ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಜನೆವರಿ ಕೊನೆಯ ವಾರ ಅಥವಾ ಫೆಬ್ರುವರಿ ಮೊದಲ ವಾರದಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುವುದು. ಸಾಹಿತಿಗಳು ಸಾಹಿತ್ಯಾಸಕ್ತರು ಸೂಕ್ತ ಸಲಹೆ ನೀಡಿ ಸಮ್ಮೇಳನದ ಯಶಸ್ವಿಗೆ ಕಾರಣೀಕರ್ತರಾಗಬೇಕು ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮ್ಮೇಳನದ ಜವಾಬ್ದಾರಿಯನ್ನು ಕೇವಲ ಪದಾಧಿಕಾರಿಗಳೇ ಮಾಡಲಿ ಅನ್ನುವದು ಬೇಡ. ಪದಾಧಿಕಾರಿಗಳಿಗೂ ಮೀರಿದ ಜವಾಬ್ದಾರಿ ಎಲ್ಲ ಸಾಹಿತಿಗಳು ಸಾಹಿತ್ಯಾಸಕ್ತರ ಮೇಲೆ ಇದೆ. ಹಾಗಾಗಿ ಈ ಸಮ್ಮೇಳನವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ನಿಮ್ಮೆಲ್ಲರದು. ಬರುವ ದಿನಗಳಲ್ಲಿ ಪೂರ್ವಭಾವಿ ಸಭೆ ನಡೆಸುವ ಮೂಲಕ ದಿನಾಂಕ ನಿಗದಿಪಡಿಸಿ, ಜವಾಬ್ದಾರಿಗಳ ರೂಪರೇಶಗಳನ್ನು ತಯಾರಿಸಲಾಗುವದು. ಸಭೆಗೆ ಎಲ್ಲ ಸಾಹಿತಿಗಳು, ಸಾಹಿತ್ಯಾಸಕ್ತರು ಭಾಗಿಯಾಗಿ ಮುಕ್ತ ಮನಸ್ಸಿನಿಂದ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕು ಎಂದರು.
ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ, ದಲಿತ ಸಾಹಿತಿ ಶಿವಪುತ್ರ ಅಜಮನಿ, ಸಾಹಿತಿಗಳಾದ ಸಿದ್ದನಗೌಡ ಬಿಜ್ಜೂರ, ಸಂಗಮೇಶ ಶಿವಣಗಿ, ಜೆ.ಡಿ.ಮುಲ್ಲಾ, ಪರಶುರಾಮ ಚೌಡಕೇರ ಸೇರಿದಂತೆ ಹಲವರು ಇದ್ದರು.

