಲ ವಿಠ್ಠಲ ದಾಸ ದರಬಾರ ಪದವಿ ಮಹಾವಿದ್ಯಾಲಯದ ಪ್ರಾಂಗಣದಲ್ಲಿ ಜ.02 ಮಂಗಳವಾರದಂದು ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿಗಳಿಗೆ ಗುರುನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಾಧ್ಯಾಪಕ ಎಸ್.ಎಸ್. ಗೌರಿ ಅವರು, ಸರಳ ಸ್ವಭಾವದ ಸಂತ ನಿರಾಡಂಬರವಾಗಿ ಬದುಕಿ ಬದುಕಿನ ಅರ್ಥವನ್ನು ಸಾಮಾನ್ಯ ಜನರಿಗೂ ತಿಳಿಸಿದ ಮಹಾನ ಯೋಗಿ, ಬರಿ ಶಿಕ್ಷಣ ಪಡೆಯುವುದು ಮುಖ್ಯವಲ್ಲ ಸಂಸ್ಕಾರ ಸಂಸ್ಕೃತಿಯನ್ನು ಶಿಕ್ಷಕ ಸಮುದಾಯ ವಿದ್ಯಾರ್ಥಿಗಳಿಗೆ ಕಲಿಸಬೇಕು ಎಂದು ಅವರ ಸದಾಶಯವಾಗಿತ್ತು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮುಖ್ಯೋಪಾಧ್ಯಾಯ ರಮೇಶ್ ಕೋಟ್ಯಾಳ ಅವರು, ಶ್ರೀ ಸಿದ್ದೇಶ್ವರ ಸ್ವಾಮಿಗಳು ಆಡುಮುಟ್ಟದ ಸೊಪ್ಪಿಲ್ಲವೆಂಬಂತೆ ಜಗದ ತತ್ವ ಜ್ಞಾನದ ಮಾತು ಸಾಕ್ರೆಟಿಸ್ ಅರಿಸ್ಟಾಟಲ್ ಪ್ಲೇಟೋ ಕನ್ಫ್ಯೂಸಿಯಸ್ ರಾಮಕೃಷ್ಣ ಪರಮಹಂಸ ಸ್ವಾಮಿ ವಿವೇಕಾನಂದ ಜಗದ ದಾರ್ಶನಿಕರ ಸಾಮಾಜಿಕ, ಧಾರ್ಮಿಕ, ಆಧ್ಯಾತ್ಮಿಕ, ನೈತಿಕ ಸಂದೇಶವನ್ನು ನಿತ್ಯ ಪ್ರಸರಣ ಮಾಡಿದ ತತ್ವಜ್ಞಾನಿ ಅಲ್ಲಮನ ಎಲ್ಲವನ್ನು ಅರಿತಿದ್ದರೂ ಅರಿಯದಂತಿದ್ದ ಅವರೊಬ್ಬ ಹೊರಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಅನಿತಾ. ಎಂ ಅವರು “ಫಿಸಿಯೋಲಾಜಿಕಲ್ ಆ್ಯಂಡ್ ಫಿಸಿಕಲ್ ಪ್ರೊಫೈಲ್ ಆಫ್ ಕಬಡ್ಡಿ ಪ್ಲೇಯರ್ಸ್ ಆಫ್ ಕರ್ನಾಟಕ ಸ್ಟೇಟ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಅನಿತಾ. ಎಂ ಅವರು ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಪ್ರೊ.ಡಿ.ಎಮ್.ಜ್ಯೋತಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.ಡಾಕ್ಟರೇಟ್ ಪದವಿ ಪಡೆದಿರುವ ಅನಿತಾ. ಎಂ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬೀಳಗಿ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಬೆಂಗಳೂರು ” ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ ಹಾಗೂ ಸಪ್ತಾಹ 2024-25 ” ಪ್ರಯುಕ್ತ ರಾಜ್ಯದ ಆಯ್ದ 100 ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.ಬೀಳಗಿ ತಾಲ್ಲೂಕಿನ ಮುಂಡಗನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಇಂದು ಗ್ರಾಮದಲ್ಲಿ ಶಾಲಾ ಮಕ್ಕಳಿಂದ ” ವಾಕಥಾನ್ ಕಾರ್ಯಕ್ರಮ” ಹಮ್ಮಿಕೊಳ್ಳಲಾಯಿತು. ಇಂಧನ ಸಂರಕ್ಷಣಾ ಘೋಷಣಾ ಫಲಕಗಳನ್ನು ಹಿಡಿದು ಡೊಳ್ಳು , ಡೋಲು ಬಾರಿಸುತ್ತ ಗ್ರಾಮದಲ್ಲಿ ಜಾಗೃತಿ ಅಭಿಯಾನ ನಡೆಸಲಾಯಿತು.ಮುಖ್ಯ ಶಿಕ್ಷಕ ಬಿ ಎಸ್ ಪಾಟೀಲ ನೇತೃತ್ವದಲ್ಲಿ ಶಿಕ್ಷಕಿರಾದ ಮದಿನಾ ಪಿರಜಾದೆ, ಎೈ ಎಂ ಕಾಂಬಳೆ, ಯು ಎಲ್ ಪವಾರ, ರೇಖಾ ಬಿರಾದಾರ ಶಿಕ್ಷಕರಾದ ಎಂ ಆರ್ ಸೋಲಾಪುರ, ಎ ಡಿ ನದಾಫ ಮತ್ತು ಮಂಜುನಾಥ ಬಿರಾದಾರ ಉಪಸ್ತಿತರಿದ್ದು ಇಂಧನ ಉಳಿತಾಯದ ಮಹತ್ವ ತಿಳಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಶ್ರೀ ಶಾಂತೇಶ್ವರ ವಿ ವಿವಿದ್ದೊದೇಶಗಳ ಸಹಕಾರಿ ಸಂಘದ ಇಲ್ಲಿನ ಶಾಖೆಯಲ್ಲಿ ಶ್ರೀ ಸಿದ್ದೇಶ್ವರ ಶ್ರೀಗಳ ೨ ನೇ ಪುಣ್ಯಸ್ಮರಣೆಯನ್ನು ಆಚರಿಸಲಾಯಿತು.ಈ ವೇಳೆ ಎಂ.ಡಿ ಶಿವಾನಂದ ಇಂಡಿ, ಭಾಜಪಾ ನಗರ ಘಟಕ ಅದ್ಯಕ್ಷ ರಾಜು ಬಳ್ಳೊಳ್ಳಿ,ಯುವ ಮುಖಂಡ ಹಣಮಂತ ನಲವಡೆ, ವಿರೇಶ ಡವಳಗಿ, ಶಾಖಾ ವೇವಸ್ಥಾಪಕರಾದ ಓ S ಹೂಗಾರ ಹಾಗೂ ಸಿದ್ದು ಬ್ಯಾಕೋಡ, ಸಿಬ್ಬಂದಿಗಳಾದ ಸಂತೋಷ ಬಾವೂರ, ಶರಣು ಸಜ್ಜನ, ರಾಜಶೇಖರ ಮ್ಯಾಗೇರಿ ಸೇರಿದಂತೆ ಮತ್ತೀತರರು ಇದ್ದರು

Read More

ವಿಜಯಪುರ ಜ್ಞಾನಯೋಗಾಶ್ರಮದಲ್ಲಿ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದಲ್ಲಿ ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜೀವನದಲ್ಲಿ ಎಲ್ಲರ ಋಣ ತೀರಿಸಲು ಸಾಧ್ಯವಿದೆ. ಆದರೆ ಗುರುವಿನ ಋಣ ಹಾಗೂ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಎನ್ನುವುದನ್ನೇ ಶ್ರೀ ಸಿದ್ಧೇಶ್ವರ ಅಪ್ಪಗಳು ತಮ್ಮ ಜ್ಞಾನ ದಿವಿಟಿಗೆಯನ್ನು ಹಿಡಿದು ನಾಡಿನಾದ್ಯಂತ ತಿರುಗಾಡಿ ನಡೆನುಡಿ ಆಚಾರಗಳಿಂದ ನಮ್ಮಲ್ಲಿ ಬದಲಾವಣೆ ತಂದಿರುವ ಅಪರೂಪದ ಸಂತ ಎಂದು ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಹೇಳಿದರು.ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತನ್ನಲ್ಲಿರುವ ಜ್ಞಾನವನ್ನು ಧಾರೆ ಎರೆದು ತಾನು ಮಾಡುವ ಕೆಲಸವನ್ನು ಶಿಷ್ಯನಿಂದ ಮಾಡಿಸುವಾತ ಗುರು. ತಾಯಿ ನಮಗೆ ಜನ್ಮ ನೀಡಿದ್ದಾಳೆ ಅವಳು ಜನ್ಮಕೊಟ್ಟ ಮಗನಿಗೆ ಗುರುವಾಗಿ ನಿಲ್ಲುತ್ತಾಳೆ. ಆದರೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಕೇವಲ ಗುರುವಿನ ಸ್ಥಾನವನ್ನು ತುಂಬಿಲ್ಲ. ಅವರು ತಾಯಿ ಹಾಗೂ ಗುರುವಿನ ಸ್ಥಾನ ಎರಡನ್ನೂ ತುಂಬಿದ್ದಾರೆ. ಕಲ್ಕತ್ತಾ ಸ್ವಾಮಿ ವಿವೇಕಾನಂದರ ಕರ್ಮ ಭೂಮಿ. ಹಾಗೇ…

Read More

ಉದಯರಶ್ಮಿ ದಿನದಂದು ವಿಜಯಪುರ: ಕಲಬುರಗಿ ಜಿಲ್ಲೆ ಸೇಡಂನಲ್ಲಿ ಜ. ೨೯ರಿಂದ ಫೆ. ೬ರವರೆಗೆ ನಡೆಯಲಿರುವ ೭ನೇ ಭಾರತೀಯ ಸಂಸ್ಕೃತಿ ಉತ್ಸವದ ಪೂರ್ವಭಾವಿ ಸಭೆಯನ್ನು ಜ. ೫ ರಂದು ಬೆಳಗ್ಗೆ ೧೧ ಗಂಟೆಗೆ ಜ್ಞಾನಯೋಗಾಶ್ರಮದಲ್ಲಿ ಕರೆಯಲಾಗಿದೆ.ಬಸವರಾಜ ಪಾಟೀಲ ಸೇಡಂ ನೇತೃತ್ವದಲ್ಲಿ ಈ ಪೂರ್ವಭಾವಿ ಸಭೆ ನಡೆಯಲಿದೆ.ಜಿಲ್ಲೆಯ ಗಣ್ಯರು, ಸಂಘ-ಸಂಸ್ಥೆಗಳ ಮುಖ್ಯಸ್ಥರು, ಚಿಂತಕರು ಪಾಲ್ಗೊಳಬೇಕು ಎಂದು ಭಾರತ ವಿಕಾಸ ಸಂಗಮದ ಅಧ್ಯಕ್ಷ ಸಂ.ಗು. ಸಜ್ಜನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ & ಕಲಬುರ್ಗಿ ಪೌಂಡೇಶನ್ ನಿಂದ ಡಾ. ಎಂ.ಎಂ.ಕಲಬುರ್ಗಿ ಸೃಜನ ಸಾಹಿತ್ಯ ಕುರಿತು ವಿಚಾರ ಸಂಕಿರಣ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಧಾರವಾಡದ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನ ಹಾಗೂ ವಿಜಯಪೂರ ಕಲಬುರ್ಗಿ ಪೌಂಡೇಶನ್ ಸಂಯುಕ್ತಾಶ್ರಯದಲ್ಲಿ ಜ.೦೪ರಂದು ಪಟ್ಟಣದ ಮಾಂಗಲ್ಯ ಭವನದಲ್ಲಿ ಬೆಳಿಗ್ಗೆ ೧೦:೩೦ಗಂಟೆಗೆ ಡಾ.ಎಂ.ಎಂ.ಕಲಬುರ್ಗಿ ಸೃಜನ ಸಾಹಿತ್ಯ ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರಣ ತಾಲೂಕಿನ ಕಲಬುರ್ಗಿಯವರ ಅಭಿಮಾನಿಗಳು, ಸಾಹಿತ್ಯ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧ್ಯಕ್ಷ ಶಿವಲಿಂಗ ಕಲಬುರ್ಗಿ ವಿನಂತಿಸಿಕೊಂಡಿದ್ದಾರೆ.ಕಾರ್ಯಕ್ರಮದ ಪಾವನ ಸಾನಿಧ್ಯವನ್ನು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸಿಕೊಳ್ಳುವರು. ಉದ್ಘಾಟಕರಾಗಿ ನ್ಯೂಜಿಲೆಂಡಿನ್ ಆಕ್ಲೆಂಡ್ ನಿವಾಸಿ ಬಸವ ಸಮಿತಿ ಸಂಸ್ಥಾಪಕ ಡಾ.ಲಿಂಗಣ್ಣ ಕಲಬುರ್ಗಿ ಆಗಮಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡದ ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ ವಹಿಸುವರು. ಪ್ರತಿಷ್ಠಾನದ ಸದಸ್ಯೆ ಹನುಮಾಕ್ಷಿ ಗೋಗಿ ಆಶಯ ನುಡಿಗಳನ್ನಾಡಲಿದ್ದಾರೆ.ಪ್ರಾಧ್ಯಾಪಕ ಡಾ.ಎಂ.ಎಸ್.ಮಾಗಣಗೇರಿ “ಕೆಟ್ಟಿತ್ತು ಕಲ್ಯಾಣ” ನಾಟಕ ಕುರಿತು ವಿಚಾರಗೋಷ್ಠಿಯಲ್ಲಿ ಮಾತನಾಡಲಿದ್ದಾರೆ. “ನೀರು ನೀರಡಿಸಿತ್ತು”…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಣಿಯಾದ ಫಲಾನುಭವಿಗಳಿಗೆ ವೆಲ್ಡಿಂಗ್ ಕಿಟ್‌ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.ಫಲಾನುಭವಿಯು ಚಾಲ್ತಿಯಲ್ಲಿರುವ ಕಾರ್ಮಿಕರ ಗುರುತಿನ ಚೀಟಿ, ಆಧಾರ ಕಾರ್ಡ್ ಮತ್ತು ಫಲಾನುಭವಿಯ ಭಾವಚಿತ್ರ, ಸದರಿ ದಾಖಲೆಗಳನ್ನು ಜ.೦೩ ರಿಂದ ಜ.೧೮ರ ಒಳಗಾಗಿ, ಈ ಕೆಳಕಂಡ ಷರತ್ತುಗಳ ಅನ್ವಯ ಕಟ್ಟಡ ಕಾರ್ಮಿಕರು ನೋಂದಾಯಿಸಿ ಒಂದು ವರ್ಷ ಪೂರ್ಣಗೊಂಡಿರಬೇಕು. ಕಾರ್ಮಿಕ ಗುರುತಿನ ಚೀಟಿ ಚಾಲ್ತಿಯಲ್ಲಿರಬೇಕು. ಕಾರ್ಮಿಕ ಗುರುತಿನ ಚೀಟಿಯಲ್ಲಿ ನಮೂದಿಸಿದ ವೃತ್ತಿಯ ಕಿಟ್‌ಗಳನ್ನು ಮಾತ್ರ ವಿತರಿಸಲಾಗುವುದು. ಸದರಿ ಅರ್ಜಿಯನ್ನು ಬಂದಾಳ ರಸ್ತೆಯ ಬಮ್ಮಣ್ಣಿ ಬಿಲ್ಡಿಂಗ್ ಸಿಂದಗಿ ಕಛೇರಿಯಲ್ಲಿ ಸಲ್ಲಿಸಬೇಕು. ಸದರಿ ಅವಧಿಯಲ್ಲಿ ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಜೇಷ್ಠತಾ ಆಧಾರದ ಮೇರೆಗೆ ವಿತರಿಸಲಾಗುವುದು ಎಂದು ಎಂದು ತಾಲೂಕು ಕಾರ್ಮಿಕ ನಿರೀಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಎಕ್ಸಲಂಟ್ ವಿಜ್ಞಾನ ಪ.ಪೂ.ಕಾಲೇಜಿನಲ್ಲಿ ಗುರುನಮನ ಮಹೋತ್ಸವ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪಾಶ್ಚಾತ್ಯ ಜೀವನ ಶೈಲಿ ಎಡೆಗೆ ಮಾರು ಹೋಗುತ್ತಿರುವ ಯುವ ಸಮೂಹಕ್ಕೆ ಭಾರತೀಯತೆಯನ್ನು ತಿಳಿಸಿಕೊಡುವ ಮೂಲಕ ಸಂಸ್ಕಾರವಂತ ಭಾರತ ನಿರ್ಮಾಣ ಮಾಡಲು ಹೊರಟ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಕಾರ್ಯ ಶ್ಲಾಘನೀಯ ಮಾತ್ರವಲ್ಲ ಇತರರಿಗೆ ಮಾದರಿಯಾಗಿದೆ. ಇದಕ್ಕೆ ಕಾರಣೀಕರ್ತರಾಗಿರುವ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಅಭಿನಂದನಾರ್ಹರು ಎಂದು ವಾಗ್ಮಿ ಅಶೋಕ ಹಂಚಲಿ ಹೇಳಿದರು.ಬುಧವಾರ ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಗುರು ನಮನ ಮೊಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು; ಇಂದು ಶಾಲಾ ಕಾಲೇಜುಗಳಲ್ಲಿ ಕಲಿಯುವ ಮಕ್ಕಳು ಜನೆವರಿ ಬಂತೆಂದರೆ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಮೈ ಮರೆಯಲು ಮುಂದಾಗುತ್ತಾರೆ. ಆದರೆ ಎಕ್ಸಲಂಟ್ ಕಾಲೇಜು ಅಡ್ಡ ದಾರಿಯಲ್ಲಿ ಹೋಗುವ ಯುವ ಸಮೂಹವನ್ನು ಸರಿದಾರಿಗೆ ತರುವ ಕಾರ್ಯ ನಾವು ಮಾಡುತ್ತೇವೆ ಎನ್ನುವಂತೆ ಗುರು ನಮನ ಮಹೋತ್ಸವ ಆಯೋಜನೆ ಮಾಡಿ, ನಡೆದಾಡುವ ದೇವರು ಹಾಗೂ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಸೋಲಾಪುರ ರಸ್ತೆಯಲ್ಲಿರುವ “ಶುಭಶ್ರೀ ಸಾಗರ ಹೋಟೆಲ್‌ ನಲ್ಲಿ” ಶನಿವಾರ ಸಂಜೆ (ಜ.೪) ಸಂಜೆ ೫.೩೦ ಗಂಟೆಗೆ “ಓದುಗರೊಂದಿಗೆ ಸಂವಾದ” ಕಾರ್ಯಕ್ರಮ ಜರುಗಲಿದೆ.”ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ” ಆಯೋಜನೆಯ ಈ ಕಾರ್ಯಕ್ರಮದಲ್ಲಿ “ಕಶೀರ”,”ಅವಸಾನ”, “ಮಾಗಧ” ಕಾದಂಬರಿಗಳ ಖ್ಯಾತಿಯ , ಜನಪ್ರಿಯ ಕಾದಂಬರಿಗಾರ್ತೀಯರಾದ “ಸಹನಾ ವಿಜಯಕುಮಾರ್” ಅವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಹನಾ ವಿಜಯಕುಮಾರರ ಹೊಸ ಕಾದಂಬರಿ “ಮಾಗಧ” ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಓದುಗರು, ಲೇಖಕರ ಹಸ್ತಾಕ್ಷರ ಮತ್ತು ಅವರೊಟ್ಟೆಗೆ ಸೆಲ್ಫಿಯ ಅವಕಾಶವೂ ಇದೆ ಎಂದು “ಅಭಾಸಾಪ ವಿಜಯಪುರ” ಜಿಲ್ಲಾಧ್ಯಕ್ಷರಾದ ನಾರಾಯಣ ಬಾಬಾನಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಹಾಗೂ ಪುಸ್ತಕಗಳಿಗಾಗಿ ಸಂಪರ್ಕಿಸಿ – 9880050818 ವಿವೇಕ ಕುಲಕರ್ಣಿ , 87480 03989 ರಂಜಿತ್‌ ಸಿಂಗ್‌ ರಜಪೂತ

Read More