Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಭಾವರಶ್ಮಿ»ಮಾತೇ ಮುತ್ತು ಮಾತೇ ಮೃತ್ಯು
ಭಾವರಶ್ಮಿ

ಮಾತೇ ಮುತ್ತು ಮಾತೇ ಮೃತ್ಯು

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಡಾ.ರಾಜಶೇಖರ ನಾಗೂರ ✍
(’ನಮ್ಮ ಕಥಾ ಅರಮನೆ’ ಬರಹಗಾರರು)

ಉದಯರಶ್ಮಿ ದಿನಪತ್ರಿಕೆ

ಕತ್ತಿಯ ಗಾಯಕ್ಕಿಂತ ಮಾತಿನ ಗಾಯ ತುಂಬಾ ಕೆಟ್ಟದ್ದು ಎನ್ನುವ ಮಾತಿನಂತೆ ಮಾತಿನ ಹರಿತ ಎಷ್ಟು ಎಂದು ಎಲ್ಲರಿಗೂ ತಿಳಿದಿರುವಂತದ್ದು. ಇದನ್ನೇ ಹನ್ನೆರಡನೇ ಶತಮಾನದಲ್ಲಿ ನಮ್ಮ ಶರಣರು ಮಾತಿನ ಕುರಿತು “ಅಯ್ಯಾ ಎಂದರೆ ಸ್ವರ್ಗ, ಎಲವೋ ಎಂದರೆ ನರಕ” ಎಂದಿಲ್ಲವೇ.
ಶರಣರು, ಸಂತರು, ಜ್ಞಾನಿಗಳು, ಅನುಭಾವಿಗಳು ಮಾತಿನ ಮಹತ್ವವನ್ನು ಅರಿತು ನಾಲಿಗೆಯಿಂದ ಒಳ್ಳೆಯ ನುಡಿಗಳನ್ನಾಡಿ ಜಗತ್ತಿನ ತುಂಬಾ ಜ್ಞಾನಸೌರಭವನ್ನು ಹರಡಿದ್ದಾರೆ. ಅವರ ಮಾತುಗಳು ಮಾನವ ಕುಲದ ನಂದಾ ದೀಪಗಳು.
ಬಸವಣ್ಣನ “ದಯವೇ ಧರ್ಮದ ಮೂಲವಯ್ಯಾ”,
ಬುದ್ಧನ “ಸರ್ವಂ ಕ್ಷಣಿಕಂ”,
ಮಹಾವೀರನ “ಅಹಿಂಸಾ ಪರಮೋಧರ್ಮ”,


ಶಂಕರನ “ಬ್ರಹ್ಮ ಸತ್ಯ ಜಗನ್ಮಿಥ್ಯ” ಎಂಬ ದಿವ್ಯ ನುಡಿಗಳು ನಮಗೆ ಮುತ್ತಿನಂತೆ ಅಲ್ವಾ!
ಸೂರ್ಯನ ಕಿರಣಗಳು ಮೊಗ್ಗನ್ನು ಅರಳಿಸುವಂತೆ, ದಾರ್ಶನಿಕರ ನುಡಿಗಳು, ನಮ್ಮವರ ಪ್ರೋತ್ಸಾಹಿಕ ನುಡಿಗಳು ಮೊಗ್ಗಿನಂತ ಸಂಕುಚಿತ ಮನಸ್ಸನ್ನು ಅರಳಿಸಬಲ್ಲವು. ಅಂದರೆ ಮನಸು ಅರಳಲು ಸುಂದರ ಮಾತುಗಳ ಕಾವು, ಬೆಳಕು ಬೇಕೇ ಬೇಕು. ಆಗ ಮಾತು ಮುತ್ತಾಗುತ್ತದೆ.
ನಾವಾಡುವ ಮಾತುಗಳು ನಮ್ಮ ಸುತ್ತಲೂ ಸ್ವರ್ಗವನ್ನು ಸೃಷ್ಟಿಸುವ ಹಾಗಿರಬೇಕು. ನರಕವನ್ನಲ್ಲ. ಕೆಲವರಂತೂ ಇನ್ನೊಬ್ಬರ ಬಗ್ಗೆ ಮಾತನಾಡುವುದರಲ್ಲೇ ಜೀವನ ಕಳೆದು ಶೂನ್ಯವನ್ನು ಸಂಪಾದಿಸುತ್ತಾರೆ. ಈ ಸಾಹಿತ್ಯಕ ವೇದಿಕೆಗಳಲ್ಲಿ ಅನೇಕರು ನಿಮ್ಮನ್ನು ದಾರಿ ತಪ್ಪಿಸುವ ಮಾತನಾಡಿರಬಹುದು. ಅಲ್ಲಿ ಬರೆಯಬೇಡಿ, ಇಲ್ಲಿ ಬರೆಯಬೇಡಿ ಎಂದು ಹೇಳುತ್ತಾ ನಮ್ಮ ವೇದಿಕೆಯಲ್ಲಿ ಮಾತ್ರ ಬರೆಯಿರಿ ಎಂಬ ಮಾತುಗಳು ನಿಮ್ಮ ಅನುಭವಕ್ಕೆ ಬಂದಿರಬಹುದು. ಇಂತವರ ಮಾತುಗಳು ಸಾಹಿತ್ಯಾಸಕ್ತರ ಸೃಜನಶೀಲತೆಯನ್ನು ಸಾಯಿಸುತ್ತವೆ. ಇದು ಸಾಹಿತ್ಯದ ಸೋಲು. ಯಾವ ಬರಹಗಾರ ಸ್ವತಂತ್ರವಾಗಿ ಚಿಂತನೆಯನ್ನು ಬಿತ್ತಲು ಇನ್ನೊಬ್ಬರ ಮಾತಿನ ಆದಿನಕ್ಕೆ ಒಳಪಡುತ್ತಾನೋ ಅವನ ಸಾಹಿತ್ಯದ ಸೊಗಡು ಸೊರಗಿದಂತೆಯೇ. ಇಂತಹ ನಕಾರಾತ್ಮಕ ಮಾತುಗಳು ಮೃತ್ಯುವಿಗೆ ಸಮ. ದೇವರು ಕೊಟ್ಟ ನಾಲಿಗೆಯನ್ನು ಬಿರುನುಡಿಗಳಾಡುವುದಕ್ಕೆ ಉಪಯೋಗಿಸದೇ ‘ಸೂಳ್ನೂಡಿ’ಗೆ ಅಂದರೆ ಬೆಳಕಿನಂತಹ ನುಡಿಗೆ ಉಪಯೋಗಿಸಿದರೆ ಮಾನವ ಜನ್ಮ ಸಾರ್ಥಕ.
ಈ ಕಾರಣಕ್ಕೆ ಅಲ್ಲಮರು ಮಾತೆಬುಂದು “ಜ್ಯೋತಿರ್ಲಿಂಗ” ಎಂದರೆ ಬಸವಣ್ಣನವರು “ಲಿಂಗನುಡಿ” ಎಂದಿದ್ದಾರೆ.

ಮಾತಿನಿಂ ನಗೆನುಡಿಯು, ಮಾತಿನಿಂ ಹಗೆ ಕೊಲೆಯು
ಮಾತಿನಿಂ ಸರ್ವ ಸಂಪದವು | ಲೋಕಕ್ಕೆ
ಮಾತೇ ಮಾಣಿಕ್ಯ ಸರ್ವಜ್ಞ ||

ಎಂಬ ಮೇಲಿನ ಸರ್ವಜ್ಞನ ವಚನ ಸಾರುವುದಿಷ್ಟೇ ಮಾತೇ ಮುತ್ತು, ಮಾತೇ ಮೃತ್ಯು. ಹಾಗಾದರೆ ಮುತ್ತಿನಂತ ಮಾತುಗಳನ್ನಾಡೋಣ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026

ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ

ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ

ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಮಾರ್ಚ್ 29, 2026
    In ದಿನಪತ್ರಿಕೆ
  • ಹಿರಿಯ ಪತ್ರಕರ್ತ ಟಿ.ಕೆ.ಮಲಗೊಂಡಗೆ ಸನ್ಮಾನಿಸಿದ ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಕಳೆದುಹೋದ ೧೧೦ ಮೊಬೈಲ್‌ಗಳು ವಾರಸುದಾರರ ವಶಕ್ಕೆ
    In (ರಾಜ್ಯ ) ಜಿಲ್ಲೆ
  • ಏ.15 ರಿಂದ ಬಸವ ಜಯಂತಿ ಕಾರ್ಯಕ್ರಮ & ಓಲೆಮಠದ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಕಲಾಶ್ರೀ ಚವ್ಹಾಣ ಗೆ ಅಭಿನಂದಿಸಿದ ಡಾ.ಸುರೇಖಾ
    In (ರಾಜ್ಯ ) ಜಿಲ್ಲೆ
  • ಸಚಿವ ಎಂ. ಬಿ. ಪಾಟೀಲ ಅವರ ಪ್ರವಾಸ ವಿವರ
    In (ರಾಜ್ಯ ) ಜಿಲ್ಲೆ
  • ನ್ಯಾಯ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುವ ನಿಖರ ತನಿಖೆ & ದೃಢ ಸಾಕ್ಷಿ
    In (ರಾಜ್ಯ ) ಜಿಲ್ಲೆ
  • ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದಪೊಲೀಸ್ ಅಧಿಕಾರಿಗಳು
    In (ರಾಜ್ಯ ) ಜಿಲ್ಲೆ
  • ಯಡ್ರಾಮಿ ಬಸವೇಶ್ವರ ಜಾತ್ರೆಯ ಅದ್ದೂರಿ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಪರೀಕ್ಷಾ ಪ್ರಕ್ರಿಯೆಯ ಪ್ರತಿ ಹಂತ ವೀಕ್ಷಿಸಿದ ಜಿ.ಪಂ. ಸಿಇಒ ರಿಷಿ ಆನಂದ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.