Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಜರುಗಿದ ೧೬ನೆಯ ಘಟಿಕೋತ್ಸವದಲ್ಲಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಅವರು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.ಕಲಾಕ್ಷೇತ್ರದ ಸಾಧನೆಗಾಗಿ ಶಿಗ್ಗಾವಿಯ ಗೋಟಗೋಡಿ ರಾಕ್‌ಗಾರ್ಡ್ನ್‌ನ ಶ್ರೀಮತಿ ವೇದರಾಣಿ ದಾಸನೂರು, ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕಲಬುರಗಿಯ ವಿಶ್ರಾಂತ ಪ್ರಾಧ್ಯಾಪಕಿ ಡಾ.ಮೀನಾಕ್ಷಿ ಬಾಳಿ ಮತ್ತು ಸಿನಿಮಾ ಕ್ಷೇತ್ರದ ಸಾಧನೆಗಾಗಿ ಬೆಂಗಳೂರಿನ ಖ್ಯಾತ ಚಲನಚಿತ್ರ ನಟಿ ತಾರಾ ಅವರಿಗೆ ಕುಲಪತಿಗಳು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ನವದೆಹಲಿಯ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ ಕುಲಪತಿ ಪ್ರೊ.ಶಶಿಕಲಾ ವಂಜಾರಿ, ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ್, ಸಿಂಡಿಕೇಟ್ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ವಿವಿಧ ನಿಕಾಯಗಳ ಡೀನರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಇದಕ್ಕೂ ಮುನ್ನ ಶ್ರೀಮತಿ ವೇದರಾಣಿ ದಾಸನೂರು ಅವರ ಪರಿಚಯವನ್ನು ಡಾ.ರೋಹಿಣಿ ಭೂಸನೂರಮಠ, ಡಾ.ಮೀನಾಕ್ಷಿ ಬಾಳಿ ಅವರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಶೈಕ್ಷಣಿಕ ಉತ್ಕೃಷ್ಟತೆಯನ್ನು ಬೆಂಬಲಿಸಲು ಸಾಧ್ಯವಾದಷ್ಟು ಉತ್ತಮ ಸೌಲಭ್ಯಗಳು ಮತ್ತು ಸಂಪನ್ಮೂಲಗಳನ್ನು ಒದಗಿಸಲು ಮಹಿಳಾ ವಿಶ್ವವಿದ್ಯಾಲಯವು ಬದ್ಧವಾಗಿದ್ದು ವಿದ್ಯಾರ್ಥಿನಿಯರು ಶಿಕ್ಷಣವನ್ನು ಮುಂದುವರಿಸುವಲ್ಲಿ ಮೂಲಸೌಕರ್ಯಗಳ ಪ್ರಮುಖ ಪಾತ್ರವನ್ನು ಗುರುತಿಸಿ, ನಮ್ಮ ವಿಶ್ವವಿದ್ಯಾಲಯವು ಕೇಂದ್ರ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಹೂಡಿಕೆ ಮಾಡಿದೆ. ಇದು ನಮ್ಮ ಗ್ರಂಥಾಲಯದ ಸೌಲಭ್ಯಗಳ ವರ್ಧನೆ, ಹೊಸ ಕಟ್ಟಡಗಳ ನಿರ್ಮಾಣ ಮತ್ತು ಅತ್ಯಾಧುನಿಕ ಸೌಲಭ್ಯಗಳ ಸ್ಥಾಪನೆಯನ್ನು ಒಳಗೊಂಡಿದೆ ಎಂದು ಕುಲಸಚಿವ ಶಂಕರಗೌಡ ಸೋಮನಾಳ ಹೇಳಿದರು.ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ೧೬ನೆಯ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ನಮ್ಮ ವಿವಿಯ ಆವರಣ ಬೋಧನೆ ಮತ್ತು ಕಲಿಕೆಯ ವಿಕಸನದ ಅಗತ್ಯಗಳನ್ನು ಪೂರೈಸಲು ಬೇಕಾದ ಮೂಲಸೌಕರ್ಯವನ್ನು ಹೊಂದಿದೆ. ಮುಂದಿನ ಭವಿಷ್ಯಕ್ಕಾಗಿ ಶಿಕ್ಷಣಕ್ಕೆ ಅನುಕೂಲಕರ ವಾತಾವರಣವನ್ನು ಖಾತ್ರಿ ಪಡಿಸುತ್ತದೆ ಎಂದರು.ಸುಸಜ್ಜಿತ ಪ್ರಯೋಗಾಲಯಗಳು ಮತ್ತು ಗ್ರಂಥಾಲಯ ಅಮೂಲ್ಯವಾದ ಪ್ರಾಯೋಗಿಕ ಅನುಭವಗಳನ್ನು ಮತ್ತು ಸಂಪನ್ಮೂಲಗಳನ್ನು ಒದಗಿಸುತ್ತಿದ್ದೇವೆ. ಆಡಿಯೋ-ದೃಶ್ಯ ಸಾಧನಗಳನ್ನು ಹೊಂದಿರುವ ಆಧುನಿಕ ತರಗತಿ ಕೊಠಡಿಗಳು, ನವೀನ ಶಿಕ್ಷಣ ವಿಧಾನಗಳನ್ನು ಸುಗಮಗೊಳಿಸುತ್ತಿವೆ, ಕ್ರೀಡಾ…
ವೀಣಾಂತರಂಗ ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ವೈಜ್ಞಾನಿಕ ವಿಸ್ಮಯಗಳು, ತಂತ್ರಜ್ಞಾನದ ಸುಧಾರಿತ ವಸ್ತುಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಇಂದಿನ ಸಮಾಜದಲ್ಲಿ ಸಾಹಿತ್ಯದ ಓದಿನ ಕುರಿತು ಜನರಲ್ಲಿ ಒಂದು ರೀತಿಯ ಅಸಡ್ಡೆಯನ್ನು ನಾವು ಕಾಣುತ್ತಿದ್ದೇವೆ. ಅಯ್ಯೋ! ಪುಸ್ತಕ ಓದುವುದಕ್ಕೆ ಸಮಯ ಎಲ್ಲಿದೆ ರೀ? ನಾವು ತುಂಬಾ ಬ್ಯುಸಿ ಎಂಬಂತೆ ತೋರಿಸಿಕೊಳ್ಳುವ ಜನರೇ ನಮ್ಮಲ್ಲಿ ಬಹಳವಾಗಿದ್ದಾರೆ. ಅರ್ಥಪೂರ್ಣವಾಗಿ ವ್ಯಸ್ತರಾಗಿದ್ದರೆ ಓಕೆ… ಸಮಯ ಸಿಗುವುದಿಲ್ಲ ಎಂದು ಹೇಳಬಹುದು. ಆದರೆ ದಿನದ 18 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಘಟಾನುಘಟಿ ಉದ್ಯಮಿಗಳು, ಆಟಗಾರರು, ಯಶಸ್ವಿ ವ್ಯಕ್ತಿಗಳು ಪುಸ್ತಕದ ಓದು ತಮ್ಮನ್ನು ಹೆಚ್ಚು ಪ್ರೇರೇಪಿಸುತ್ತದೆ ಎಂದು ಹೇಳುವುದನ್ನು ನಾವು ಅಲ್ಲಲ್ಲಿ ಕೇಳಿಯೇ ಇದ್ದೇವೆ. ಅವರಷ್ಟು ನಾವು ವ್ಯಸ್ತರಾಗಿಲ್ಲವಲ್ಲ ಎಂದು ಯೋಚಿಸಿದಾಗ ಕನಿಷ್ಠ ದಿನಕ್ಕೆ ಎರಡು ಮೂರು ಪುಟಗಳಷ್ಟಾದರೂ ಗಂಭೀರವಾದ ಓದಿನಲ್ಲಿ ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ.ಇತ್ತೀಚೆಗೆ ಪೇಸ್ಬುಕ್ ನಲ್ಲಿ ಓರ್ವ ಹೆಣ್ಣು ಮಗಳು ತನ್ನ ಮನೆ ಕೆಲಸ ಆಫೀಸ ಕೆಲಸ, ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತ…
ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ಪಟ್ಟಣದ ವಿರಕ್ತಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಯಡ್ರಾಮಿಯಿಂದ ಶ್ರೀಶೈಲ ಪಾದಯಾತ್ರೆಯ ಪ್ರಥಮ ದಿನವಾದ ಬುಧವಾರದಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಚಾಲನೆ ನೀಡಿದರು.ನಂತರ ಸುಂಬಡ ಮಾರ್ಗವಾಗಿ ತೆರಳಿ, ಹಂಗರಗಾ(ಕೆ) ಗ್ರಾಮದ ಸದ್ಭಕ್ತರಾದ ಶ್ರೀ ಸಿದ್ದಣ್ಣ ಸಾಹು ಹೂಗಾರ ಅವರ ಮನೆಯಲ್ಲಿ ಎಲ್ಲ ಪಾದಯಾತ್ರಿಗಳು ಪ್ರಸಾದ ಸ್ವೀಕರಿಸಿದರು.ನಂತರ ಬಳಬಟ್ಟಿ, ಅಂಬರಖೇಡ ಮಾರ್ಗವಾಗಿ ತೆರಳಿ ಉಕ್ಕನಾಳ ಗ್ರಾಮದಲ್ಲಿ ವಾಸ್ತವ್ಯ ಮಾಡಲಾಯಿತು.ಈ ವೇಳೆ ಮಹಾನಿಂಗಪ್ಪಗೌಡ ಬಂಡೆಪ್ಪಗೌಡ್ರ, ಚಂದ್ರಶೇಖರ ಪುರಾಣಿಕ, ಎನ್.ಆರ್.ಪಾಟೀಲ, ನಾಗಣ್ಣ ಹಾಗರಗುಂಡಗಿ, ಬಸವರಾಜ ಹೂಗಾರ, ಸಿದ್ರಾಮಪ್ಪಗೌಡ ಮಾಲಿಪಾಟೀಲ, ದೇವಿಂದ್ರಪ್ಪಗೌಡ ಸರಕಾರ, ತಿಪ್ಪಣ್ಣ ಸಾಹು ಹೆಬ್ಬಾಳ, ಮಲ್ಲಿಕಾರ್ಜುನ ಹಲಕರ್ಟಿ, ಶಂಬುಲಿಂಗ ಸಾಹು ತಾಳಿಕೋಟಿ, ಇಬ್ರಾಹಿಂಸಾಬ್ ಉಸ್ತಾದ್, ರಾಜಶೇಖರ ಡಗ್ಗಾ, ರೇವಣಸಿದ್ದ ಅಂಕಲಕೋಟಿ, ಅದಾಮ, ಆನಂದ ಯತ್ನಾಳ, ಶಾಂತಗೌಡ ಜವಳಗಿ, ಚನ್ನವೀರಪ್ಪಗೌಡ ಬಂಡೆಪ್ಪಗೌಡ್ರ, ಬಸ್ಸಯ್ಯಸ್ವಾಮಿ ಹೊರಗಿನಮಠ, ಮಂಜುನಾಥ ಕುಲಕರ್ಣಿ, ನದೀಮ ಮಳ್ಳೀಕರ ಇದ್ದರು.
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿದ ನ್ಯೂಯಾರ್ಕ್ ರಾಜ್ಯದ ರೋಚೆಸ್ಟ್ ಜಿಲ್ಲೆಯ ಪಿಡ್ಸ್‌ಪೋರ್ಡ್ ಕೌನ್ಸಿಲರ್‌ಯಾಗಿ ಆಯ್ಕೆಯಾದ ನವೀನ ಹಾವಣ್ಣವರ ಅವರನ್ನು ಶ್ರೀಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ನವೀನ ಹಾವಣ್ಣವರ ಮೂಲತಃ ಮನಗೂಳಿ ಪಟ್ಟಣದವರು. ರೈತ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಕ್ರಿಯಾಶೀಲತೆಯಿಂದಾಗಿ ಇಂದು ಅಮೇರಿಕಾದ ನ್ಯೂಯಾರ್ಕ್ ರಾಜ್ಯದ ರೋಚೆಸ್ಟ್ ಜಿಲ್ಲೆಯ ಪಿಡ್ಸ್‌ಪೋರ್ಡ್‌ಕ್ಕೆ ೩೩ ಮತಗಳನ್ನು ಪಡೆದು ಕೌನ್ಸಿಲರ್‌ಯಾಗಿ ಆಯ್ಕೆಯಾಗಿರುವದು ಮನಗೂಳಿ ಪಟ್ಟಣಕ್ಕೆ ಹೆಮ್ಮೆಯ ಸಂಗತಿ. ಪ್ರತಿಯೊಬ್ಬ ರೈತನ ಮಕ್ಕಳು ಏನಾದರೂ ಸಾಧನೆ ಮಾಡಬೇಕೆಂಬುವದಕ್ಕೆ ಇವರು ಪ್ರೇರಣೆಯಾಗಿದ್ದಾರೆ ಎಂದರು. ಈ ಸಂದರ್ಭದಲ್ಲಿ ಶ್ರೀಶೈಲ ಮನಗೂಳಿ, ಶ್ರವಣ ಕೊಟ್ಯಾಳ, ರಮೇಶ ಹಾವಣ್ಣವರ, ಮಂಜು ಬನಸೋಡೆ, ಮಹಾಂತೇಶ ಮನಗೂಳಿ, ಭೀಮು ಬನ್ನೂರ ಇತರರು ಇದ್ದರು.
ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನೆ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಇತ್ತೀಚಿಗೆ ಪೇಜಾವರ ಶ್ರೀಗಳು ಮಂಗಳೂರಿನಲ್ಲಿ ಆಯೋಜಿಸಿದ ವಚನ ಸಾಹಿತ್ಯ ಸಮ್ಮೇಳನದಲ್ಲಿ ಬಸವ ಸಮಿತಿಯ ಅಧ್ಯಕ್ಷ ಡಾ ಅರವಿಂದಣ್ಣ ಜತ್ತಿ ಅವರು ಪಾಲ್ಗೊಂಡಿದ್ದು ದುರಂತದ ಸಂಗತಿ. 900 ವರ್ಷಗಳ ಮೇಲೆ ವೈದಿಕರಿಗೆ ಬಸವಣ್ಣವರನ್ನು ತಮ್ಮ ಸಭೆ ಸಮಾರಂಭದಲ್ಲಿ ತರುವ ಚಿಂತಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ, ಬಸವ ಭಕ್ತರು ಯಾವ ಆಚಾರ್ಯತ್ರಯರ ವಿರೋಧಿಗಳಲ್ಲ, ಆದರೆ ಅವರ ತತ್ವ ಸಿದ್ಧಾಂತಗಳನ್ನು ಒಪ್ಪುವುದಿಲ್ಲ. ಆದರೆ ಪೌರೋಹಿತ್ಯ ಪ್ರಧಾನವಾದ ವೈದಿಕರು ಬಸವಣ್ಣನವರನ್ನು ಒಪ್ಪುವದಿಲ್ಲ ಮತ್ತು ಶರಣರ ತತ್ವ ಸಿದ್ಧಾಂತಗಳನ್ನು ದ್ವೇಷಿಸುತ್ತಾರೆ ವಿರೋಧಿಸುತ್ತಾರೆ. ಹೀಗಿದ್ದಾಗ ವೇದಿಕೆಯ ಮೇಲೆ ಪೇಜಾವರ ಶ್ರೀಗಳು ವಚನಗಳು ವೇದ ಶಾಸ್ತ್ರಗಳ ಕನ್ನಡೀಕರಣವಾಗಿದೆ ಎಂದು ಹೇಳಿದಾಗ ತುಟಿ ಪಿಟಕ್ಕೆನ್ನದೆ ಮೌನವಾಗಿದ್ದ ಡಾ ಅರವಿಂದ ಜತ್ತಿ ಅವರ ನಡೆಯು ಅನೇಕರಲ್ಲಿ ಸಂಶಯ ಮೂಡಿಸಿದೆ ಎಂದು ಬಸವ ತಿಳುವಳಿಕೆ ಮತ್ತು ಸಂಶೋಧನೆ ಕೇಂದ್ರದ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ಬುಧವಾರ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪೂಜ್ಯ ಶ್ರೀಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನ ಸಾರಂಗಮಠ-ಗಚ್ಚಿನಮಠದ ವತಿಯಿಂದ ೩೩೮ನೆಯ ಸದ್ವಿಚಾರಗೋಷ್ಠಿಯನ್ನು ಜ.೧೩ರ ಬನದ ಹುಣ್ಣಿಮೆ ದಿನದಂದು ಸಾಯಂಕಾಲ ೬:೩೦ಗಂಟೆಗೆ ಶ್ರೀಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮ ಸಾರಂಗಮಠದ ಡಾ. ಪ್ರಭುಸಾರಂಗದೇವ ಶಿವಾಚಾರ್ಯುರ ದಿವ್ಯ ಸಾನಿಧ್ಯದಲ್ಲಿ ವಹಿಸಿಕೊಳ್ಳಲಿದ್ದಾರೆ. ಹಾಗೂ ಶ್ರೀಪದ್ಮರಾಜ ಮಹಿಳಾ ಮಹಾವಿದ್ಯಾಲಯದ ರಾಜ್ಯಶಾಸ್ತç ಉಪನ್ಯಾಸಕ ಗಿರೀಶ ಎಸ್.ಕುಲಕರ್ಣಿ ಮಕರ ಸಂಕ್ರಮಣದ ಮಹತ್ವ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಬಿ.ಎಸ್.ಡಬ್ಲೂö್ಯ ಪರೀಕ್ಷೆಯಲ್ಲಿ ರ‍್ಯಾಂಕ ಬಂದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ೩ನೆಯ ರ‍್ಯಾಂಕ ಪಡೆದ ಐಶ್ವರ್ಯ ತಮದೊಡ್ಡಿ, ೪ನೆಯ ರ‍್ಯಾಂಕ ಪಡೆದ ವಿದ್ಯಾಶ್ರೀ ಪಡಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು. ಕಾರಣ ತಾಲೂಕಿನ ಶ್ರೀಮಠದ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ದಾಸೋಹ ಸೇವೆಯನ್ನು ಲಿಂ.ಹೊನ್ನಪ್ಪಗೌಡ ಬಿರಾದಾರ ಅವರ ಸ್ಮರಣಾರ್ಥ ದಯಾನಂದಗೌಡ ಬಿರಾದಾರ, ಲಿಂ.ಬಸಪ್ಪ ಲೋಣಿ ಅವರ ಸ್ಮರಣಾರ್ಥ ಬಂಡೆಪ್ಪ ಲೋಣಿ, ಲಿಂ.ಶಂಭುಲಿಂಗಯ್ಯ ಮಠ ಹಾಗೂ ಧರ್ಮಪತ್ನಿ ವಿಮಲಾ ಮಠ ಅವರ ಸ್ಮರಣಾರ್ಥ ಸುಧಾರಾಣಿ ಮಠ ಅವರು…
ನಮ್ಮ ಸಂವಿಧಾನ, ನಮ್ಮ ಹೆಮ್ಮೆ | ಬಿಜೆಪಿ ಸಂವಿಧಾನದ ಪರ, ಮೀಸಲಾತಿ ಪರ | ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಸಭೆ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಸಂವಿಧಾನದ ಪರ, ಮೀಸಲಾತಿ ಪರ ತಿದ್ದುಪಡಿಗಳನ್ನು ಬಿಜೆಪಿ ಮಾಡಿದೆ ಮತ್ತು ಡಾ. ಅಂಬೇಡ್ಕರ್ ಬಗ್ಗೆ ಮಾತನಾಡಲು ಕಾಂಗ್ರೆಸ್ ನಾಯಕರಿಗೆ ಯಾವ ಹಕ್ಕಿದೆ ಎಂದು ಕರ್ನಾಟಕ ಬಿಜೆಪಿ ಗುರುವಾರ ಪ್ರಶ್ನಿಸಿದೆ?‘ಸಂವಿಧಾನ ಸನ್ಮಾನ’ ಮತ್ತು ‘ನಮ್ಮ ಸಂವಿಧಾನ, ನಮ್ಮ ಹೆಮ್ಮೆ’ ಅಭಿಯಾನದ ಅಂಗವಾಗಿ ಇಂದು ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಯಿತುಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಎಂಎಲ್‌ಸಿ ಸಿ.ಟಿ. ರವಿ ಮತ್ತು ಇತರರು ಭಾಗವಹಿಸಿದ್ದರು. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, “2015 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ. ಸಂವಿಧಾನದ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಕರ್ನಾಟಕ ಕೋ ಆಫ್ ಬ್ಯಾಂಕ್ ನ ನೂತನ ಅಧ್ಯಕ್ಷರಾಗಿ ಚನ್ನಪ್ಪಗೌಡ ಲಕ್ಕನಗೌಡ ಬಿರಾದಾರ ಹಾಗೂ ಉಪಾಧ್ಯಕ್ಷರಾಗಿ ಗುರಲಿಂಗಪ್ಪಗೌಡ ಭಿಕ್ಷಪ್ಪ ಪಾಟೀಲ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಆಯ್ಕೆ ಪ್ರಕ್ರಿಯೆಯ ಬಳಿಕ ಊರಿನ ಹಿರಿಯರು, ವರ್ತಕರು, ಉದ್ಯಮಿಗಳು, ಹಿಂದಿನ ಆಡಳಿತ ಸಮಿತಿಯ ಸದಸ್ಯರು ಮತ್ತು ಸ್ನೇಹಿತರು ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಶುಭ ಹಾರೈಸಿದರು.ಆಡಳಿತ ಸಮಿತಿಯ ಸದಸ್ಯರಾದ ಪ್ರಭುದೇವ ಕಲಬುರ್ಗಿ, ಸತೀಶ ಓಸ್ವಾಲ, ಸಂಗನಗೌಡ ಬಿರಾದಾರ, ರಾಜಶೇಖರ ಕರಡ್ಡಿ, ಚಂದ್ರಶೇಖರ ಸಜ್ಜನ, ಅಜಿತ ನಾಗಠಾಣ, ನಿಂಗಪ್ಪ ಚಟ್ಟೇರ, ಶ್ರೀಕಾಂತ ಛಲವಾದಿ, ಶ್ರೀಶೈಲ ಪೂಜಾರಿ, ರಕ್ಷಿತಾ ಬಿದರಕುಂದಿ, ವಿಜಯಲಕ್ಷ್ಮಿ ಬೂದಿಹಾಳಮಠ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ ಬಿದರಕುಂದಿ, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಗಣ್ಯರಾದ ಮಹಾಂತಪ್ಪ ನಾವದಗಿ, ಬಸನಗೌಡ ಪಾಟೀಲ್, ದಾನಪ್ಪ ನಾಗಠಾಣ, ರಮೇಶ ಕುಮಾರ ಓಸ್ವಾಲ್, ಭೀಮಣ್ಣ ಬಿರಾದಾರ, ಗುಲಾಬಚಂದ ಒಸ್ವಾಲ್, ನಿಂಗರಡ್ಡಿ ಮಂಗ್ಯಾಳ, ಪ್ರಭುಗೌಡ ಬಿರಾದಾರ, ಆರ್.ಬಿ. ಪಾಟೀಲ, ಮುತ್ತಣ್ಣ ಪ್ಯಾಟಿಗೌಡರ ಸೇರಿದಂತೆ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಅಡಿ ನಡೆಯುವ ಸಿಂದಗಿ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯವು ೨೦೨೪-೨೩ನೆಯ ಸಾಲಿನ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯ ಕೊಡ ಮಾಡುವ ಐದು ರ‍್ಯಾಂಕಗಳಲ್ಲಿ ಬಿ.ಎಸ್.ಡಬ್ಲೂö್ಯ ವಿಭಾಗದ ವಿದ್ಯಾರ್ಥಿನಿಯರಾದ ಐಶ್ವರ್ಯ ತಮದೊಡ್ಡಿ ರಾಜ್ಯಕ್ಕೆ ಮೂರನೆಯ ರ‍್ಯಾಂಕ್, ವಿದ್ಯಾಶ್ರೀ ಪಡಶೆಟ್ಟಿ ನಾಲ್ಕನೆಯ ರ‍್ಯಾಂಕ್ ಪಡೆದುಕೊಂಡು ಮಹಾವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ವಿದ್ಯಾರ್ಥಿನಿಯರ ಕಠಿಣ ಪರಿಶ್ರಮ, ಕಾಲೇಜಿನ ಉಪನ್ಯಾಸಕರ ಅತ್ಯುತ್ತಮ ಭೋಧನೆ ಇಷ್ಟೊಂದು ರ‍್ಯಾಂಕ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಶ್ರೀಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಚೇರಮನ್‌ರಾದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಪ್ರತಿಕ್ರಿಯಿಸಿ, ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದ್ದಾರೆ.ವಿದ್ಯಾರ್ಥಿನಿಯರ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರು, ಪ್ರಾಚಾರ್ಯ ಎಸ್.ಎಂ.ಪೂಜಾರಿ, ಉಪನ್ಯಾಸಕ, ಪತ್ರಿಕಾ ಪ್ರತಿನಿಧಿ ಮಹಾಂತೇಶ ನೂಲಾನವರ ಸೇರಿದಂತೆ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿನಿಯರಿಗೆ ಶುಭ ಕೋರಿದ್ದಾರೆ.
