Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಹೊಯ್ಸಳ, ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ

ಉತ್ತಮ ಸೇವೆಗೆ ಸಿದ್ರಾಮ ಇಟ್ಟಿಗೆ ಐಪಿಪಿಬಿ ಪ್ರಶಸ್ತಿ

ನಿಲ್ಲಿಸಿದ್ದ ಟಿಪ್ಪರ್‌ಗೆ ಬೈಕ್ ಡಿಕ್ಕಿ! ಸವಾರ ಸ್ಥಳದಲ್ಲೇ ಸಾವು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಜ.11ರಿಂದ ವಿಜಯಪುರ ಸಿದ್ಧೇಶ್ವರ ಸಂಕ್ರಮಣ ಜಾತ್ರೆ
(ರಾಜ್ಯ ) ಜಿಲ್ಲೆ

ಜ.11ರಿಂದ ವಿಜಯಪುರ ಸಿದ್ಧೇಶ್ವರ ಸಂಕ್ರಮಣ ಜಾತ್ರೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ಇಲ್ಲಿನ ಪ್ರತಿಷ್ಠಿತ ಶ್ರೀ ಸಿದ್ಧೇಶ್ವರ ಸಂಸ್ಥೆಯ ನೇತೃತ್ವದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಶ್ರೀ ಸಿದ್ಧೇಶ್ವರ ಸಂಕ್ರಮಣ ಜಾತ್ರಾ ಮಹೋತ್ಸವವು ಇದೇ ದಿ. 11 ರಿಂದ 17 ರ ವರೆಗೆ ವಿಜೃಂಭಣೆಯಿಂದ ಜರುಗಲಿದೆ.
ಮಕರ ಸಂಕ್ರಮಣದ ನಿಮಿತ್ಯ ಶ್ರದ್ಧಾ-ಭಕ್ತಿ ಹಾಗೂ ಮನರಂಜನೆಗಳೊಂದಿಗೆ ಒಂದು ವಾರ ಕಾಲ ನಡೆಯುವ ಈ ಜಾತ್ರೆಯ ವಿಶೇಷ ಆಕರ್ಷಣೆ ಎಂದರೆ ಸಾಲಂಕೃತ ನಂದಿಧ್ವಜಗಳ ಮೆರವಣಿಗೆ ಹಾಗೂ ಮದ್ದು ಸುಡುವುದು. ಈ ಬಾರಿ ಮದ್ದು ಸುಡುವ ಕಾರ್ಯಕ್ರಮ ಅಂಬೇಡ್ಕರ ಸ್ಟೇಡಿಯಂ ಬದಲಾಗಿ ಶ್ರೀ ಸಿದ್ಧೇಶ್ವರ ದೇವಾಲಯದ ಮುಂದುಗಡೆ ನಡೆಯಲಿದೆ.
ರವಿವಾರ ಶ್ರೀ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷರಾದ ನಗರ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹಾಗೂ ಚೇರಮನ್ ಬಸಯ್ಯ ಹಿರೇಮಠ ಅವರು ಜಂಟಿ ಪತ್ರಿಕಾಗೋಷ್ಟಿ ನಡೆಸಿ ಸಿದ್ಧೇಶ್ವರ ಜಾತ್ರೆಯ ಕಾರ್ಯಕ್ರಮಗಳ ವಿವರಣೆ ನೀಡಿದರು.
ದಿ.11 ರಂದು ಸಂಜೆ 6ಕ್ಕೆ ನಂದಿಧ್ವಜಗಳ ಪೂಜೆ ಹಾಗೂ ಗೋಮಾತೆಯ ಮೆರವಣಿಗೆಯೊಂದಿಗೆ ಜಾತ್ರೆ ಪ್ರಾರಂಭವಾಗುವುದು. ಸಿದ್ಧೇಶ್ವರ ದೇವಸ್ಥಾನದಿಂದ ನಂದಿ ಧ್ವಜಗಳು ಹಾಗೂ ಗೋಮಾತೆಯ ಮೆರವಣಿಗೆ ಹೊರಟು ಅಟಲ್ ಬಿಹಾರಿ ವಾಜಪೇಯಿ ರಸ್ತೆಯ ಚತುರ್ಮುಖ ಗಣಪತಿ ದೇವಾಲಯ ತಲುಪುವುದು. ನಂತರ ಅಲ್ಲಿ ಚತುರ್ಮುಖ ಗಣಪತಿಗೆ ಪಂಚಾಮೃತ ಅಭಿಷೇಕ ಮಾಡಿ ಪ್ರಸಾದದ ನಂತರ ಮರಳಿ ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ಬರಲಾಗುವುದು.
ದಿ.12 ರಂದು ಮಧ್ಯಾಹ್ನ 12ಕ್ಕೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಲಿಂಗದ ಗುಡಿಯವರೆಗೆ ನಂದಿಧ್ವಜಗಳ ಉತ್ಸವ ನಡೆಯುವುದು. ನಂತರ ಲಿಂಗದ ಗುಡಿಯಲ್ಲಿ 770 ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ಮಾಡಿಸಿ ಮರಳಿ ದೇವಸ್ಥಾನಕ್ಕೆ ಬರುವುದು. ದಿ.೧೩ ರಂದು ಅಕ್ಷತಾರ್ಪಣೆ- ಭೋಗಿ ಕಾರ್ಯಕ್ರಮ ನಡೆಯುವುದು. ಅಂದು ಮಧ್ಯಾಹ್ನ 12.30ಕ್ಕೆ ಶ್ರೀ ಸಿದ್ಧೇಶ್ವರ ದೇವಸ್ಥಾನದ ಮುಂದೆ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಚರಿತ್ರೆ ಓದುವುದು. ನಂತರ ಶ್ರೀ ಸಿದ್ಧೇಶ್ವರ ಯೋಗದಂಡಕ್ಕೆ ಅಕ್ಷತೆ ಕಾರ್ಯಕ್ರಮ, ನಂದಿಧ್ವಜಗಳ ಉತ್ದವ ನಡೆಯುವುದು. ದಿ.14 ರಂದು ಮಧ್ಯಾಹ್ನ 12.30ಕ್ಕೆ ಸಂಕ್ರಮಣ ಆಚರಣೆ, ಸಿದ್ಧೇಶ್ವರ ದೇವಸ್ಥಾನ ಮುಂದುಗಡೆ ಹೋಮ ಹವನ, ನಂತರ ಪಲ್ಲಕ್ಕಿಯೊಂದಿಗೆ ನಂದಿಧ್ವಜಗಳ ಉತ್ಸವ ನಡೆಯುವುದು.
ದಿ.15 ರಂದು ಮಧ್ಯಾಹ್ನ ನಗರದ ಪ್ರಮುಖ ಬೀದಿಗಳಲ್ಲಿ ನಂದಿ ಧ್ವಜಗಳ ಭವ್ಯ ಮೆರವಣಿಗೆ, ರಾತ್ರಿ ೮ ಗಂಟೆಗೆ ಶ್ರೀ ಸಿದ್ಧೇಶ್ವರ ದೇವಾಲಯದ ಮುಂದುಗಡೆ ಸಾಂಕೇತಿಕವಾಗಿ ಆಕರ್ಷಕ ಮದ್ದು ಸುಡುವ ಕಾರ್ಯಕ್ರಮ ನಡೆಯುವುದು. 16 ರಂದು ಬೆಳಿಗ್ಗೆ 11 ಗಂಟೆಗೆ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಭಾರ ಎತ್ತುವ ಸ್ಪರ್ಧೆ, ದಿ.17 ರಂದು ಮಧ್ಯಾಹ್ನ 3ಕ್ಕೆ ಎಸ್.ಎಸ್.ಹೈಸ್ಕೂಲ್ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜಂಗೀ ನಿಕಾಲಿ ಕುಸ್ತಿ ಸ್ಪರ್ಧೆ ನಡೆಯುವುದು. ಈ ಜಾತ್ರೆಯಲ್ಲಿ ಪ್ರತಿದಿನ ರಾತ್ರಿ 8 ರಿಂದ ಮನರಂಜನೆ ಕಾರ್ಯಕ್ರಮಗಳು ಜರುಗುವವು. ಸಿದ್ಧೇಶ್ವರ ಜಾತ್ರೆಯೊಟ್ಟಿಗೆ ತೊರವಿ ಬಳಿ ಶ್ರೀ ಸಿದ್ಧೇಶ್ವರ ಜಾನುವಾರು ಜಾತ್ರೆಯೂ ದೊಡ್ಡ ಪ್ರಮಾಣದಲ್ಲಿ ನೆರವೇರಲಿದೆ.
ಕನ್ನಡನಾಡಿನಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ನಡೆಯುವ ಅಂದದ ಚಂದದ ಶ್ರೀ ಸಿದ್ಧೇಶ್ವರ ಸಂಮಕ್ರಮಣ ಜಾತ್ರಾ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿವಯೋಗಿ ಸಿದ್ಧೇಶ್ವರನ ಕೃಪೆಗೆ ಪಾತ್ರರಾಗಬೇಕೆಂದು ಅವರು ಕೋರಿದರು.
ಪತ್ರಿಕಾಗೋಷ್ಟಿಯಲ್ಲಿ ಸಂಸ್ಥೆಯ ಚೇರಮನ್ ಬಸಯ್ಯ ಹಿರೇಮಠ, ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಗೌರವ ಕಾರ್ಯದರ್ಶಿಗಳಾದ ಸದಾನಂದ ದೇಸಾಯಿ(ಹಂದಿಗನೂರ), ಬಸವರಾಜ ಸೂಗುರ, ಜಂಟಿ ಕಾರ್ಯದರ್ಶಿ ಮಲ್ಲಿಕಾರ್ಜುನ ಸಜ್ಜನ, ಕೋಶಾಧ್ಯಕ್ಷ ಶಿವಾನಂದ ನೀಲಾ, ನಿರ್ದೇಶಕರಾದ ನಿಂಗೊಂಡಪ್ಪ ಗೋಲಾಯಿ, ಮಡಿವಾಳಪ್ಪ ಕರಡಿ, ವಿಜಯಕುಮಾರ ಡೋಣಿ, ಬಸವರಾಜ ಗಣಿ, ಎಸ್.ಎಚ್.ನಾಡಗೌಡ, ಸುಧೀರ ಚಿಂಚಲಿ, ಸದಾಶಿವ ಗುಡ್ಡೋಡಗಿ, ನಾಗಪ್ಪ ಗುಗ್ಗರಿ, ಸಾಯಬಣ್ಣ ಭೋವಿ, ಮಲಕಪ್ಪ ಗಾಣಿಗೇರ, ಮಲ್ಲಿಕಾರ್ಜುನ ಹಕ್ಕಾಪಕ್ಕಿ, ರಮೇಶ ಹಳ್ಳದ ಸೇರಿದಂತೆ ಸಿದ್ಧೇಶ್ವರ ಜಾತ್ರೆಯ ವಿವಿಧ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಹೊಯ್ಸಳ, ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ

ಉತ್ತಮ ಸೇವೆಗೆ ಸಿದ್ರಾಮ ಇಟ್ಟಿಗೆ ಐಪಿಪಿಬಿ ಪ್ರಶಸ್ತಿ

ನಿಲ್ಲಿಸಿದ್ದ ಟಿಪ್ಪರ್‌ಗೆ ಬೈಕ್ ಡಿಕ್ಕಿ! ಸವಾರ ಸ್ಥಳದಲ್ಲೇ ಸಾವು

ಪಿಎಸ್‌ಐ ತಿಪರೆಡ್ಡಿ ಗೆ ಚಕ್ರವರ್ತಿ ನ್ಯೂಸ್ ತಂಡದಿಂದ ಸನ್ಮಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಹೊಯ್ಸಳ, ಕೆಳದಿ ಚೆನ್ನಮ್ಮ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಉತ್ತಮ ಸೇವೆಗೆ ಸಿದ್ರಾಮ ಇಟ್ಟಿಗೆ ಐಪಿಪಿಬಿ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ನಿಲ್ಲಿಸಿದ್ದ ಟಿಪ್ಪರ್‌ಗೆ ಬೈಕ್ ಡಿಕ್ಕಿ! ಸವಾರ ಸ್ಥಳದಲ್ಲೇ ಸಾವು
    In (ರಾಜ್ಯ ) ಜಿಲ್ಲೆ
  • ಪಿಎಸ್‌ಐ ತಿಪರೆಡ್ಡಿ ಗೆ ಚಕ್ರವರ್ತಿ ನ್ಯೂಸ್ ತಂಡದಿಂದ ಸನ್ಮಾನ
    In (ರಾಜ್ಯ ) ಜಿಲ್ಲೆ
  • ಹೊಸ ಪಠ್ಯಕ್ರಮ: ಶಿಕ್ಷಕರಲ್ಲಿ ಬದಲಾವಣೆ ಮನೋಭಾವ ಬೆಳೆಸಬೇಕು
    In (ರಾಜ್ಯ ) ಜಿಲ್ಲೆ
  • ಕ್ರೀಡಾಕೂಟ: ಗೆಲುವು–ಸೋಲಿಗಿಂತ ಕ್ರೀಡಾಸ್ಫೂರ್ತಿಗೆ ಆದ್ಯತೆ
    In (ರಾಜ್ಯ ) ಜಿಲ್ಲೆ
  • ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕ್ರೀಡೆಗಳು ಪೂರಕ
    In (ರಾಜ್ಯ ) ಜಿಲ್ಲೆ
  • ಲೋಕಾಯುಕ್ತ ಪೊಲೀಸ್ ಅಧೀಕ್ಷಕರ ಪ್ರಭಾಿಯಾಗಿ ನಂದಗಾಂವಿ
    In (ರಾಜ್ಯ ) ಜಿಲ್ಲೆ
  • ನಿಮ್ಮೂರಲ್ಲೇ ಉದ್ಯೋಗ, ಗುಳೆ ಹೋಗುವ ಅಗತ್ಯವಿಲ್ಲ
    In (ರಾಜ್ಯ ) ಜಿಲ್ಲೆ
  • ‘ಪ್ರೊ. ಎಚ್.ಟಿ. ಪೋತೆ ಹಸ್ತಪ್ರತಿ’ ಹಾಗೂ ‘ಬೆರಗು’ ಪುಸ್ತಕ ಪ್ರಶಸ್ತಿಗೆ ಕೃತಿಗಳ ಆಹ್ವಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.