ಉದಯರಶ್ಮಿ ದಿನದಂದು
ವಿಜಯಪುರ: ಕಲಬುರಗಿ ಜಿಲ್ಲೆ ಸೇಡಂನಲ್ಲಿ ಜ. ೨೯ರಿಂದ ಫೆ. ೬ರವರೆಗೆ ನಡೆಯಲಿರುವ ೭ನೇ ಭಾರತೀಯ ಸಂಸ್ಕೃತಿ ಉತ್ಸವದ ಪೂರ್ವಭಾವಿ ಸಭೆಯನ್ನು ಜ. ೫ ರಂದು ಬೆಳಗ್ಗೆ ೧೧ ಗಂಟೆಗೆ ಜ್ಞಾನಯೋಗಾಶ್ರಮದಲ್ಲಿ ಕರೆಯಲಾಗಿದೆ.
ಬಸವರಾಜ ಪಾಟೀಲ ಸೇಡಂ ನೇತೃತ್ವದಲ್ಲಿ ಈ ಪೂರ್ವಭಾವಿ ಸಭೆ ನಡೆಯಲಿದೆ.
ಜಿಲ್ಲೆಯ ಗಣ್ಯರು, ಸಂಘ-ಸಂಸ್ಥೆಗಳ ಮುಖ್ಯಸ್ಥರು, ಚಿಂತಕರು ಪಾಲ್ಗೊಳಬೇಕು ಎಂದು ಭಾರತ ವಿಕಾಸ ಸಂಗಮದ ಅಧ್ಯಕ್ಷ ಸಂ.ಗು. ಸಜ್ಜನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
