Subscribe to Updates
Get the latest creative news from FooBar about art, design and business.
Author: editor.udayarashmi@gmail.com
ರಚನೆ- ನಾಗಮಣಿ ಎಚ್.ಆರ್(’ನಮ್ಮ ಕಥಾ ಅರಮನೆ’ ಬರಹಗಾರರು) ಉದಯರಶ್ಮಿ ದಿನಪತ್ರಿಕೆ
ಲೇಖನ- ಡಾ.ರಾಜಶೇಖರ ನಾಗೂರ ✍(’ನಮ್ಮ ಕಥಾ ಅರಮನೆ’ ಬರಹಗಾರರು) ಉದಯರಶ್ಮಿ ದಿನಪತ್ರಿಕೆ ಕತ್ತಿಯ ಗಾಯಕ್ಕಿಂತ ಮಾತಿನ ಗಾಯ ತುಂಬಾ ಕೆಟ್ಟದ್ದು ಎನ್ನುವ ಮಾತಿನಂತೆ ಮಾತಿನ ಹರಿತ ಎಷ್ಟು ಎಂದು ಎಲ್ಲರಿಗೂ ತಿಳಿದಿರುವಂತದ್ದು. ಇದನ್ನೇ ಹನ್ನೆರಡನೇ ಶತಮಾನದಲ್ಲಿ ನಮ್ಮ ಶರಣರು ಮಾತಿನ ಕುರಿತು “ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ” ಎಂದಿಲ್ಲವೇ.ಶರಣರು, ಸಂತರು, ಜ್ಞಾನಿಗಳು, ಅನುಭಾವಿಗಳು ಮಾತಿನ ಮಹತ್ವವನ್ನು ಅರಿತು ನಾಲಿಗೆಯಿಂದ ಒಳ್ಳೆಯ ನುಡಿಗಳನ್ನಾಡಿ ಜಗತ್ತಿನ ತುಂಬಾ ಜ್ಞಾನಸೌರಭವನ್ನು ಹರಡಿದ್ದಾರೆ. ಅವರ ಮಾತುಗಳು ಮಾನವ ಕುಲದ ನಂದಾ ದೀಪಗಳು.ಬಸವಣ್ಣನ “ದಯವೇ ಧರ್ಮದ ಮೂಲವಯ್ಯಾ”,ಬುದ್ಧನ “ಸರ್ವಂ ಕ್ಷಣಿಕಂ”,ಮಹಾವೀರನ “ಅಹಿಂಸಾ ಪರಮೋಧರ್ಮ”, ಶಂಕರನ “ಬ್ರಹ್ಮ ಸತ್ಯ ಜಗನ್ಮಿಥ್ಯ” ಎಂಬ ದಿವ್ಯ ನುಡಿಗಳು ನಮಗೆ ಮುತ್ತಿನಂತೆ ಅಲ್ವಾ!ಸೂರ್ಯನ ಕಿರಣಗಳು ಮೊಗ್ಗನ್ನು ಅರಳಿಸುವಂತೆ, ದಾರ್ಶನಿಕರ ನುಡಿಗಳು, ನಮ್ಮವರ ಪ್ರೋತ್ಸಾಹಿಕ ನುಡಿಗಳು ಮೊಗ್ಗಿನಂತ ಸಂಕುಚಿತ ಮನಸ್ಸನ್ನು ಅರಳಿಸಬಲ್ಲವು. ಅಂದರೆ ಮನಸು ಅರಳಲು ಸುಂದರ ಮಾತುಗಳ ಕಾವು, ಬೆಳಕು ಬೇಕೇ ಬೇಕು. ಆಗ ಮಾತು ಮುತ್ತಾಗುತ್ತದೆ.ನಾವಾಡುವ ಮಾತುಗಳು ನಮ್ಮ ಸುತ್ತಲೂ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಯ ಐದು ಸ್ಥಾನಗಳಿಗೆ ಮಂಗಳವಾರ ಜರುಗಿದ ಚುನಾವಣೆಯಲ್ಲಿ ಬಿನ್ ಸಾಲಗಾರ ಸಾಮಾನ್ಯ ಭಾಗ-೧೨ ಕ್ಷೇತ್ರದಿಂದ ಈರಣ್ಣ ಚನ್ನಬಸಪ್ಪ ಪಟ್ಟಣಶೆಟ್ಟಿ (೪೯ಮತ), ಸಾತಿಹಾಳ ಸಾಲಗಾರ ಪರಿಶಿಷ್ಟ ಪಂಗಡ ಭಾಗ-೫ ಕ್ಷೇತ್ರದಿಂದ ಅಯ್ಯಪ್ಪ ತಿಪ್ಪಣ್ಣ ನಂದಿಹಾಳ (೨೩ಮತ), ಯಾಳವಾರ ಸಾಲಗಾರ ಸಾಮಾನ್ಯ ಭಾಗ-೬ ಕ್ಷೇತ್ರದಿಂದ ಸಾಹೇಬಗೌಡ ಶಾಂತಪ್ಪ ಉತ್ನಾಳ(೧೩ಮತ), ಹೂವಿನಹಿಪ್ಪರಗಿ ಸಾಲಗಾರ ಸಾಮಾನ್ಯ ಭಾಗ-೩ ಕ್ಷೇತ್ರದಿಂದ ಗಿರೀಶ ಬಸಣ್ಣ ಚಿಮ್ಮಲಗಿ(೨೬ಮತ), ಕುದರಿಸಾಲವಾಡಗಿ ಸಾಲಗಾರ ಮಹಿಳಾ ಭಾಗ-೪ ಕ್ಷೇತ್ರದಿಂದ ಶಂಕ್ರೆಮ್ಮ ಶಶಿಕಾಂತ ಗೌಡರ(೧೮ಮತ) ಪಡೆದುಕೊಂಡಿದ್ದು. ಬಿನ್ ಸಾಲಗಾರ ಸಾಮಾನ್ಯ ಭಾಗ-೧೨ ಇದರ ಫಲಿತಾಂಶವನ್ನು ಕಲಬುರಗಿ ಉಚ್ಛನ್ಯಾಯಾಲಯದ ಪೀಠದಲ್ಲಿ ದಾಖಲಾಗಿರುವ ಪ್ರಕರಣದ ಮುಂದಿನ ಆದೇಶಕ್ಕೆ ಒಳಪಟ್ಟು ಘೋಷಣೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕ ಚೇತನ್ ಭಾವಿಕಟ್ಟಿ ಘೋಷಿಸಿದರು.ತಾಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ೧೩ ಆಡಳಿತ ಮಂಡಳಿ ಸದಸ್ಯ ಬಲ ಹೊಂದಿದೆ.…
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ತಿಕೋಟಾದ ಖ್ಯಾತ ನೇತ್ರ ವೈದ್ಯರು, ಬಸವಣ್ಣನವರ ಅನುಯಾಯಿಗಳು, ವಚನ ಸಾಹಿತ್ಯದ ಪ್ರಖರ ಪ್ರತಿಪಾದಕರು, ಅನುಭಾವಿಗಳೂ ಆಗಿರುವ ಶ್ರೀ ಪ್ರಕಾಶ್ ಪಾರ್ನಾಕರ ಅವರನ್ನು ಜಿಲ್ಲಾ ಕ ಸಾ ಪ ಅಧ್ಯಕ್ಷ ಹಾಷಿಂಪೀರ ವಾಲಿಕಾರ ಸಮ್ಮತಿ ಮೇರೆಗೆ ನೇಮಕ ಮಾಡಲಾಗಿದೆ.ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಕ ಸಾ ಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮುಂಬರುವ ದಿನಗಳಲ್ಲಿ ಜರುಗಲಿರುವ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮ್ಮೇಳನದ ಯಶಸ್ಸಿಗೆ ಶ್ರಮವಹಿಸಲು ಕೋರಲಾಗಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಪೂಜಾ ತಳವಾರ ಅವರು ”ಕಮ್ಯುನಿಕೇಶನ್ ಟೆಕ್ನಾಲಾಜಿಸ್ ಅಂಡ್ ವುಮೆನ್ ಎಂಪವರ್‌ಮೆಂಟ್: ಎ ಸೋಷಿಯೋಲಾಜಿಕಲ್ ಸ್ಟಡಿ” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿದೆ.ಪೂಜಾ ತಳವಾರ ಅವರು ಸಮಾಜಶಾಸ್ತ್ರ ವಿಭಾಗದ ಪ್ರೊ.ಎಮ್.ಪಿ.ಬಳಿಗಾರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು.ಡಾಕ್ಟರೇಟ್ ಪದವಿ ಪಡೆದಿರುವ ಡಾ.ಪೂಜಾ ತಳವಾರ ಅವರನ್ನು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ. ಚಂದ್ರಶೇಖರ ಅಭಿನಂದಿಸಿದ್ದಾರೆ.
ಸಿಎಂ ಸಿದ್ದರಾಮಯ್ಯರಿಂದ ಏನೇನೋ ಆಟ | ಔತಣಕೂಟಗಳ ಏರ್ಪಾಡು ಮಾಡಿಸುತ್ತಿರುವುದೇ ಸಿಎಂ | ಸಿಎಂ ಸಿದ್ದರಾಮಯ್ಯಗೆ ಕುಕ್ಕಿದ ಹಳ್ಳಿಹಕ್ಕಿ | ಡಿಸಿಎಂ ಡಿಕೆಶಿ ಪರ ಬ್ಯಾಟಿಂಗ್ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ರಾಜ್ಯದಲ್ಲಿನ ಅಹಿಂದ ಸಚಿವರುಗಳ ಡಿನ್ನರ್ ಮೀಟಿಂಗ್ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ವಿದೇಶಿ ಪ್ರವಾಸದಲ್ಲಿದ್ದಾಗಲೇ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದರು. ಈ ಡಿನ್ನರ್ ಮೀಟಿಂಗ್ ಕುರಿತಂತೆ ಇದೀಗ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು, ಡಿಸಿಎಂ ಡಿಕೆ ಶಿವಕುಮಾರ್ ಪರ ಬ್ಯಾಟ್ ಬೀಸಿದ್ದಾರೆ. ಔತಣಕೂಟಗಳನ್ನು ಏರ್ಪಾಡು ಮಾಡಿಸುತ್ತಿರುವುದೇ ಸಿಎಂ ಸಿದ್ದರಾಮಯ್ಯ. 30 ತಿಂಗಳ ನಂತರ ಸಿಎಂ ಸ್ಥಾನದಿಂದ ಇಳಿಯಬೇಕು. ಹೀಗಾಗಿ ಸಿದ್ದರಾಮಯ್ಯ ಏನೇನೋ ಆಟಗಳನ್ನು ಆಡುತ್ತಿದ್ದಾರೆ ಎಂದು ಎಚ್. ವಿಶ್ವನಾಥ್ ಆರೋಪಿಸಿದ್ದಾರೆ.ಯಾರು ಏನೇ ಮಾಡಿದರೂ ಡಿಕೆ ಶಿವಕುಮಾರ್…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ದೈಹಿಕ ಕ್ರೀಡೆಗಳು ಆರೋಗ್ಯಕ್ಕೆ ಸಹಕಾರಿ. ಸದೃಢ ಬುದ್ಧಿ ಬರಲು ದೇಹವನ್ನು ದಂಡಿಸಬೇಕು. ಕ್ರಿಕೆಟ್ ಆಟ ದೇಹದ ಎಲ್ಲ ಅಂಗಗಳಿಗೆ ವ್ಯಾಯಾಮ ನೀಡುತ್ತದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲಲಿ ಆಯೋಜಿಸಲಾದ ಎಂಪಿಎಲ್ ಕ್ರಿಕೆಟ್ ಟೂರ್ನಾಮೆಂಟ್ ಸೀಸನ್-೭ ನ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.ದೈಹಿಕ ಕ್ರೀಡೆಗಳನ್ನು ಆಡುವದನ್ನು ಹೆಚ್ಚಾಗಿ ರೂಢಿಸಿಕೊಳ್ಳಬೇಕು. ಸೂಲು ಗೆಲವುಗಳನ್ನು ಸಮನಾಗಿ ಸ್ವೀಕರಿಸಬೇಕು. ತಾಳ್ಮೆ ಶಿಸ್ತನ್ನು ಕಾಪಾಡಿಕೊಳ್ಳುವದು ಅವಶ್ಯಕ. ಗೆದ್ದವರು ಬೀಗದೇ ಸೋತವರು ಕುಗ್ಗದೇ ಮುನ್ನಡೆಯುವ ಪ್ರವೃತ್ತಿಯನ್ನು ಪ್ರತಿಯೊಬ್ಬ ಆಟಗಾರರು ಬೆಳೆಸಿಕೊಳ್ಳಬೇಕು ಎಂದರು.ಸೀಸನ್ ನ ರುವಾರಿ ಕಾಮರಾಜ ಬಿರಾದಾರ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಕಾಂಗ್ರೆಸ್ ಮುಖಂಡರಾದ ಶಿವಶಂಕರಗೌಡ ಹಿರೇಗೌಡರ ಮತ್ತು ಸಂಗೀತಾ ನಾಡಗೌಡ, ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಗ್ರಾ.ಪಂ ಮಾಜಿ ಅಧ್ಯಕ್ಷ ಜಾವೇದ ಇನಾಮದಾರ, ಪ್ರಮುಖರಾದ ಗುರು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದಲ್ಲಿರುವ ರಿ.ಸ.ನಂ ೧೦೨೯ ಮತ್ತು ೮೩೪ರಲ್ಲಿ ಕಳೆದ ೩೫ ವರ್ಷಗಳಿಂದ ವ್ಯಾಪಾರ-ಉದ್ದೋಗ ಮಾಡಿಕೊಂಡು ಜೀವವ ಸಾಗಿಸುತ್ತಿರುವ ಬಡ ಮುಸ್ಲಿಂ ಸಮುದಾಯದ ಜನರನ್ನು ಏಕಾ ಏಕಿ ಒಕ್ಕಲೆಬ್ಬಿಸುತ್ತಿರುವುದು ಜನ ಸಾಮಾನ್ಯರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಟಿಪ್ಪು ಸುಲ್ತಾನ್ ಗ್ಯಾರೇಜ್ ಮಾಲೀಕರು ಹಾಗೂ ಕಾರ್ಮಿಕರ ಸಂಘದ ಅಧ್ಯಕ್ಷ ಎ.ಎ.ಸಿಂದಗಿಕರ ಹೇಳಿದರು.ಪಟ್ಟಣದ ಆಡಳಿತ ಸೌಧದಲ್ಲಿ ಟಿಪ್ಪು ಸುಲ್ತಾನ್ ಗ್ಯಾರೇಜ್ ಮಾಲೀಕರು ಹಾಗೂ ಕಾರ್ಮಿಕರ ಸಂಘದ ವತಿಯಿಂದ ವಕ್ಪ್ ಆಸ್ತಿಯ ಜಾಗದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಿಸದೇ ಬಾಡಿಗೆ ಪಡೆದು ಇದ್ದವರಿಗೆ ಜಾಗ ಮುಂದುವರೆಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ಮೂರು ತಿಂಗಳ ಹಿಂದೆ ಕೆಲವರು ಮುಸ್ಲಿಂ ಕಬರಸ್ತಾನ್ ಕಮಿಟಿಯ ಹೆಸರಿನಿಂದ ನಾವು ವಾಸವಾಗಿರುವ ನಿವೇಶನ ತೆರವು ಮಾಡಬೇಕು ಎಂದು ಅಟೋದಲ್ಲಿ ಪ್ರಚಾರ ಮಾಡಿ ನಮ್ಮನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದಾಗ ನಾವು ಪ್ರತಿಭಟನೆ ಮಾಡಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ೧೬-೦೮-೨೦೨೪ರಂದು ಬೃಹತ್ ಮೆರವಣಿಗೆಯ ಮೂಲಕ ತೆರವು ರದ್ದುಗೊಳಿಸುವಂತೆ ಮನವಿ ಸಲ್ಲಿಸದ್ದೇವು. ಇದಕ್ಕೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಮ್ಮ ತಂದೆಯವರ ಅವಧಿಯ ೨೦೨೧೮-೧೯ನೆಯ ಸಾಲಿನಲ್ಲಿ ೨ ಕಬ್ಬು ಕಟಾವ ಯಂತ್ರಗಳನ್ನು ರೈತರಿಗೆ ಸಬ್ಸಿಡಿ ದರದಲ್ಲಿ ಒದಗಿಸಲಾಗಿತ್ತು. ಇಂದು ಮತ್ತೆ ನನ್ನ ಅವಧಿಯಲ್ಲಿ ರೈತರಿಗೆ ಮೂರು ಕಬ್ಬ ಕಟಾವ್ ಯಂತ್ರಗಳನ್ನು ರೈತರಿಗೆ ಒದಗಿಸುತ್ತಿರುವುದು ಅತೀ ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ೨೦೨೪-೨೫ನೆಯ ಸಾಲಿನ ಕೃಷಿ ಇಲಾಕೆಯ ವತಿಯಿಂದ ಹೈಟೆಕ್ ಹಾರ್ವೇಸ್ಟರ್ ಯೋಜನೆಯ ಅಡಿಯಲ್ಲಿ ಕಬ್ಬು ಕಟಾವ್ ಯಂತ್ರವನ್ನು ವಿತರಣೆ ಮಾಡಿ ಮಾತನಾಡಿದರು.ಸರಕಾರ ಹಲವಾರು ಯೋಜನೆಗಳ ಮೂಲಕ ರೈತರಿಗೆ ಅನೇಕ ಸವಲತ್ತುಗಳನ್ನು ಒದಗಿಸಿಕೊಟ್ಟಿದೆ. ಅವುಗಳಲ್ಲಿ ಮುಖ್ಯವಾಗಿ ಕಬ್ಬ ಬೆಳೆಗಾಋ ರೈತರಿಗೆ ಕಬ್ಬಿನ ಕಟಾವಿನದೇ ದೊಡ್ಡ ಸಮಸ್ಯೆ. ಟ್ರ್ಯಾಕ್ಟರ್ ಮಾಲೀಕರು ನೆರೆ ರಾಜ್ಯಗಳಿಂದ ಕಾರ್ಮಿಕರಿಗೆ ಲಕ್ಷಾಂತರ ರೂಪಾಯಿ ಮುಂಗಡ ಕೊಟ್ಟು ಕರೆತರುತ್ತಾರೆ. ಅವರಲ್ಲಿ ಕೇಲವರು ಹಣ ತೆಗೆದುಕೊಂಡು ಟ್ರ್ಯಾಕ್ಟರ್ ಮಾಲೀಕರಿಗೆ ಚಳ್ಳೆ ಹಣ್ಣು ತಿನಿಸುತ್ತಾರೆ. ಇದರಿಂದಾಗಿ ಹಲವಾರು ಟ್ರ್ಯಾಕ್ಟರ್ ರೈತ ಮಾಲೀಕರು ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ. ಅಲ್ಲದೇ ಸಮಯಕ್ಕೆ ಸರಿಯಾಗಿ ಕಬ್ಬು…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಶೋಷಿತ ಸಮುದಾಯದಿಂದ ಬಂದ ಪ್ರಿಯಾಂಕ ಖರ್ಗೆ ಮತ್ತು ಜಿ.ಪರಮೇಶ್ವರ ಅವರನ್ನು ಗುರಿ ಮಾಡಿ ಅವರನ್ನು ನಾಶ ಮಾಡಲು ಹೋದರೆ ನೀವೇ ನಾಶವಾಗಿ ಹೋಗುತ್ತೀರಿ ಎಂದು ಡಿಎಸ್‌ಎಸ್ ಮುಖಂಡ ಶರಣು ಸಿಂಧೆ ಹೇಳಿದರು.ಈ ಕುರಿತು ಮಂಗಳವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ದಲಿತರನ್ನು ಸಿಎಂ ಆಗೋಕೆ ಬಿಡ್ತಾಯಿಲ್ಲ. ಪ್ರಿಯಾಂಕಾ ಖರ್ಗೆ ಮನೆ ಮುತ್ತಿಗೆ ಹಾಕ್ತೀರಿ, ಮುತ್ತಿಗೆ ಹಾಕಿದ್ರೆ ನಾವು ಸುಮ್ನೆ ಇರಬೇಕಾ ಅಂಬೇಡ್ಕರ್ ನಿಮಗೆ ಫ್ಯಾಷನ್ ಅನ್ನೋದು ನಿಮಗೆ ಇರಬೇಕು ಆದರೆ ನಮಗೆ ಅಂಬೇಡ್ಕರ ಅಂದ್ರೆ ಉಸಿರು. ಪ್ರಿಯಾಂಕ ಖರ್ಗೆ ಮತ್ತು ಜಿ.ಪರಮೇಶ್ವರ್ ಈ ಸಮುದಾಯದ ನಾಯಕರು ಅವರ ನಾಯಕತ್ವವನ್ನು ನಾಶ ಮಾಡೋಕೆ ಹೋದರೆ ನೀವು ನಾಶ ಆಗ್ತೀರಿ. ಪ್ರಿಯಾಂಕ ಖರ್ಗೆ ಹೆಸರು ಯಾವ ಡೆತ್ ನೋಟನಲ್ಲಿದೆ.ಪ್ರಿಯಾಂಕ ಖರ್ಗೆ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಮೂರ್ಖತನದ ಪರಮಾವಧಿ. ಕಾನೂನು ಸುವ್ಯವಸ್ಥೆ ಕಾಪಾಡುವುದು ನಮ್ಮ ಕರ್ತವ್ಯವು ಆಗಿರುವುದರಿಂದ ನಾವು ಸುಮ್ಮನಿದ್ದೇವೆ. ಬಿಜೆಪಿಗರ ಹಗರಣಗಳನ್ನು ಪ್ರಿಯಾಂಕ ಖರ್ಗೆ ಅವರು ಎಳೆ…
