ಉದಯರಶ್ಮಿ ದಿನಪತ್ರಿಕೆ
ಬೀಳಗಿ: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಬೆಂಗಳೂರು ” ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ ಹಾಗೂ ಸಪ್ತಾಹ 2024-25 ” ಪ್ರಯುಕ್ತ ರಾಜ್ಯದ ಆಯ್ದ 100 ಶಾಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಬೀಳಗಿ ತಾಲ್ಲೂಕಿನ ಮುಂಡಗನೂರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಇಂದು ಗ್ರಾಮದಲ್ಲಿ ಶಾಲಾ ಮಕ್ಕಳಿಂದ ” ವಾಕಥಾನ್ ಕಾರ್ಯಕ್ರಮ” ಹಮ್ಮಿಕೊಳ್ಳಲಾಯಿತು. ಇಂಧನ ಸಂರಕ್ಷಣಾ ಘೋಷಣಾ ಫಲಕಗಳನ್ನು ಹಿಡಿದು ಡೊಳ್ಳು , ಡೋಲು ಬಾರಿಸುತ್ತ ಗ್ರಾಮದಲ್ಲಿ ಜಾಗೃತಿ ಅಭಿಯಾನ ನಡೆಸಲಾಯಿತು.
ಮುಖ್ಯ ಶಿಕ್ಷಕ ಬಿ ಎಸ್ ಪಾಟೀಲ ನೇತೃತ್ವದಲ್ಲಿ ಶಿಕ್ಷಕಿರಾದ ಮದಿನಾ ಪಿರಜಾದೆ, ಎೈ ಎಂ ಕಾಂಬಳೆ, ಯು ಎಲ್ ಪವಾರ, ರೇಖಾ ಬಿರಾದಾರ ಶಿಕ್ಷಕರಾದ ಎಂ ಆರ್ ಸೋಲಾಪುರ, ಎ ಡಿ ನದಾಫ ಮತ್ತು ಮಂಜುನಾಥ ಬಿರಾದಾರ ಉಪಸ್ತಿತರಿದ್ದು ಇಂಧನ ಉಳಿತಾಯದ ಮಹತ್ವ ತಿಳಿಸಿದರು.

