ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರದಲ್ಲಿರುವ ರಿ.ಸ.ನಂ ೧೦೨೯ ಮತ್ತು ೮೩೪ರಲ್ಲಿ ಕಳೆದ ೩೫ ವರ್ಷಗಳಿಂದ ವ್ಯಾಪಾರ-ಉದ್ದೋಗ ಮಾಡಿಕೊಂಡು ಜೀವವ ಸಾಗಿಸುತ್ತಿರುವ ಬಡ ಮುಸ್ಲಿಂ ಸಮುದಾಯದ ಜನರನ್ನು ಏಕಾ ಏಕಿ ಒಕ್ಕಲೆಬ್ಬಿಸುತ್ತಿರುವುದು ಜನ ಸಾಮಾನ್ಯರಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಟಿಪ್ಪು ಸುಲ್ತಾನ್ ಗ್ಯಾರೇಜ್ ಮಾಲೀಕರು ಹಾಗೂ ಕಾರ್ಮಿಕರ ಸಂಘದ ಅಧ್ಯಕ್ಷ ಎ.ಎ.ಸಿಂದಗಿಕರ ಹೇಳಿದರು.
ಪಟ್ಟಣದ ಆಡಳಿತ ಸೌಧದಲ್ಲಿ ಟಿಪ್ಪು ಸುಲ್ತಾನ್ ಗ್ಯಾರೇಜ್ ಮಾಲೀಕರು ಹಾಗೂ ಕಾರ್ಮಿಕರ ಸಂಘದ ವತಿಯಿಂದ ವಕ್ಪ್ ಆಸ್ತಿಯ ಜಾಗದಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ಖಾಲಿ ಮಾಡಿಸದೇ ಬಾಡಿಗೆ ಪಡೆದು ಇದ್ದವರಿಗೆ ಜಾಗ ಮುಂದುವರೆಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿ ಮಾತನಾಡಿದ ಅವರು, ಕಳೆದ ಮೂರು ತಿಂಗಳ ಹಿಂದೆ ಕೆಲವರು ಮುಸ್ಲಿಂ ಕಬರಸ್ತಾನ್ ಕಮಿಟಿಯ ಹೆಸರಿನಿಂದ ನಾವು ವಾಸವಾಗಿರುವ ನಿವೇಶನ ತೆರವು ಮಾಡಬೇಕು ಎಂದು ಅಟೋದಲ್ಲಿ ಪ್ರಚಾರ ಮಾಡಿ ನಮ್ಮನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸಿದಾಗ ನಾವು ಪ್ರತಿಭಟನೆ ಮಾಡಿ ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ೧೬-೦೮-೨೦೨೪ರಂದು ಬೃಹತ್ ಮೆರವಣಿಗೆಯ ಮೂಲಕ ತೆರವು ರದ್ದುಗೊಳಿಸುವಂತೆ ಮನವಿ ಸಲ್ಲಿಸದ್ದೇವು. ಇದಕ್ಕೆ ಮೇಲಾಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿರುವುದಿಲ್ಲ. ಇದೇ ಭೀತಿಯಲ್ಲಿ ಇಲ್ಲಿನ ಫಲಾನುಭವಿ ವ್ಯಾಪಾರಸ್ಥರಿಗೆ ಮುಂದೇನೂ ಎಂಬ ಆತಂಕ ಮನೆಮಾಡಿದೆ. ಕಾರಣ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಎಂ.ಎ.ಸಿಂದಗಿಕರ, ಎ.ಎ.ದುದನಿ, ಆಯ್.ಎಚ್.ಹಸರಗುಂಡಗಿ ಜಾಫರ್ ಇನಾಮದಾರ, ಅಬ್ದುಲ ಮುಲ್ಲಾ, ಬಂದೇನಮಾನ್ ಗುಂದಗಿ, ಬಸೀರಸಾಬ್ ಕಡಣಿ, ಜಾವೀದ್ ಭಾಗವಾನ, ಪಿ.ಎಂ.ನಿಂಬರಗಿ, ಕಾಶೀಮ ಆಳಂದ, ಎಮ್.ಎಸ್.ದೇಸುಣಗಿ, ಕಪೀಲ ಈಳಗೇರ, ಮಹಿಬೂಬ ಮುಲ್ಲಾ, ಅನ್ವರ ಇನಾಮದಾರ ಸೇರಿದಂತೆ ಹಲವರಿದ್ದರು.

