Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಅಯುರ್ವೇದ ಮಹಾವಿದ್ಯಾಲಯದಲ್ಲಿ ನಾಳೆ ಜನೇವರಿ 7 ರಿಂದ ಮಾರ್ಚ್ 7ರ ವರೆಗೆ ಎರಡು ತಿಂಗಳ ಕಾಲ ಕಿಡ್ನಿ ಫೆಲ್ಯುರ್ (Chronic Kidney Disease) ಮತ್ತು ಕಿಡ್ನಿಗೆ ಸಂಭದಿಸಿದ ಇತರೆ ರೋಗಗಳಿಗೆ ವಿಶೇಷವಾಗಿ ಹೆಚ್ಚಿನ ಕ್ರೀಯಾಟೆನಿನ್ ಹೋಂದಿರುವ ರೋಗಿಗಳಿಗೆ ವಿಶೇಷ ಸಲಹೆ ಹಾಗೂ ಉಚಿತ ಚಿಕಿತ್ಸಾ ಶಿಬಿರ ನಡೆಯಲಿದೆ.ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ಈ ಶಿಬಿರ ನಡೆಯಲಿದ್ದು, ಕಿಡ್ನಿ ಸಂಬಂಧಿತ ಸಮಸ್ಯೆ ಎದುರಿಸುತ್ತಿರುವ ರೋಗಿಗಳು ಈ ಉಚಿತ ಶಿಬಿರದ ಸದುಪಯೊಗವನ್ನು ಪಡೆದುಕೊಳ್ಳಬೇಕು ಎಂದು ಕಾಲೇಜಿನ ಪ್ರಾಚಾರ್ಯ ಡಾ.ಸಂಜಯ ಕಡ್ಲಿಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿ ಮತ್ತು ಪೂರ್ವ ನೋಂದಣಿಗಾಗಿ ಡಾ. ಆಶ್ವಿನಿ ಸಜ್ಜನವರ- ಮೊಬೈಲ್ ನಂ. 7406737888 ಮತ್ತು 8073853981 ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಶೋಕ ಬ್ರಾಹ್ಮಣ, ಜೈನ , ಬೌದ್ಧ ಸೇರಿದಂತೆ ಆಗಿನ ಎಲ್ಲಾ ಮತಗಳಿಗೂ ದಾನ- ದತ್ತಿಗಳನ್ನು ಕೊಟ್ಟಿದ್ದಾನೆ. ಇದನ್ನು ಅವನ ಶಾಸನಗಳೇ ಹೇಳುತ್ತವೆ ಎಂದು ಕಶೀರ , ಮಾಗಧ ಕಾದಂಬರಿಗಳ ಖ್ಯಾತಿಯ ಲೇಖಕಿ ಸಹನಾ ವಿಜಯಕುಮಾರ್ ಹೇಳಿದರು.ಶನಿವಾರ ದಿನಾಂಕ 4 ರಂದು , ನಗರದ ಶುಭಶ್ರೀ ಸಾಗರ ಹಾಲ್ ನಲ್ಲಿ ನಡೆದ ಅಖಿಲ ‘ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ’ ಆಯೋಜನೆ ಸಂವಾದ ಕಾರ್ಯಕ್ರಮದಲ್ಲಿ ಮಾತಾಡಿದ ಅವರು’ ಅಶೋಕ ಸಾಮ್ರಾಜ್ಯ ಕಂದಹಾರದಿಂದ ಹಿಡಿದು ಸುವರ್ಣಗಿರಿ ಅಂದರೆ ಇವತ್ತಿನ ಉತ್ತರ ಕರ್ನಾಟಕದ ಭಾಗದವರೆಗೂ ಇತ್ತು. ಅಶೋಕನ ಅತಿಹೆಚ್ಚು ಶಾಸನ ಸಿಕ್ಕಿರುವುದು ನಮ್ಮ ಕರ್ನಾಟಕದಲ್ಲಿಯೇ. ಡೇರಿಯಸ್ ನ ಪ್ರಭಾವ ಅಶೋಕ ಶಾಸನಗಳ ಬರೆಸಲು ಪ್ರಾರಂಭಿಸಿದ. ಡೇರಿಯಸ್ ಅಂತಿಯೇ ಅಶೋಕ ಎತ್ತರವಾದ ಬಂಡೆಗಳಲ್ಲಿ ಶಾಸನಗಳನ್ನು ಬರೆಸಿದ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ ಜಿಲ್ಲಾಧ್ಯಕ್ಷ ನಾರಾಯಣ ಬಾಬಾನಗರ ವಹಿಸಿದ್ದರು.ನಿರೂಪಣೆ ರಾಹುಲ್ ಮರಳಿ, ಸ್ವಾಗತ ಪರಿಚಯ – ವರಣು ಸೋಲಾಪುರ, ವಂದನಾರ್ಪಣೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದಾವಣಗೆರೆಯ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನದ ೭೦ನೇ ವಾರ್ಷಿಕೋತ್ಸವ ಹಾಗೂ ಕನ್ನಡ ನಿತ್ಯೋತ್ಸವದ ಅಂಗವಾಗಿ ಕೊಡಮಾಡುವ ೨೦೨೫ನೇ ಸಾಲಿನ ರಾಷ್ರ‍್ಟಮಟ್ಟದ ‘ಸರಸ್ವತಿ ಸಾಧಕ ಸಿರಿ’ ಪ್ರಶಸ್ತಿಗೆ ನಗರದ ಮೂವರು ಸಾಧಕರು ಆಯ್ಕೆಯಾಗಿದ್ದಾರೆ.ಸಾಹಿತ್ಯ ಕೃಷಿಯಲ್ಲಿ ಮಾಡಿರುವ ಸಾಧನೆಗಾಗಿ ಬಸವ ಜನ್ಮಭೂಮಿ ಪ್ರತಿಷ್ಠಾನದ ಸಂಚಾಲಕˌ ಸಾಹಿತಿ ಮುರುಗೇಶ ಸಂಗಮ ಮತ್ತು ಕವಯತ್ರಿ ಈರಮ್ಮ ಬೋನೂರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಶಿಕ್ಷಕಿ ತಾರಾಮತಿ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದ್ದು ˌ ಎ.೨೭ ರಂದು ದಾವಣಗೆರೆಯ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಈ ಮೂವರು ಸಾಧಕರಿಗೆ ರಾಷ್ರ‍್ಟಮಟ್ಟದ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಇಂಗಳೇಶ್ವರ ಗ್ರಾಮವು ಸು. ೧೪ ಸಾವಿರ ಜನಸಂಖ್ಯೆ ಹೊಂದಿದೆ. ಗ್ರಾಮಸ್ಥರು ಅನಾರೋಗ್ಯ ಉಂಟಾದರೆ ಬಸವನಬಾಗೇವಾಡಿ ಪಟ್ಟಣದ ತಾಲೂಕು ಆಸ್ಪತ್ರೆಗೆ ತೆರಳಬೇಕಿದೆ. ಇದರ ಸುತ್ತಮುತ್ತಲಿರುವ ಗ್ರಾಮಗಳ ಜನರ ಪರಿಸ್ಥಿತಿಯೂ ಇದೆ ಆಗಿದೆ. ಇದರಿಂದಾಗಿ ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ಇಂಗಳೇಶ್ವರ ಗ್ರಾಮಸ್ಥರ ಬಹುದಿನಗಳಿಂದ ಬೇಡಿಕೆಯಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರಾತಿಗಾಗಿ ಸಚಿವ ಶಿವಾನಂದ ಪಾಟೀಲರಿಗೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಈ ಮೊದಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾಗಿದ್ದ ರಂದೀಪ್ ಡಿ. ಅವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಈ ಕುರಿತು ಶಿಪಾರಸ್ಸು ಮಾಡಲಾಗಿದೆ. ಆದರೂ ಇದುವರೆಗೂ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭವಾಗಿಲ್ಲ. ಕೂಡಲೇ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಬೇಕು. ಇಲ್ಲದೇ ಹೋದರೆ ಮುಂಬರುವ ದಿನಗಳಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಬೇಕಾಗುತ್ತದೆ ಎಂದು ರೈತ ಮುಖಂಡ ಅರವಿಂದ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ವಾಲ್ಮೀಕಿ ಸಮಾಜ ಬಾಂಧವರ ಬಹುದಿನಗಳ ಬೇಡಿಕೆಯಾಗಿದ್ದ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಭೂಮಿ ಪೂಜೆ ನೆರವೇರಿಸಿದ ನಂತರ ವಾಲ್ಮೀಕಿ ಸಮಾಜ ಬಾಂಧವರು ಸಚಿವರಿಗೆ ಮಹರ್ಷಿ ವಾಲ್ಮೀಕಿಯ ಭಾವಚಿತ್ರದ ಪೋಟೊ ಕೊಟ್ಟು ಸನ್ಮಾನಿಸಿದರು.ಪಟ್ಟಣದ ಪುರಸಭೆಯ ೨೦೨೦-೨೧ ನೇ ಸಾಲಿನ ನಗರೋತ್ಥಾನ ನಾಲ್ಕನೇ ಹಂತದ ಯೋಜನೆಯಡಿಯಲ್ಲಿ ರೂ.೨೫.೩೬ ಲಕ್ಷ ವೆಚ್ಚದಲ್ಲಿ ನಂದಿ ತರಕಾರಿ ಮಾರುಕಟ್ಟೆ ಹತ್ತಿರ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಗುತ್ತಿಗೆದಾರರು ವಾಲ್ಮೀಕಿ ಸಮುದಾಯ ಭವನವನ್ನು ನಿಗದಿತ ಅವಧಿಯಲ್ಲಿ ಉತ್ತಮವಾಗಿ ನಿರ್ಮಿಸಬೇಕೆಂದು ಸಚಿವರು ಸೂಚಿಸಿದರು.ಈ ಸಂದರ್ಭದಲ್ಲಿ ರಾಜನಾಳದ ಹುಚ್ಚಪ್ಪಮುತ್ಯಾ, ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ರವಿ ನಾಯ್ಕೋಡಿ, ಸಮಾಜದ ಮುಖಂಡರಾದ ಪಿ.ವೈ.ಕೋಳೂರು,ಅರ್ಜುನ ವಾಲೀಕಾರ, ದೇವಾನಂದ ಲಚ್ಯಾಣ, ಸುರೇಶ ಸಣ್ಮನಿ, ಪ್ರಕಾಶ ರಾಗಪ್ಪಗೋಳ, ರಾಜು ರ್‍ಯಾಗೇರಿ, ಮಹಾಂತೇಶ ಬೇವೂರ, ಹಣಮಂತ ವಾಲೀಕಾರ, ಮಂಜು ಗುಡುಗುಂಟಿ, ಪರಸಪ್ಪ ಬಡಿಗೇರ, ಶಿವಪ್ಪ ಬಡಿಗೇರ, ಶಿವಪ್ಪ ಬಡಿಗೇರ, ಸಿದ್ದು ಮೇಟಿ,…

Read More

ಅಮರ ಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನೋತ್ಸವ ಉದ್ಘಾಟನೆ ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಜಕಣಾಚಾರ್ಯರು ಕಲೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಇಡೀ ಕುಟುಂಬವನ್ನೇ ತ್ಯಾಗ ಮಾಡಿ ಶಿಲ್ಪ ಕಲೆಯನ್ನೇ ತಮ್ಮ ಬದುಕನ್ನಾಗಿಸಿಕೊಂಡಿದ್ದರು. ಅವರು ಈ ನಾಡಿಗೆ ನೀಡಿದ ಕೊಡುಗೆ ಅಪಾರ ಎಂದು ಭಾಜಪಾ ರೈತ ಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.ಪಟ್ಟಣದ ರಾಘವೇಂದ್ರ ಮಂಗಲ ಕಾರ್ಯಾಲಯದಲ್ಲಿ ರವಿವಾರ ತಾಲೂಕು ವಿಶ್ವಕರ್ಮ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಮರ ಶಿಲ್ಪಿ ಜಕಣಾಚಾರ್ಯರ ಸಂಸ್ಮರಣಾ ದಿನೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಧ್ಯ ತಂತ್ರಜ್ಞಾನ ಬೆಳೆದಿದೆ. ಹಿಂದೆ ಯಾವ ತಂತ್ರಜ್ಞಾನ ಕೂಡ ಇರಲಿಲ್ಲ. ಉಳಿ ಹಿಡಿದು ಕೈಗಳಿಂದ ಕೆತ್ತನೆ ಮಾಡಬೇಕಾಗಿತ್ತು. ಅದು ಅಷ್ಟೊಂದು ಸುಲಭವಾಗಿರಲಿಲ್ಲ. ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಅವರು ಕೆತ್ತಿದ ಶಿಲ್ಪ ಕಲೆ, ದೇವಸ್ಥಾನಗಳು ಇಂದಿಗೂ ಅಮರವಾಗಿವೆ. ಇದಕ್ಕೆ ತುಮಕೂರಿನ ಚನ್ನಕೇಶವ ದೇವಸ್ಥಾನ ಸಾಕ್ಷಿಯಾಗಿದೆ ಎಂದರು.ಮುರನಾಳದ ಜಗನ್ನಾಥ ಮಾಹಾಸ್ವಾಮಿಗಳು ಮಾತನಾಡಿ ಜಕಣಾಚಾರ್ಯರ ದೇಹ ದೂರವಾಗಿರಬಹುದು ಆದರೆ ಅವರ ಶಿಲ್ಪ ಕಲೆ ಎಷ್ಟು ಸಾವಿರ ವರ್ಷಗಳಾದರೂ…

Read More

ಉದಯರಶ್ಮಿ ದಿನಪತ್ರಿಕೆ ದೇವರ ಹಿಪ್ಪರಗಿ: ತಾಲ್ಲೂಕಿನ ತಿಳಗೂಳ ಗ್ರಾಮದ ರೈತ ಶಂಕ್ರೆಪ್ಪ ಶಿವಲಿಂಗಪ್ಪ ಚೀಲದ ( 45) ಇವರು ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮದಲ್ಲಿ ಹಾಲಿ ವಾಸವಿದ್ದ ಮನೆಯಲ್ಲಿ ಸಾಲಬಾದೆ ತಾಳಲಾರದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.ಶಂಕ್ರೆಪ್ಪ ಶಿವಲಿಂಗಪ್ಪ ಚೀಲದ (45) ಮೃತಪಟ್ಟವರು. ಅವರು ತಿಳಗೂಳ ಪಿ.ಕೆ.ಪಿ.ಎಸ್. ಬ್ಯಾಂಕಿನಲ್ಲಿ ₹65 ಸಾವಿರ ರೂಪಾಯಿ ಸಾಲ ಮತ್ತು ಊರಿನ ಮನೆಯವರಿಂದ ₹3 ಲಕ್ಷ ರೂಪಾಯಿ ಸಾಲ ಸೇರಿದಂತೆ ಒಟ್ಟು ₹3.65.000 ರೂ ಸಾಲ ತೆಗೆದುಕೊಂಡಿದ್ದರು.’ಈ ವರ್ಷ ತೊಗರಿ ಸರಿಯಾಗಿ ಬೆಳೆಯದ ಕಾರಣ ಸಾಲ ಮುಟ್ಟಿಸುವುದು ಹೇಗೆ’ ಎಂಬ ಚಿಂತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ನಿರ್ಮಲ ಶಂಕ್ರೆಪ್ಪ ಚೀಲದ ನೀಡಿದ ದೂರಿನ ಅನ್ವಯ ಕಲಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಜನೆವರಿ ಕೊನೆಯ ವಾರ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುವುದು. ಸಾಹಿತಿಗಳು ಸಾಹಿತ್ಯಾಸಕ್ತರು ಸೂಕ್ತ ಸಲಹೆ ನೀಡಿ ಸಮ್ಮೇಳನದ ಯಶಸ್ವಿಗೆ ಕಾರಣೀಕರ್ತರಾಗಬೇಕು ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮ್ಮೇಳನದ ಜವಾಬ್ದಾರಿಯನ್ನು ಕೇವಲ ಪದಾಧಿಕಾರಿಗಳೇ ಮಾಡಲಿ ಅನ್ನುವದು ಬೇಡ. ಪದಾಧಿಕಾರಿಗಳಿಗೂ ಮೀರಿದ ಜವಾಬ್ದಾರಿ ಎಲ್ಲ ಸಾಹಿತಿಗಳು ಸಾಹಿತ್ಯಾಸಕ್ತರ ಮೇಲೆ ಇದೆ. ಹಾಗಾಗಿ ಈ ಸಮ್ಮೇಳನವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಿಮ್ಮೆಲ್ಲರದು. ಬರುವ ದಿನಗಳಲ್ಲಿ ಪೂರ್ವಭಾವಿ ಸಭೆ ನಡೆಸುವ ಮೂಲಕ ದಿನಾಂಕ ನಿಗದಿಪಡಿಸಿ, ಜವಾಬ್ದಾರಿಗಳ ರೂಪರೇಶಗಳನ್ನು ತಯಾರಿಸಲಾಗುವದು. ಸಭೆಗೆ ಎಲ್ಲ ಸಾಹಿತಿಗಳು, ಸಾಹಿತ್ಯಾಸಕ್ತರು ಭಾಗಿಯಾಗಿ ಮುಕ್ತ ಮನಸ್ಸಿನಿಂದ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು ಎಂದರು.ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ, ದಲಿತ ಸಾಹಿತಿ ಶಿವಪುತ್ರ ಅಜಮನಿ, ಸಾಹಿತಿಗಳಾದ ಸಿದ್ದನಗೌಡ ಬಿಜ್ಜೂರ, ಸಂಗಮೇಶ ಶಿವಣಗಿ, ಜೆ.ಡಿ.ಮುಲ್ಲಾ, ಪರಶುರಾಮ ಚೌಡಕೇರ ಸೇರಿದಂತೆ ಹಲವರು ಇದ್ದರು.

Read More

ಶ್ರೀ ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಘೋಷಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶತಮಾನೋತ್ಸವ ಕಂಡ ಇಲ್ಲಿನ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಂಸ್ಥೆಯ ವತಿಯಿಂದ ಪ್ರತೀ ವರ್ಷ ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರೆಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಕೊಡಮಾಡುತ್ತಿದ್ದ ಸಿದ್ಧೇಶ್ವರ ರತ್ನ ಪ್ರಶಸ್ತಿಯನ್ನು ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಸ್ಥಗಿತಗೊಳಿಸಲಾಗಿದ್ದು, ಮುಂದಿನ ವರ್ಷದಿಂದ ಮತ್ತೆ ಈ ಪ್ರಶಸ್ತಿ ನೀಡಲು ಪ್ರಾರಂಭಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ಸಿದ್ಧೇಶ್ವರ ಸಂಕ್ರಮಣ ಜಾತ್ರೆಯ ವಿಷಯವಾಗಿ ರವಿವಾರ ಸಿದ್ಧೇಶ್ವರ ಕಲಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್ ಗಿಂತ ಮುಂಚೆ ಪ್ರತೀ ವರ್ಷವೂ ಸಿದ್ಧೇಶ್ವರ ಸಂಸ್ಥೆಯಿಂದ ಸಿದ್ಧೇಶ್ವರ ರತ್ನ ಪ್ರಶಸ್ತಿ ನೀಡುತ್ತ ಬರಲಾಗುತಿತ್ತು. ಈ ಹಿಂದೆ ಹಲವಾರು ಜನ ಸಾಧಕರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕಾರಣಾಂತರದಿಂದ ಪ್ರಶಸ್ತಿ ನೀಡುವುದನ್ನು ನಿಲ್ಲಿಸಲಾಗಿದ್ದು, ಮುಂದಿನ ವರ್ಷದಿಂದ ಮತ್ತೆ ಸಿದ್ಧೇಶ್ವರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಲ್ಲಿನ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಂಸ್ಥೆಯ ನೇತೃತ್ವದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವವು ಇದೇ ದಿ. 11 ರಿಂದ 17 ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ.ಮಕರ ಸಂಕ್ರಮಣದ ನಿಮಿತ್ಯ ಶ್ರದ್ಧಾ-ಭಕ್ತಿ ಹಾಗೂ ಮನರಂಜನೆಗಳೊಂದಿಗೆ ಒಂದು ವಾರ ಕಾಲ ನಡೆಯುವ ಈ ಜಾತ್ರೆಯ ವಿಶೇಷ ಆಕರ್ಷಣೆ ಎಂದರೆ ಸಾಲಂಕೃತ ನಂದಿಧ್ವಜಗಳ ಮೆರವಣಿಗೆ ಹಾಗೂ ಮದ್ದು ಸುಡುವುದು. ಈ ಬಾರಿ ಮದ್ದು ಸುಡುವ ಕಾರ್ಯಕ್ರಮ ಅಂಬೇಡ್ಕರ ಸ್ಟೇಡಿಯಂ ಬದಲಾಗಿ ಶ್ರೀ ಸಿದ್ಧೇಶ್ವರ ದೇವಾಲಯದ ಮುಂದುಗಡೆ ನಡೆಯಲಿದೆ.ರವಿವಾರ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷರಾದ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹಾಗೂ ಚೇರಮನ್ ಬಸಯ್ಯ ಹಿರೇಮಠ ಅವರು ಜಂಟಿ ಪತ್ರಿಕಾಗೋಷ್ಟಿ ನಡೆಸಿ ಸಿದ್ಧೇಶ್ವರ ಜಾತ್ರೆಯ ಕಾರ್ಯಕ್ರಮಗಳ ವಿವರಣೆ ನೀಡಿದರು.ದಿ.11 ರಂದು ಸಂಜೆ 6ಕ್ಕೆ ನಂದಿಧ್ವಜಗಳ ಪೂಜೆ ಹಾಗೂ ಗೋಮಾತೆಯ ಮೆರವಣಿಗೆಯೊಂದಿಗೆ ಜಾತ್ರೆ ಪ್ರಾರಂಭವಾಗುವುದು. ಸಿದ್ಧೇಶ್ವರ ದೇವಸ್ಥಾನದಿಂದ ನಂದಿ ಧ್ವಜಗಳು ಹಾಗೂ ಗೋಮಾತೆಯ ಮೆರವಣಿಗೆ ಹೊರಟು…

Read More