ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ತಿಕೋಟಾದ ಖ್ಯಾತ ನೇತ್ರ ವೈದ್ಯರು, ಬಸವಣ್ಣನವರ ಅನುಯಾಯಿಗಳು, ವಚನ ಸಾಹಿತ್ಯದ ಪ್ರಖರ ಪ್ರತಿಪಾದಕರು, ಅನುಭಾವಿಗಳೂ ಆಗಿರುವ ಶ್ರೀ ಪ್ರಕಾಶ್ ಪಾರ್ನಾಕರ ಅವರನ್ನು ಜಿಲ್ಲಾ ಕ ಸಾ ಪ ಅಧ್ಯಕ್ಷ ಹಾಷಿಂಪೀರ ವಾಲಿಕಾರ ಸಮ್ಮತಿ ಮೇರೆಗೆ ನೇಮಕ ಮಾಡಲಾಗಿದೆ.
ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿಗೆ ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ ಎಂದು ಕ ಸಾ ಪ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಜರುಗಲಿರುವ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಮ್ಮೇಳನದ ಯಶಸ್ಸಿಗೆ ಶ್ರಮವಹಿಸಲು ಕೋರಲಾಗಿದೆ.

