ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಸೋಲಾಪುರ ರಸ್ತೆಯಲ್ಲಿರುವ “ಶುಭಶ್ರೀ ಸಾಗರ ಹೋಟೆಲ್ ನಲ್ಲಿ” ಶನಿವಾರ ಸಂಜೆ (ಜ.೪) ಸಂಜೆ ೫.೩೦ ಗಂಟೆಗೆ “ಓದುಗರೊಂದಿಗೆ ಸಂವಾದ” ಕಾರ್ಯಕ್ರಮ ಜರುಗಲಿದೆ.
“ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ” ಆಯೋಜನೆಯ ಈ ಕಾರ್ಯಕ್ರಮದಲ್ಲಿ “ಕಶೀರ”,”ಅವಸಾನ”, “ಮಾಗಧ” ಕಾದಂಬರಿಗಳ ಖ್ಯಾತಿಯ , ಜನಪ್ರಿಯ ಕಾದಂಬರಿಗಾರ್ತೀಯರಾದ “ಸಹನಾ ವಿಜಯಕುಮಾರ್” ಅವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಹನಾ ವಿಜಯಕುಮಾರರ ಹೊಸ ಕಾದಂಬರಿ “ಮಾಗಧ” ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಓದುಗರು, ಲೇಖಕರ ಹಸ್ತಾಕ್ಷರ ಮತ್ತು ಅವರೊಟ್ಟೆಗೆ ಸೆಲ್ಫಿಯ ಅವಕಾಶವೂ ಇದೆ ಎಂದು “ಅಭಾಸಾಪ ವಿಜಯಪುರ” ಜಿಲ್ಲಾಧ್ಯಕ್ಷರಾದ ನಾರಾಯಣ ಬಾಬಾನಗರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಪುಸ್ತಕಗಳಿಗಾಗಿ ಸಂಪರ್ಕಿಸಿ – 9880050818 ವಿವೇಕ ಕುಲಕರ್ಣಿ , 87480 03989 ರಂಜಿತ್ ಸಿಂಗ್ ರಜಪೂತ
