ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ವಾಲ್ಮೀಕಿ ಸಮಾಜ ಬಾಂಧವರ ಬಹುದಿನಗಳ ಬೇಡಿಕೆಯಾಗಿದ್ದ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಸಕ್ಕರೆ, ಜವಳಿ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಭೂಮಿ ಪೂಜೆ ನೆರವೇರಿಸಿದ ನಂತರ ವಾಲ್ಮೀಕಿ ಸಮಾಜ ಬಾಂಧವರು ಸಚಿವರಿಗೆ ಮಹರ್ಷಿ ವಾಲ್ಮೀಕಿಯ ಭಾವಚಿತ್ರದ ಪೋಟೊ ಕೊಟ್ಟು ಸನ್ಮಾನಿಸಿದರು.
ಪಟ್ಟಣದ ಪುರಸಭೆಯ ೨೦೨೦-೨೧ ನೇ ಸಾಲಿನ ನಗರೋತ್ಥಾನ ನಾಲ್ಕನೇ ಹಂತದ ಯೋಜನೆಯಡಿಯಲ್ಲಿ ರೂ.೨೫.೩೬ ಲಕ್ಷ ವೆಚ್ಚದಲ್ಲಿ ನಂದಿ ತರಕಾರಿ ಮಾರುಕಟ್ಟೆ ಹತ್ತಿರ ವಾಲ್ಮೀಕಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಗುತ್ತಿಗೆದಾರರು ವಾಲ್ಮೀಕಿ ಸಮುದಾಯ ಭವನವನ್ನು ನಿಗದಿತ ಅವಧಿಯಲ್ಲಿ ಉತ್ತಮವಾಗಿ ನಿರ್ಮಿಸಬೇಕೆಂದು ಸಚಿವರು ಸೂಚಿಸಿದರು.
ಈ ಸಂದರ್ಭದಲ್ಲಿ ರಾಜನಾಳದ ಹುಚ್ಚಪ್ಪಮುತ್ಯಾ, ವಾಲ್ಮೀಕಿ ಸಮಾಜದ ತಾಲೂಕಾಧ್ಯಕ್ಷ ರವಿ ನಾಯ್ಕೋಡಿ, ಸಮಾಜದ ಮುಖಂಡರಾದ ಪಿ.ವೈ.ಕೋಳೂರು,ಅರ್ಜುನ ವಾಲೀಕಾರ, ದೇವಾನಂದ ಲಚ್ಯಾಣ, ಸುರೇಶ ಸಣ್ಮನಿ, ಪ್ರಕಾಶ ರಾಗಪ್ಪಗೋಳ, ರಾಜು ರ್‍ಯಾಗೇರಿ, ಮಹಾಂತೇಶ ಬೇವೂರ, ಹಣಮಂತ ವಾಲೀಕಾರ, ಮಂಜು ಗುಡುಗುಂಟಿ, ಪರಸಪ್ಪ ಬಡಿಗೇರ, ಶಿವಪ್ಪ ಬಡಿಗೇರ, ಶಿವಪ್ಪ ಬಡಿಗೇರ, ಸಿದ್ದು ಮೇಟಿ, ಬಸನಗೌಡ ಬಿರಾದಾರ, ಯಲ್ಲು ಬಾವೂರ, ಸದು ಕಡ್ಲೇವಾಡ, ಭೀಮಣ್ಣ ದಳವಾಯಿ, ಪರಶು ಕೋಲಕಾರ, ನಾಗು ಬಡಿಗೇರ, ಆನಂದ ಬಡಿಗೇರ, ಶ್ಯಾಸಪ್ಪ ದಿಡ್ಡಿಮನಿ, ಶಿವಾನಂದ ನಾಗರಾಳ, ಸಿದ್ದು ಕಣ್ಮುಚನಾಳ, ಶ್ರೀಶೈಲ ಹೊನ್ನಳ್ಳಿ, ಕಾಂಗ್ರೆಸ್ ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಅನಿಲ ಅಗರವಾಲ, ಶರಣಪ್ಪ ಬೆಲ್ಲದ, ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಇತರರು ಇದ್ದರು

