ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ದೈಹಿಕ ಕ್ರೀಡೆಗಳು ಆರೋಗ್ಯಕ್ಕೆ ಸಹಕಾರಿ. ಸದೃಢ ಬುದ್ಧಿ ಬರಲು ದೇಹವನ್ನು ದಂಡಿಸಬೇಕು. ಕ್ರಿಕೆಟ್ ಆಟ ದೇಹದ ಎಲ್ಲ ಅಂಗಗಳಿಗೆ ವ್ಯಾಯಾಮ ನೀಡುತ್ತದೆ ಎಂದು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ಶಿವಾಚಾರ್ಯರು ನುಡಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲಲಿ ಆಯೋಜಿಸಲಾದ ಎಂಪಿಎಲ್ ಕ್ರಿಕೆಟ್ ಟೂರ್ನಾಮೆಂಟ್ ಸೀಸನ್-೭ ನ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.
ದೈಹಿಕ ಕ್ರೀಡೆಗಳನ್ನು ಆಡುವದನ್ನು ಹೆಚ್ಚಾಗಿ ರೂಢಿಸಿಕೊಳ್ಳಬೇಕು. ಸೂಲು ಗೆಲವುಗಳನ್ನು ಸಮನಾಗಿ ಸ್ವೀಕರಿಸಬೇಕು. ತಾಳ್ಮೆ ಶಿಸ್ತನ್ನು ಕಾಪಾಡಿಕೊಳ್ಳುವದು ಅವಶ್ಯಕ. ಗೆದ್ದವರು ಬೀಗದೇ ಸೋತವರು ಕುಗ್ಗದೇ ಮುನ್ನಡೆಯುವ ಪ್ರವೃತ್ತಿಯನ್ನು ಪ್ರತಿಯೊಬ್ಬ ಆಟಗಾರರು ಬೆಳೆಸಿಕೊಳ್ಳಬೇಕು ಎಂದರು.
ಸೀಸನ್ ನ ರುವಾರಿ ಕಾಮರಾಜ ಬಿರಾದಾರ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಕಾಂಗ್ರೆಸ್ ಮುಖಂಡರಾದ ಶಿವಶಂಕರಗೌಡ ಹಿರೇಗೌಡರ ಮತ್ತು ಸಂಗೀತಾ ನಾಡಗೌಡ, ಎಪಿಎಂಸಿ ನಿರ್ದೇಶಕ ವಾಯ್.ಎಚ್.ವಿಜಯಕರ ಮಾತನಾಡಿದರು. ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಗ್ರಾ.ಪಂ ಮಾಜಿ ಅಧ್ಯಕ್ಷ ಜಾವೇದ ಇನಾಮದಾರ, ಪ್ರಮುಖರಾದ ಗುರು ದೇಶಮುಖ, ಯಾಸೀನ ಸೋಠೆ, ಅಮರೇಶ ಗೂಳಿ, ಅಶೋಕ ಚಟ್ಟೇರ, ರುದ್ರಗೌಡ ಅಂಗಡಗೇರಿ, ಸಂಗಣ್ಣ ಮೇಲಿನಮನಿ, ಹುಸೇನ ಮುಲ್ಲಾ, ರಫೀಕ ಶಿರೋಳ, ಆನಂದ ಹಿರೇಮಠ, ಹರೀಶ ಬೆವೂರ, ರವಿ ಅಮರಣ್ಣವರ, ರಂಜಾನ ನದಾಫ್, ನಜೀರ ದಾಂಡಿಯಾ, ಬಾಬರ ಮುಲ್ಲಾ ಸೇರಿದಂತೆ ಮತ್ತೀತರರು ಇದ್ದರು.

